ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇವು ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆ ಗಳ ವಿರುದ್ಧ ಶುರುವಾದಂಥ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿಸಲ್ಪಡುತ್ತವೆ.

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಮೋಹನ್‌ ವಿಶ್ವ ಮೋಹನ್‌ ವಿಶ್ವ Aug 23, 2025 8:03 AM

ವೀಕೆಂಟ್‌ ವಿತ್‌ ಮೋಹನ್‌

camohanbn@gmail.com

ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ದೇವಸ್ಥಾನದ ಬಗ್ಗೆ ನಗರ ನಕ್ಸಲರು ನಡೆಸಿದ ಅಪಪ್ರಚಾರದ ಕಥೆಗಳ ಸುಳ್ಳಿನ ಕೋಟೆಯ ಕಲ್ಲುಗಳು ಒಂದೊಂದಾಗಿ ಉರುಳಿ ಬೀಳಲು ಪ್ರಾರಂಭಿಸಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ನಗರ ನಕ್ಸಲರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಕ್ಷಣ, ಹಿಂದೂ ಸಮಾಜವನ್ನು ನಂಬಿಸಿಬಿಡಬಹುದೆಂಬ ಷಡ್ಯಂತ್ರ ವಿಫಲವಾಗಿದೆ.

ಆತ ಮಾಡಿದ್ದ ವಿಡಿಯೋವನ್ನು ಜನರ ಮೊಬೈಲ್‌ಗಳಿಗೆ ತಲುಪಿಸುವಲ್ಲಿ ನಗರ ನಕ್ಸಲರ ತಂಡ ಯಶಸ್ವಿಯಾಗಿತ್ತು. ಆದರೆ ಒಂದ ಒಂದು ದಿನ ಸತ್ಯ ಹೊರ ಬೀಳುತ್ತದೆಯೆಂಬ ಸಾಮಾನ್ಯ ಜಗಞಾನ ಅವರಿಗಿರಲಿಲ್ಲ. ಹಿಂದೂ ದೇವಸ್ಥಾನಗಳ ಮೇಲಿನ ಎಡಚರರ ಟಾರ್ಗೆಟ್ ಇದೇ ಮೊದಲಲ್ಲ. ಈ ಹಿಂದೆ ತಿರುಪತಿಯಲ್ಲಿ ಕಡ್ಡಿ ಅಡಿಸಿದ್ದರು, ಕೇರಳದ ಶಬರಿಮಲೆಯಲ್ಲಿ ವಿವಾದ ಸೃಷ್ಟಿಸಿದ್ದರು. ಈಗ ಧರ್ಮಸ್ಥಳದ ಸರದಿ. ಕೋವಿಡ್ ನಂತರ ಮನೆಯಲ್ಲಿ ಕುಳಿತು ಒಟಿಟಿ ವೇದಿಕೆಗಳಲ್ಲಿ ಅನೇಕ ಥ್ರಿಲ್ಲರ್ ಚಿತ್ರಗಳನ್ನು ನೋಡಿ ರೂಢಿಯಾಗಿದ್ದ ಹಿಂದೂ ಸಮಾಜಕ್ಕೆ ಯುಟ್ಯೂಬ್ ಮೂಲಕ ಧರ್ಮಸ್ಥಳದ ವಿರುದ್ಧ ತಯಾರಾದ ಅಪಪ್ರಚಾರದ ವಿಡಿಯೋ ಸಲೀಸಾಗಿ ತಲೆಗೆ ಹೊಕ್ಕಿತ್ತು.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಲ್ಲಿ ಮಿಷನರಿಗಳು ಮತ್ತು ವಿದೇಶಿ ಸಂಸ್ಥೆಗಳ ಕೈವಾಡವಿದೆಯೆಂದು ಹೇಳಲಾಗುತ್ತಿದೆ. ತಮಿಳುನಾಡಿನಲ್ಲಿ ಕಳೆದ ಏಳು ದಶಕಗಳಿಂದ ಹಿಂದೂ ದೇವಾಲಯಗಳನ್ನು ಸತತವಾಗಿ, ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಬಹಿರಂಗವಾಗಿ ಕೆಟ್ಟದಾದ ಹೇಳಿಕೆಗಳನ್ನು ನೀಡುವುದು ಅಲ್ಲಿ ಕೆಲವರ ನಿತ್ಯಕಾಯಕವಾಗಿದೆ.

ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಸಾವಿರಾರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಹಿಂದೂ ಧರ್ಮವು ಎಷ್ಟು ಆಳವಾಗಿ ಬೇರೂರಿ ತ್ತೆಂಬುದಕ್ಕೆ ಅಲ್ಲಿನ ದೇವಾಲಯಗಳೇ ಸಾಕ್ಷಿ. ತಮಿಳುನಾಡಿನ ಪ್ರತಿಯೊಂದು ದೇವಸ್ಥಾನದಲ್ಲಿ, ನೂರಾರು ವರ್ಷಗಳ ಹಿಂದೆ ಅಲ್ಲಿನ ರಾಜರು ಆಚರಿಸಿಕೊಂಡು ಬಂದಂಥ ಸನಾತನ ಧರ್ಮದ ಕುರುಹುಗಳು ಇಂದಿಗೂ ಇವೆ. ತಮಿಳುನಾಡಿನಲ್ಲಿ ಸುಮಾರು 33000 ಪುರಾತನ ದೇಗುಲಗಳಿವೆ.

ಇವುಗಳಲ್ಲಿ ಬಹುತೇಕ ದೇವಾಲಯಗಳನ್ನು 800 ರಿಂದ 5000 ವರ್ಷಗಳ ಹಿಂದೆ ಕಟ್ಟಲಾಗಿದೆ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಹೋರಾಟದಲ್ಲಿ ಬ್ರಾಹ್ಮಣತ್ವವನ್ನು ಧಿಕ್ಕರಿಸ ಲಾಯಿತು, ಹಿಂದೂ ಧರ್ಮದ ಆಚರಣೆಗಳನ್ನು ಕೇವಲ ಮೂಢನಂಭಿಕೆ ಎಂದು ಬಿಂಬಿಸ ಲಾಯಿತು.

‘ಇಡೀ ದಕ್ಷಿಣ ಭಾರತ ದ್ರಾವಿಡರ ನಾಡು, ಉತ್ತರ ಭಾರತದಿಂದ ಬಂದಂಥ ಜನರು ದ್ರಾವಿಡರ ಮೇಲೆ ಆಕ್ರಮಣ ಮಾಡಿ ಹಿಂದೂ ಧರ್ಮವನ್ನು ಹೇರಿದರು’ ಎಂಬ ಚಳವಳಿ ಶುರುವಾಯಿತು. ಬ್ರಾಹ್ಮಣರು ಹಾಗೂ ಉತ್ತರ ಭಾರತದ ಆರ್ಯರು, ದಕ್ಷಿಣ ಭಾರತದ ದ್ರಾವಿಡ ನಾಡಿನ ಮೇಲೆ ತಮ್ಮ ಧರ್ಮವನ್ನು ಬಲವಂತವಾಗಿ ಹೇರಿದರೆಂಬ ಸುಳ್ಳು ಇತಿಹಾಸವನ್ನು ಸೃಷ್ಟಿಸಲಾಯಿತು.

ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ಪ್ರಾರಂಭವಾಗುವುದರ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಿತ್ತು. ಪಾಶ್ಚಿಮಾತ್ಯ ದೇಶಗಳಿಂದ ಬಂದ ಕ್ರಿಶ್ಚಿಯನ್ ಧರ್ಮಗುರುಗಳಿಗೆ, ಬ್ರಿಟನ್ನಿನ ರಾಣಿ ಭಾರತದಲ್ಲಿ ಮತಾಂತರ ಮಾಡಲು ನೂರಾರು ಕೋಟಿ ಹಣ ನೀಡುತ್ತಿದ್ದರು.

ಸೇವೆಯ ಹೆಸರಿನಲ್ಲಿ ಹಿಂದೂಗಳ ಮತಾಂತರಕ್ಕೆ ತಮಿಳುನಾಡಿನ ಕ್ರಿಶ್ಚಿಯನ್ ಮಿಷನರಿಗಳು ಹೆಚ್ಚಿನ ಸಮಯ ವಿನಿಯೋಗಿಸಿದವು. ಹಿಂದೂ ಧರ್ಮಕ್ಕೆ ಹೋಲುವ ಕ್ರಿಶ್ಚಿಯನ್ ಆಚರಣೆಗಳ ಮೂಲ ಬೈಬಲ್ ಎಂದು ಹೇಳುವ ಮೂಲಕ ಅವರು ಜನರ ಕಣ್ಣಿಗೆ ಮಂಕುಬೂದಿ ಎರಚಿದ್ದರು. ಹಿಂದೂ ಧರ್ಮದ ಹಲವು ಆಚರಣೆಗಳು ‘ಬೈಬಲ’ ಮೂಲದಿಂದ ಬಂದಿವೆಯೆಂದು ಹೇಳಿ ಜನರ ತಲೆಕೆಡಿಸಿದರು.

ಶ್ರೀಕೃಷ್ಣನ ಮತ್ತೊಂದು ಅವತಾರವೇ ‘ಯೇಸು’ವೆಂದು ಹೇಳಿದರು. ಶ್ರೀಕೃಷ್ಣನ ‘ಗೀತೋಪದೇಶ’ದ ರೀತಿಯಲ್ಲಿ ಯೇಸುವೂ ಜೀವನದ ನೀತಿಪಾಠಗಳನ್ನು ಹೇಳಿದ್ದನೆಂದರು. ವೇದಗಳ ಮೂಲ ‘ಬೈಬಲ’ ಎಂಬ ಸುಳ್ಳು ಹೇಳಿ ತಮಿಳುನಾಡಿನ ಹಿಂದೂಗಳ ತಲೆಯಲ್ಲಿ ಹಿಂದೂ ಧರ್ಮದ ಮೇಲಿನ ನಂಬಿಕೆ ಯನ್ನು ಕಡಿಮೆ ಮಾಡಿಸಿದರು.

ತಮಿಳುನಾಡಿನ ಜನರು ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳತೊಡಗಿದಾಗ, ದ್ರಾವಿಡರ ಹೋರಾಟ ಮುನ್ನೆಲೆಗೆ ಬಂದಿತು. ಬ್ರಾಹ್ಮಣರನ್ನು ದ್ರಾವಿಡರ ಶತ್ರುಗಳಂತೆ ಬಿಂಬಿಸಿ ದ್ರಾವಿಡ ಹಾಗೂ ಬ್ರಾಹ್ಮಣರ ನಡುವೆ ದೊಡ್ಡದೊಂದು ಕಂದಕವನ್ನೇ ಸೃಷ್ಟಿಸಲಾಯಿತು.

ಆದರೆ ವಾಸ್ತವದಲ್ಲಿ ಬ್ರಾಹ್ಮಣರು ಪೂಜಿಸುವ ಯಾವ ದೇವರೂ ಬ್ರಾಹ್ಮಣನಲ್ಲ. ಶ್ರೀಕೃಷ್ಣ ಯಾದವ ಕುಲದಲ್ಲಿ ಬೆಳೆದವನು. ಶ್ರೀರಾಮ ಕ್ಷತ್ರಿಯ ಕುಲದಲ್ಲಿ ಹುಟ್ಟಿದವನು, ರಾವಣ ಬ್ರಾಹ್ಮಣ ನಾದರೂ ಅವನನ್ನು ಪೂಜಿಸುವುದಿಲ್ಲ. ಸ್ಮಶಾನದಲ್ಲಿ ಶಿವ ನೆಲೆಸಿರುತ್ತಾನೆಂದು ಹೇಳಿದರೂ ಬ್ರಾಹ್ಮಣರು ಅವನನ್ನು ಪೂಜಿಸುತ್ತಾರೆ. ಅಷ್ಟೇ ಯಾಕೆ ವೇದಗಳನ್ನು ಬರೆದ ವ್ಯಾಸರು ಬ್ರಾಹ್ಮಣ ರಲ್ಲ, ರಾಮಾಯಣ ಬರೆದ ವಾಲ್ಮೀಕಿ ಒಬ್ಬ ಬೇಡ. ಭಾರತದ ಸಂವಿಧಾನದ ಪಿತಾಮಹ, ಸಾಮಾಜಿಕ ಕ್ರಾಂತಿಸೂರ್ಯ ಬಾಬಾಸಾಹೇಬ್ ಅಂಬೇಡ್ಕರ್ ದಲಿತರು.

ಇಷ್ಟೆ ಉದಾಹರಣೆಗಳು ಕಣ್ಣಮುಂದಿದ್ದರೂ ಕ್ರಿಶ್ಚಿಯನ್ ಮಿಷ‘ನರಿ’ಗಳ ಸತತ ಪ್ರಯತ್ನದಿಂದಾಗಿ ತಮಿಳುನಾಡಿನಲ್ಲಿ ಬ್ರಾಹ್ಮಣರು ಹಾಗೂ ದ್ರಾವಿಡರೆಂದು ಎರಡು ಭಾಗ ಮಾಡಲಾಯಿತು. ಕ್ರಿಶ್ಚಿಯನ್ ಮಿಷನರಿಗಳ ಹುನ್ನಾರದಿಂದ ಪ್ರಾರಂಭವಾದ ದ್ರಾವಿಡ ಚಳವಳಿಯನ್ನು ಹೈಜಾಕ್ ಮಾಡಿದ ರಾಜಕೀಯ ಪಕ್ಷಗಳು ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತವನ್ನೇ ಬಂಡವಾಳ ವನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದವು.

ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇವು ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಶುರುವಾದಂಥ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿಸಲ್ಪಡುತ್ತವೆ.

ದೇವಸ್ಥಾನದ ಆಡಳಿತ ಮಂಡಳಿಯನ್ನು ಸರಕಾರಗಳು ನಿಯಂತ್ರಿಸುತ್ತವೆ. ದೇವಸ್ಥಾನದ ಜಾಗ, ವಡವೆ, ಹಣವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸ ಸುಮಾರು 300 ವರ್ಷಗಳ ಕೆಳಗೆ ಬ್ರಿಟಿಷರ ‘ಈ ಇಂಡಿಯಾ ಕಂಪನಿ’ಯಿಂದ ಪ್ರಾರಂಭವಾಯಿತು. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದ ನಂತರವೂ ತಮಿಳುನಾಡಿನಲ್ಲಿ ಇಂದಿಗೂ ಅದೇ ಮಾದರಿಯ ಆಡಳಿತ ವನ್ನು ಸರಕಾರಗಳು ನಡೆಸಿಕೊಂಡು ಬರುತ್ತಿವೆ.

ದೇವಸ್ಥಾನಗಳನ್ನು ಭಕ್ತರಿಗೆ ನಡೆಸಿಕೊಂಡು ಹೋಗಲು ಬಿಟ್ಟರೆ, ಇತಿಹಾಸದಲ್ಲಿ ಹಾಳಾಗಿರುವ ತಮಿಳುನಾಡಿನ ಹಲವು ದೇವಸ್ಥಾನಗಳು ಪುನರುಜ್ಜೀವನಗೊಳ್ಳುತ್ತವೆ. ದೇವಸ್ಥಾನದಲ್ಲಿನ ಹುಂಡಿಯ ಹಣ, ಚಿನ್ನ, ದೇವಸ್ಥಾನಕ್ಕೆ ಪೂರ್ವಜರು ದಾನ ಮಾಡಿದ್ದಂಥ ಸಾವಿರಾರು ಎಕರೆ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದ ಸರಕಾರಗಳು ತಾವು ಹೇಳಿದಂತೆ ದೇವಸ್ಥಾನದ ಆಡಳಿತ ಮಂಡಳಿ ಕೇಳುವಂತೆ ನೋಡಿಕೊಂಡವು.

ಭಾರತೀಯ ಸಮಾಜದಲ್ಲಿ ಅಲ್ಲಲ್ಲಿ ಕಾಣುತ್ತಿದ್ದ ಅಸ್ಪೃಶ್ಯತೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಲಂಡನ್ನಿನ ಚರ್ಚಿನ ಬಿಷಪ್‌ಗಳ ಮೂಲಕ ಭಾರತದಲ್ಲಿ ದಲಿತರನ್ನು ಹೆಚ್ಚಾಗಿ ಮತಾಂತರ ಮಾಡಲಾಯಿತು. ಸ್ವಾತಂತ್ರ ಬಂದ ಮೇಲೂ ತಮಿಳುನಾಡಿನ ಸರಕಾರಗಳು ಅದೇ ಕೆಲಸವನ್ನೇ ಮಾಡಿಕೊಂಡು ಬಂದಿವೆ. ದ್ರಾವಿಡರ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮಗಿಷ್ಟ ಬಂದಂತೆ ಆಡಳಿತ ನಡೆಸುತ್ತಿವೆ.

ತಮಿಳುನಾಡಿನಲ್ಲಿ ಕಣ್ಣಿಗೆ ಕಾಣುವ ದೇವಸ್ಥಾನಗಳ ಪರಿಸ್ಥಿತಿ ಇದಾದರೆ, ಪೂಜೆಯೇ ನಡೆಯದ ಸುಮಾರು 11,999 ದೇವಸ್ಥಾನಗಳು ಪಾಳು ಬಿದ್ದಿವೆ. ಸರಕಾರಗಳು ಇದರ ಬಗ್ಗೆ ಇದುವರೆಗೂ ಗಮನ ಹರಿಸಿಲ್ಲ. ಕಳೆದ 25 ವರ್ಷಗಳಲ್ಲಿ ಸುಮಾರು 1200 ಪುರಾತನ ವಿಗ್ರಹಗಳ ಕಳ್ಳಸಾಗಣೆಯಾಗಿದೆ.

37000 ದೇವಸ್ಥಾನಗಳಲ್ಲಿ ಕೇವಲ ಒಬ್ಬ ಪೂಜಾರಿಯಿದ್ದಾನೆ- ಅಂದರೆ ಭಕ್ತರೇ ಇಲ್ಲದ ದೇಗುಲ ಗಳಿವು. 34000 ದೇವಸ್ಥಾನಗಳು ವರ್ಷಕ್ಕೆ 10000ಕ್ಕಿಂತಲೂ ಕಡಿಮೆ ಆದಾಯದಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಒzಡುತ್ತಿವೆ. ವರ್ಷಕ್ಕೆ ನೂರಾರು ಕೋಟಿ ಆದಾಯ ನೀಡುವ ದೊಡ್ಡ ದೊಡ್ಡ ದೇವಸ್ಥಾನಗಳು ತಮಿಳುನಾಡಿನಲ್ಲಿರುವಾಗ ಇಷ್ಟೊಂದು ದೊಡ್ಡ ಸಂಖ್ಯೆಯ ಪುರಾತನ ದೇವಸ್ಥಾನಗಳು ಹೀನಾಯ ಪರಿಸ್ಥಿತಿ ತಲುಪಿದ್ದು ವಿಪರ್ಯಾಸ.

ದ್ರಾವಿಡರಿಗೆ ಕಮ್ಯುನಿಸ್ಟರು ಕೈಜೋಡಿಸಿರುವಂಥ ರಾಜ್ಯ ತಮಿಳುನಾಡು. ಕಮ್ಯುನಿಸ್ಟರಿಗೆ ತಮಿಳು ನಾಡಿನಲ್ಲಿ ರಾಜಕೀಯ ನೆಲೆಯಿಲ್ಲದಿದ್ದರೂ, ಹಿಂದೂ ಧರ್ಮದ ಆಚರಣೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುವವರ ಪರವಾಗಿ ಅವರು ಸದಾ ನಿಂತಿರುತ್ತಾರೆ. ಸನಾತನ ಧರ್ಮವನ್ನೇ ನಿರ್ಮೂಲನೆ ಮಾಡುತ್ತೇವೆಂದು ಉದಯನಿಧಿ ಸ್ಟಾಲಿನ್ ಹೇಳುತ್ತಾರೆ. ಎ.ರಾಜ ಅವರಂತೂ ಸನಾತನ ಧರ್ಮ ವನ್ನು ಏಡ್ಸ್ ರೋಗಕ್ಕೆ ಹೋಲಿಸುತ್ತಾರೆ.

ಕ್ರಿಶ್ಚಿಯನ್ ಮಿಷ‘ನರಿ’ಗಳು ಮೊದಲಿಗೆ‌ ತಮಿಳುನಾಡಿನಲ್ಲಿ, ಆರ್ಯರು ಹಾಗೂ ಬ್ರಾಹ್ಮಣರ ನಡುವೆ ತಂದಿಟ್ಟು ಬ್ರಾಹ್ಮಣರ ಪರವಾಗಿ ನಿಂತರು. ನಂತರ ಬ್ರಾಹ್ಮಣರು ಹಾಗೂ ಇತರ ವರ್ಗದವರ ಮಧ್ಯೆ ತಂದಿಟ್ಟು, ದ್ರಾವಿಡರೆಂಬ ಹೊಸ ಧರ್ಮವನ್ನು ಹುಟ್ಟುಹಾಕಿದರು. ಆದರೆ ಆರ್ಯರೆಂಬ ಕಲ್ಪನೆಯೇ ಶುದ್ಧ ಸುಳ್ಳೆಂದು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹಲವು ಸಂಶೋಧನೆಗಳು ಹೇಳುತ್ತಿವೆ.

ಇದೇ ಆರ್ಯರ ಸುಳ್ಳನ್ನು ಬಳಸಿಕೊಂಡು ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಎರಡು ಭಾಗಗಳಾಗಿ ಭಾರತವನ್ನು ವಿಭಜಿಸಲು ಪ್ರಯತ್ನಿಸಿ, ತಮಿಳುನಾಡಿನಲ್ಲಿ ದ್ರಾವಿಡರ ಸಿದ್ಧಾಂತವನ್ನು ಪೋಷಿಸತೊಡಗಿದರು. ಹಿಂದೂ ಧರ್ಮದ ದೇವರ ವಿಷಯದಲ್ಲೂ ತಲೆಹಾಕಿ, ‘ಉತ್ತರ ಭಾರತದ ದೇವರುಗಳನ್ನು ದಕ್ಷಿಣ ಭಾರತದಲ್ಲಿ ಪೂಜಿಸುತ್ತಾರೆ’ ಎಂದು ಹೇಳಿದರು.

ಶಿವ, ರಾಮ, ಕೃಷ್ಣ ಎಲ್ಲರೂ ಉತ್ತರ ಭಾರತದವರು, ಅಲ್ಲಿ ಹುಟ್ಟಿದ ದೇವರುಗಳನ್ನು ದಕ್ಷಿಣ ಭಾರತದ ದೇವಸ್ಥಾನದಲ್ಲಿ ಪೂಜಿಸಲಾಗುತ್ತಿದೆಯೆಂದು ಹೇಳಿದರು. ಶ್ರೀರಾಮನ ಕುರುಹುಗಳು ಅಯೋಧ್ಯೆಯಿಂದ ಹಿಡಿದು, ಶ್ರೀಲಂಕಾದವರೆಗೂ ಇವೆ. ಹಾಗಾದರೆ ಶ್ರೀರಾಮನು ದಕ್ಷಿಣಕ್ಕೆ ಬಂದಿರಲಿಲ್ಲವೇ? ಹನುಮಂತ ಹುಟ್ಟಿದ ಕ್ಷೇತ್ರವಾದ ಅಂಜನಾದ್ರಿ ಬೆಟ್ಟವಿರುವುದು ಕರ್ನಾಟಕದ ಕೊಪ್ಪಳದಲ್ಲಿ. ಹಾಗಾದರೆ ಹಿಂದೂಗಳು ಪೂಜಿಸುವ ಹನುಮಂತನು ದಕ್ಷಿಣದವನಲ್ಲವೇ? ತಮಿಳು ನಾಡಿನ ರಾಮನಾಥಪುರಂ ಜಿಲ್ಲೆಯ ಜನ ಇಂದಿಗೂ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುವ ರಾಜಕೀಯ ಪಕ್ಷಕ್ಕೆ ಮತಹಾಕಿ ಗೆಲ್ಲಿಸಿಕೊಂಡು ಬಂದಿದ್ದಾರೆ.

ಅವರಿಗ್ಯಾರಿಗೂ ತಮ್ಮ ಧರ್ಮದ ಮೇಲೆ ಆಗಿರುವ ದಾಳಿಯ ಅರಿವಿಲ್ಲ. ತಮಿಳುನಾಡಿನ ರಾಜರು ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೇವಸ್ಥಾನಗಳು ಹಿಂದೂ ಧರ್ಮದ ಆಚರಣೆಗಳನ್ನು ಸಾರಿ ಸಾರಿ ಹೇಳುವಾಗ, ಹಿಂದೂ ಧರ್ಮದ ಆಚರಣೆಗಳನ್ನೇ ನಂಬದ ದ್ರಾವಿಡರ ಸಿದ್ಧಾಂತ ಅಲ್ಲಿ ಉದ್ಭವವಾಯಿತು. ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ದೇವಾಲಯಗಳನ್ನು ಸತತವಾಗಿ ಟಾರ್ಗೆಟ್ ಮಾಡಿ, ದೇವಸ್ಥಾನದ ನಿರ್ವಹಣೆಯನ್ನು ಹಿಂದುಗಳಿಂದ ಕಸಿದುಕೊಂಡು, ನಂತರ ಹಿಂದೂಗಳ ನಂಬಿಕೆಗಳನ್ನು ಟಾರ್ಗೆಟ್ ಮಾಡುವ ದೀರ್ಘಾವಧಿಯ ಯೋಜನೆ ಇರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.