Lakshmi Hebbalkar: ಅಪಮಾನವಾಗಿದ್ದು ಇಡೀ ಹೆಣ್ಣು ಕುಲಕ್ಕೆ

ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನಡುವಿನ ‘ಪದ’ ಬಳಕೆ ಹಾಗೂ ಅ

Profile Ashok Nayak December 25, 2024
ವಿನಾಯಕ್ ಮಠಪತಿ ನನಗೆ ಅಪಮಾನವಾದಾಗ ಸಿಡಿದೆದ್ದಿದ್ದೇನೆ ಕಾನೂನು ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ ಸಿ.ಟಿ. ರವಿ ಮೊಂಡುವಾದ ಅವರ ಸಂಸ್ಕೃತಿ ತೋರಿಸುತ್ತದೆ ಮೇಲ್ಮನೆಯಲ್ಲಿ ಸಿ.ಟಿ. ರವಿ ಬಳಸಿದ ಪದ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಾಡಿದ ಅಪಮಾನವಲ್ಲ. ಬದಲಿಗೆ ಇಡೀಹೆಣ್ಣುಕುಲಕ್ಕೆ ಮಾಡಿರುವ ಅಪಮಾನ. ಮಾಡಿರುವ ತಪ್ಪಿನ ಅರಿವಿದ್ದರೂ, ಅದನ್ನು ಮುಚ್ಚಿಹಾಕಿಕೊಳ್ಳಲು ಅನವಶ್ಯಕ ಆರೋಪವನ್ನು ಸರಕಾರ ಹಾಗೂ ಪೊಲೀಸರ ಮೇಲೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನಡುವಿನ ‘ಪದ’ ಬಳಕೆ ಹಾಗೂ ಅದಾದ ಬಳಿಕ ನಡೆದ ಘಟನಾವಳಿಗೆ ಸಂಬಂಧಿಸಿ ದಂತೆ ‘ವಿಶ್ವವಾಣಿ’ಯೊಂದಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ ಅಷ್ಟಕ್ಕೂ ಆ ದಿನ ಸದನದಲ್ಲಿ ನಡೆದಿದ್ದೇನು? ವಿಧಾನಪರಿಷತ್‌ನಲ್ಲಿ ಅಂದು ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತಕ್ಕೆ ಸಂವಿಧಾನದ ಮೂಲಕ ಹೊಸದಿಕ್ಕು ತೋರಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ಸಿ.ಟಿ ರವಿ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಕುರಿತುವೈಯಕ್ತಿಕ ಟೀಕೆಗೆ ಇಳಿದರು. ಆಗ ನಾನು ವಿರೋಧ ಮಾಡಿದೆ. ಅಷ್ಟಕ್ಕೇ ಸುಮ್ಮನಾಗದೆ ಪದೇಪದೇ ರಾಹುಲ್ಗಾಂಧಿ ಅವರನ್ನು ತೆಗಳುವುದು ಮುಂದುವರಿಸಿದರು. ಆಗ ನಾನು ಕೊಲೆಗಡುಕ ಪದ ಬಳಕೆ ಮಾಡಿದ್ದನ್ನುಈಗಾಗಲೇ ಒಪ್ಪಿಕೊಂಡಿರುವೆ. ನಂತರ ಅವರು ನನ್ನ ವಿರುದ್ಧ ಬಳಸಿದ ಪದವನ್ನು ಇಡೀ ರಾಜ್ಯವೇ ಗಮನಿಸಿದೆ. ಪದ ಬಳಕೆಯೇ ಆಗಿಲ್ಲವೆಂದು ರವಿ ಹೇಳುತ್ತಾರೆ? ಅವರು ಏನಾದರೂ ಹೇಳಲಿ. ಆದರೆ ಸಮಾಜದಲ್ಲಿರುವ ಯಾವುದೇ ಹೆಣ್ಣು ತನ್ನ ವಿರುದ್ಧ ಈ ರೀತಿಯ ಪದ ಬಳಕೆ ಮಾಡಲಾಗಿದೆ ಎಂದು ಸುಖಾಸುಮ್ಮನೆ ಆರೋಪಿಸುವುದಿಲ್ಲ. ರವಿ ಮಾಡಿರುವ ಪದ ಬಳಕೆಗೆ ನಾನೊಬ್ಬಳೇ ಸಾಕ್ಷಿ ಯಲ್ಲ. ಸದನದಲ್ಲಿದ್ದ ಅನೇಕ ಸದಸ್ಯರು ಕೇಳಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಹತ್ತಕ್ಕೂ ಅಧಿಕ ಬಾರಿಗೆ ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದಾರೆ. ಕೇವಲ ಕಾಂಗ್ರೆಸಿಗರು ಮಾತ್ರವಲ್ಲದೇ, ಬಿಜೆಪಿಯ ಹಲವು ಸದಸ್ಯರು ಈ ಮಾತನ್ನು ಕೇಳಿಸಿಕೊಂಡಿದ್ದಾರೆ. ವೈಯಕ್ತಿಕವಾಗಿ ಬಿಜೆಪಿಯ ಅನೇಕ ಸಹೋದರರು ನನ್ನ ಬಳಿ ಬಂದು ಈ ಘಟನೆಗೆ ಕ್ಷಮೆ ಕೇಳಿದ್ದಾರೆ. ಇಷ್ಟಾದರೂ ಅವರು ನಾನು ಪದ ಬಳಕೆ ಮಾಡಿಲ್ಲವೆಂದು ಮೊಂಡುವಾದ ಮಾಡುತ್ತಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕೊಲೆಗೆ ಸಂಚು ನಡೆದಿತ್ತು ಎನ್ನುವ ಆರೋಪವಿದೆಯಲ್ಲ? ತಾವು ಮಾಡಿರುವ ತಪ್ಪಿನ ಅರಿವಾಗಿದೆ. ಅದಕ್ಕಾಗಿಯೇ ಈಗ ಕೊಲೆ ಸಂಚಿನ ಸುಳ್ಳು ಆರೋಪವನ್ನು ಮಾಡು ತ್ತಿದ್ದಾರೆ. ಪ್ರಜ್ಞಾವಂತರು, ಬುದ್ಧಿವಂತು ಇರುವ ಹಿರಿಮನೆ ಎನಿಸಿರುವ ವಿಧಾನಪರಿಷತ್‌ನಲ್ಲಿ ನಾಲಿಗೆಯನ್ನು ಹರಿಯಬಿಟ್ಟು ಈಗ ಅದನ್ನು ಮರೆಮಾಚಲು ಇನ್ನೊಂದು ಆರೋಪ ಮಾಡುತ್ತಿದ್ದಾರೆ. ಅವರು ತಪ್ಪು ಮಾಡಿದ ಅರಿವಿದ್ದರೂ ನಾಟಕೀಯವಾಗಿ ವರ್ತನೆ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಹಾಗೇ ನೋಡಿದರೆ ಇಡೀ ಘಟನೆಯಲ್ಲಿ ಎಲ್ಲಿಯೂ ಪೊಲೀಸರು ಅವರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಬದಲಿಗೆ ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು ಎನ್ನುವ ಕಾರಣಕ್ಕಾಗಿಯೇ ಅಗತ್ಯ ಕ್ರಮವಹಿಸಿದ್ದಾರೆ. ಪೊಲೀಸರು ಅನುಚಿತ ವಾಗಿ ವರ್ತಿಸಿದರೂ ಎಂದು ಆರೋಪಿಸಿರುವ ರವಿ ಅವರು, ಖಾನಾಪುರ ಠಾಣೆಯಲ್ಲಿ ಸಭೆ ನಡೆಸಿದ್ದು ಹೇಗೆ? ಅಸಹ ಕಾರ ತೋರಬೇಕು ಎನ್ನುವುದಾಗಿದ್ದರೆ ಪೊಲೀಸರು ಸಭೆ ನಡೆಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇಷ್ಟೆ ಸಹಾಯ ಮಾಡಿರುವ ಪೊಲೀಸರ ವಿರುದ್ಧ ಅವರು ಆರೋಪ ಮಾಡುತ್ತಿರುವುದು ಕೇವಲ ತಮ್ಮ ರಾಜಕೀಯ ಉದ್ದೇಶಕ್ಕಾಗಿ. ಈ ರೀತಿಯ ಆರೋಪವನ್ನು ಯಾರೂ ನಂಬುವುದಿಲ್ಲ. ಪ್ರಧಾನಿ, ರಾಷ್ಟ್ರಪತಿಗೆ ದೂರು ನೀಡುವ ಬಗ್ಗೆ ಹೇಳಿದ್ದೀರಾ? ಇಲ್ಲಿ ಅನ್ಯಾಯವಾಗಿರುವುದು ಕಾಂಗ್ರೆಸ್ ಪಕ್ಷದ ಶಾಸಕಿ ಅಥವಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತ್ರವಲ್ಲ. ಇಡೀ ಹೆಣ್ಣು ಕುಲಕ್ಕೆ ಅನ್ಯಾಯವಾಗಿದೆ. ಸದಾಕಾಲವೂ ರಾಮನ ಕುರಿತು ಮಾತನಾಡುವ ಬಿಜೆಪಿಯವರು ಹೆಣ್ಣು ಮಗಳಿಗೆ ಅಗೌರವ ಉಂಟಾದಾಗ ಹೇಗೆ ನಡೆದುಕೊಂಡಿzರೆ ಎಂದು ಜನ ಗಮನಿಸಿದ್ದಾರೆ. ಈ ರೀತಿಯ ನಾಲಿಗೆಹರಿಬಿಟ್ಟ ವ್ಯಕ್ತಿ ಹಾರ, ತುರಾಯಿ ಹಾಕಿಕೊಂಡು ಸಂಭ್ರಮಪಡುತ್ತಿರುವುದು ನೋಡಿದರೆ ಇವರು ಹೆಣ್ಣಿಗೆ ಎಷ್ಟುಮರ್ಯಾದೆ ಕೊಡುತ್ತಾರೆ ಎಂದು ತಿಳಿಯುತ್ತದೆ. ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆಯುವೆ. ಸಮಯಾ ವಕಾಶ ಕೊಟ್ಟರೆ ಅವರನ್ನು ಭೇಟಿಯಾಗಿ ನನಗೆ ಆದ ಅವಮಾನವನ್ನು ಅವರ ಗಮಕ್ಕೆ ತರುತ್ತೇನೆ. ನನ್ನ ಬಳಿ ಸಿ.ಟಿ ರವಿ ಮಾತನಾಡಿರುವ ವಿಡಿಯೊ ಸಾಕ್ಷಿ ಇದೆ. ಮಾಧ್ಯಮಗಳಲ್ಲಿಯೂ ಅದು ಪ್ರಸಾರವಾಗಿದೆ. ಇವೆಲ್ಲವನ್ನು ಅವರಿಗೆ ತಲುಪಿಸುವೆ. ಮುಂದಿನ ಹೋರಾಟ ಹೇಗಿರಲಿದೆ? ಈ ಘಟನೆಯಿಂದ ನಾನು ನೊಂದಿದ್ದೇನೆ. ಕಣ್ಣೀರು ಹಾಕಿರುವೆ. ನನಗೆ ಆಗಿರುವ ಅವಮಾನ ಮುಂದೆ ದೇಶದಯಾವುದೇ ಹೆಣ್ಣುಮಗಳಿಗೂ ಆಗಬಾರದು ಎಂಬ ಉದ್ದೇಶದಿಂದ ಕಾನೂನು ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಎಷ್ಟು ಗಂಭೀರತೆ ಪಡೆಯುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಅಪಮಾನ ಆದಾಗ ಅದರ ವಿರುದ್ಧ ಸಿಡಿದೆದ್ದು ಹೋರಾಡುವುದು ನನ್ನ ಹುಟ್ಟು ಗುಣ. ತಪ್ಪು ಮಾಡಿಲ್ಲ ಎಂದು ಹೇಳುವ ಸಿ.ಟಿ ರವಿ ತಾವು ನಂಬುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಬರಲಿ. ಪ್ರಮಾಣ ಮಾಡೋಣ ಎಂಬ ಬಹಿರಂಗ ಆಹ್ವಾನ ನೀಡುತ್ತೇನೆ. ಸತೀಶ್ ಜಾರಕಿಹೊಳಿ ಹೇಳಿಕೆಯ ಹಿಂದಿನ ಉದ್ದೇಶವೇನು? ಸತೀಶ್ ಜಾರಕಿಹೊಳಿಯವರು ಹಾಗೂ ನಾನು ಒಟ್ಟಿಗೆ ಸೇರಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಅವರು ನನ್ನ ಒಳತಿಗೆ ಹೇಳಿಕೆ ನೀಡಿzರೆ ಎಂದು ಭಾವಿಸಿರುವೆ. ಈ ವಿಷಯದಲ್ಲಿ ಅವರು ಹಾಗೂ ನಮ್ಮ ಮಧ್ಯೆ ಯಾವುದೇ ಒಡಕಿಲ್ಲ. * ಸಿ.ಟಿ.ರವಿ ಮಾತನಾಡಿರುವುದನ್ನು ಇಡೀ ಸದನ ಕೇಳಿಸಿಕೊಂಡಿದೆ. ಬಿಜೆಪಿಯ ಹಲವು ಸಹೋದರರೇ ಬಂದು ನಡೆದ ಘಟನೆಗೆ ನನ್ನ ಬಳಿ ಕ್ಷಮೆಯಾಚಿಸಿದ್ದಾರೆ. ಇಷ್ಟಾದರೂ ನಾನೇನು ಹೇಳಿಲ್ಲವೆಂದು ಮೊಂಡು ವಾಡ ಮಾಡುವವರಿಗೆ ಏನು ಮಾಡಲು ಸಾಧ್ಯ? ನನಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಇದನ್ನೂ ಓದಿ: Vinayaka Mathapathy Column: ಅಟಲ್‌ಜೀ ಹೃದಯ ಗೆದ್ದ ಫಡ್ನವೀಸ್‌
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ