Naveen Sagar Column: ಶತಕವಂಚಿತ ರಾಹುಲ್ ಗಾಂಧಿಯೇ ಅಸಲಿ ಧುರಂಧರ್ !
ವಿಜಯ್ ರಾಜಕೀಯಕ್ಕೆ ಬರಲು, ಹೊಸ ಪಕ್ಷ ಕಟ್ಟಲು ಬಿಜೆಪಿಯ ತಂತ್ರಗಾರಿಕೆ ಇತ್ತು ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ತಲೆಬುಡವಿಲ್ಲದ ಕಥೆ. ವಿಜಯ್ ಎಂದಿಗೂ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ, ಬೆಂಬಲಿಸಿಯೂ ಇಲ್ಲ. ಆತನಿಂದ ಮುಂದೆಯೂ ಬಿಜೆಪಿ ಪರ ನಿಲುವು ಕಾಣುವುದು ಅನುಮಾನ.
-
ಪದಸಾಗರ
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕೆಲವು ಕಡೆ ನಿರೀಕ್ಷೆಗಳು ಫಲ ಕೊಟ್ಟಿದ್ದರೆ, ಕೆಲವು ಕಡೆ ನಿರೀಕ್ಷೆಯಂತೆ ನಡೆದಿದೆ. ಒಂದು ಕಡೆ ನಿರೀಕ್ಷೆ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ನಂತರ ಅತಿ ಹೆಚ್ಚು ವರ್ಷ ಅಧಿಕಾರ ನಡೆಸಿದ್ದ ಮಮತಾ ದೀದಿಯ ದುರಾ ಡಳಿತ ಕೊನೆಗೊಂಡಿದೆ.
ತಮಿಳುನಾಡಿನಲ್ಲಿ ಹಿಂದೂ ಧರ್ಮ ವಿರೋಧಿ, ಭ್ರಷ್ಟ ಮತ್ತು ಗೂಂಡಾ ಸರಕಾರ ಎಂದೇ ಕೆಂಗಣ್ಣಿಗೆ ಗುರಿಯಾಗಿದ್ದ ಡಿಎಂಕೆ, ಆಡಳಿತ ವಿರೋಧಿ ಅಲೆಯ ಜತೆಗೆ ನಟ ವಿಜಯ್‌ನ ಅಬ್ಬರಕ್ಕೆ ತರಗೆಲೆಯಂತೆ ಉದುರಿಹೋಗಿದೆ. ಈ ನಡುವೆ ಬಿಜೆಪಿ ಬೆಂಬಲಿಗರು, ವಿಜಯ್‌ರನ್ನು ಬಿಜೆಪಿಯ ಸೀಕ್ರೆಟ್ ಏಜೆಂಟ, ಧುರಂಧರ್ ಎಂದು ಬಿಂಬಿಸುತ್ತಿದ್ದಾರೆ.
ವಿಜಯ್ ರಾಜಕೀಯಕ್ಕೆ ಬರಲು, ಹೊಸ ಪಕ್ಷ ಕಟ್ಟಲು ಬಿಜೆಪಿಯ ತಂತ್ರಗಾರಿಕೆ ಇತ್ತು ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ತಲೆಬುಡವಿಲ್ಲದ ಕಥೆ. ವಿಜಯ್ ಎಂದಿಗೂ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ, ಬೆಂಬಲಿಸಿಯೂ ಇಲ್ಲ. ಆತನಿಂದ ಮುಂದೆಯೂ ಬಿಜೆಪಿ ಪರ ನಿಲುವು ಕಾಣುವುದು ಅನುಮಾನ.
ರಾಜಕೀಯ ಕಾರಣಗಳಿಗೆ ತಾತ್ಕಾಲಿಕ ಮೈತ್ರಿ ಏರ್ಪಡಬಹುದೇ ಹೊರತು ಅದಕ್ಕಿಂತ ಹೆಚ್ಚು ವಿಜಯ್‌ನಿಂದ ಬಿಜೆಪಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆತನ ಪಕ್ಷ ತಮಿಳುನಾಡಿಗೆ ಸೀಮಿತ ಗೊಳ್ಳುವ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುತ್ತದೆ, ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಯತ್ನ ಮಾಡುತ್ತದೆಯೇ ವಿನಾ, ಬಿಜೆಪಿ ಅಥವಾ ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳ ಮರ್ಜಿಗೆ ಬೀಳುವುದಿಲ್ಲ.
ಇದನ್ನೂ ಓದಿ: Naveen Sagar Column: ನರಕದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ʼಗಳ ಬಲೆಗೆ ಬೀಳದಿರಿ !
ಏತನ್ಮಧ್ಯೆ ರಾಹುಲ್ ಗಾಂಧಿ ತಮ್ಮ ಚುನಾವಣಾ ಸೋಲಿನ ಸಂಖ್ಯೆ ಬರೋಬ್ಬರಿ ತೊಂಬತ್ತೊಂಬ ತ್ತಕ್ಕೆ ಏರಿಸಿಕೊಂಡು ಶತಕವಂಚಿತರಾಗಿದ್ದಾರೆ. ಕೇರಳದಲ್ಲೂ ಸೋಲು ಕಂಡು ಬಿಟ್ಟಿದ್ದರೆ, ಇದೇ ಚುನಾವಣೆಯಲ್ಲಿ ಅವರು ಶತಸೋಲುಗಳ ಸರದಾರನಾಗಿ ದಾಖಲೆ ಬರೆಯು ತ್ತಿದ್ದರು.
ಬಿಜೆಪಿ ಪಾಲಿನ ಅಸಲಿ ಧುರಂಧರ್ ಯಾರು ಅಂದರೆ ರಾಹುಲ್ ಗಾಂಧಿ. ರಾಹುಲ್ ಗಾಂಧಿಯ ರಾಜಕೀಯ ಭಾಷಣಗಳು, ರಾಜತಾಂತ್ರಿಕ ನಡೆಗಳು, ಶತ್ರು ರಾಷ್ಟ್ರಗಳ ಜತೆಗಿನ ಗುಪ್ತ ಭೇಟಿ, ಮಾತುಕತೆಗಳು, ಹಾಸ್ಯಾಸ್ಪದ ವಾದ ಪ್ರತಿವಾದಗಳು, ತೀರಾ ಕೆಳಮಟ್ಟದ ನಾಯಕತ್ವ ಗುಣ ಎಲ್ಲವೂ ಬಿಜೆಪಿ ಪಾಲಿಗೆ ವರವಾಗುತ್ತಲೇ ಹೋಗುತ್ತಿದೆ.
ರಾಹುಲ್ ಗಾಂಧಿ ಸಕ್ರಿಯ ರಾಜಕಾರಣದಲ್ಲಿ ಇರುವ ತನಕವೂ ಬಿಜೆಪಿಗೆ ಸೋಲಿನ ಭಯವೇ ಇಲ್ಲ ಎಂಬಂತಾಗಿ ಹೋಗಿದೆ. ರಾಹುಲ್ ಗಾಂಧಿ ಪ್ರತಿಬಾರಿ ಚುನಾವಣೆಗಳ ನಂತರ ಅಥವಾ ರಿಸಲ್ಟಿನ ಆಸುಪಾಸಿನಲ್ಲಿ ಭಾರತ ಬಿಟ್ಟು ಹಾರುತ್ತಾರೆ. ಅಲ್ಲಿಂದ ಬರುವಾಗ ಹೊಸತೊಂದು ಟೂಲ್ ಕಿಟ್ ಹೊತ್ತು ತರುತ್ತಾರೆ ಅಥವಾ ಅಲ್ಲಿಂದಲೇ ಟೂಲ್ ಕಿಟ್ ಓಪನ್ ಮಾಡುತ್ತಾರೆ. ಪ್ರಸ್ತುತ ಚುನಾವಣಾ ಫಲಿತಾಂಶಗಳು ಹೊರಬೀಳುವ ಹೊತ್ತಲ್ಲಿ ರಾಹುಲ್ ಮಸ್ಕತ್‌ನಲ್ಲಿ ಕೂತು ಕತ್ತಿ ಮಸೆಯುತ್ತಿದ್ದಾ ರೆಂಬ ಸುದ್ದಿಯಿದೆ.
ಎರಡು ಮೂರು ದಿನಗಳ ಹಿಂದೆ ರಾಹುಲ್ ಗಾಂಧಿ, ನಿಕೋಬಾರ್ ದ್ವೀಪದಲ್ಲಿ ಕಾಣಿಸಿಕೊಂಡರು. ಏಕಾಏಕಿ ರಾಹುಲ್ ಗಾಂಧಿ ನಿಕೋಬಾರ್ ದ್ವೀಪ ಹೊಕ್ಕು ಭಾವಾವೇಶದಲ್ಲಿ ವಿಡಿಯೋ ಮಾಡಿದ್ದು ಯಾಕೆ? ಇಂಥವೆಲ್ಲ ರಾಹುಲ್ ಗಾಂಧಿಯ ತಲೆಗೆ ತುಂಬಿಸುವವರಾರು? ಹೊಸ ಹೊಸ ವಿಷಯ ಹೆಕ್ಕಿ ಕೊಡುವವರಾರು? ಇದ್ಯಾವುದೂ ರಾಹುಲ್ ಗಾಂಧಿಗೆ ಸ್ವಂತವಾಗಿ ಹೊಳೆಯುವ ವಿಷಯಗಳಂತೂ ಅಲ್ಲ.
ರಾಹುಲ್ ಗಾಂಧಿಗೆ ಸ್ವಂತವಾಗಿ ಹೇಳಲು ಬರೋದು ಕೆಲವೇ ಮಾತುಗಳು. ಮೋದೀಜಿಗೆ ನಾನಂದರೆ ಭಯ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು. ಮೋದಿಜಿ ಅಂಬಾನಿಗೆ ಅದಾನಿಗೆ ದೇಶವನ್ನು ಮಾರಿದ್ದಾರೆ.
ಮೋದೀಜಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇಂಥವು ಬಿಟ್ಟು ಇನ್ಯಾವುದೂ ರಾಹುಲ್ ಗಾಂಧಿಯ ಸ್ವಂತ ಮಾತುಗಳಲ್ಲ. ಹಾಗೊಮ್ಮೆ ಸ್ವಂತ ಮಾತಾಡಲು ಬಾಯಿಬಿಟ್ಟರೆ ಬಣ್ಣಗೇಡು ಖಚಿತ. ಹೀಗಿರುವಾಗ ರಾಹುಲ್ ಗಾಂಧಿಯನ್ನು ಆಪರೇಟ್ ಮಾಡುತ್ತಿರುವುದು ಚೀನಾ ಎಂಬ ಒಂದು ಅನುಮಾನ ಬಲಗೊಳ್ಳುತ್ತಿದೆ.
ರಾಹುಲ್ ಗಾಂಧಿ ಬಿಜೆಪಿಯ ಧುರಂಧರ್ ಅಲ್ಲ, ಚೀನಾದ ಧುರಂಧರ್ ಎನ್ನಲಾಗುತ್ತಿದೆ. ರಾಹುಲ್ ಗಾಂಧಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರಬಹುದು, ಆದರೆ ಚೀನಾವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಇದಕ್ಕೆ ಪೂರಕವಾಗಿ ಸುಮಾರು ಹದಿನೇಳು ವರ್ಷಗಳ ಇತಿಹಾಸ ಕೆದಕ ಬೇಕಾಗುತ್ತದೆ. ರಾಹುಲ್ ಚೈನಾ ಕೈಗೊಂಬೆಯಾಗಿ ಭಾರತದ ವಿರುದ್ಧವೇ ಕೆಲಸ ಮಾಡು ತ್ತಿದ್ದಾರೆ ಎಂದನಿಸುವುದಕ್ಕೆ ಹಲವು ಪುರಾವೆಗಳು ಕಾಣಸಿಗುತ್ತವೆ.
2008, ಆಗ 7ರಂದು ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ನಮ್ಮ ಕಾಂಗ್ರೆಸ್ ಒಂದು ಒಪ್ಪಂದಕ್ಕೆ ಸಹಿ ಹಾಕುತ್ತದೆ. ಅಂಥದ್ದೇನಿತ್ತು ಅವರು ಸಹಿ ಮಾಡಿದ MOUದಲ್ಲಿ ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಒಡಿಶಾದ ನಿಯಾಮಗಿರಿ ಪ್ರದೇಶದಲ್ಲಿ ವೇದಾಂತ ಕಂಪೆನಿ ಅಲ್ಯೂಮಿನಿಯಂ ರಿಫೈನರಿ ನಿರ್ಮಿಸಲು ಮುಂದಾಗಿತ್ತು.
ಅಲ್ಯೂಮಿನಿಯಂ ರಕ್ಷಣಾ ಸಾಧನಗಳು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಅತ್ಯಂತ ಮುಖ್ಯವಾದ ಲೋಹ. ಈ ಯೋಜನೆ ಭಾರತವನ್ನು ಸ್ವಾವಲಂಬಿಯಾಗಿಸಬಹುದಿತ್ತು. ಆದರೆ ರಾಹುಲ್ ಗಾಂಧಿ ಎನ್ಜಿಒ ಗಳನ್ನು ಮತ್ತು ಪರಿಸರವಾದಿಗಳನ್ನು ಎತ್ತಿಕಟ್ಟಿ ರಿಫೈನರಿ ಆಗದಂತೆ ತಡೆಯುತ್ತಾರೆ. ಚೀನಾದ ಮೇಲಿನ ಭಾರತದ ಅವಲಂಬನೆ ಮುಂದುವರಿಯುತ್ತದೆ.
2005. ಸೆಮಿಕಂಡಕ್ಟರ್ ಕ್ಷೇತ್ರ ಆಗಷ್ಟೇ ಕಣ್ಣುತೆರೆಯ ಲಾರಂಭಿಸಿತ್ತು. ಒಂದು ಪ್ರಮುಖ ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಮುಂದಾಗಿತ್ತು. ಆದರೆ ಅದಕ್ಕೆ ಮನಮೋಹನ್ ಸಿಂಗ್ ಅವರ ಹಿಂದಿದ್ದ ಅಸಲಿ ಕೈಗಳು ಅನೇಕ ಆಡಳಿತಾತ್ಮಕ ತೊಂದ ರೆಗಳನ್ನುನೀಡತೊಡಗಿದವು. ಅಮೆರಿಕದಿಂದ ಆಮದು ಮಾಡಿಕೊಂಡ ಉಪಕರಣಗಳಿಗೆ ಭಾರಿ ಮೊತ್ತದ ಆಮದು ಶುಲ್ಕ, ಇನ್ನಿತರ ಶುಲ್ಕಗಳನ್ನು ಹಾಕಿ ಥರಥರದ ಕಾಟ ಕೊಡಲಾಯಿತು.
ಭಾರತದ ಸಹವಾಸವೇ ಬೇಡ ಎನ್ನುವಂತಾದಾಗ, ಚೀನಾ ರೆಡ್ ಕಾರ್ಪೆಟ್ ಹಾಸಿ ಅವರನ್ನು ಕರೆದು ಪ್ರಾಜೆಕ್ಟ್ ಶುರುಮಾಡಿಸಿತು. ಭಾರೀ ಆಮದು ಸುಂಕಗಳು, ವಿಳಂಬ ಶುಲ್ಕಗಳು ಮತ್ತು ಸರ್ಕಾರದ ಸಹಕಾರದ ಕೊರತೆಯಿಂದಾಗಿ ಕಂಪನಿ ಯೋಜನೆಯನ್ನು ಚೀನಾಕ್ಕೆ ಸ್ಥಳಾಂತರಿಸಿತು.
ಇದರೊಂದಿಗೆ ಭಾರತ ಒಂದು ದೊಡ್ಡ ತಾಂತ್ರಿಕ ಅವಕಾಶವನ್ನು ಕಳೆದುಕೊಂಡಿತು. ಭಾರತದ ನಷ್ಟ, ಚೀನಾದ ಲಾಭವಾಯಿತು. ಹೀಗಾಗಲು ಕಾರಣವಾದ ಧುರಂಧರ್ ಯಾರು? 2017 ಜುಲೈ ಎಂಟು. ಭಾರತ ಮತ್ತು ಚೀನಾ ಸೇನೆಗಳು ಸಿಕ್ಕಿಂನ ಡೋಕ್ಲಾಂ ಪ್ರದೇಶದಲ್ಲಿ ಮುಖಾಮುಖಿ ಯಾದವು.
ಸುಮಾರು ಮೂರು ದಿನಗಳ ಕಾಲ ನಡೆದ ಈ ಚಕಮಕಿಯ ಸಮಯದಲ್ಲಿ ರಾಹುಲ್ ಗಾಂಧಿ ದೇಶದ ಪರ ನಿಲ್ಲುವ ಬದಲು ಸರಕಾರದ ವಿರುದ್ಧ ಸತತ ವಾಗ್ದಾಳಿ ಮಾಡುತ್ತಿದ್ದರು. ಈ ಚಕಮಕಿಯ ಬಗ್ಗೆ ಪಾರದರ್ಶಕತೆ ಬೇಕು, ಚೀನಾ ಜತೆ ಸಂಬಂಧ ಕೆಡಿಸ್ಕೊಳ್ಳಬಾರದು ಅಂತೆಲ್ಲ ರಾಹುಲ್ ತಮ್ಮ ವಾಗ್ದಾಳಿಯಲ್ಲಿ ಬಡಬಡಿಸಿದ್ದಲ್ಲದೇ, ಜನರಿಗೆ ಸ್ಪಷ್ಟ ಚಿತ್ರಣ ಕೊಡಿ ಅಂತೆಲ್ಲ ಆಗ್ರಹ ಮಾಡಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ರಾಹುಲ್, ಆ ಸಮಯದಲ್ಲಿ ಚೀನಾ ರಾಯಭಾರಿ ಯನ್ನು ರಹಸ್ಯವಾಗಿ ಭೇಟಿಯಾಗಿದ್ದರು. ಇದನ್ನು ಶತಾಯಗತಾಯ ಅಲ್ಲಗಳೆದಿದ್ದ ವರು, ನಂತರ ಅನ್ಯಮಾರ್ಗವಿಲ್ಲದೇ ಭೇಟಿ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರು.
ಮೇ 2018. ತಮಿಳುನಾಡಿನ ಸ್ಟೆರ್ಲೈಟ್ ಕಾರ್ಖಾನೆ ತನ್ನ ಸಾಮರ್ಥ್ಯವನ್ನು ವರ್ಷಕ್ಕೆ 400000 ಟನ್‌ನಿಂದ 800000 ಟನ್‌ಗೆ ಹೆಚ್ಚಿಸಲು ನಿರ್ಧರಿಸಿತು. ಆದರೆ ಇದಕ್ಕೆ ಭಾರೀ ವಿರೋಧ ಶುರು ವಾಯಿತು. ಹದಿಮೂರು ಪ್ರತಿಭಟನಾಕಾರರ ಸಾವೂ ಆಯ್ತು. ಇದರ ಹಿಂದೆ ನಿಂತು ಬೆಂಬಲ ಕೊಡುತ್ತಿದ್ದ ರಾಹುಲ್ ನಂತರ ಮುಂದೆ ನಿಂತು ಪ್ರತಿಭಟಿಸಿದರು.
ದೇಶದ ಅತ್ಯುತ್ತಮ ತಾಮ್ರದ ಕಾರ್ಖಾನೆ ಮುಚ್ಚಿಯೇ ಹೋಯ್ತು. ಅತಿ ದೊಡ್ಡ ರಫ್ತುದಾರನಾಗಿದ್ದ ಭಾರತ, ತಾಮ್ರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ತಲುಪಿತು. ಅಂದಹಾಗೆ, ನಾವು ನಂತರ ತಾಮ್ರಕ್ಕೆ ಅವಲಂಬಿಸಿದ್ದು ಚೀನಾವನ್ನು. ಇವತ್ತಿಗೆ ತಾಮ್ರ ಶುದ್ಧೀಕರಣದಲ್ಲಿ ಚೀನಾ ನಂಬರ್ ಒನ್. ಚೀನಾಗೆ ನಮ್ಮ ತಾಮ್ರ ಪ್ರಾಬಲ್ಯವನ್ನು ಉಡುಗೊರೆ ಕೊಡಿಸಿದ್ದು ರಾಹುಲ್ ಗಾಂಧಿ.
ಇನ್ನು ರಫೆಲ್ ಯುದ್ಧ ವಿಮಾನ ಖರೀದಿಗೆ 2016ರಿಂದ ಯಾವ ಪರಿ ಸರಕಾರದ ವಿರುದ್ಧ ರಾಹುಲ್ ಮುಗಿಬಿದ್ದರು ಎಂಬುದು ಇಡೀ ದೇಶ ಕಂಡಿದೆ. ಚೀನಾ ಆಕ್ರಮಣಕ್ಕೆ ಉತ್ತರ ಕೊಡಲು ಅಥವಾ ಭವಿಷ್ಯದ ಯಾವುದೇ ನೆರೆ ದೇಶಗಳ ದಾಳಿಗೆ ಉತ್ತರಿಸಲು ರಫೆಲ್‌ನ ಅಗತ್ಯ ಭಾರತಕ್ಕಿತ್ತು. ಇಲ್ಲದ ಕಥೆ ಕಟ್ಟಿ ಅದನ್ನು ತಡೆಯಲು ಹೋಗಿ, ಮೋದಿ ಸರಕಾರದ ಇಮೇಜಿಗೆ ಮಸಿಬಳಿಯಲು ಪ್ರಯತ್ನಿಸಿ ರಾಹುಲ್ ಸೋತರು.
ಒಂದು ವೇಳೆ ರಾಹುಲ್ ಗಾಂಧಿಗೆ ಮಣಿದಿದ್ದರೆ, ಅದು ಚೀನಾಗೆ ಸಿಗಬಹುದಾಗಿದ್ದ ಇನ್ನೊಂದು ಗೆಲುವಾಗುತ್ತಿತ್ತು. ಕೋವಿಡ್ ಸಮಯದಲ್ಲೂ ರಾಹುಲ್ ತಮ್ಮ ಚೀನಾಪ್ರೇಮ ಬಿಡಲಿಲ್ಲ. ಚೀನಾ ದಿಂದ ಹರಡಿದ್ದ ಕೋವಿಡ್‌ಗೆ ಚೀನಾ ತಾನು ಕೊಡುವ ವ್ಯಾಕ್ಸಿನ್ನನ್ನೇ ಇಡೀ ಜಗತ್ತುಕೊಳ್ಳಬೇಕು ಎಂದು ಬಯಸಿತ್ತು. ರಾಹುಲ್ ಬಯಕೆಯೂ ಅದೇ ಆಗಿತ್ತು. ಆದರೆ ಭಾರತ ಸ್ವಾವಲಂಬಿಯಾಗಿ ಕೋವಿಡ್ ವ್ಯಾಕ್ಸಿನ್ ರೆಡಿ ಮಾಡಿತು.
ಉತ್ತಮ ಗುಣಮಟ್ಟದ ವ್ಯಾಕ್ಸಿನನ್ನು ಪರದೇಶಗಳಿಗೆ ಕೊಡಮಾಡಿತು. ಇದನ್ನು ಕಟುವಾಗಿ ವಿರೋಧಿಸಿ, ಇದಕ್ಕೂ ಭ್ರಷ್ಟಾಚಾರ ಮತ್ತು ವೈಫಲ್ಯದ ಬಣ್ಣ ಹಚ್ಚಲು ನೋಡಿದ್ದು ಒನ್ಸ್ ಅಗೇನ್ ರಾಹುಲ್ ಗಾಂಧಿ. ಚೀನಾಗೆ ನಷ್ಟವಾದರೆ ರಾಹುಲ್ ಗಾಂಧಿಗೇಕೆ ಅಷ್ಟೊಂದು ದುಃಖ? ಇನ್ನು ಸೇನೆಯ ವಿಚಾರದಲ್ಲೂ ಕೀಳು ರಾಜಕೀಯ ಬಿಡಲಿಲ್ಲ.
ಚೀನಾ ಸಿಂಪಥೈಸಿಂಗ್ ಬಿಡಲಿಲ್ಲ. 2022ರಲ್ಲಿ ಅಗ್ನಿಪಥ್ ಮೂಲಕ ಅಗ್ನಿವೀರರ ನೇಮಕಾತಿ ಶುರು ಮಾಡಿದಾಗ, ಅದನ್ನು ವಿರೋಧಿಸಿ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದು ರಾಹುಲ್ ಗಾಂಧಿ. ಚೀನಾ ತನ್ನ ಸೇನೆಯನ್ನು ಆಧುನಿಕ ಶಸ್ತ್ರಾಸ್ತ್ರಗಳಿಂದ ತಂತ್ರಜ್ಞಾನದಿಂದ ಬಲಗೊಳಿಸುತ್ತಿತ್ತು.
ನಾವು ಅದರ ಎದುರು ನಿಲ್ಲಲು ಅವರಷ್ಟೇ ಸನ್ನದ್ಧರಾಗಬೇಕಿತ್ತು. ಆದರೆ ಡಿಫೆನ್ಸ್ ಬಜೆಟ್ ಮುಕ್ಕಾಲು ಪಾಲು ಸಂಬಳ ಪಿಂಚಣಿ ಅಂತಲೇ ಹೋಗುತ್ತಿತ್ತು. ಹೀಗಾಗಿ ಅಗ್ನಿವೀರರ ನೇಮಕಾತಿ ಪ್ರಾರಂಭವಾಗಿತ್ತು. ಇದರಲ್ಲಿ ಅಗ್ನಿವೀರರಿಗೂ ಲಾಭವೇ ಇತ್ತು. ಅದನ್ನು ವಿರೋಧಿಸಿ, ರಾಹುಲ್ ಪರೋಕ್ಷ ಸಹಕಾರ ಕೊಟ್ಟಿದ್ದು ಚೀನಾಗೆ ಎಂದು ಬಿಡಿಸಿ ಹೇಳಬೇಕಿಲ್ಲ.
ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟಿನ ವಿರುದ್ಧ ನಿಂತಿದ್ದ ಪಿಎಂಎಎನ್‌ಇ ಜತೆ, ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೈಗೂಡಿಸಿದ್ದೂ ಇದೇ ರಾಹುಲ್ ಗಾಂಧಿ. ಚೀನಾದ ಇಂಡಸ್ಟ್ರಿಯಲ್ ಪವರ್‌ಗೆ ಉತ್ತರವಾಗಿ ನಿಂತದ್ದು ಅದಾನಿ ಗ್ರೂಪ್. ರಾಹುಲ್ ಗಾಂಧಿಗೆ ಅದಾನಿ ಮೇಲೆ ಯಾಕಷ್ಟು ದ್ವೇಷ? ಉತ್ತರ ಚೀನಾಗೆ ಗೊತ್ತಿರಬಹುದಲ್ಲವೇ? ಇಷ್ಟು ಸಾಲದೆಂಬಂತೆ, ಚೀನಾವನ್ನು ಹಲವು ಜಾಗತಿಕ ವೇದಿಕೆಗಳಲ್ಲಿ ರಾಹುಲ್ ಗಾಂಧಿ ಹಾಡಿ ಹೊಗಳುತ್ತಲೇ ಬಂದರು.
ಹೂಡಿಕೆದಾರರಿಗೆ ಭಾರತಕ್ಕಿಂತ ಚೀನಾ ಬೆಸ್ಟ್ ಎಂಬ ಸಂದೇಶವನ್ನೂ ಗುಪ್ತವಾಗಿ ನೀಡುತ್ತಲೇ ಬಂದರು. ಈಗ ಲೇಟೆ ಅಂದರೆ ಗ್ರೇಟ್ ನಿಕೋಬಾರ್ ಪ್ರಾಜೆಕ್ಟ್. ದೇಶದ ಆರ್ಥಿಕತೆಗೆ, ಅದಕ್ಕಿಂತ ಹೆಚ್ಚಾಗಿ ದೇಶದ ರಕ್ಷಣೆಯ ದೃಷ್ಟಿಯಿಂದ ರೂಪುಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆ ಇದು.
ಅಂತಾರಾಷ್ಟ್ರೀಯ ಹಬ್ ಆಗುವ ಸಾಮರ್ಥ್ಯ ಹೊಂದಿರುವ ಈ ಜಾಗ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಚೀನಾ ವಿರುದ್ಧ ದೇಶವನ್ನು ರಕ್ಷಿಸಿಕೊಳ್ಳಲು ಬೇಕಾಗಿರುವ ಅಗತ್ಯದ ನಡೆಯಾಗಿದೆ. ಚೀನಾಗೆ ಈ ಯೋಜನೆ ಕೈಗೂಡುವುದು ಯಾವ ಕಾರಣಕ್ಕೂ ಇಷ್ಟವಿಲ್ಲ.
ಇಂಥ ಸಮಯದಲ್ಲಿ ಚೀನಾದ ಮನದಾಳದ ಮಾತಿಗೆ ಸ್ಪಂದಿಸಿ ಹೋರಾಟಕ್ಕಿಳಿದಿರುವುದು ರಾಹುಲ್ ಗಾಂಧಿ. ಆದಿವಾಸಿಗಳ ಬಗ್ಗೆ ಕಾಳಜಿ ತೋರುವ ನೆಪದಲ್ಲಿ, ಪ್ರಾಣಿ ಮತ್ತು ಪರಿಸರದ ಪ್ರೇಮ ಮೆರೆಯುತ್ತಿರುವ ರಾಹುಲ್ ಗಾಂಧಿ ಗ್ರೇಟ್ ನಿಕೋಬಾರ್ ಯೋಜನೆ ಕೈಬಿಡಬೇಕೆಂದು ಹೊಸ ಹಾರಾಟ ಶುರುಮಾಡಿದ್ದಾರೆ.
ತಮ್ಮ ಇಂಥ ಪ್ರತಿ ಹೋರಾಟದ ಹಿಂದೆಯೂ ತಣ್ಣಗೆ ಹರಿಯುವ ಚೀನಾ ಪ್ರೇಮ ಇರುವುದು ದೇಶವಾಸಿಗಳಿಗೆ ತಿಳಿಯುವುದಿಲ್ಲವೇ? ಅಥವಾ ಚೀನಾದಿಂದ ಬಂದಿರುವ ಸೂಚನೆ ಮೇರೆಗೆ ಹೋರಾಟ ರೂಪುಗೊಳ್ಳುತ್ತಿದೆ ಎಂದು ಜಿಯೋಪೊಲಿಟಿಕ್ಸ್ ಗಮನಿಸುವವರಿಗೆ ಅರ್ಥವಾಗುವು ದಿಲ್ಲವೇ? ಇಂಥ ನಡೆಗಳು ಹಿಂದಿನ ಕಾಲದಲ್ಲಿ ಬಹುಶಃ ತಿಳಿಯುತ್ತಿರಲಿಲ್ಲ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿಯ ಪ್ರತಿ ನಡೆಯೂ ಬಹಳ ನೀಟಾಗಿ ಎಕ್ಸ್ʼಪೋಸ್ ಆಗುತ್ತಿವೆ.
ಹೀಗಾಗಿ ಅವರ ಯಾವ ಹೋರಾಟಕ್ಕೂ ಜಯ ಸಿಗುತ್ತಿಲ್ಲ. ಚೀನಾ ಪರ ಧುರಂಧರ್ ಆಗಲು ಪ್ರಯತ್ನಿಸಿ ಕೊನೆಗೆ ಬಿಜೆಪಿ ಪರವಿರುವ ಧುರಂಧರ್ ಆಗಿ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ. ರಾಹುಲ್‌ರ ಈ ಮನಸ್ಥಿತಿ ಮತ್ತು ದೇಶವಿರೋಧಿ ಆಲೋಚನೆ ಶುಭಸೂಚಕವಂತೂ ಅಲ್ಲ.
ರಾಹುಲ್ ಚುನಾವಣಾ ಸೋಲು ಗೆಲುವುಗಳ ಆಚೆಗೆ, ದೇಶದ ಅಭಿವೃದ್ಧಿ ಪರ, ರಕ್ಷಣೆ ಪರ ನಿಲುವು ತೋರಿಸಿದರೆ, ಕಳೆದುಹೋಗುತ್ತಿರುವ ಇಮೇಜು ಕೊಂಚವಾದರೂ ಉಳಿಯಬಹುದು.