Roopa Gururaj Column: ಕಾಯಕವೇ ಕೈಲಾಸ ಎಂದು ಬದುಕಿದ ನಕ್ಕೀರ
ನಕ್ಕೀರ ತನ್ನ ಕೆಲಸದಲ್ಲಿ ಎಷ್ಟು ನಿರತನಾಗಿದ್ದರೆಂದರೆ ಅವನ ಮುಂದೆ ಸಾಕ್ಷಾತ್ ಶಿವನೇ ಬಂದು ನಿಂತರೂ ಅವನಿಗೆ ಗೊತ್ತಾಗಲಿಲ್ಲ. ಶಿವನನ್ನು ಗಮನಿಸದೆ ನೀರಿನಲ್ಲಿ ಮುಳುಗಿದ. ಈಗ ಶಿವನಿಗೆ ಅವನ ಮೇಲೆ ಬಹಳ ಕೋಪ ಬಂತು. ಇವನನ್ನು ಮಹಾ ಶಿವಭಕ್ತನೆಂದು ಜನ ಕೊಂಡಾಡುತ್ತಿದ್ದಾರೆ, ತಾನೇ ಎದುರಿಗೆ ಬಂದು ನಿಂತರೂ ಇವನು ನನ್ನನ್ನು ಗಮನಿಸುತ್ತಲೇ ಇಲ್ಲವಲ್ಲ ಎಂದುಕೊಂಡ.


ಒಂದೊಳ್ಳೆ ಮಾತು
ಇದೊಂದು ತಮಿಳುನಾಡಿನಲ್ಲಿ ಹೆಚ್ಚು ಪ್ರಚಲಿತವಿರುವ ಕಥೆ. ನಕ್ಕೀರ ಎನ್ನುವ ಒಬ್ಬ ಶಿವಭಕ್ತ ಯಾವಾಗಲೂ ಸಮುದ್ರದ ತಡಿಯಲ್ಲಿ, ಕೆಲಸ ಮಾಡುತ್ತಿದ್ದ. ಸಮುದ್ರದ ಆಳಕ್ಕೆ ಇಳಿದು ಅಲ್ಲಿದ್ದ ಮುತ್ತು ರತ್ನಗಳನ್ನು ಆಯ್ದು ತರುವುದು ಅವನ ಕೆಲಸ. ಆತ ಪ್ರತಿ ಉಸಿರಿನಲ್ಲಿ, ಶಿವನಾಮವನ್ನು ಧ್ಯಾನಿಸುತ್ತಿದ್ದ. ನೀರಿನಲ್ಲಿ ಮುಳುಗುವಾಗ, ಮುತ್ತುಗಳನ್ನು ಆಯ್ದುಕೊಳ್ಳುವಾಗ, ಮೇಲೆ ಬಂದು ಅವುಗಳನ್ನು ಬೇರ್ಪಡಿಸುವಾಗಲೂ ಕೂಡಾ ಅವನ ಬಾಯಲ್ಲಿ ಶಿವನನಾಮವೇ ಇರುತ್ತಿತ್ತು. ಇವನ ಈ ನಡೆ, ನುಡಿಯಿಂದ ಎಲ್ಲರಿಗೂ ಇವನ ಬಗ್ಗೆ ಅಪಾರ ಗೌರವ. ಎಲ್ಲರೂ ಇವನನ್ನು ಶಿವಭಕ್ತ ನೆಂದು ಕೊಂಡಾಡುವುದನ್ನು ಕೇಳಿ, ಅವನನ್ನು ಪರೀಕ್ಷಿಸಬೇಕೆಂದು, ಶಿವನೇ ಒಂದು ಸಲ ಸಮುದ್ರದ ದಡದಲ್ಲಿ ಅವನ ಎದುರಿಗೇ ಬಂದು ನಿಂತ.
ನಕ್ಕೀರ ತನ್ನ ಕೆಲಸದಲ್ಲಿ ಎಷ್ಟು ನಿರತನಾಗಿದ್ದರೆಂದರೆ ಅವನ ಮುಂದೆ ಸಾಕ್ಷಾತ್ ಶಿವನೇ ಬಂದು ನಿಂತರೂ ಅವನಿಗೆ ಗೊತ್ತಾಗಲಿಲ್ಲ. ಶಿವನನ್ನು ಗಮನಿಸದೆ ನೀರಿನಲ್ಲಿ ಮುಳುಗಿದ. ಈಗ ಶಿವನಿಗೆ ಅವನ ಮೇಲೆ ಬಹಳ ಕೋಪ ಬಂತು. ಇವನನ್ನು ಮಹಾ ಶಿವಭಕ್ತನೆಂದು ಜನ ಕೊಂಡಾಡುತ್ತಿದ್ದಾರೆ, ತಾನೇ ಎದುರಿಗೆ ಬಂದು ನಿಂತರೂ ಇವನು ನನ್ನನ್ನು ಗಮನಿಸುತ್ತಲೇ ಇಲ್ಲವಲ್ಲ ಎಂದುಕೊಂಡ.
ಇದನ್ನೂ ಓದಿ: Roopa Gururaj Column: ನಮಗೆ ಮುಳುವಾಗುವ ನಮ್ಮ ಕೋಪ
ಸ್ವಲ್ಪ ಸಮಯದ ನಂತರ ನಕ್ಕೀರ ನೀರಿನಿಂದ ಮೇಲೆ ಬಂದ, ಆಗಲೂ ಇವನು ಶಿವನನ್ನು ಗಮನಿಸಲಿಲ್ಲ.ತಕ್ಷಣ ಶಿವ ಕೋಪದಿಂದ ತನ್ನ ಮೂರನೇಯ ಕಣ್ಣನ್ನು ತೆರೆದ. ಶಿವ ತನ್ನ ಹಣೆ ಗಣ್ಣನ್ನು ತೆರೆದರೆ, ಇಡೀ,ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ. ಆದರೆ ಶಿವ ಮೂರನೆಯ ಕಣ್ಣನ್ನು ತೆರೆದರೂ ಕೂಡ, ಬೆಂಕಿಯ ಉರಿ ನಕ್ಕೀರನನ್ನು ಮುಟ್ಟಲಿಲ್ಲ.
ಅವನು ತನ್ನ ಪಾಡಿಗೆ ತಾನು, ಶಿವಧ್ಯಾನದೊಂದಿಗೆ, ತನ್ನ ಕೆಲಸದಲ್ಲಿ ನಿರತನಾಗಿದ್ದ. ಆಗ ಶಿವನೇ ಆಶ್ಚರ್ಯದಿಂದ ನಕ್ಕೀರನನ್ನು ಮುಟ್ಟಿ ಮಾತನಾಡಿಸಿದ. ನನ್ನನ್ನು ಕಾಣಲೆಂದು ಅನೇಕ ಶರಣರು ನೂರಾರು ವರ್ಷಗಳ ತಪಸ್ಸು ಮಾಡಿದರೂ ಅವರಿಗೆ ದರ್ಶನ ನೀಡದ ನಾನು ನಿನ್ನ ಮುಂದೆಯೇ ಬಂದು ನಿಂತಿದ್ದರೂ ನಿರ್ಲಕ್ಷದಿಂದ ನೀನು ಕೆಲಸ ಮಾಡುತ್ತಿರುವೆಯಲ್ಲ ಇದಕ್ಕೆ ಕಾರಣ ಏನು? ಎಂದು ಕೇಳಿದ.
ಆಗ ನಕ್ಕೀರ, ದೇವಾ ನಾನು ನನ್ನ ಕಾಯಕದಲ್ಲಿ ತನ್ಮಯನಾಗಿ ಬಿಟ್ಟಿದ್ದೆ. ನೀವು ಬಂದಿದ್ದು, ನನಗೆ ತಿಳಿಯಲಿಲ್ಲ. ನನಗೆ ಕಾಯಕವೇ ಪೂಜೆ ಆ ಕಾಯಕ ನೀನೇ ನನ್ನ ಕಾಯಕದ ಉದ್ದೇಶವೂ ನೀನೇ, ಎಂದು ಹೇಳಿ ಶಿವನ ಕಾಲಿಗೆರಗಿದ. ಅದು ನಿಜವೇ, ಆದರೆ ನನ್ನ ಉರಿಗಣ್ಣಿನ ಬೆಂಕಿ ನಿನ್ನನ್ನು ಯಾಕೆ ಸುಡಲಿಲ್ಲ? ಎಂದು ಕೇಳಿದ ಶಿವ.
ಆಗ ನಕ್ಕೀರ ದೇವಾ, ನಾನು ದುಡಿದು ತಿನ್ನುವವನು ನೀನು ಬೇಡಿ ತಿನ್ನುವವನು. ದುಡಿದು ತಿನ್ನುವ ವನು, ತಿರುಗಿ ತಿನ್ನುವವನಿಗಿಂತ ದೊಡ್ಡವನು. ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿಯೇ ಹೆಚ್ಚು ಎಂದು ಕೈ ಮುಗಿದ. ಇವನ ಮಾತನ್ನು ಶಿವ ಮೆಚ್ಚಿಕೊಂಡ. ಶಿವ ಅವನ ಕಾಯಕದ ಶಕ್ತಿ ಯನ್ನು ಹೊಗಳಿ ಪ್ರೀತಿಯಿಂದ ಅವನನ್ನು ಆಶೀರ್ವದಿಸಿ ಕೈಲಾಸಕ್ಕೆ ಹೊರಟ.
ನಿಜ ಜೀವನದಲ್ಲಿ ಕೂಡ ಅನೇಕರು ಎರಡು ಹೊತ್ತಿನ ಊಟಕ್ಕಾಗಿ ಕಾಯಕದಲ್ಲಿ ಅದೆಷ್ಟು ನಿರತ ರಾಗಿರುತ್ತಾರೆ ಎಂದರೆ, ಅವರಿಗೆ ಪೂಜೆ, ಯಾತ್ರೆ ಇವುಗಳಿಗೆ ಸಮಯವೇ ಇರುವುದಿಲ್ಲ. ಪ್ರಾಮಾಣಿಕ ಬದುಕನ್ನು ಆರಿಸಿಕೊಂಡವರಿಗೆ ಕಾಯಕದಲ್ಲಿ ದೇವರನ್ನು ಕಾಣುವವರಿಗೆ, ಇಂತಹ ವ್ರತ, ಪೂಜೆ, ಯಾತ್ರೆಗಳ -ಲವೆ ಲ್ಲವೂ ಅವರ ಕಾಯಕದಿಂದಲೇ ಸಿಕ್ಕಿಬಿಡುವವು.
ನಾನಾ ರೀತಿಯ ಫಲ ಪುಷ್ಪಗಳನ್ನು ದೇವರಿಗೆ ಅರ್ಪಿಸಿ ಅವನನ್ನು ಸಂತುಷ್ಟಪಡಿಸಲು ಸಾಧ್ಯ ವಾಗುವುದೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ, ಇತರರಿಗೆ ಕೇಡು ಬಯಸದೇ ಇದ್ದಾಗ ಖಂಡಿತ ದೇವರನ್ನು ಮೆಚ್ಚಿಸುತ್ತೇವೆ.