Chikkaballapur News: ಸುಭದ್ರ ದೇಶ ನಿರ್ಮಾಣದಲ್ಲಿ ತೆರಿಗೆ ಪ್ರಮುಖ ಪಾತ್ರ ವಹಿಸಲಿದೆ : ಆರ್.ರಾಮನಾಥನ್
ಉತ್ತಮ ತೆರಿಗೆ ವ್ಯವಸ್ಥೆಯು ದೇಶದ ಭದ್ರ ಬನಾದಿಯನ್ನು ಬಲಿಷ್ಠಗೊಳಿಸುತ್ತದೆ. ಜನರು ಪ್ರಾಮಾಣಿ ಕವಾಗಿ ಸಕಾಲಕ್ಕೆ ನಿಯಮಾನುಸಾರ ತೆರಿಗೆಯನ್ನು ಪಾವತಿಸಬೇಕು. ಇದಕ್ಕೆ ಸಹಕಾರಿಯಾಗುವ ನಿಟ್ಟಿ ನಲ್ಲಿ ಇಲಾಖೆಯು ವಿವಿಧ ಹಂತ ಹಂತಗಳಲ್ಲಿ ಸಕಾರಾತ್ಮಕ ಬದಲಾವಣೆಯ ನೀತಿಗಳನ್ನು ಜಾರಿ ಗೊಳಿಸುತ್ತಿದೆ. ಇದಕ್ಕೆ ನೂತನ ಆದಾಯ ತೆರಿಗೆ ಕಾಯ್ದೆ 2025ರ ಸರಳೀಕರಣವು ನಿದರ್ಶನವಾಗಿದೆ
ಸುಭದ್ರ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ತೆರಿಗೆ ವ್ಯವಸ್ಥೆಯನ್ನು ಮಹತ್ತರವಾದ ಬದಲಾವಣೆಗಳ ಮೂಲಕ ಜನಸ್ನೇಹಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ವಲಯ-2 ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಆರ್.ರಾಮನಾಥನ್ ತಿಳಿಸಿದರು. -
ಚಿಕ್ಕಬಳ್ಳಾಪುರ: ಸುಭದ್ರ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ತೆರಿಗೆ ವ್ಯವಸ್ಥೆಯನ್ನು ಮಹತ್ತರವಾದ ಬದಲಾವಣೆಗಳ ಮೂಲಕ ಜನಸ್ನೇಹಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ವಲಯ-2 ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಆರ್.ರಾಮನಾಥನ್ ತಿಳಿಸಿದರು.
ನಗರ ಹೊರವಲಯ ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆಯು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸಹಯೋಗದೊಂದಿಗೆ ಬುಧವಾರ ಕೈಗೊಂಡಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025ರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ತೆರಿಗೆ ವ್ಯವಸ್ಥೆಯು ದೇಶದ ಭದ್ರ ಬನಾದಿಯನ್ನು ಬಲಿಷ್ಠಗೊಳಿಸುತ್ತದೆ. ಜನರು ಪ್ರಾಮಾಣಿ ಕವಾಗಿ ಸಕಾಲಕ್ಕೆ ನಿಯಮಾನುಸಾರ ತೆರಿಗೆಯನ್ನು ಪಾವತಿಸಬೇಕು. ಇದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಲಾಖೆಯು ವಿವಿಧ ಹಂತ ಹಂತಗಳಲ್ಲಿ ಸಕಾರಾತ್ಮಕ ಬದಲಾವಣೆಯ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ನೂತನ ಆದಾಯ ತೆರಿಗೆ ಕಾಯ್ದೆ 2025ರ ಸರಳೀಕರಣವು ನಿದರ್ಶನ ವಾಗಿದೆ ಎಂದರು.
ಬಹುತೇಕ ಸಂದರ್ಭದಲ್ಲಿ ತೆರಿಗೆ ಪಾವತಿದಾರರು ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ, ತೆರಿಗೆ ಪಾವತಿ ವಿಳಂಬ, ಅನವಶ್ಯಕ ಶಿಸ್ತುಕ್ರಮ ಸೇರಿದಂತೆ ನಾನಾ ಅನಪೇಕ್ಷಿತ ಸಮಸ್ಯೆಗಳಿಗೆ ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ನುರಿತ ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರ ಮೂಲಕ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಇಡೀ ದೇಶದ ಸಮರ್ಥ ಆರ್ಥಿಕ ವ್ಯವಸ್ಥೆಯೇ ತೆರಿಗೆ ಸಂಗ್ರಹ ಹಾಗೂ ಸದ್ವಿನಿಯೋಗದ ಮೇಲೆ ನಿಂತಿದೆ. ಒಂದು ವರದಿಯ ಪ್ರಕಾರ ನೇರ ತೆರಿಗೆ ಹಾಗೂ ಕಾರ್ಪೋರೇಟ್ ಮೂಲಗಳಿಂದ 25 ಲಕ್ಷ ಕೋಟಿ ರೂ, ಹಾಗೆಯೇ ಜಿಎಸ್ ಟಿ, ಅಬಕಾರಿ ಸೇರಿದಂತೆ ವಿವಿಧ ಮೂಲಗಳೀಂದ 16 ಲಕ್ಷ ಕೋಟಿ ರೂ ಸೇರಿದಂತೆ ವಾರ್ಷಿಕ ಬರೋಬ್ಬರಿ 41 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗುತ್ತದೆ. ಇದರಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಗುರಿ ಸಾಧನೆ ಹೆಚ್ಚಾ ಗಲು ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು. ಸಕಾಲಕ್ಕೆ ನಿಯಮಾನುಸಾರ ತೆರಿಗೆ ಪಾವತಿಸಬೇಕು ಎಂದು ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿ ಕೊಂಡು ಬರುತ್ತಿರುವ ಉದ್ದಿಮೆದಾರರನ್ನು ಸನ್ಮಾನಿಸಲಾಯಿತು. ಲೆಕ್ಕ ಪರಿಶೋಧಕ ನವೀನ್ ಕಾರಿವಲ್ ನೂತನ ಆದಾಯ ಕಾಯ್ದೆಯ ಸರಳೀಕರಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎನ್.ದೇವರಾಜ್, ಚಿಕ್ಕಬಳ್ಳಾಪುರ ಆದಾಯ ತೆರಿಗೆ ಅಧಿಕಾರಿ ಒ.ಷಾಜಹಾನ್ ಪಾಷಾ, ನಿರೀಕ್ಷಕ ಪ್ರಸಾದ್ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್, ಪ್ರಧಾನ ಕಾರ್ಯದರ್ಶಿ ಮುನಿರಾಮ್, ಖಜಾಂಚಿ ಎಂ.ಬಿ.ರಂಜಿತ್ ಕುಮಾರ್ ಮತ್ತಿತರರು ಇದ್ದರು.