G N Bhat Column: ಸುವೇಂದು ದ್ವೇಷ ರಾಜಕೀಯ ಮಾಡುತ್ತಿದ್ದಾರೆಯೆ ?
ಸುವೇಂದು ಅಧಿಕಾರ ವಹಿಸಿಕೊಂಡ ಮೇಲೆ ಬಂಗಾಲದಲ್ಲಿ ಅದೆಂತಹ ಬದಲಾವಣೆ ಗಳಾಗು ತ್ತಿವೆಯೆಂದರೆ ಜನ ಅದನ್ನು ಊಹಿಸಲೂ ಆಗದು. ಭಾರತಾದ್ಯಂತ ರಸ್ತೆ ವಿಭಜಕಗಳಿಗೆ, ವೇಗ ನಿಯಂತ್ರಕಗಳಿಗೆ ಯಾವ ಬಣ್ಣ ಬಳಿಯುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಈಕೆ ತನಗೆ ಇಷ್ಟ ಎಂಬ ಕಾರಣಕ್ಕೆ ನೀಲಿ ಬಣ್ಣವನ್ನು ಬಳಿಸಿದ್ದಳು. ಈಗ ಅದಕ್ಕೆ ರಸ್ತೆ ನಿಯಮದ ಪ್ರಕಾರ ಹಳದಿ ಬಿಳಿ ಬಣ್ಣ ಬಳಿಯಲು ಅಧಿಕಾರಿ ಆದೇಶಿಸಿದ್ದಾರೆ.
-
ವಂಗಭಂಗ
ಗ.ನಾ.ಭಟ್ಟ
ಹಾಗೆಂದು ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ. ಟಿಎಂಸಿ ನೆಲಕಚ್ಚಿ ಮಮತಾ ಬ್ಯಾನರ್ಜಿಗೆ ಮುಖ-ಮುಸುಡೂ ಇಲ್ಲವಾಗಿ ಆಕೆ ನೇಪಥ್ಯಕ್ಕೆ ಸರಿದ ಹಿನ್ನೆಲೆಯಲ್ಲಿ ಮತ್ತು ಬಿಜೆಪಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸುವೇಂದು ಅಧಿಕಾರಿ ಯಾರೂ ಊಹಿಸಲಾಗ ದಿದ್ದ ಗಡಿನಿಯಂತ್ರಣ ರೇಖೆಗೆ ಸಂಬಂಧಪಟ್ಟಂತೆ ಕಠಿಣ ನಿರ್ಧಾರ ತೆಗೆದುಕೊಂಡಿರು ವುದು, ಬೇಲಿ ಹಾಕುವುದಕ್ಕಾಗಿ 600 ಎಕರೆ ಜಮೀನನ್ನು ಮತ್ತು ಸಿಲಿಗುರಿಯ ಚಿಕನ್ ನೆಕ್ ಪ್ರದೇಶದ 120 ಎಕರೆ ಜಾಗವನ್ನು ಈಗಲೇ ಕೇಂದ್ರ ಸರಕಾರಕ್ಕೆ ವರ್ಗಾಯಿಸಿರುವುದು, ‘ಶಾಂತಿ ಬಾಂಧವ’ರಿಗೆ ನಡುಕ ಹುಟ್ಟಿಸಿದೆ. ಈ ಮಮತಾ ಬ್ಯಾನರ್ಜಿ ಎಂತಹ ದೇಶದ್ರೋಹಿ ಹೆಂಗಸೆಂದರೆ ಅವರ ಆಡಳಿತದ ಸಮಯದಲ್ಲಿ ಗಡಿಪ್ರದೇಶದಲ್ಲಿ ಬೇಲಿ ಹಾಕುವುದಕ್ಕಾಗಿ ಕೇಂದ್ರ ಸರಕಾರ ಆ ಜಾಗವನ್ನು ಕೇಳಿದಾಗ ಆಕೆ ಕೊಟ್ಟಿರಲಿಲ್ಲ. ಈಗ ಸುವೇಂದು ಅಽಕಾರಿ ಕೇವಲ ಒಂದು ಸಹಿ ಮೂಲಕ ಆ ಭೂಪ್ರದೇಶ ವರ್ಗಾಯಿಸಿದ್ದಾರೆ.
ಸುವೇಂದು ಅಧಿಕಾರ ವಹಿಸಿಕೊಂಡ ಮೇಲೆ ಬಂಗಾಲದಲ್ಲಿ ಅದೆಂತಹ ಬದಲಾವಣೆ ಗಳಾಗುತ್ತಿವೆಯೆಂದರೆ ಜನ ಅದನ್ನು ಊಹಿಸಲೂ ಆಗದು. ಭಾರತಾದ್ಯಂತ ರಸ್ತೆ ವಿಭಜಕಗಳಿಗೆ, ವೇಗನಿಯಂತ್ರಕಗಳಿಗೆ ಯಾವ ಬಣ್ಣ ಬಳಿಯುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಈಕೆ ತನಗೆ ಇಷ್ಟ ಎಂಬ ಕಾರಣಕ್ಕೆ ನೀಲಿ ಬಣ್ಣವನ್ನು ಬಳಿಸಿದ್ದಳು. ಈಗ ಅದಕ್ಕೆ ರಸ್ತೆ ನಿಯಮದ ಪ್ರಕಾರ ಹಳದಿ ಬಿಳಿ ಬಣ್ಣ ಬಳಿಯಲು ಅಧಿಕಾರಿ ಆದೇಶಿಸಿದ್ದಾರೆ.
ಜಗತ್ತು ಯಂತ್ರಾನುಸಂಧಾನ, ತಂತ್ರಜ್ಞಾನ, ಆರ್ಥಿಕತೆ, ಸೇನಾಭದ್ರತೆ, ಸುಸ್ಥಿರತೆ ಮೊದಲಾದವುಗಳಿಂದ ಮುಂದುರಿಯಬೇಕು ಎಂದು ಎಲ್ಲ ದೇಶಗಳೂ ಬಯಸುತ್ತವೆ. ಆದರೆ ಮಮತಾ ಇದಕ್ಕೆ ಹೊರತಾಗಿದ್ದರು. ನೆಟ್‌ವರ್ಕ್‌ಗಳು ಚೆನ್ನಾಗಿ ಕೆಲಸ ಮಾಡಿದರೆ ಎಲ್ಲವೂ ಪಾರದರ್ಶಕವಾಗಿಬಿಡುತ್ತವೆ ಮತ್ತು ಅದರಿಂದ ಕಾಳಸಂತೆಕೋರರಿಗೆ ತೊಂದರೆ ಯಾಗುತ್ತದೆ ಎಂಬ ಕಾರಣಕ್ಕೆ ಆಕೆ ನೆಟ್‌ವರ್ಕೇ ನಿಧಾನವಾಗುವಂತೆ ಮಾಡಿಬಿಟ್ಟಿದ್ದಳು.
ಈಗ ಪ.ಬಂಗಾಲದಲ್ಲಿ ನೆಟ್‌ವರ್ಕ್ ವೇಗವಾಗಿ ಕೆಲಸ ಮಾಡುವಂತೆ ಅನುಷ್ಠಾನಗೊಳಿಸ ಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಪಶ್ಚಿಮ ಬಂಗಾಲವನ್ನೇ ನುಂಗಿ ನೊಣೆಯಲು ಹೊರಟಿದ್ದ ಭ್ರಷ್ಟರಿಗೆ, ಟಿಎಂಸಿ ಗೂಂಡಾಗಳಿಗೆ, ಮಾಫಿಯಾಗಳಿಗೆ ನಡುಕ ಹುಟ್ಟುವಂತೆ ಅವರ ಆಸ್ತಿ-ಪಾಸ್ತಿಗಳ ಲೆಕ್ಕ ಕೊಡುವಂತೆ ಅವರೆಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: G N Bhat Column: ಬ್ರಹ್ಮಾನುಭೂತಿ ತೇಜಸ್ಸಿನ ಅಸಾಧಾರಣ ಮೇಧಾವಿ-ಭಗವತ್ಪಾದ ಶಂಕರಾಚಾರ್ಯರು
ನಮ್ಮ ದೇಶದಲ್ಲಿ ರಾಜಕಾರಣಿಗಳದೊಂದು ವಿಚಿತ್ರ ಮನಃಸ್ಥಿತಿಯಿದೆ. ಅಧಿಕಾರಾವಧಿ ಯಲ್ಲಿ ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಭಾವಿಸಿ ಮನಸೋ ಇಚ್ಛೆ ನಡೆದು ಕೊಳ್ಳುತ್ತಾರೆ. ಚುನಾವಣೆಯಲ್ಲಿ ಸೋತಾಗ ಅವರ ಬಣ್ಣ ಬಯಲಿಗೆ ಬರುತ್ತದೆ. ಅಂತಹವ ರಲ್ಲಿ ಒಬ್ಬ ಮಮತಾಳ ಸೋದರಳಿಯ ಅಭಿಷೇಕ ಬ್ಯಾನರ್ಜಿ.
ಎಂತಹ ಭ್ರಷ್ಟ ಎಂದರೆ- ಅಕ್ರಮವಾಗಿ ಕಲೆ ಹಾಕಿರುವ ಆಸ್ತಿ ನೋಡಿದರೆ ತಲೆ ತಿರುಗುತ್ತದೆ. ಬರೀ ಒಂದು ಮನೆ ಕಟ್ಟಿಸುವುದಕ್ಕೆ ಈತ ಖರ್ಚು ಮಾಡಿದ್ದು 75 ಕೋಟಿ ರೂಪಾಯಿ! ಈತ ಇಡೀ ಪಶ್ಚಿಮ ಬಂಗಾಲವೇ ತನ್ನ ಸ್ವಂತ ಆಸ್ತಿ ಎಂದು ಭಾವಿಸಿದಂತಿದೆ. ಸುವೇಂದು ಅವನಿಗೆ ತಕ್ಕ ಶಾಸ್ತಿ ವಿಧಿಸಿದ್ದಾರೆ.
ಸರಕಾರಿ ಜಾಗದಲ್ಲಿ ಐಷಾರಾಮಿ ಮನೆ ಕಟ್ಟಿಸಿ ರಸ್ತೆಯನ್ನೂ ಒತ್ತುವರಿ ಮಾಡಿದ್ದ. ಅವನಿಗೆ ನೋಟಿಸ್ ನೀಡಲಾಗಿದೆ. ಅವನ ಹಲವಾರು ಅಪರಾಧಕ್ಕಾಗಿ ಮೊಕದ್ದಮೆ ಹೂಡಲಾಗಿದೆ. ಇಂಥಾದ್ದೇ ಅಪರಾಧವೆಸಗಿ ನೂರಾರು ಪ್ರಾಪರ್ಟಿ ಮಾಡಿ ಕಲ್ಕತ್ತಾ ಜನತೆಗೆ ಮಣ್ಣೆರಚಿ, ಮೆರೆಯುತ್ತಿದ್ದ ರಾಜಾ ನಾಸ್ಕರ್, ಸೋನಾ ಪಪ್ಪು, ಫೈದ್ ಅಹಮ್ಮದ್, ಸಯಾನಿ ಘೋಷ್ ಮೊದಲಾದ ಕ್ರಿಮಿನಲ್‌ಗಳಿಗೆ ಕೋಲ್ಕತ್ತಾ ಮುನ್ಸಿಪಲ್ ಕಾರ‍್ಪೋರೇಷನ್ ಆಯುಕ್ತರು ನೋಟಿಸ್ ನೀಡಿ ತನಿಖೆಗೆ ಆದೇಶಿಸಿದ್ದಾರೆ.
ಸುವೇಂದು ಅಧಿಕಾರಿಯವರ ಈ ವೇಗದ, ನ್ಯಾಯಯುತ, ದಿಟ್ಟ ಕ್ರಮವನ್ನು ನೋಡಿ ತಥಾಕಥಿತ ಕಾಂಗ್ರೆಸ್ಸಿಗರು, ಕಮ್ಯೂನಿಸ್ಟ್‌ಗಳು, ಟಿಎಂಸಿ ತರಲೆಗಳು ಇದೊಂದು ದ್ವೇಷದ ರಾಜಕಾರಣವೆಂದು ಆರೋಪಿಸತೊಡಗಿದ್ದಾರೆ.
ವಾಸ್ತವವಾಗಿ ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ಓದಿದವರಿಗೆ, ನಮ್ಮ ಇತಿಹಾಸವನ್ನು ಹೃದ್ಗತ ಮಾಡಿಕೊಂಡವರಿಗೆ ಸುವೇಂದು ಅಧಿಕಾರಿಯವರ ಈ ದಿಟ್ಟ ಕ್ರಮ, ಕ್ಷಾತ್ರ ರೀತಿ ಹೊಸದಾಗೇನೂ ಕಾಣುವುದಿಲ್ಲ. ಹಿಂದೆ ರಾಮಾಯಣ, ಮಹಾಭಾರತದ ಕಾಲದಲ್ಲೂ ಅಪರಾಧಿಗಳಿಗೆ, ಭಯೋತ್ಪಾದಕರಿಗೆ, ಕ್ರಿಮಿನಲ್‌ಗಳಿಗೆ ಉಗ್ರವಾದ ಶಿಕ್ಷೆಯೇ ಕಾದಿರುತ್ತಿತ್ತು.
ಖರ-ದೂಷಣ, ರಾವಣ, ವಾಲಿ, ಮಾರೀಚನಂತಹ ರಾಕ್ಷಸರನ್ನು ರಾಮ ಕೊಂದು ಕಳೆದಿದ್ದ. ಇತ್ತ ಮಹಾಭಾರತದಲ್ಲಿ ದುರ್ಯೋಧನ, ಕರ್ಣ, ಜರಾಸಂಧ, ಬಕಾಸುರನಂತಹ ಸಮಾಜ ಪೀಡಕರನ್ನು ಪಾಂಡವರು ಕೊಂದು ಮುಗಿಸಿದ್ದರು. ಕೃಷ್ಣನೂ ಅದೇ ಕೆಲಸ ಮಾಡಿದ್ದ. ಇಲ್ಲಿ ಹೊಸದಾಗಿ ಕಾಣುವುದೆಂದರೆ ಸುವೇಂದು ಅಧಿಕಾರಿ ರಾಮ, ಕೃಷ್ಣರಂತೆ ಅವರ ಲೋಕಕ್ಷೇಮ ನೀತಿಯನ್ನು ಅಳವಡಿಸಿಕೊಂಡು ದುಷ್ಟರನ್ನು ಮರ್ದಿಸುತ್ತಿರುವುದು.
ಬಹುಪಾಲು ಇಂದಿನ ಯಾವ ರಾಜಕಾರಣಿಗಳೂ ಇಂತಹ ಕ್ಷಾತ್ರಗುಣವನ್ನು ಮೆರೆಯು ತ್ತಿಲ್ಲ. ಅದನ್ನು ಸುವೇಂದು ಅಽಕಾರಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ರಾಮಾಯಣ ದಲ್ಲಿ ಒಂದು ಮಾತು ಬರುತ್ತದೆ- ‘ನಾಸ್ಯಕ್ರೋಧಃ ಪ್ರಸಾದಶ್ಚ ನಿರರ್ಥೋಸ್ತಿ ಕದಾಚನ | ಹನತ್ಯೇವ ನಿಯಮಾತ್ ವಧ್ಯಾತ್ ಅವಧ್ಯೇಷು ನ ಕುಪ್ಯತಿ’ (ಅಯೋಧ್ಯಾ: 2-45) ‘ಶ್ರೀರಾಮನ ಕೋಪಕ್ಕೂ ಅನುಗ್ರಹಕ್ಕೂ ಒಂದು ಅರ್ಥವಿರುತ್ತಿತ್ತು.
ಅವು ಎಂದೂ ವ್ಯರ್ಥವಾಗುತ್ತಿರಲಿಲ್ಲ. ವಧೆಗೆ ಅರ್ಹರಾದ ಪಾತಕಿಗಳನ್ನು ಆತ ನಿಯಮ ತಪ್ಪದೇ ಗಲ್ಲಿಗೇರಿಸುತ್ತಿದ್ದ. ನಿರಪರಾಧಿಗಳ ಮೇಲೆ ಆತ ಎಂದೂ ಕೋಪಗೊಂಡಿದ್ದೇ ಇಲ್ಲ’. ಇದು ನ್ಯಾಯಪ್ರಭುವಿನ ಆಡಳಿತದ ರೀತಿ. ಇದನ್ನೇ ಸುವೇಂದು ಅಧಿಕಾರಿ ಅಳವಡಿಸಿ ಕೊಂಡಿದ್ದು.
ಇದರಲ್ಲಿ ದ್ವೇಷ ರಾಜಕಾರಣ ಎಲ್ಲಿಂದ ಬಂತು? ಅಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂಬುದು ಯಾವ ನೀತಿ? ನಮ್ಮ ರಾಜಕಾರಣಿಗಳು ಹೀಗೆ ನಡೆದುಕೊಂಡು ಬಂದಿದ್ದ ರಿಂದಲೇ ನಮ್ಮ ದೇಶ ಇಂತಹ ಅವನತಿಯತ್ತ ಸಾಗುತ್ತಿರುವುದು; ಭ್ರಷ್ಟಾಚಾರದ ಕೊಂಪೆಯಾಗಿರುವುದು; ಕ್ರಿಮಿನಲ್‌ಗಳಿಗೆ ತವರುಮನೆಯಾಗಿರುವುದು; ಭಯೋತ್ಪಾದಕರ ಅಡಗುತಾಣವಾಗಿರುವುದು. ಇವು ನಾಶವಾಗದೆ ದೇಶ ಉದ್ಧಾರವಾಗದು.
ನಮ್ಮ ಪ್ರಾಚೀನ ಗ್ರಂಥಗಳು ನ್ಯಾಯಸಾಧನೆಗೆ ನಾಲ್ಕು ಉಪಾಯಗಳನ್ನು ಕಂಡು ಕೊಂಡಿವೆ. ಅವೇ ಸಾಮ, ದಾನ, ಭೇದ ಮತ್ತು ದಂಡ. ಇವುಗಳಲ್ಲಿ ಸಾಮ ಮತ್ತು ದಂಡ ಹೆಚ್ಚು ಶ್ರೇಷ್ಠಗಳು. ಈ ಎರಡರಲ್ಲಿ ದಂಡವು ಇನ್ನೂ ಶ್ರೇಷ್ಠ. ‘ಕಾರ್ಯಸಿದ್ಧ್ಯತಿ ಶಯಾತ್’.-‘ಕಾರ್ಯಸಿದ್ಧಿಯಾಗುವುದು ದಂಡದಿಂದಲೇ ಹೊರತು ಮಿಕ್ಕಿದ್ದರಿಂದ ಅಲ್ಲ’ ಎಂದು ಮನುಸ್ಮೃತಿ ಹೇಳುತ್ತದೆ.
‘ಸಾಮಾದೀನಾಮುಪಾಯಾನಾಂ ಚತುರ್ಣಾಮಪಿ ಪಂಡಿತಾಃ | ಸಾಮದಂಡೌ ಪ್ರಶಂಸಂತಿ ನಿತ್ಯ ರಾಷ್ಟ್ರಾಭಿವೃದ್ಧಯೇ’ (ಮನುಸ್ಮೃತಿ: 7-109) ರಾಷ್ಟ್ರಾಭಿವೃದ್ಧಿಗೆ ದಂಡವೇ ಹೆಚ್ಚು ಶ್ರೇಯಸ್ಕರ. ಅದನ್ನು ಸುವೇಂದು ಅಧಿಕಾರಿ ಮಾಡುತ್ತಿದ್ದಾರೆ.
ಇಲ್ಲಿ ಯಾವ ದ್ವೇಷ ರಾಜಕಾರಣವೂ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಹೊಸ ವಿಚಾರವೇನೂ ಅಲ್ಲ. ಅದು ಆನಾದಿಯಾದುದು. ಮನುಷ್ಯನ ಕ್ರೌರ್ಯ ಭಯಾನಕ ಮತ್ತು ಊಹಾತೀತ. ಅದಕ್ಕೆ ಮಮತಾ, ಅವಳ ಗೂಂಡಾಗಳೇ ಸಾಕ್ಷಿ. ದುಷ್ಟರಿಗೆ ದಂಡ ಸಲ್ಲಲೇಬೇಕು. ಅಂತಹವರಿಗೆ ಶಿಕ್ಷೆಯಾಗದಿದ್ದರೆ ರಕ್ತಬೀಜಾಸುರನಂತೆ ಮತ್ತೆ ಮತ್ತೆ ಹುಟ್ಟಿಕೊಳುತ್ತಾರೆ. ಅದನ್ನು ಬೇರು ಸಹಿತ ಕಿತ್ತೆಸೆಯಲು ಚಾಮುಂಡಿಯಂತೆ ಸುವೇಂದು ಅಧಿಕಾರಿ ಬಂದಂತೆ ಕಾಣುತ್ತದೆ. ಅವರ ವೀರಸಂಕಲ್ಪಕ್ಕೆ ಜಯವಾಗಲಿ.