ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಆಷಾಢ ಏಕಾದಶಿಯ ಮಹತ್ವ

ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನದಿಂದ ಪ್ರಾರಂಭಿಸು ತ್ತಾರೆ. ಈ ಅವಧಿಯಲ್ಲಿ, ಭಗವಾನ್ ವಿಷ್ಣುವು ಯೋಗನಿದ್ರೆಗೆ ಹೋಗುತ್ತಾನೆ ಎಂದು ನಂಬಲಾಗಿದೆ ಮತ್ತು ಆದ್ದರಿಂದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

ಆಷಾಢ ಏಕಾದಶಿಯ ಮಹತ್ವ

ಒಂದೊಳ್ಳೆ ಮಾತು

rgururaj628@gmail.com

ಶಯನಿ ಏಕಾದಶಿಯು ಚಾತುರ್ಮಾಸದ ಆರಂಭವೆಂಬ ಪ್ರತೀತಿ ಇದೆ. ಭಕ್ತರು ವಿಷ್ಣುವಿನ ಪ್ರೀತ್ಯ ರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನದಿಂದ ಆರಂಭಿಸುತ್ತಾರೆ. ಈ ದಿನ ಉಪವಾಸ ವನ್ನು ಕೂಡ ಮಾಡುತ್ತಾರೆ. ಇದನ್ನು ಆಷಾಢ ಏಕಾಧಶಿ ಎಂದೂ ಹೇಳಲಾಗುತ್ತದೆ. ಇದನ್ನು ಆಷಾಢ ಏಕಾದಶಿ, ಶಯನಿ ಏಕಾ ದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ದೇವಶಯನಿ ಏಕಾದಶಿ , ದೇವಪೋಢಿ ಏಕಾದಶಿ - ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.

ಹಿಂದೂ ಧಾರ್ಮಿಕ ಲೆಕ್ಕಾಚಾರದಂತೆ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಹೀಗಾಗಿ ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ ಎಂದೂ ಕರೆಯ ಲಾಗುತ್ತದೆ. ಈ ಪವಿತ್ರ ದಿನವು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವ ವುಳ್ಳದ್ದು. ಈ ದಿನ ವಿಷ್ಣು ಮತ್ತು ಲಕ್ಷ್ಮೀ ಪೂಜೆ ಮಾಡಲಾಗುತ್ತದೆ.

ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನದಿಂದ ಪ್ರಾರಂಭಿಸು ತ್ತಾರೆ. ಈ ಅವಧಿಯಲ್ಲಿ, ಭಗವಾನ್ ವಿಷ್ಣುವು ಯೋಗನಿದ್ರೆಗೆ ಹೋಗುತ್ತಾನೆ ಎಂದು ನಂಬಲಾಗಿದೆ ಮತ್ತು ಆದ್ದರಿಂದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

ಇದನ್ನೂ ಓದಿ: Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಜನರು ಈ ಸಮಯದಲ್ಲಿ ಉಪವಾಸ, ಧ್ಯಾನ, ಮತ್ತು ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ. ಇನ್ನು, ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಯೋಗ ನಿದ್ರೆಗೆ ಜಾರುವುದರಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ.

ನಂತರ, ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆ ಯಿಂದ ಎಚ್ಚೆತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯು ತ್ತಾರೆ. ಶಯನಿ ಏಕಾದಶಿಯು ಚಾತುರ್ಮಾಸದ ಆರಂಭವೆಂಬ ಪ್ರತೀತಿ ಇದೆ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತ ವನ್ನು ಆಚರಿಸಲು ಈ ದಿನ ಆರಂಭಿಸುತ್ತಾರೆ.

ಚಾತುರ್ಮಾಸದಲ್ಲಿ, ಜನರು ಉಪವಾಸಧ್ಯಾನ, ಮತ್ತು ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ. ಕೆಲವು ಜನರು ಕೆಲವು ರೀತಿಯ ಪ್ರತಿಜ್ಞೆಗಳನ್ನು ಆಚರಿಸುತ್ತಾರೆ, ಉದಾಹರಣೆಗೆ ಮೌನ ವಾಗಿರುವುದು ಅಥವಾ ಒಂದು ನಿರ್ದಿಷ್ಟ ಆಹಾರವನ್ನು ತ್ಯಜಿಸುವುದು. ಈ ಅವಧಿಯಲ್ಲಿ, ಜನರು ಸಾತ್ವಿಕ ಆಹಾರವನ್ನು ಸೇವಿಸಲು ಮತ್ತು ತಾಮಸಿಕ ಆಹಾರವನ್ನು ತ್ಯಜಿಸಲು ಸಲಹೆ ನೀಡಲಾಗು ತ್ತದೆ.

ಚಾತುರ್ಮಾಸದಲ್ಲಿ ಸಂತರು ಸಂಚರಿಸುವುದನ್ನು ತಪ್ಪಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ಸಣ್ಣ ಸಸ್ಯಗಳು ಮತ್ತು ಜೀವಿಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಚಾತುರ್ಮಾಸವು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯನ್ನು ಬೆಳೆಸಲು ಮತ್ತು ಆತ್ಮ-ಶಿಸ್ತನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಉಪವಾಸಗಳು ಮತ್ತು ಶುದ್ಧತೆಯು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದಕ್ಕಾಗಿ ವೈಜ್ಞಾನಿಕ ತಾರ್ಕಿಕತೆಯ ಸಾಧ್ಯತೆಯಿದೆ. ಮಳೆಗಾಲದ ಆರಂಭದೊಂದಿಗೆ ರೋಗವು ಹೆಚ್ಚು ಸುಲಭವಾಗಿ ಹರಡುತ್ತದೆ.

ಹಲವಾರು ಹಿಂದೂ ಗಳು, ವಿಶೇಷವಾಗಿ ವೈಷ್ಣವ ಸಂಪ್ರದಾಯವನ್ನು ಅನುಸರಿಸುವವರು. ಈ ಅವಧಿಯಲ್ಲಿ ಎಣ್ಣೆಯುಕ್ತ, ಉಪ್ಪು, ಸಿಹಿ ಅಥವಾ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಹೊಂದಿರುವ ಊಟಗಳನ್ನು ಮತ್ತು ಬದನೆಕಾಯಿಯನ್ನು ತಿನ್ನುವುದನ್ನು ತಡೆಯುತ್ತಾರೆ.

ನಮ್ಮ ಸನಾತನ ಹಿಂದೂ ಧರ್ಮ ಸಾವಿರಾರು ವರ್ಷಗಳ ಇತಿಹಾಸ ಇರುವಂತದ್ದು. ಇಲ್ಲಿ ಪ್ರತಿ ಆಚರಣೆಗೂ ಕೂಡ ತನ್ನದೇ ಆದ ಮಹತ್ವವಿದೆ. ಅನೇಕ ಬಾರಿ ಇದು ವೈಜ್ಞಾನಿಕವಾಗಿಯೂ ಕೂಡ ನಿರೂಪಿಸಲ್ಪಟ್ಟಿದೆ. ಆದ್ದರಿಂದಲೇ ಯಾವುದೇ ಆಚರಣೆಯನ್ನು ಸುಮ್ಮನೆ ಹಿರಿಯರು ಮಾಡಿಕೊಂಡು ಬಂದ ಒಂದು ಪದ್ಧತಿ ಎಂದು ಅಲ್ಲ ಗೆಳೆಯದೆ, ಆ ಆಚರಣೆಯ ಹಿಂದಿರುವ ವಿಚಾರ ಮತ್ತು ಉದ್ದೇಶಗಳನ್ನು ತಿಳಿದುಕೊಂಡಾಗ ನಾವು ಅದರ ಪ್ರಸ್ತುತತೆಯನ್ನು ಕೂಡ ಅರ್ಥ ಮಾಡಿಕೊಳ್ಳುತ್ತೇವೆ.

ನಮ್ಮ ಅನಿಕ ಆಚರಣೆಗಳು ಕೇವಲ ಪದ್ಧತಿಗಳಲ್ಲ, ಅವು ಒಂದು ಆರೋಗ್ಯ ಜೀವನ ಶೈಲಿಯನ್ನು ಕೊಡುವ ಜೀವನ ಕೌಶಲ್ಯ ಗಳು. ಅದನ್ನು ನಮ್ಮ ಹಿರಿಯರು ಒಂದು ಶಿಸ್ತಿನಿಂದ ಆಚರಿಸುತ್ತಾ ಪದ್ಧತಿಯನ್ನಾಗಿಸಿ ನಮಗೆ ಧಾರೆ ಎರೆದಿದ್ದಾರೆ. ಮಾನಸಿಕವಾಗಿ ದೈಹಿಕವಾಗಿ ಒಂದು ಆರೋಗ್ಯ ಯುತ ಜೀವನ ನಡೆಸಲು ಇಂತಹ ಪದ್ಧತಿಗಳು ಖಂಡಿತವಾಗಿಯೂ ನೆರವಾಗುತ್ತದೆ