ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪೈಲಟ್‌ ಮತ್ತು ಪ್ರಯಾಣಿಕರು

ಪೈಲಟ್‌ಗಳು ವಿಮಾನದಲ್ಲಿ ಕುಳಿತಿರುವಾಗ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಏನು ನಡೆಯುತ್ತಿದೆ ಎಂಬು‌ ದನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಕಾಕ್‌ಪಿಟ್ ಮತ್ತು ಪ್ರಯಾಣಿಕರ ಕ್ಯಾಬಿನ್ ಸಂಪೂರ್ಣವಾಗಿ ಭದ್ರಪಡಿಸಿದ ಬಾಗಿಲುಗಳಿಂದ ಬೇರ್ಪಟ್ಟಿವೆ. ಇದು ವಿಮಾನದ ಸುರಕ್ಷತೆಗಾಗಿ ಮತ್ತು ಪೈಲಟ್ ಗಳು ತಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಇರುವ ಒಂದು ಮುಖ್ಯ ವ್ಯವಸ್ಥೆ.

ಪೈಲಟ್‌ ಮತ್ತು ಪ್ರಯಾಣಿಕರು

ಸಂಪಾದಕರ ಸದ್ಯಶೋಧನೆ

ಪೈಲಟ್‌ಗಳು ವಿಮಾನದಲ್ಲಿ ಪ್ರಯಾಣಿಕರನ್ನು ನೋಡಲು ಸಾಧ್ಯವೇ? ಕಾಕ್‌ಪಿಟ್‌ನಲ್ಲಿ ಕುಳಿತು ಅವರು ಹಿಂದೆ ಕುಳಿತಿರುವ ಪ್ರಯಾಣಿಕರನ್ನು ನೋಡುತ್ತಾರಾ? ಈ ಪ್ರಶ್ನೆ ಪ್ರಯಾಣಿಕರಲ್ಲಿ ಮೂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಅಸಲಿಗೆ, ಪೈಲಟ್‌ಗಳಿಗೆ ಪ್ರಯಾಣಿಕರು ಕಾಣಿಸುವು ದಿಲ್ಲ!

ಪೈಲಟ್‌ಗಳು ವಿಮಾನದಲ್ಲಿ ಕುಳಿತಿರುವಾಗ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಕಾಕ್‌ಪಿಟ್ ಮತ್ತು ಪ್ರಯಾಣಿಕರ ಕ್ಯಾಬಿನ್ ಸಂಪೂರ್ಣವಾಗಿ ಭದ್ರಪಡಿಸಿದ ಬಾಗಿಲುಗಳಿಂದ ಬೇರ್ಪಟ್ಟಿವೆ. ಇದು ವಿಮಾನದ ಸುರಕ್ಷತೆಗಾಗಿ ಮತ್ತು ಪೈಲಟ್ ಗಳು ತಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಇರುವ ಒಂದು ಮುಖ್ಯ ವ್ಯವಸ್ಥೆ. ಪೈಲಟ್‌ಗಳು ನಿಮ್ಮನ್ನು ಏಕೆ ನೋಡಲು ಸಾಧ್ಯವಿಲ್ಲ ಎಂದು ಕೇಳಬಹುದು.

ಆಧುನಿಕ ವಿಮಾನಗಳಲ್ಲಿ ಭದ್ರವಾದ ಕಾಕ್‌ಪಿಟ್ ಬಾಗಿಲುಗಳಿರುತ್ತವೆ. ಇದು ಕಾಕ್‌ಪಿಟ್ ಮತ್ತು ಕ್ಯಾಬಿನ್ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತದೆ. ಸೆಪ್ಟೆಂಬರ್ 11ರ ದಾಳಿಯ ನಂತರ ಈ ಭದ್ರತಾ ಕ್ರಮವು ಜಗತ್ತಿನಾದ್ಯಂತ ಎಲ್ಲ ವಿಮಾನಗಳಲ್ಲಿ ಕಡ್ಡಾಯವಾಯಿತು. ಇನ್ನೊಂದು ಸಂಗತಿ ಅಂದ್ರೆ, ಕಾಕ್‌ಪಿಟ್ ಅನ್ನು ವಿಮಾನದ ಸಂಚಾರ ಮತ್ತು ನಿಯಂತ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಆಸನಗಳ ವ್ಯವಸ್ಥೆ

ಪೈಲಟ್‌ಗಳಿಗೆ ವಿಮಾನದ ಹೊರಗಿನ ಮತ್ತು ಮುಂದಿನ ದೃಶ್ಯ ಮುಖ್ಯ. ಹೀಗಾಗಿ, ವಿಮಾನದ ಕಾರ್ಯಾಚರಣೆಗಳಿಗೆ ಆದ್ಯತೆ ನೀಡುವಂತೆ ಕಾಕ್‌ಪಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ, ಪ್ರಯಾಣಿಕರನ್ನು ಗಮನಿಸಲು ಅಲ್ಲ. ಒಂದು ವೇಳೆ ಕ್ಯಾಬಿನ್‌ನಲ್ಲಿ ಏನಾದರೂ ವಿಚಿತ್ರ ಅಥವಾ ಅಸಾಮಾನ್ಯ ಚಟುವಟಿಕೆಗಳು ನಡೆದರೆ, ಪೈಲಟ್‌ಗಳು ವಿಮಾನ ಸಿಬ್ಬಂದಿಯ ಮೇಲೆ ಅವಲಂಬಿತ ರಾಗಿರುತ್ತಾರೆ.

ಆ ಸಿಬ್ಬಂದಿ ತಕ್ಷಣ ಪೈಲಟ್ ಗಮನಕ್ಕೆ ತರುತ್ತಾರೆ. ಫ್ಲೈಟ್ ಅಟೆಂಡೆಂಟ್‌ಗಳು (flight attendants ) ಇಂಟರ್‌ಕಾಮ್ ಮೂಲಕ ಅಥವಾ ನೇರ ಸಂವಹನದ ಮೂಲಕ ಪೈಲಟ್‌ಗಳಿಗೆ ಮಾಹಿತಿ ನೀಡು ತ್ತಾರೆ. ಪೈಲಟ್‌ಗಳು ವಿಮಾನದ ಹೊರಗಿನ ವಿಶಾಲವಾದ ದೃಶ್ಯವನ್ನು ವೀಕ್ಷಿಸುತ್ತಾರೆ. ಹಾರಿಜಾನ್, ಇತರ ವಿಮಾನಗಳು, ಹವಾಮಾನ ಪರಿಸ್ಥಿತಿಗಳು ಮತ್ತು ವಿಮಾನ ನಿಲ್ದಾಣದ ರನ್ ವೇಗಳು ಅವರಿಗೆ ಸ್ಪಷ್ಟವಾಗಿ ಕಾಣಿಸುತ್ತವೆ.

ಅವರು ಕಾಕ್‌ಪಿಟ್‌ನಲ್ಲಿ ಕುಳಿತು ನೋಡುವ, ಗಮನಿಸುವ ಅನೇಕ ಸಂಗತಿಗಳಿರುತ್ತವೆ. ಕಾಕ್‌ಪಿಟ್‌ನ ಮುಂಬದಿಯ ಗಾಜು ಪನೋರಮಿಕ್ ದೃಶ್ಯವನ್ನು ಒದಗಿಸುತ್ತದೆ, ಇದು ಪರಿಸ್ಥಿತಿಯನ್ನು ಸುಲಭ ವಾಗಿ ಅರಿಯಲು ಸಹಾಯ ಮಾಡುತ್ತದೆ. ಪ್ರಯಾಣಿಕರನ್ನು ಗಮನಿಸಿದರೆ, ಅವರ ಲಕ್ಷ್ಯ ಬೇರೆಡೆ ಹರಿದಂತಾಗುತ್ತದೆ. ಹೀಗಾಗಿ ಪೈಲಟ್‌ಗಳಿಗೆ ಆ ಅವಕಾಶ ನೀಡುವುದಿಲ್ಲ.

ವಿಮಾನ ನಿಲ್ದಾಣದ ಒಳಭಾಗದಲ್ಲಿರುವಾಗ ಅಂದರೆ ನೆಲದಲ್ಲಿರುವಾಗ ಪೈಲಟ್‌ಗಳು ವಿಮಾನ ನಿಲ್ದಾಣದ ಸೌಲಭ್ಯಗಳು, ಟ್ಯಾಕ್ಸಿವೇಗಳು ಮತ್ತು ಕೆಲವು ನೆಲದ ಸಿಬ್ಬಂದಿಯ ಚಟುವಟಿಕೆಗಳನ್ನು ಮಾನಿಟರಿಂಗ್ ಸ್ಕ್ರೀನ್‌ನಲ್ಲಿ ನೋಡಬಹುದು. ಕಾಕ್‌ಪಿಟ್ ನ ಒಳಗೆ, ಪೈಲಟ್‌ಗಳು ಡಿಜಿಟಲ್ ಡಿಸ್ಪ್ಲೇ ಗಳನ್ನು ನೋಡಬಹುದು. ಈ ಪರದೆಗಳಲ್ಲಿ ಕ್ಯಾಬಿನ್‌ನ ಸ್ಥಿತಿ, ಉದಾಹರಣೆಗೆ ಗಾಳಿಯ ಒತ್ತಡ, ತಾಪಮಾನ ಮತ್ತು ಸೀಟ್‌ಬೆಲ್ಟ್ ಸೂಚಕಗಳ ಮಾಹಿತಿ ಇರುತ್ತದೆ.

ಪೈಲಟ್‌ಗಳು ಪ್ರಯಾಣಿಕರನ್ನು ನೇರವಾಗಿ ನೋಡಲು ಸಾಧ್ಯವಿಲ್ಲವಾದರೂ, ಕೆಲವು ವಿಮಾನ ಗಳಲ್ಲಿ ಭದ್ರತಾ ಉದ್ದೇಶಗಳಿಗಾಗಿ ಕ್ಯಾಬಿನ್ ಸರ್ವೆಯಲೆ ಕೆಮೆರಾಗಳಿರುತ್ತವೆ. ಟೇಕಾಫ್ ಮತ್ತು ಲ್ಯಾಂಡಿಂಗ್‌ನಂಥ ನಿರ್ಣಾಯಕ ಸಮಯಗಳಲ್ಲಿ ಈ ಕೆಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗು ತ್ತದೆ. ಆದರೆ ಇದು ಪೈಲಟ್‌ಗಳ ನೇರ ವೀಕ್ಷಣೆಗಾಗಿ ಅಲ್ಲ. ಆಧುನಿಕ ವಿಮಾನಗಳಲ್ಲಿನ ಕಾಕ್‌ಪಿಟ್ ಹಳೆಯ ವಿಮಾನಗಳಿಗಿಂತ ತೀರಾ ಭಿನ್ನ.

ಇತ್ತೀಚಿನ ವಿಮಾನಗಳಲ್ಲಿ ಸಾಂಪ್ರದಾಯಿಕ ಗೇಜ್‌ಗಳು ಮತ್ತು ಮೀಟರ್‌ಗಳ ಬದಲಿಗೆ ಡಿಜಿಟಲ್ ಪರದೆಗಳು ಮತ್ತು ನಿಯಂತ್ರಣ ವ್ಯವಸ್ಥೆಗಳಿವೆ. ಪೈಲಟ್‌ಗಳು ಕೇವಲ ವಿಮಾನವನ್ನು ಹಾರಿಸುವು ದಲ್ಲ, ಬದಲಾಗಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಸಂಖ್ಯಾತ ಪರಿಶೀಲನೆ ಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಷ್ಟಾಗಿಯೂ ಪ್ರಯಾಣಿಕರ ಚಲನವಲನ, ಚಟುವಟಿಕೆಗಳ ಮೇಲೆ ಕಣ್ಣಿಡುವುದು ಅವರ ಕೆಲಸವಲ್ಲ