Vishweshwar Bhat Column: ಅದೆಷ್ಟೇ ಉನ್ನತ ಅಧಿಕಾರದಲ್ಲಿರಲಿ, ಕೊನೆಯಲ್ಲಿ ನಿಲ್ಲುವವರು ಮಾತ್ರ ಮನೆಯವರು !
ಸರಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವ ನಿರ್ಧಾರವೂ ಧವನ್‌ಗೆ ಗೊತ್ತಿಲ್ಲದೇ ಆಗುತ್ತಿರಲಿಲ್ಲ. ಧವನ್ ಕೇವಲ ನಿರ್ದೇಶನಗಳನ್ನು ತಲುಪಿಸುವವರಷ್ಟೇ ಆಗಿರಲಿಲ್ಲ, ಪ್ರಧಾನಿಯ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡುತ್ತಿದ್ದರು. ಇಂದಿರಾ ಗಾಂಧಿಯವರು ಧವನ್ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯೇ ಅವರ ಈ ಅಪ್ರತಿಮ ಅಧಿಕಾರಕ್ಕೆ ಮುಖ್ಯ ಕಾರಣವಾಗಿತ್ತು. ಸಚಿವರಿಗೆ ಕರೆ ಮಾಡಿ ಪ್ರಧಾನಿಯವರ ಹೆಸರಿನಲ್ಲಿ ಆದೇಶ ನೀಡುವಷ್ಟು ಶಕ್ತಿ ಅವರಿಗಿತ್ತು.
-
ಇದೇ ಅಂತರಂಗ ಸುದ್ದಿ
ಆರ್.ಕೆ.ಧವನ್ (ರಾಜೇಂದರ್ ಕುಮಾರ್ ಧವನ್) ದಿಲ್ಲಿಯ ರಾಜಕೀಯ ಮೊಗಸಾಲೆಯಲ್ಲಿ ಅತಿ ಪರಿಚಿತ ಹೆಸರು! ಭಾರತದ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವ ಬೀರಿದ್ದ, ಪ್ರಧಾನಿಯವರ ಶಕ್ತಿಶಾಲಿ ಆಪ್ತ ಕಾರ್ಯದರ್ಶಿ. ಇಂದಿರಾ ಗಾಂಧಿಯವರ ಅಧಿಕಾರದ ಅವಧಿಯಲ್ಲಿ, ಪ್ರಧಾನಿ ಕಾರ್ಯಾಲಯಕ್ಕಿಂತಲೂ (ಪಿಎಂಒ) ಧವನ್ ಅವರ ಕಚೇರಿಯೇ ಹೆಚ್ಚಿನ ರಾಜಕೀಯ ನಿರ್ಧಾರಗಳ ಕೇಂದ್ರವಾಗಿತ್ತು. ಇಂದಿರಾ ಗಾಂಧಿಯವರನ್ನು ಭೇಟಿಯಾಗಬೇಕಾದರೆ ಧವನ್ ಅನುಮತಿ ಕಡ್ಡಾಯವಾಗಿತ್ತು.
ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಜ್ಯೇಷ್ಠ ರಾಜಕಾರಣಿಗಳು, ರಾಜತಾಂತ್ರಿಕರು, ರಾಜ್ಯಪಾಲರು ಮತ್ತು ಹಿರಿಯ ಐಎಎಸ್ ಅಧಿಕಾರಿಗಳು ಪ್ರಧಾನಿಯನ್ನು ಸಂಪರ್ಕಿಸಲು ಧವನ್ ಅವರ ಕಚೇರಿಯ ಮುಂದೆ ಸಾಲು ನಿಲ್ಲಬೇಕಿತ್ತು. ಧವನ್ ಅವರ ಒಪ್ಪಿಗೆಯಿಲ್ಲದೇ ಇಂದಿರಾ ಅವರ ಟೇಬಲ್ ತಲುಪಲು ಯಾವುದೇ ಕಡತಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಸಾಧ್ಯವಿರಲಿಲ್ಲ. ಸರಕಾರದ ಪ್ರಮುಖ ನಿರ್ಧಾರಗಳಲ್ಲಿ ಹಾಗೂ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಧವನ್ ನೇರ ಪಾತ್ರ ವಹಿಸುತ್ತಿದ್ದರು. ಯಾರಿಗೆ ಯಾವ ಹುದ್ದೆ ನೀಡಬೇಕು, ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಆ ಹುದ್ದೆಯಿಂದ ಕೆಳಗಿಳಿಸಬೇಕು ಎಂಬುದನ್ನು ಧವನ್ ನಿರ್ಧರಿಸುತ್ತಿದ್ದರು.
ಸರಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವ ನಿರ್ಧಾರವೂ ಧವನ್‌ಗೆ ಗೊತ್ತಿಲ್ಲದೇ ಆಗುತ್ತಿರಲಿಲ್ಲ. ಧವನ್ ಕೇವಲ ನಿರ್ದೇಶನಗಳನ್ನು ತಲುಪಿಸುವವರಷ್ಟೇ ಆಗಿರಲಿಲ್ಲ, ಪ್ರಧಾನಿಯ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡುತ್ತಿದ್ದರು. ಇಂದಿರಾ ಗಾಂಧಿಯವರು ಧವನ್ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯೇ ಅವರ ಈ ಅಪ್ರತಿಮ ಅಧಿಕಾರಕ್ಕೆ ಮುಖ್ಯ ಕಾರಣವಾಗಿತ್ತು. ಸಚಿವರಿಗೆ ಕರೆ ಮಾಡಿ ಪ್ರಧಾನಿಯವರ ಹೆಸರಿನಲ್ಲಿ ಆದೇಶ ನೀಡುವಷ್ಟು ಶಕ್ತಿ ಅವರಿಗಿತ್ತು. 1984ರಲ್ಲಿ ಇಂದಿರಾ ಗಾಂಧಿ ಯವರ ಹತ್ಯೆಯಾಗುವವರೆಗೂ ಧವನ್ ಅವರ ನೆರಳಿನಂತೆ ಜತೆಗಿದ್ದರು. ರಾಜಕೀಯ ಅಧಿಕಾರ ವಿಲ್ಲದಿದ್ದರೂ, ಸಂವಿಧಾನಾತ್ಮಕ ಹುದ್ದೆ ಯಿಲ್ಲದಿದ್ದರೂ, ಪ್ರಧಾನಿ ಕಚೇರಿಯಲ್ಲಿದ್ದು ಕೊಂಡೇ ಇಡೀ ದೇಶದ ಆಡಳಿತ ಯಂತ್ರವನ್ನು ಆಟವಾಡಿಸಿದ ಅಪರೂಪದ ‘ಪವರ್ ಬ್ರೋಕರ್’ ಆಗಿ ಆರ್.ಕೆ.ಧವನ್ ಭಾರತೀಯ ರಾಜಕೀಯ ಇತಿಹಾಸದಲ್ಲಿ ಉಳಿದುಕೊಂಡಿದ್ದಾರೆ.
ಧವನ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಜವಹರಲಾಲ್ ನೆಹರೂ ಅವರ ಕಚೇರಿಯಲ್ಲಿ, ಅತ್ಯಂತ ಕೆಳಹಂತದ ಒಬ್ಬ ಸಾಧಾರಣ ಸ್ಟೆನೋಗ್ರಾಫರ್ (ಶೀಘ್ರಲಿಪಿಗಾರ) ಆಗಿ! ಧವನ್ ಅವರ ಅದ್ಭುತ ನೆನಪಿನ ಶಕ್ತಿ, ರಹಸ್ಯಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹಾಗೂ ಅತ್ಯಂತ ವೇಗದ ಕೆಲಸದ ವೈಖರಿಯನ್ನು ಗಮನಿಸಿದ ಇಂದಿರಾ ಗಾಂಧಿ, ಅವರನ್ನು ತಮ್ಮ ವೈಯಕ್ತಿಕ ಸಿಬ್ಬಂದಿ ಯಾಗಿ ಸೇರಿಸಿಕೊಂಡರು.
ಇದನ್ನೂ ಓದಿ: Vishweshwar Bhat Column: ʼಬ್ಲೂಬುಕ್ʼ ಎಂದರೇನು?
ಒಬ್ಬ ಸಾಮಾನ್ಯ ಸ್ಟೆನೋಗ್ರಾಫರ್ ದೇಶದ ಪ್ರಧಾನಿ ಬಲಗೈ ಬಂಟನಾಗಿ, ಪ್ರಭಾವಶಾಲಿ ಶಕ್ತಿಯಾಗಿ ಬೆಳೆದಿದ್ದು ಭಾರತೀಯ ಆಡಳಿತ ಶ್ರೇಣಿಯಲ್ಲಿ ಅಪರೂಪದ ಇತಿಹಾಸ. ಇಂದಿರಾ ಗಾಂಧಿ ಏನು ಆಲೋಚಿಸುತ್ತಿದ್ದಾರೆ, ಯಾರನ್ನು ಭೇಟಿಯಾಗಲು ಬಯಸುತ್ತಾರೆ ಅಥವಾ ನಿರ್ದಿಷ್ಟ ಸನ್ನಿವೇಶ ದಲ್ಲಿ ಯಾರನ್ನು ಕರೆಯಿಸಬೇಕು ಎಂಬುದನ್ನು ಇಂದಿರಾ ಅವರು ಬಾಯ್ಬಿಟ್ಟು ಹೇಳುವ ಮುನ್ನವೇ ಧವನ್ ಗ್ರಹಿಸುತ್ತಿದ್ದರು. ಅವರ ಕೆಲಸದ ನಿಷ್ಠೆ ಎಷ್ಟಿತ್ತೆಂದರೆ, ಇಂದಿರಾ ಗಾಂಧಿ ಅವರು ಕಾರ್ಯ ಗಳ ಪಟ್ಟಿ ( List of Assignments) ನೀಡಿದರೆ, ಕೆಲವೇ ದಿನಗಳ ನಂತರ ಆ ಬಗ್ಗೆ ವಿಚಾರಿಸಿದಾಗ ಧವನ್ ಉತ್ತರಿಸುತ್ತಿದ್ದದ್ದು ಒಂದೇ ಮಾತು - ‘ಅದು ಎಂದೋ ಮುಗಿದು ಹೋಯಿತು.’
1975ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ, ಪ್ರಮುಖ ನಾಯಕರ ಬಂಧನದ ಪಟ್ಟಿಯನ್ನು ತಯಾರಿಸುವಲ್ಲಿ ಧವನ್ ಪ್ರಮುಖ ಪಾತ್ರ ವಹಿಸಿದ್ದರು. ಪೊಲೀಸ್ ಕಮಿಷನರ್‌ಗಳು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಐಎಎಸ್ ಅಧಿಕಾರಿಗಳಿಗೆ ಮಧ್ಯರಾತ್ರಿಯ ನೇರ ಕರೆ ಮಾಡಿ ‘ಇದು ಮೇಡಂ ಆದೇಶ’ ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದ್ದರು. ಆ ಸಮಯದಲ್ಲಿ ಸಂವಿಧಾನಾತ್ಮಕವಾಗಿ ಯಾವುದೇ ಸಚಿವ ಸ್ಥಾನವಿಲ್ಲದಿದ್ದರೂ, ಧವನ್ ನೀಡುತ್ತಿದ್ದ ಮೌಖಿಕ ಆದೇಶಗಳನ್ನು ಅಧಿಕೃತ ಸರಕಾರಿ ಶಾಸನಗಳಿಗಿಂತಲೂ ಹೆಚ್ಚು ಗಂಭೀರವಾಗಿ ಪಾಲಿಸಲಾಗುತ್ತಿತ್ತು.
ಇಂದಿರಾ ಪುತ್ರ ಸಂಜಯ್ ಗಾಂಧಿಯವರ ಆಪ್ತ ವಲಯದಲ್ಲಿದ್ದ ಧವನ್ ಏನ್ ಹೇಳಿದರೂ ಅದು ಪ್ರಧಾನಿ ಅಥವಾ ಅವರ ಪುತ್ರನ ಆದೇಶ ಎಂದು ಪರಿಗಣಿಸಲಾಗುತ್ತಿತ್ತು. ಆ ಕಾಲದಲ್ಲಿ ದೆಹಲಿಯ ರಾಜಕೀಯ ಕಾರಿಡಾರ್‌ನಲ್ಲಿ ಒಂದು ಮಾತಿತ್ತು - ‘ಪ್ರಧಾನಿ ಕಚೇರಿಯಿಂದ ಬರುವ ಕರೆಗಿಂತ, ಧವನ್ ಅವರ ಲ್ಯಾಂಡ್‌ಲೈನ್‌ನಿಂದ ಬರುವ ಕರೆಗೆ ಹೆಚ್ಚು ಶಕ್ತಿಯಿರುತ್ತದೆ’. ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಿದ್ದರೂ ಅಥವಾ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಬೇಕಿದ್ದರೂ, ಇಂದಿರಾ ನೇರವಾಗಿ ಮಾತನಾಡುತ್ತಿರಲಿಲ್ಲ.
ಧವನ್ ಅವರೇ ಸಂಬಂಧಪಟ್ಟ ನಾಯಕರಿಗೆ ಕರೆ ಮಾಡಿ, ‘ಮೇಡಮ್ ಬಯಸಿದ್ದಾರೆ, ನೀವು ರಾಜೀನಾಮೆ ಸಲ್ಲಿಸಿ’ ಅಥವಾ ‘ನಿಮಗೆ ನಾಳೆ ಪ್ರಮಾಣವಚನಕ್ಕೆ ಸಿದ್ಧರಾಗಿರಲು ಹೇಳಿದ್ದಾರೆ’ ಎಂದು ಕೇವಲ ಒಂದೇ ಸಾಲಿನಲ್ಲಿ ಸಂದೇಶ ತಲುಪಿಸುತ್ತಿದ್ದರು. ಅವರ ಆ ಒಂದು ಫೋನ್ ಕರೆ ರಾಜಕಾರಣಿಗಳ ಭವಿಷ್ಯವನ್ನೇ ಬದಲಾಯಿಸುತ್ತಿತ್ತು.
ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಸಂಘಟನೆಗಿಂತ ಧವನ್ ಕಾರ್ಯಾಚರಣೆಯೇ ಮುಖ್ಯವಾಗಿತ್ತು. ಪಕ್ಷದ ಪದಾಧಿಕಾರಿಗಳ ಆಯ್ಕೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಟಿಕೆಟ್ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಪಟ್ಟಿ ಪ್ರಕಟವಾಗುವುದು ಧವನ್ ಅವರ ಕೈಬರಹದ ಟಿಪ್ಪಣಿಗಳ ಆಧಾರದ ಮೇಲೆಯೇ. ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗುವ ಬದಲು ಧವನ್ ಅವರ ಪ್ರಸನ್ನತೆಗಾಗಿ ಕಾಯುತ್ತಿದ್ದರು.
1970ರ ದಶಕದ ಮಧ್ಯಭಾಗದಲ್ಲಿ ಸಂಜಯ್ ಗಾಂಧಿ ರಾಜಕೀಯದಲ್ಲಿ ಸಕ್ರಿಯರಾದಾಗ, ಅವರಿಗೆ ನೆರಳಾಗಿ ನಿಂತವರು ಧವನ್. ಸಂಜಯ್ ನೇತೃತ್ವದ ಯುವ ಕಾಂಗ್ರೆಸ್ ಯೋಜನೆಗಳು ಮತ್ತು ‘ಐದು ಅಂಶಗಳ ಕಾರ್ಯಕ್ರಮ’ಗಳನ್ನು ಆಡಳಿತ ಯಂತ್ರದ ಮೂಲಕ ಜಾರಿಗೆ ತರಲು ಧವನ್ ಮುಂಚೂಣಿಯಲ್ಲಿದ್ದರು.
ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿಯವರ ಹಠಾತ್ ಸಾವು ಸಂಭವಿಸಿದಾಗ, ಇಂದಿರಾ ಗಾಂಧಿಯವರನ್ನು ಮಾನಸಿಕವಾಗಿ ಕುಸಿದು ಹೋಗದಂತೆ ತಡೆದು, ಅವರಿಗೆ ಧೈರ್ಯ ತುಂಬಿದವರಲ್ಲಿ ಧವನ್ ಪ್ರಮುಖರು. ಅವರ ಕೆಲಸದ ಶೈಲಿಯೂ ಅತ್ಯಂತ ವಿಶಿಷ್ಟವಾಗಿತ್ತು. ಅವರು ಯಾವುದೇ ಪ್ರಮುಖ ರಾಜಕೀಯ ನಿರ್ದೇಶನಗಳನ್ನು ಅಥವಾ ಸೂಕ್ಷ್ಮ ಆದೇಶಗಳನ್ನು ಸರಕಾರಿ ಕಡತಗಳಲ್ಲಿ ಬರೆದು ಪ್ರಧಾನಿಯವರ ಸಹಿ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲವೂ ಮೌಖಿಕ ಆದೇಶಗಳೇ. ಆದರೂ, ಅವರ ಮೌಖಿಕ ಆದೇಶವನ್ನು ಮೀರಿ ನಡೆಯುವ ಧೈರ್ಯ ಯಾವುದೇ ಕ್ಯಾಬಿನೆಟ್ ಕಾರ್ಯದರ್ಶಿಗಾಗಲಿ ಅಥವಾ ಗೃಹ ಕಾರ್ಯದರ್ಶಿಗಾಗಲಿ ಇರಲಿಲ್ಲ. ಈ ‘ಅಲಿಖಿತ ಅಧಿಕಾರ’ವೇ ಅವರನ್ನು ನಾಯಕರ ಕಣ್ಣಲ್ಲಿ ಅತ್ಯಂತ ಶಕ್ತಿಶಾಲಿಯನ್ನಾಗಿ ಮಾಡಿತ್ತು. 1984ರ ಅಕ್ಟೋಬರ್ 31ರಂದು ಇಂದಿರಾ ನಿವಾಸವಾದ 1, ಸಫ್ದರ್‌ಜಂಗ್ ರಸ್ತೆಯಲ್ಲಿ, ಅವರ ಸಿಖ್ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ, ಇಂದಿರಾ ಪಕ್ಕದ ಹೆಜ್ಜೆ ಹಾಕುತ್ತಿದ್ದ ಏಕೈಕ ವ್ಯಕ್ತಿ ಆರ್.ಕೆ. ಧವನ್!
ಇಂದಿರಾ ಗಾಂಧಿಯವರ ಮೇಲಿನ ಗುಂಡಿನ ದಾಳಿಯನ್ನು ಧವನ್ ಕಣ್ಣಾರೆ ಕಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ರಕ್ತಸಿಕ್ತವಾಗಿದ್ದ ಇಂದಿರಾ ಗಾಂಧಿಯವರನ್ನು ಉಳಿಸಲು ಧವನ್ ವೈದ್ಯರಲ್ಲಿ ಗೋಗರೆದಿದ್ದರು. ಇಂದಿರಾ ಹತ್ಯೆಯ ನಂತರ, ರಾಜೀವ್ ಗಾಂಧಿ ಪ್ರಧಾನಿಯಾದಾಗ ಧವನ್ ಜೀವನದಲ್ಲಿ ಭಾರೀ ರಾದ್ಧಾಂತ ಎದುರಾಯಿತು. ಇಂದಿರಾ ಗಾಂಧಿ ಹತ್ಯೆಯ ತನಿಖೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಥಕ್ಕರ್ ಆಯೋಗ ತನ್ನ ವರದಿಯಲ್ಲಿ, ‘ಇಂದಿರಾ ಹತ್ಯೆಯಲ್ಲಿ ಧವನ್ ಅವರ ಪಾತ್ರವೂ ಇರಬಹುದು’ ಎಂಬ ಶಂಕೆಯ ಬೆರಳು ಮಾಡಿತ್ತು.
ಇದರಿಂದಾಗಿ ರಾತ್ರೋರಾತ್ರಿ ಧವನ್ ಅವರನ್ನು ಪ್ರಧಾನಿ ನಿವಾಸದಿಂದ ಹೊರಹಾಕಲಾಯಿತು. ಅವರ ಮನೆ, ದೂರವಾಣಿಗಳನ್ನು ಗುಪ್ತಚರ ಇಲಾಖೆ ಸಂಪೂರ್ಣ ಕಣ್ಗಾವಲಿನಲ್ಲಿಟ್ಟಿತ್ತು. ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಧವನ್, ಕೆಲವೇ ದಿನಗಳಲ್ಲಿ ರಹಸ್ಯ ತನಿಖೆಗೆ ಒಳಗಾಗುವ ಪರಿಸ್ಥಿತಿ ಎದುರಾಯಿತು. ಆದರೆ, 1989ರಲ್ಲಿ ರಾಜೀವ್ ಗಾಂಧಿ ಅವರು ಧವನ್‌ಗೆ ‘ಕ್ಲೀನ್ ಚಿಟ್’ ನೀಡಿ, ಗೌರವಪೂರ್ವಕವಾಗಿ ಮತ್ತೆ ಪಕ್ಷದ ಮುಖ್ಯವಾಹಿನಿಗೆ ಕರೆತಂದರು. ‘ಆ ದಿನ ಪ್ರಧಾನಿಯವರ ಮೇಲೆ ಬಿದ್ದ ಗುಂಡುಗಳಲ್ಲಿ ಒಂದು ಗುಂಡು ನನ್ನ ಮೇಲೂ ಬಿದ್ದಿದ್ದರೆ ನಾನು ಈ ಸುಳ್ಳು ಆರೋಪ ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿರಲಿಲ್ಲ’ ಎಂದು ಧವನ್ ನಂತರ ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.
1984ರ ನಂತರ ರಾಜೀವ್ ಸರಕಾರದಲ್ಲಿ ಧವನ್ ಅವರನ್ನು ಮೂಲೆಗುಂಪು ಮಾಡಿದ್ದರೂ, ಆ ಸಮಯದಲ್ಲಿ ಪ್ರತಿಪಕ್ಷದ ನಾಯಕರು ಧವನ್ ಅವರ ಬಳಿ ಬಂದು ಇಂದಿರಾ ಗಾಂಧಿ ಕುಟುಂಬದ ವಿರುದ್ಧ ಅಥವಾ ತುರ್ತು ಪರಿಸ್ಥಿತಿಯ ರಹಸ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಅಪಾರ ಒತ್ತಡ ಹೇರಿದ್ದರು. ಮತ್ತು ಮಾಧ್ಯಮಗಳೂ ಅವರ ಎಡತಾಕಿದ್ದವು. ಆದರೆ, ಧವನ್ ತಮ್ಮ ಕೊನೆಯುಸಿರಿ ನವರೆಗೂ ಇಂದಿರಾ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರು ಮತ್ತು ಕಚೇರಿಯ ಯಾವುದೇ ರಹಸ್ಯ ವನ್ನು ಹೊರಗೆ ಬಿಟ್ಟುಕೊಡಲಿಲ್ಲ.
ರಾಜೀವ್ ಹತ್ಯೆಯ ಬಳಿಕ ಧವನ್ ಕೆಲಕಾಲ ಏಕಾಂಗಿಯಾದರು. ನಂತರ ಅವರು ಅನಿವಾರ್ಯವಾಗಿ ನೇರ ರಾಜಕೀಯ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ (1990-1996) ಆಯ್ಕೆಯಾದರು. ಜತೆಗೆ, ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದರು. ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ಆಟವಾಡಿಸಿದ್ದ ಧವನ್, ಸಂಸತ್ತಿನ ಸದಸ್ಯರಾದಾಗಲೂ ಅಪಾರ ಗೌರವ ಮತ್ತು ಪ್ರಭಾವವನ್ನು ಕಾಯ್ದುಕೊಂಡಿದ್ದರು.
ಧವನ್ ಅವರ ದಿನಚರಿ ಬೆಳಗಿನ ಆರು ಗಂಟೆಗೆ ಆರಂಭವಾಗಿ ಮಧ್ಯರಾತ್ರಿ ಒಂದು ಗಂಟೆಯವರೆಗೂ ಸಾಗುತ್ತಿತ್ತು. ಇಂದಿರಾ ಗಾಂಧಿಯವರು ಕಚೇರಿಯಲ್ಲಿದ್ದಷ್ಟು ಸಮಯವೂ ಧವನ್ ಸಂಪೂರ್ಣ ಸಕ್ರಿಯರಾಗಿರುತ್ತಿದ್ದರು. ಅವರು ಎಂದಿಗೂ ಆಯಾಸಗೊಂಡಂತೆ ಕಾಣಿಸುತ್ತಿರಲಿಲ್ಲ. ದೇಶದಾ ದ್ಯಂತ ಇಂದಿರಾ ಗಾಂಧಿಯವರು ನಡೆಸುತ್ತಿದ್ದ ಚಂಡಮಾರುತದಂಥ ಚುನಾವಣಾ ಪ್ರಚಾರ ಪ್ರವಾಸಗಳಲ್ಲಿ ಧವನ್ ಸದಾ ಅವರ ಜತೆಗಿರುತ್ತಿದ್ದರು. ಎಷ್ಟೇ ಧೂಳು, ಬಿಸಿಲು ಅಥವಾ ಸುಡುವ ವಾತಾವರಣವಿದ್ದರೂ ಇಂದಿರಾ ಅವರನ್ನು ಧವನ್ ನೆರಳಿನಂತೆಯೇ ಹಿಂಬಾಲಿಸುತ್ತಿದ್ದರು. ಅವರು ನೀಡುವ ಆದೇಶಗಳನ್ನು ಸಂಬಂಧಿಸಿದವರಿಗೆ ರವಾನಿಸುತ್ತಿದ್ದರು.
ಇಂದಿರಾಗೆ ಧವನ್ ಮೇಲೆ ಅದೆಂಥ ಅವಲಂಬನೆ ಸೃಷ್ಟಿಯಾಗಿತ್ತೆಂದರೆ, ಅವರಿಲ್ಲದಿದ್ದರೆ ಇಂದಿರಾ ಚಡಪಡಿಸುತ್ತಿದ್ದರು. ದೆಹಲಿಯ ರಾಜಕೀಯ ಪಂಡಿತರು ಧವನ್ ಅವರನ್ನು ‘ದಿ ಗ್ರೇಟ್ ಗೇಟ್ ಕೀಪರ್’ ಎಂದು ಕರೆಯುತ್ತಿದ್ದರು. ಕ್ಯಾಬಿನೆಟ್ ಸಚಿವರು ಪ್ರಧಾನಿ ಕಾರ್ಯಾಲಯಕ್ಕೆ ಬಂದಾಗ, ಧವನ್ ಕೊಠಡಿಯಲ್ಲಿ ಕುಳಿತು ಕಾಯಬೇಕಿತ್ತು. ಧವನ್ ತಲೆಯೆತ್ತಿ, ‘ಮೇಡಂ ಒಳಗೆ ಕರೆಯುತ್ತಿದ್ದಾರೆ’ ಎಂದು ಹೇಳುವವರೆಗೆ ದೇಶದ ಅತಿ ದೊಡ್ಡ ರಾಜಕಾರಣಿಗೂ ಇಂದಿರಾ ಅವರ ಕೊಠಡಿಯ ಬಾಗಿಲು ತೆರೆಯುತ್ತಿರಲಿಲ್ಲ. ಅನೇಕ ಪ್ರಭಾವಿ ಸಚಿವರು ಇಂದಿರಾ ಗಾಂಧಿಯವರ ಬಳಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಮೊದಲು ಧವನ್ ಅವರ ಬಳಿ ಹೋಗಿ ವಿನಂತಿಸಿಕೊಳ್ಳುತ್ತಿದ್ದರು.
ಇಂದಿರಾಗೆ ಧವನ್ ಮೇಲೆ ಅದೆಂಥ ಅವಲಂಬನೆ ಸೃಷ್ಟಿಯಾಗಿತ್ತೆಂದರೆ, ಅವರಿಲ್ಲದಿದ್ದರೆ ಇಂದಿರಾ ಚಡಪಡಿಸುತ್ತಿದ್ದರು. ದೆಹಲಿಯ ರಾಜಕೀಯ ಪಂಡಿತರು ಧವನ್ ಅವರನ್ನು ‘ದಿ ಗ್ರೇಟ್ ಗೇಟ್ ಕೀಪರ್’ ಎಂದು ಕರೆಯುತ್ತಿದ್ದರು. ಕ್ಯಾಬಿನೆಟ್ ಸಚಿವರು ಪ್ರಧಾನಿ ಕಾರ್ಯಾಲಯಕ್ಕೆ ಬಂದಾಗ, ಧವನ್ ಕೊಠಡಿಯಲ್ಲಿ ಕುಳಿತು ಕಾಯಬೇಕಿತ್ತು. ಧವನ್ ತಲೆಯೆತ್ತಿ, ‘ಮೇಡಂ ಒಳಗೆ ಕರೆಯು ತ್ತಿದ್ದಾರೆ’ ಎಂದು ಹೇಳುವವರೆಗೆ ದೇಶದ ಅತಿ ದೊಡ್ಡ ರಾಜಕಾರಣಿಗೂ ಇಂದಿರಾ ಅವರ ಕೊಠಡಿಯ ಬಾಗಿಲು ತೆರೆಯುತ್ತಿರಲಿಲ್ಲ. ಅನೇಕ ಪ್ರಭಾವಿ ಸಚಿವರು ಇಂದಿರಾ ಗಾಂಧಿಯವರ ಬಳಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಮೊದಲು ಧವನ್ ಅವರ ಬಳಿ ಹೋಗಿ ವಿನಂತಿಸಿಕೊಳ್ಳುತ್ತಿದ್ದರು.
ಇಂದಿರಾಗೆ ಧವನ್ ಮೇಲೆ ಅದೆಂಥ ಅವಲಂಬನೆ ಸೃಷ್ಟಿಯಾಗಿತ್ತೆಂದರೆ, ಅವರಿಲ್ಲದಿದ್ದರೆ ಇಂದಿರಾ ಚಡಪಡಿಸುತ್ತಿದ್ದರು. ದೆಹಲಿಯ ರಾಜಕೀಯ ಪಂಡಿತರು ಧವನ್ ಅವರನ್ನು ‘ದಿ ಗ್ರೇಟ್ ಗೇಟ್ ಕೀಪರ್’ ಎಂದು ಕರೆಯುತ್ತಿದ್ದರು. ಕ್ಯಾಬಿನೆಟ್ ಸಚಿವರು ಪ್ರಧಾನಿ ಕಾರ್ಯಾಲಯಕ್ಕೆ ಬಂದಾಗ, ಧವನ್ ಕೊಠಡಿಯಲ್ಲಿ ಕುಳಿತು ಕಾಯಬೇಕಿತ್ತು. ಧವನ್ ತಲೆಯೆತ್ತಿ, ‘ಮೇಡಂ ಒಳಗೆ ಕರೆಯುತ್ತಿದ್ದಾರೆ’ ಎಂದು ಹೇಳುವವರೆಗೆ ದೇಶದ ಅತಿ ದೊಡ್ಡ ರಾಜಕಾರಣಿಗೂ ಇಂದಿರಾ ಅವರ ಕೊಠಡಿಯ ಬಾಗಿಲು ತೆರೆಯುತ್ತಿರಲಿಲ್ಲ. ಅನೇಕ ಪ್ರಭಾವಿ ಸಚಿವರು ಇಂದಿರಾ ಗಾಂಧಿಯವರ ಬಳಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಮೊದಲು ಧವನ್ ಅವರ ಬಳಿ ಹೋಗಿ ವಿನಂತಿಸಿಕೊಳ್ಳುತ್ತಿದ್ದರು.
ಇಂದಿರಾ ವಿರುದ್ಧ ಸಾಕ್ಷ್ಯ ನೀಡುವಂತೆ ಅವರ ಮೇಲೆ ಒತ್ತಡ ಹೇರಲಾಯಿತು. ಧವನ್ ಅದಕ್ಕೆ ಜಗ್ಗಲಿಲ್ಲ. ನಂತರ ಅವರನ್ನು ಬಂಧಿಸಲಾಯಿತು. ಅಧಿಕಾರ ಇಲ್ಲದ ಆ ಕಷ್ಟದ ದಿನಗಳಲ್ಲಿ ಅನೇಕ ನಾಯಕರು ಇಂದಿರಾ ಅವರ ಕೈಬಿಟ್ಟು ತೊಲಗಿದರು. ಆದರೆ, ಧವನ್ ಮಾತ್ರ ಇಂದಿರಾ ಅವರ ಬೆನ್ನೆಲುಬಾಗಿ ನಿಂತರು. 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಾಗ, ಧವನ್ ಅವರನ್ನು ಮತ್ತೆ ಅದೇ ‘ವೈಭವ’ದ ಸ್ಥಾನದಲ್ಲಿ ತಂದು ಕೂರಿಸಿದರು. ಧವನ್ ಎರಡು ಅವಧಿಗೆ (ಏಪ್ರಿಲ್ 1990ರಿಂದ ಎಪ್ರಿಲ್ 1996 ಮತ್ತು ಜುಲೈ 20004ರಿಂದ ಜುಲೈ 2010) ರಾಜ್ಯಸಭಾ ಸದಸ್ಯರಾಗಿದ್ದರು. 1995ರಲ್ಲಿ ನರಸಿಂಹರಾವ್ ಸರಕಾರದಲ್ಲಿ ಧವನ್ ಆರು ತಿಂಗಳ ಕಾಲ ನಗರಾಭಿವೃದ್ಧಿ (ಸ್ವತಂತ್ರ ಖಾತೆ) ಸಚಿವರಾಗಿದ್ದರು!
ಸಂವಿಧಾನಾತ್ಮಕವಾಗಿ ಯಾವುದೇ ಮಿತಿಯಿಲ್ಲದ ಅಧಿಕಾರವನ್ನು ಅನುಭವಿಸಿದರೂ, ಧವನ್ ಅವರ ವೈಯಕ್ತಿಕ ಜೀವನಶೈಲಿ ಅತ್ಯಂತ ಸರಳವಾಗಿತ್ತು. ಅವರು ಎಂದಿಗೂ ದುಬಾರಿ ಉಡುಪು ಗಳನ್ನಾಗಲಿ, ಆಡಂಬರದ ಜೀವನವನ್ನಾಗಲಿ ಇಷ್ಟಪಡಲಿಲ್ಲ. ದಿಲ್ಲಿಯಲ್ಲಿ ತಮ್ಮ ಸ್ವಂತ ಮನೆ, ಕಾರು ಅಥವಾ ಆಸ್ತಿಯನ್ನು ಮಾಡಿಕೊಳ್ಳುವ ಕಡೆಗೆ ಅವರು ಗಮನ ಕೊಡಲಿಲ್ಲ. ಪ್ರಧಾನಿಯವರ ಸೇವೆಯೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಮನಸ್ಸು ಮಾಡಿದ್ದರೆ, ದೇಶದೆಡೆ ಅವರು ಆಸ್ತಿ ಮಾಡಬಹುದಿತ್ತು.
1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಸೋತು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ, ಧವನ್ ಅವರಿಗೆ ನೆಲೆಸಲು ಸರಿಯಾದ ವಸತಿ ಇರಲಿಲ್ಲ. ಆ ಸಂಕಷ್ಟದ ಸಮಯದಲ್ಲಿ, ಕಾಂಗ್ರೆಸ್ ನಾಯಕ ಸಿ.ಪಿ.ಎನ್. ಸಿಂಗ್ ಉದಾರ ಮನಸ್ಸಿನಿಂದ ದಿಲ್ಲಿಯ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ‘ಗೊಲ್ ಲಿಂಕ್ಸ್’ನಲ್ಲಿದ್ದ ತಮ್ಮ ಸ್ವಂತ ಬಂಗ್ಲೆಯ ಕೆಳಮಹಡಿ ಯನ್ನು ಧವನ್‌ಗೆ ವಾಸಿಸಲು ಬಿಟ್ಟುಕೊಟ್ಟಿದ್ದರು. (ಧವನ್ ಅವರು ತಮ್ಮ ಕೊನೆಯುಸಿರಿನವರೆಗೂ ಅದೇ ಬಂಗ್ಲೆಯಲ್ಲಿ ವಾಸವಿದ್ದರು. ಧವನ್ ನಿಧನದ ನಂತರ ಈ ಬಂಗ್ಲೆಯ ಆಸ್ತಿಹಕ್ಕಿಗೆ ಸಂಬಂಧಿಸಿ ದಂತೆ ಸಿ.ಪಿ.ಎನ್. ಸಿಂಗ್ ಮಗಳು ಜಯಶ್ರೀ ಸಿಂಗ್ ಮತ್ತು ಧವನ್ ಪತ್ನಿ ಅಚಲಾ ಮೋಹನ್ ನಡುವೆ ಕಾನೂನು ಹೋರಾಟವೂ ನಡೆಯಿತು.) ಆರ್.ಕೆ. ಧವನ್ ತಮ್ಮ ಇಡೀ ಯೌವನ ಮತ್ತು ಬದುಕನ್ನು ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು.
ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಧವನ್, ರಾಜಕೀಯದ ಒತ್ತಡ ಮತ್ತು ಕೆಲಸದ ಮಧ್ಯೆ ಮದುವೆಯಾಗುವ ಅಥವಾ ವೈಯಕ್ತಿಕ ಜೀವನ ರೂಪಿಸಿಕೊಳ್ಳುವ ಆಲೋಚನೆಯನ್ನೇ ಮಾಡಿರಲಿಲ್ಲ. ಆದರೆ, ತಮ್ಮ ಇಳಿವಯಸ್ಸಿನಲ್ಲಿ, ಅಂದರೆ 2012 ಜುಲೈನಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಧವನ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ಸುಚಿತ್ರಾ ಸೇನ್ ಅವರನ್ನು ವಿವಾಹವಾದರು. ರಾಜಕೀಯ ವಲಯದಲ್ಲಿ ಈ ಮದುವೆ ದೊಡ್ಡ ಸುದ್ದಿಯಾಗಿತ್ತು. 1990ರ ದಶಕದ ಆರಂಭದ ಧವನ್ ಅವರಿಗೆ ಅಚಲಾ ಪರಿಚಯ ಆಯಿತು. ಮೊದಲ ವಿವಾಹದಿಂದ ವಿಚ್ಛೇದನ ಪಡೆದಿದ್ದ ಅಚಲಾ, ಧವನ್ ಹತ್ತಿರದ ಸ್ನೇಹಿತೆಯಾಗಿ, ಕಷ್ಟ-ಸುಖ ಹಂಚಿಕೊಳ್ಳುವ ಜೀವದ ಗೆಳತಿಯಾದರು.
ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಧವನ್, ರಾಜಕೀಯದ ಒತ್ತಡ ಮತ್ತು ಕೆಲಸದ ಮಧ್ಯೆ ಮದುವೆಯಾಗುವ ಅಥವಾ ವೈಯಕ್ತಿಕ ಜೀವನ ರೂಪಿಸಿಕೊಳ್ಳುವ ಆಲೋಚನೆ ಯನ್ನೇ ಮಾಡಿರಲಿಲ್ಲ. ಆದರೆ, ತಮ್ಮ ಇಳಿವಯಸ್ಸಿನಲ್ಲಿ, ಅಂದರೆ 2012ರ ಜುಲೈನಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಧವನ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ಸುಚಿತ್ರಾ ಸೇನ್ ಅವರನ್ನು ವಿವಾಹವಾದರು. ರಾಜಕೀಯ ವಲಯದಲ್ಲಿ ಈ ಮದುವೆ ದೊಡ್ಡ ಸುದ್ದಿಯಾಗಿತ್ತು.
1990ರ ದಶಕದ ಆರಂಭದ ಧವನ್ ಅವರಿಗೆ ಅಚಲಾ ಪರಿಚಯ ಆಯಿತು. ಮೊದಲ ವಿವಾಹದಿಂದ ವಿಚ್ಛೇದನ ಪಡೆದಿದ್ದ ಅಚಲಾ, ಧವನ್ ಹತ್ತಿರದ ಸ್ನೇಹಿತೆಯಾಗಿ, ಕಷ್ಟ-ಸುಖ ಹಂಚಿಕೊಳ್ಳುವ ಜೀವದ ಗೆಳತಿಯಾದರು. ತೆರಳುವಾಗ ಅಚಲಾ ಸದಾ ಜತೆಗಿರುತ್ತಿದ್ದರು. ಅಚಲಾ ಮೋಹನ್ ದಿಲ್ಲಿಯ ಅತ್ಯುನ್ನತ ಸಾಮಾಜಿಕ ಹಾಗೂ ಉದ್ಯಮ ವಲಯದಲ್ಲಿ ಪ್ರಸಿದ್ಧರಾಗಿದ್ದ ಮಹಿಳೆ. ಅವರು ಕೆನಡಾದ ಪೈಲಟ್ ಒಬ್ಬರನ್ನು ವಿವಾಹವಾಗಿದ್ದರು ಮತ್ತು ಮೊದಲ ವಿವಾಹದಿಂದ ಒಬ್ಬ ಪುತ್ರನನ್ನು ಹೊಂದಿದ್ದರು. ವಿಚ್ಛೇದನದ ನಂತರ ದಿಲ್ಲಿಯಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದ ಅಚಲಾ, ರಾಜಕೀಯ ಮತ್ತು ಕಾರ್ಪೊರೇಟ್ ವಲಯದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಸಂಸ್ಕೃತ ಮತ್ತು ನಯವಾದ ವ್ಯಕ್ತಿತ್ವವು ಧವನ್ ಅವರನ್ನು ಆಕರ್ಷಿಸಿತ್ತು. ಅಚಲಾ ಮತ್ತು ಧವನ್ ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ನಿಕಟ ಸ್ನೇಹಿತರಾಗಿದ್ದರು. ಆದರೆ, ಧವನ್ ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮಗಳು ಮತ್ತು ರಾಜಕೀಯ ಎದುರಾಳಿಗಳಿಂದ ಸಂಪೂರ್ಣವಾಗಿ ಮುಚ್ಚಿಟ್ಟಿದ್ದರು.
2012ರಲ್ಲಿ ಇಬ್ಬರೂ ವಿವಾಹವಾಗಲು ನಿರ್ಧರಿಸಿದಾಗ, ಧವನ್ ತಮ್ಮ ಅತ್ಯಾಪ್ತ ರಾಜಕೀಯ ಸ್ನೇಹಿತರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ. ಮದುವೆಯ ನಂತರ ದಿಲ್ಲಿಯ ‘ತಾಜ್ ಮಾನಸಿಂಗ್’ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರು ಬಂದಾಗಷ್ಟೇ ಧವನ್ ಆ ಇಳಿವಯಸ್ಸಿನಲ್ಲಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಇಡೀ ದೇಶಕ್ಕೆ ತಿಳಿಯಿತು.
ಧವನ್ ಅವರಿಗೆ ಇಳಿವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯ ಮತ್ತು ಹೃದ್ರೋಗದ ಸಮಸ್ಯೆಗಳು ಕಾಣಿಸಿಕೊಂಡಾಗ, ಅಚಲಾ ಸಂಪೂರ್ಣವಾಗಿ ಅವರ ಶುಶ್ರೂಷೆಗೆ ನಿಂತರು. ಧವನ್ ಆಹಾರ ಪದ್ಧತಿ, ಔಷಧ ಸಮಯ ಹಾಗೂ ವೈದ್ಯಕೀಯ ತಪಾಸಣೆಗಳನ್ನು ಅಚಲಾ ಸ್ವತಃ ನಿರ್ವಹಿಸುತ್ತಿದ್ದರು. ಧವನ್ ತಮ್ಮ ಕೊನೆಯ ದಿನಗಳಲ್ಲಿ ದೆಹಲಿಯ ‘ಮ್ಯಾಕ್ಸ್’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅಚಲಾ ದಿನಪೂರ್ತಿ ಅವರ ಜತೆಯಲ್ಲಿದ್ದು ಆರೈಕೆ ಮಾಡಿದರು. ೨೦೧೮ರಲ್ಲಿ ಧವನ್ ನಿಧನರಾದಾಗ ಅಚಲಾ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರು. ಅಂದ ಹಾಗೆ ಧವನ್ ಅವರಿಗೆ ಮಕ್ಕಳಿರಲಿಲ್ಲ. ಧವನ್ ಅವರ ತಲೆಯಲ್ಲಿ ಭಾರತೀಯ ರಾಜಕೀಯದ ನೂರಾರು ರಹಸ್ಯಗಳು, ಇಂದಿರಾ ಗಾಂಧಿಯವರ ಆಡಳಿತದ ಹಿನ್ನೆಲೆಯ ಘಟನೆಗಳು ಹಾಗೂ ತುರ್ತು ಪರಿಸ್ಥಿತಿಯ ಗೂಢ ಸಂಗತಿಗಳು ಭದ್ರವಾಗಿದ್ದವು. ಅನೇಕ ಪ್ರಕಾಶಕರು ಮತ್ತು ಪತ್ರಕರ್ತರು ಆತ್ಮಕಥೆಯನ್ನು ಬರೆಯುವಂತೆ ಅವರಲ್ಲಿ ವಿನಂತಿಸಿಕೊಂಡಿದ್ದರು.
ತಮ್ಮ ಜೀವನದ ಕೊನೆಯ ದಿನಗಳಲ್ಲಿ ಧವನ್ ಪುಸ್ತಕ ಬರೆಯಲು ಆರಂಭಿಸಿದ್ದರೂ, ಅದನ್ನು ಪೂರ್ಣಗೊಳಿಸುವ ಮುನ್ನವೇ 2018ರಲ್ಲಿ (81ನೇ ವಯಸ್ಸಿನಲ್ಲಿ) ನಿಧನರಾದರು. ಆ ಮೂಲಕ, ದೇಶದ ಅತ್ಯಂತ ರಹಸ್ಯಮಯ ಅಧಿಕಾರದ ಮೊಗಸಾಲೆಯಲ್ಲಿ ಅವರು ಕಂಡಿದ್ದ ಅನೇಕ ರೋಚಕ ರಾಜಕೀಯ ರಹಸ್ಯಗಳು ಅವರೊಂದಿಗೇ ಮಣ್ಣಾದವು. ಧವನ್ ನಿಧನ ನಂತರ, ಅವರ ಬಳಿಯಿದ್ದ ಅಪರೂಪದ ಛಾಯಾಚಿತ್ರಗಳು, ಇಂದಿರಾ ಗಾಂಧಿಯವರೊಂದಿಗಿನ ಪತ್ರ ವ್ಯವಹಾರಗಳು ಹಾಗೂ ಧವನ್ ವೈಯಕ್ತಿಕ ಡೈರಿಗಳು ಮತ್ತು ಬರವಣಿಗೆಗಳನ್ನು ಅಚಲಾ ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡಿದ್ದಾರೆ. ರಾಜಕೀಯ ದ್ವೇಷ ಅಥವಾ ಪ್ರಚಾರಕ್ಕೆ ಅವಕಾಶ ನೀಡದೇ, ಧವನ್ ಹೆಸರು ಮತ್ತು ಗೌರವಕ್ಕೆ ಯಾವುದೇ ಕುಂದು ಬಾರದಂತೆ ಅವರು ತಮ್ಮ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
ನಾನು ಧವನ್ ಮತ್ತು ಅವರ ಪತ್ನಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಮೊನ್ನೆ ಆಗಸ್ಟ್ ಆರರಂದು ಧವನ್ ಒಂಬತ್ತನೇ ಪುಣ್ಯತಿಥಿ. ಆ ದಿನ ದಿಲ್ಲಿಯ ಪತ್ರಿಕೆಯೊಂದನ್ನು ಓದುತ್ತಿದ್ದೆ. ಒಳಪುಟದಲ್ಲಿ ಸಿಂಗಲ್ ಕಾಲಮ್ಮಿನಲ್ಲಿ ಆರ್.ಕೆ.ಧವನ್ ಶ್ರದ್ಧಾಂಜಲಿ ಜಾಹೀರಾತು ಪ್ರಕಟವಾಗಿತ್ತು. ಆ ಜಾಹೀರಾತನ್ನು ನೀಡಿದವರು ಒಬ್ಬರೇ. ಅವರು ಧವನ್ ಪತ್ನಿ ಅಚಲಾ! ಇಂದಿರಾ ಮತ್ತು ರಾಜೀವ್ ಪ್ರಧಾನಿಯಾಗಿದ್ದಾಗ, ಧವನ್ ಮುಂದೆ ಕಾಂಗ್ರೆಸ್ ನಾಯಕರು ‘ಅಂಬೋ’ ಎಂದು ಕುಕ್ಕರಗಾಲಲ್ಲಿ ಕುಳಿತಿರುತ್ತಿದ್ದರು. ಅವರ ಒಂದು ಫೋನ್ ಕರೆಗೆ ರಾಜ್ಯ ಸರಕಾರವೇ ಪತನವಾಗುತ್ತಿತ್ತು.
ಇನ್ಯಾರೋ ರಾತ್ರಿ-ಬೆಳಗಾಗುವುದರೊಳಗೆ ಮುಖ್ಯಮಂತ್ರಿಯೋ, ರಾಜ್ಯಪಾಲರೋ, ರಾಷ್ಟ್ರಪತಿ ಯೋ ಆಗಿರುತ್ತಿದ್ದರು. ಒಂದು ಕಾಲಕ್ಕೆ ಪ್ರಧಾನಿ ಕಾರ್ಯಾಲಯವನ್ನು ತನ್ನ ಕಿರುಬೆರಳಿನಲ್ಲಿ ಆಡಿಸಿದ್ದ ಅವರನ್ನು ಇಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಜೀವನದಲ್ಲಿ ಕೋಟೆ ಕಟ್ಟಿ ಮೆರೆದವರ ಸುತ್ತ ಕೊನೆಗಾಲದಲ್ಲಿ ಇರುವವರು ಅವರ ಪತ್ನಿ ಮಾತ್ರ! ಈ ಒಂದು ಪುಟ್ಟ ಜಾಹೀರಾತನ್ನು ಕತ್ತರಿಸಿ ಫೈಲ್ ಮಾಡುವಾಗ ಈ ಎಲ್ಲ ಸಂಗತಿಗಳು ಸುರಳಿ ಬಿಚ್ಚಿದವು.