ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಮಿಸ್ಟರ್‌ ಮುನೀರ್, ಎಲ್ಲಿ ಕುಣಿಯುತ್ತಿದ್ದೀರಿ ಗೊತ್ತಾ ?

ನಿಜ ಹೇಳಬೇಕೆಂದರೆ, ನನಗೆ ಮುನೀರ್‌ನನ್ನು ವಿದೂಷಕ ಎಂದು ಕರೆಯುವುದಕ್ಕೂ ಮನಸ್ಸಿಲ್ಲ. ಏಕೆಂದರೆ ವಿದೂಷಕರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಜನರ ಮುಖದಲ್ಲಿ ನಗು ತರಿಸು ತ್ತಾರೆ. ಅವರು ಇಡೀ ಜಗತ್ತಿಗೆ ಸಂತೋಷವನ್ನು ಹರಡುತ್ತಾರೆ. ಆದರೆ ಈ ಮುನೀರ್ ಅಷ್ಟೊಳ್ಳೆಯ ವ್ಯಕ್ತಿಯೇನೂ ಅಲ್ಲ. ಹಿಂದಿಯಲ್ಲೊಂದು ಮಾತಿದೆ.

ಮಿಸ್ಟರ್‌ ಮುನೀರ್, ಎಲ್ಲಿ ಕುಣಿಯುತ್ತಿದ್ದೀರಿ ಗೊತ್ತಾ ?

ಹಿರಿಯ ಪತ್ರಿಕೋದ್ಯಮಿ

ನಮ್ಮ ದೇಶದ ಮುಕೇಶ್ ಅಂಬಾನಿಯ ಸಂಪತ್ತು ಪಾಕಿಸ್ತಾನದ ಬಜೆಟ್‌ನ ಎರಡು ಪಟ್ಟು! ಮುನೀರ್ ಅವರಿಗೆ ಅವರದೇ ಹಳೆಯ ಪೂರ್ವ ಭಾಗದ ಕತೆ ನೆನಪಿರಬೇಕಿತ್ತು. ಪಾಕಿಸ್ತಾನೀ ಯರಿಗೆ ಅಸಂಬದ್ಧ ಮಾತನಾಡುವುದು ಖಯಾಲಿಯಾಗಿಬಿಟ್ಟಿದೆ. ಆದರೆ ಅಜ್ಞಾನಕ್ಕೂ ಒಂದು ಮಿತಿಯಿದೆ. ಮುನೀರ್ ಸರ್, ವಿದೂಷಕನಂತೆ ವೇಷ ಹಾಕಿಕೊಂಡು ತಿರುಗಾಡುವು ದಕ್ಕೂ ಒಂದು ಲಿಮಿಟ್ಟಿದೆ!

ನಾವೆಲ್ಲರೂ ಒಂದಲ್ಲಾ ಒಂದು ಸಲ ಸರ್ಕಸ್‌ಗೆ ಹೋಗಿರುತ್ತೇವೆ. ಅಲ್ಲಿ ಏನೇನೋ ಸಾಹಸಗಳು ನಡೆಯುತ್ತಿರುತ್ತವೆ. ಅವುಗಳ ಮಧ್ಯೆ ಯಾವಾಗಲೂ ಒಬ್ಬ ವಿದೂಷಕ ಬಂದು ಹೋಗುತ್ತಿರುತ್ತಾನೆ. ಅವನು ಏನೇನೋ ಮಂಗಾಟಗಳನ್ನು ಮಾಡಿ ಪ್ರೇಕ್ಷಕರನ್ನು ನಗಿಸುತ್ತಾನೆ. ಹಾಗೆ ಮಾಡುವ ಮೂಲಕ ಸರ್ಕಸ್‌ನ ಇನ್ನಿತರ ಪ್ರದರ್ಶನಗಳನ್ನು ನೋಡಿ ಕಂಗಾಲಾಗಿರುವ ಜನರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಾನೆ.

ನಾನೇಕೆ ಇಲ್ಲಿ ಇದ್ದಕ್ಕಿದ್ದಂತೆ ಸರ್ಕಸ್‌ನ ವಿಷಯ ಹೇಳುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯ ವಾಗಬಹುದು. ಕಾರಣ ಇದೆ. ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್‌ನ ಇತ್ತೀಚಿನ ಹುಚ್ಚಾಟಗಳನ್ನು ನೋಡಿ ಇದೆಲ್ಲ ನೆನಪಾಯಿತು. ಮುನೀರ್‌ನ ಮಂಗಾಟಗಳು ಸರ್ಕಸ್‌ನ ವಿದೂಷಕನ ಮಂಗಾಟಗಳಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲ!

ಜಗತ್ತಿನಾದ್ಯಂತ ಅಮೆರಿಕದ ತೆರಿಗೆ ಸಮರದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಈ ಮುನೀರ್ ಭಾರತದ ಮೇಲೆ ಪೂರ್ವದಿಂದ ದಾಳಿ ನಡೆಸುವ ಬಗ್ಗೆ ಮಾತನಾಡುತ್ತಾರೆ. ಇದು ಟೆನ್ಷನ್ ಮರೆತು ನಗೆ ಉಕ್ಕುವಂತೆ ಮಾಡುವ ಹೇಳಿಕೆಯಲ್ಲದೆ ಇನ್ನೇನು!

ಇದನ್ನೂ ಓದಿ: Dr Vijay Darda Column: ನಿದ್ದೆಯಲ್ಲಿದ್ದ ಆನೆ ಎದ್ದಿದೆ, ಇನ್ನು ಸುಮ್ನಿರೋದಿಲ್ಲ !

ನಿಜ ಹೇಳಬೇಕೆಂದರೆ, ನನಗೆ ಮುನೀರ್‌ನನ್ನು ವಿದೂಷಕ ಎಂದು ಕರೆಯುವುದಕ್ಕೂ ಮನಸ್ಸಿಲ್ಲ. ಏಕೆಂದರೆ ವಿದೂಷಕರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಜನರ ಮುಖದಲ್ಲಿ ನಗು ತರಿಸು ತ್ತಾರೆ. ಅವರು ಇಡೀ ಜಗತ್ತಿಗೆ ಸಂತೋಷವನ್ನು ಹರಡುತ್ತಾರೆ. ಆದರೆ ಈ ಮುನೀರ್ ಅಷ್ಟೊಳ್ಳೆಯ ವ್ಯಕ್ತಿಯೇನೂ ಅಲ್ಲ. ಹಿಂದಿಯಲ್ಲೊಂದು ಮಾತಿದೆ.

“ಬೇಗಾನಿ ಶಾದಿ ಮೇ ಅಬ್ದುಲ್ಲಾ ದೀವಾನಾ" ಅಂತ. ಯಾರದೋ ಮದುವೆಯಲ್ಲಿ ಅಬ್ದುಲ್ಲಾ ಹುಚ್ಚೆದ್ದು ಕುಣಿದನಂತೆ! ನೀವೂ ನೋಡಿರುತ್ತೀರಿ. ಸಾಮಾನ್ಯವಾಗಿ ಮದುವೆಯ ದಿಬ್ಬಣದಲ್ಲಿ ಕೆಲವರು ಎಲ್ಲಿಂದಲೋ ಬಂದು ಸೇರಿಕೊಂಡು ಇದ್ದಕ್ಕಿದ್ದಂತೆ ಕುಣಿಯಲು ಶುರುಮಾಡುತ್ತಾರೆ. ಅವರಿಗೂ ಮದುವೆಗೂ ಸಂಬಂಧವೇ ಇರುವುದಿಲ್ಲ. ಆದರೂ ತಾನೇ ಮದುಮಗನ ಖಾಸಾ ಸ್ನೇಹಿತ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.

ಜನರು ಅವರ ಮೇಲೆ ಹಣ ಎಸೆದರಂತೂ ಮುಗಿದೇ ಹೋಯಿತು, ತಾನು ಮದುಮಗನ ಅಗ್ದೀ ಖಾಸಾ ಗೆಳೆಯ ಎಂದು ಅವರೇ ನಂಬಿಕೊಂಡುಬಿಡುತ್ತಾರೆ! ಮುನೀರ್‌ನ ಸ್ಥಿತಿಯೂ ಹೆಚ್ಚುಕಮ್ಮಿ ಇದೇ. ಆದರೆ ಮುನೀರ್ ಸರ್, ಕೊನೆಯ ಪಕ್ಷ ನೀವು ಎಲ್ಲಿ ಡ್ಯಾನ್ಸ್ ಮಾಡುತ್ತಿದ್ದೀರಿ ಎಂಬು ದನ್ನಾದರೂ ನೋಡಿಕೊಳ್ಳಿ. ಯಾರಿಗಾಗಿ ಕುಣಿಯುತ್ತಿದ್ದೀರಿ? ಯಾಕಾಗಿ ಕುಣಿಯುತ್ತಿದ್ದೀರಿ? ಏನು ಹೇಳುತ್ತಿದ್ದೀರಿ? ಅದರ ಅರ್ಥವೇನು ಎಂಬುದು ನಿಮಗೆ ಗೊತ್ತೆ? ಬರೀ ಅಪಾರ್ಥದ ಮಾತುಗಳನ್ನೇ ಆಡಬೇಡಿ.

“ಆ ಮುನೀರ್‌ನನ್ನು ಯಾಕೆ ನೀವು ‘ಸರ್’ ಎಂದು ಸಂಬೋಧಿಸುತ್ತೀರಿ?" ಎಂದು ನೀವೀಗ ಆಕ್ಷೇಪಿಸ ಬಹುದು. ಅದಕ್ಕೂ ಕಾರಣವಿದೆ. ಭಾರತದ ಮೇಲೆ ಪೂರ್ವದ ಕಡೆಯಿಂದ ದಾಳಿ ನಡೆಸುವ ಬಗ್ಗೆ ಅವರು ಮಾತನಾಡುವಾಗ ನನಗೆ ‘ಪೂರಬ್ ಔರ್ ಪಶ್ಚಿಮ್’ ಸಿನಿಮಾದ “ಹೇ ಪ್ರೀತ್ ಜಹಾಂ ಕಿ ರೀತ್ ಸದಾ, ಮೇ ಗೀತ್ ವಹಾಂ ಕೇ ಗಾತಾ ಹೂಂ, ಭಾರತ್ ಕಾ ರೆಹನೇ ವಾಲಾ ಹೂಂ, ಭಾರತ್ ಕೀ ಬಾತ್ ಸುನಾತಾ ಹೂಂ" ಹಾಡು ನೆನಪಾಯಿತು.

ಈ ಹಾಡು ಮುಂದುವರಿದು, “ಹಮೇ ಪ್ಯಾರ್ ನಿಭಾನಾ ಆತಾ ಹೈ" ಎಂದು ಹೇಳುತ್ತದೆ. ಪಾಕಿಸ್ತಾನ ಹುಟ್ಟಿದ್ದು ಭಾರತದಿಂದಲೇ ಅಲ್ಲವೆ? ಆ ದೇಶಕ್ಕೆ ನಾವೇ ಅಪ್ಪ-ಅಮ್ಮ. ಹಾಗಾಗಿ ಕೊಂಚ ಔದಾರ್ಯದಿಂದ ಅಲ್ಲಿನ ಸೇನಾಪಡೆಯ ಮುಖ್ಯಸ್ಥನನ್ನು ಸರ್ ಎಂದು ಕರೆದರೆ ತಪ್ಪಿಲ್ಲ. ಅಂಥ ಹುದ್ದೆಯಲ್ಲಿದ್ದರೂ ಆತ ಪುಡಿರೌಡಿಯ ಥರ ವರ್ತಿಸುತ್ತಾರೆ ಅಂದರೆ ಅದು ಆತನ ಹಣೆಬರಹ. ಅದಕ್ಕೆ ನಾವೇನು ಮಾಡಲು ಸಾಧ್ಯ? ಆದರೆ, ಎಲ್ಲರನ್ನೂ ಪ್ರೀತಿಸುವುದು ನಮ್ಮ ನಡವಳಿಕೆಯಾಗಿರ ಬೇಕು.

ಅಮೆರಿಕದಲ್ಲಿ ನಿಂತುಕೊಂಡು ಭಾರತದ ಮೇಲೆ ಪೂರ್ವದ ಕಡೆಯಿಂದ ದಾಳಿ ನಡೆಸುವ ಮಾತನ್ನು ಮುನೀರ್ ಆಡುತ್ತಿರುವಾಗ ನನಗೆ ಈ ಮನುಷ್ಯ ಹಿಂದೊಮ್ಮೆ ತನ್ನದೇ ದೇಶದ ಪೂರ್ವ ಭಾಗದಲ್ಲಿ ನಡೆದಿದ್ದನ್ನು ಮರೆತುಬಿಟ್ಟರಾ ಎಂದು ಆಶ್ಚರ್ಯವಾಯಿತು. ಪಾಕಿಸ್ತಾನದ ಹಳೆಯ ಪೂರ್ವ ಭಾಗವನ್ನು ಈಗ ಬಾಂಗ್ಲಾದೇಶ ಎಂದು ಕರೆಯುತ್ತಾರೆ.

ಮಿಸ್ಟರ್ ಮುನೀರ್, ನಿಮಗೆ 1971ರ ಯುದ್ಧದ ನೆನಪಿರಬೇಕಿತ್ತು. ನಿಮ್ಮನ್ನು ಕಾಪಾಡಲು ಅಮೆರಿಕ ದವರು ಯುದ್ಧನೌಕೆಯನ್ನು ಕಳುಹಿಸಿದ್ದರೂ ಭಾರತದ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನ ವನ್ನು ಅಡ್ಡಡ್ಡ ಸೀಳಿ ಎರಡು ಭಾಗ ಮಾಡಿಬಿಟ್ಟಿದ್ದರು. ಅದನ್ನು ಮರೆತಿರಾ? ನಮ್ಮ ಸೇನಾಪಡೆಯ ಶೂರರು ನಿಮ್ಮ ದೇಶದ 99000 ಯೋಧರು ಶರಣಾಗುವಂತೆ ಮಾಡಿದರು. ನಿಮ್ಮ ಸೇನೆಗೆ ನಿಮ್ಮದೇ ದೇಶದ ಪೂರ್ವ ಭಾಗವನ್ನೇ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಹಾಗಿರುವಾಗ ನೀವು ಭಾರತದ ಮೇಲೆ ಪೂರ್ವದಿಂದ ದಾಳಿ ನಡೆಸುವ ಕನಸು ಕಾಣುತ್ತಿದ್ದೀರಿ!

ಎಂಥಾ ತಮಾಷೆಯಲ್ಲವೇ. ಅದು ಹೋಗಲಿ. ಕಾರ್ಗಿಲ್ ಯುದ್ಧವನ್ನೇ ಬೇಕಾದರೂ ನೆನಪು ಮಾಡಿ ಕೊಳ್ಳೋಣ. ಭಾರತವನ್ನು ಒಡೆಯಲು ನಿಮ್ಮ ಪರ್ವೇಜ್ ಮುಷರ್ರ- ದೊಡ್ಡ ಷಡ್ಯಂತ್ರ ರಚಿಸಿದ್ದ ರು. ಆದರೆ ಅದಕ್ಕೆ ಭಾರತ ಕೊಟ್ಟ ಲಾತಾ ಎಷ್ಟು ಜೋರಾಗಿತ್ತು ಅಂದರೆ ನಿಮ್ಮ ಪ್ರಧಾನಿ ನವಾಜ್ ಷರೀಫ್‌ ಸೀದಾ ಹೋಗಿ ಅಮೆರಿಕದ ಕಾಲಿಗೆ ಬಿದ್ದುಬಿಟ್ಟಿದ್ದರು!

ಮಿಸ್ಟರ್ ಮುನೀರ್, ಏಕೆ ನೀವು ಒಮ್ಮೆ ಕೊಂಚ ಪುರುಸೊತ್ತು ಮಾಡಿಕೊಂಡು ಪಾಕಿಸ್ತಾನದ ಇತಿಹಾಸದ ಪುಸ್ತಕದ ಹಾಳೆಗಳನ್ನು ತಿರುವಿಹಾಕಬಾರದು? ಯಾವ್ಯಾವುದೋ ದೇಶಕ್ಕೆ ಹೋಗಿ ಯಾರ‍್ಯಾರದೋ ಮಾತು ಕೇಳಿಕೊಂಡು ವಿದೂಷಕನ ರೀತಿಯಲ್ಲಿ ಹೇಳಿಕೆ ನೀಡಿ ನಿಮ್ಮ ದೇಶದ ಮರ್ಯಾದೆ ಏಕೆ ಕಳೆಯುತ್ತೀರಿ? ನಾನು ಪಾಕಿಸ್ತಾನಕ್ಕೆ ಹಲವಾರು ಸಲ ಹೋಗಿಬಂದಿದ್ದೇನೆ.

ವಿದೇಶಗಳಲ್ಲೂ ಅನೇಕ ಪಾಕಿಸ್ತಾನೀಯರನ್ನು ಭೇಟಿಯಾಗುತ್ತಿರುತ್ತೇನೆ. ಆ ಅನುಭವದಲ್ಲಿ ಒಂದು ಮಾತು ಹೇಳುತ್ತೇನೆ. ನಿಮ್ಮ ದೇಶದ ಜನಸಾಮಾನ್ಯರು ನಿಜವಾಗಿಯೂ ಬಹಳ ಒಳ್ಳೆಯವರು. ನೀವು ಅವರಿಗೇಕೆ ಮೋಸ ಮಾಡುತ್ತೀರಿ? ನಿಮಗೆ ಯುದ್ಧ ಮಾಡಲೇಬೇಕು ಎಂದು ಕೈ ತುರಿಸುತ್ತಿದ್ದರೆ ಖಂಡಿತ ಯುದ್ಧ ಮಾಡಿ. ಆ ಯುದ್ಧವನ್ನು ನಿಮ್ಮ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾ ಚಾರದ ವಿರುದ್ಧ ಮಾಡಿ. ನಿಮ್ಮಲ್ಲಿರುವ ಅಜ್ಞಾನದ ವಿರುದ್ಧ ಯುದ್ಧ ಮಾಡಿ.

ಬಡತನದ ವಿರುದ್ಧ ಯುದ್ಧ ಮಾಡಿ. ಆಗ ಕೊನೆಯ ಪಕ್ಷ ನಿಮ್ಮ ದೇಶದ ಜನರಿಗೆ ಗೋಧಿ ಹಿಟ್ಟು, ಬೇಳೆಕಾಳು, ಅಡುಗೆ ಎಣ್ಣೆಯಾದರೂ ಸಿಗಬಹುದು! ಭಾರತದ ವಿರುದ್ಧ ವಿಷ ಕಾರುವುದರಿಂದ ಪಾಕಿಸ್ತಾನೀಯರ ಬದುಕು ಯಾವ ರೀತಿಯಲ್ಲೂ ಸುಧಾರಿಸುವುದಿಲ್ಲ. ಪಾಕಿಸ್ತಾನದ ಸೇನಾಪಡೆ ಹಾಗೂ ಐಎಸ್‌ಐ ಮಾಡಿದ ಎಡವಟ್ಟುಗಳಿಂದಾಗಿಯೇ ಇಂದು ನಿಮ್ಮ ದೇಶದ ರೋಗಪೀಡಿತರು ಭಾರತಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ.

ನೀವೀಗ ಅವರನ್ನೆಲ್ಲ ಅಮೆರಿಕಕ್ಕೆ ಚಿಕಿತ್ಸೆ ಪಡೆಯಲು ಕಳಿಸುತ್ತೀರಾ? ಆ ಶಕ್ತಿ ನಿಮಗೆ ಇದೆಯಾ? ನಮ್ಮ ದೇಶದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯ ಬಗ್ಗೆಯೂ ಬೆದರಿಕೆಯ ಮಾತುಗಳನ್ನಾಡಿ ದ್ದೀರಿ. ಒಂದು ಕಿವಿಮಾತು ಹೇಳುತ್ತೇನೆ, ಕೇಳಿಸಿಕೊಳ್ಳಿ. ಮನುಷ್ಯನಿಗೆ ಅವನ ಮಿತಿಗಳು ಗೊತ್ತಿರ ಬೇಕು.

ಮುಕೇಶ್ ಅಂಬಾನಿಯ ಬಗ್ಗೆ ಮಾತನಾಡುವುದಕ್ಕೂ ಮೊದಲು ನಿಮ್ಮ ಯೋಗ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ! ಅದಕ್ಕಿಂತ ಹೆಚ್ಚಾಗಿ, ಮುಕೇಶ್ ಅಂಬಾನಿ ನಿಜಕ್ಕೂ ಯಾರು, ಅವರ ಸಾಮರ್ಥ್ಯವೇನು ಎಂಬುದನ್ನಾದರೂ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡಿರಿ. ಅವರ ಬಗ್ಗೆ ನೀವು ಏನನ್ನೂ ಓದಿಲ್ಲ ಅಂತಾದರೆ ನಾನೇ ಹೇಳುತ್ತೇನೆ ಕೇಳಿಸಿಕೊಳ್ಳಿ.

ಸದ್ಯ ಮುಕೇಶ್ ಅಂಬಾನಿಯ ಒಟ್ಟು ಸಂಪತ್ತು 8.5 ಲಕ್ಷ ಕೋಟಿ ರು.ಗಿಂತ ಹೆಚ್ಚು. ನಿಮ್ಮ ದೇಶದ ಬಜೆಟ್ ಗಾತ್ರ ಎಷ್ಟು ಅಂತ ನಿಮಗೆ ಗೊತ್ತಾ? 2024-25ನೇ ಸಾಲಿನಲ್ಲಿ ಪಾಕಿಸ್ತಾನದ ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನ ಗಾತ್ರ 4.5 ಲಕ್ಷ ಕೋಟಿ ಭಾರತೀಯ ರುಪಾಯಿ! ಅಂದರೆ ಭಾರತದ ಮುಕೇಶ್ ಅಂಬಾನಿಯೊಬ್ಬರೇ ಪಾಕಿಸ್ತಾನದ ಒಂದಿಡೀ ವರ್ಷದ ವಾರ್ಷಿಕ ಆದಾಯದ ದುಪ್ಪಟ್ಟು ಬೆಲೆ ಬಾಳುತ್ತಾರೆ.

ನಾವು ಭಾರತೀಯರು ಮುಕೇಶ್ ಅಂಬಾನಿಯನ್ನು ಕೇವಲ ದುಡ್ಡಿನಲ್ಲಿ ಅಳೆಯುವುದಿಲ್ಲ ಅಥವಾ ಅವರನ್ನೊಬ್ಬ ಉದ್ಯಮಿಯಾಗಿ ಮಾತ್ರ ನೋಡುವುದಿಲ್ಲ. ಅವರು ಸ್ವತಃ ಒಂದು ಔದ್ಯೋಗಿಕ ವಿಶ್ವವಿದ್ಯಾಲಯ ಇದ್ದಂತೆ. ನಮಗೆ ಅವರ ಬಗ್ಗೆ ಬಹಳ ಹೆಮ್ಮೆಯಿದೆ. ಹೋಗಲಿ ಬಿಡಿ, ನಿಮ್ಮ ಕ್ಷಿಪಣಿಗಳು ಜಾಮ್‌ನಗರಕ್ಕೆ ಬಂದು ತಲುಪುವವರೆಗೆ ನಾವು ಆಕಾಶ ನೋಡುತ್ತಾ ಸುಮ್ಮನೆ ಕುಳಿತಿ ರುತ್ತೇವೆ ಎಂದುಕೊಂಡಿರಾ? ನೀವು ಊಹೆ ಕೂಡ ಮಾಡಲಾರದ ರೀತಿಯಲ್ಲಿ ತಿರುಗಿಸಿ ಹೊಡೆಯು ತ್ತೇವೆ!

ಯಾಕೆ ಸುಖಾಸುಮ್ಮನೆ ಮೂರ್ಖತನದ ಹೇಳಿಕೆಗಳನ್ನು ನೀಡಿ ಸಣ್ಣವರಾಗುತ್ತೀರಿ? ಮೂರ್ಖತನದ ಬಗ್ಗೆ ಮಾತನಾಡುವಾಗ ನನಗೆ ನಿಮ್ಮದೇ ದೇಶದ ಮಾಜಿ ಮಂತ್ರಿ ಶೇಖ್ ರಶೀದ್‌ರ ನೆನಪಾಗುತ್ತದೆ. ಪಾಕಿಸ್ತಾನ ಒಂದು ವಿಶಿಷ್ಟ ಆಟಂ ಬಾಂಬ್ ತಯಾರಿಸಿದೆ, ಅದು ಕಾಲು ಕೆ.ಜಿ. ತೂಗುತ್ತದೆ, ಅದಕ್ಕೆ ಯಾರು ಯಾವ ಧರ್ಮದವರು ಎಂದು ಗುರುತಿಸಿ ದಾಳಿ ನಡೆಸುವ ಸ್ವಯಂಶಕ್ತಿಯಿದೆ ಎಂದು ರಶೀದ್ ಹಿಂದೊಮ್ಮೆ ಬುರುಡೆ ಬಿಟ್ಟಿದ್ದರು!

ಎಂಥಾ ಅಜ್ಞಾನಿಯಾಗಿದ್ದ ಆ ಮನುಷ್ಯ! ಆತ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಹೋಗಲಿ ಬಿಡಿ, ನಿಮ್ಮ ಬಗ್ಗೆಯೇ ಮಾತನಾಡೋಣ. ಈಗ ನೀವು ಹಾಕುತ್ತಿರುವ ಪರಮಾಣು ಬಾಂಬ್ ದಾಳಿಯ ಬೆದರಿಕೆ ಕೂಡ ಹೊಸದಲ್ಲ. “ನಾವಂತೂ ಮುಳುಗುತ್ತೇವೆ, ಜತೆಗೆ ನಿಮ್ಮನ್ನೂ ಮುಳುಗಿಸುತ್ತೇವೆ" ಎಂಬ ಮಾತಿನಂತೆ ನಿಮ್ಮ ಬೆದರಿಕೆಯಿದೆ. ನಾವು ಶಾಂತಿ ಕಾಪಾಡುವ ಉದ್ದೇಶದಿಂದ ಅಣ್ವಸ್ತ್ರ ಗಳನ್ನು ಇರಿಸಿಕೊಂಡಿದ್ದೇವಾದರೂ ಕನಿಷ್ಠ ಪಕ್ಷ ಅವುಗಳ ಪ್ರಮಾಣವನ್ನು ಒಮ್ಮೆ ಗಮನಿಸಿ.

ಪಾಕಿಸ್ತಾನದ ಬಳಿಯಿರುವ ಇಷ್ಟೇ ಇಷ್ಟು ಅಣ್ವಸಕ್ಕೆ ನಮ್ಮಲ್ಲಿರುವ ಅಣ್ವಸ್ತ್ರಗಳನ್ನು ಹೋಲಿಕೆ ಕೂಡ ಮಾಡಲು ಸಾಧ್ಯವಿಲ್ಲ. ಏನೋ ಎಡವಟ್ಟಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಅಣ್ವಸ್ತ್ರ ಗಳನ್ನು ಬಳಸಿ ಯುದ್ಧ ಮಾಡಿದವು ಅಂತಲೇ ಇಟ್ಟುಕೊಳ್ಳಿ. ಆಗ ನಮ್ಮ ದೇಶದ ಒಂದಷ್ಟು ಭಾಗ ಗಳಾದರೂ ಉಳಿದುಕೊಳ್ಳುತ್ತವೆ. ಆದರೆ, “ತೇರಾ ಕ್ಯಾ ಹೋಗಾ ಕಾಲಿಯಾ!" ನಿಮ್ಮ ದೇಶದ ಕತೆ ಏನಾಗುತ್ತದೆಯೆಂದು ಗೊತ್ತಲ್ಲವೇ? ಪಾಕಿಸ್ತಾನವೆಂಬ ಒಂದು ದೇಶ ಇಲ್ಲಿತ್ತು ಎಂದು ವಿಶ್ವದ ಭೂಪಟದಲ್ಲಿ ಮಕ್ಕಳು ಗುರುತಿಸುವುದಕ್ಕೂ ಪರದಾಡುವ ಸ್ಥಿತಿ ಬರುತ್ತದೆ, ನೆನಪಿರಲಿ!

(ಲೇಖಕರು ಹಿರಿಯ ಪತ್ರಿಕೋದ್ಯಮಿ)