Rangaswamy Mookanahalli Column: ಕೋಟಿಗೊಬ್ಬರಾಗುವ ಆಯ್ಕೆ ನಮ್ಮ ಕೈಲಿದೆ !
ನಮ್ಮಲಿರುವ ಚೇತನ ಒಂದೇ ಆಗಿದ್ದು ಕೂಡ ನಾವ್ಯಾಕೆ ಒಂದೇ ಸಮವಾಗಿಲ್ಲ? ನಮ್ಮಲಿರುವ ಆ ಚೇತನ ವನ್ನು ನಾವೇಗೆ ದುಡಿಸಿಕೊಳ್ಳುವ ಕ್ಷಮತೆ ಹೊಂದಿದ್ದೇವೆ ಎನ್ನುವುದರ ಆಧಾರದ ಮೇಲೆ ನಾವ್ಯಾರು ಎನ್ನುವುದು ಕೂಡ ನಿರ್ಧಾರಾವಾಗುತ್ತದೆ ಎನ್ನುವ ಸರಳ ಸತ್ಯದ ಸಾಕ್ಷಾತ್ಕಾರ ನಮಗಾಗಿ ಬಿಟ್ಟರೆ ಸಾಕು. ಹಿಂತಿರುಗಿ ನೋಡುವ ಪ್ರಮೇಯ ಬರುವುದಿಲ್ಲ.
-
ವಿಶ್ವರಂಗ
ಒಂದೂರಿನಲ್ಲಿ ಒಬ್ಬ ರಾಜನಿದ್ದನಂತೆ, ಆತ ದಯಾಳು. ಹೀಗಾಗಿ ಪರವೂರಿನಿಂದ ಬರುವವರಿಗೆ ಒಂದು ಅನ್ನ ಛತ್ರ ಕಟ್ಟಿಸಿರುತ್ತಾನೆ. ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುತ್ತದೆ. ಎಲ್ಲಿಯ ವರೆಗೆ ಚೆನ್ನಾಗಿ ನಡೆಯುತ್ತಿರುತ್ತದೆ ಅಲ್ಲಿಯವರೆಗೆ ಸರಿ. ಮೊದಲೆರಡು ದಿನ ಜನ ರಾಜ ನನ್ನು ಹೊಗಳಿದ್ದೇ ಹೊಗಳಿದ್ದು. ಆಮೇಲೆ ಅದು ನಾರ್ಮಲ್ ಆಗಿ ಹೋಗುತ್ತದೆ.
ಇದು ನಮ್ಮ ಹಕ್ಕು ಎನ್ನುವಂತೆ ಜನ ವರ್ತಿಸಲು ಶುರು ಮಾಡುತ್ತಾರೆ. ಹೀಗಿರುವಾಗ ಒಂದು ದಿನ ಹzಂದು ಹಸಿವಿನಿಂದ ಬಳಲುತ್ತಾ ಕಣ್ಣಿಗೆ ಕಂಡ ಹಾವನ್ನು ಹಿಡಿದು ಹಾರುತ್ತ ಹೋಗುವಾಗ ಹಾವಿನ ಬಾಯಿಂದ ಒಂದೆರಡು ಹನಿ ವಿಷ ಅಡುಗೆಗೆ ಬೀಳುತ್ತದೆ. ವಿಷಾಹಾರ ಸೇವಿಸಿ ಒಂದಿಬ್ಬರು ಮೃತರಾಗುತ್ತಾರೆ.
ಒಂದಿಬ್ಬರು ಅಸ್ವಸ್ಥರಾಗುತ್ತಾರೆ. ಈ ಸಾವು ನೋವಿನ ಲೆಕ್ಕವನ್ನು ಯಾರ ಖಾತೆಗೆ ಹಾಕುವುದು ಎಂದು ಚಿತ್ರಗುಪ್ತ ಯಮಧರ್ಮನನ್ನು ಕೇಳಲು, ಯಮರಾಜ ಗೊಂದಲಕ್ಕೆ ಒಳಗಾಗಿ, ರಾಜನನ್ನೇ ಕೇಳೋಣ ಎನ್ನುತ್ತಾನೆ. ಚಿತ್ರಗುಪ್ತ ಮಾರುವೇಷದಲ್ಲಿ ಬಂದು ರಾಜನನ್ನು ಈ ಕುರಿತು ಕೇಳಲು, ಒಂದು ದಿನ ಬಿಟ್ಟು ಬರಲು ರಾಜ ಹೇಳುತ್ತಾನೆ.
ರಾಜ ಮಾರುವೇಷದಲ್ಲಿ ಛತ್ರದ ಬಳಿ ಏನಾಯ್ತು ಎಂದು ವಿಚಾರಿಸಲು ಹೋಗುತ್ತಾನೆ. ಹೋಗು ವಾಗ ಈ ಸಾವಿನ ಘಟನೆ ನಡೆದು ಆರು ತಿಂಗಳ ಮೇಲಾಯ್ತು. ಇವತ್ತಿಗೆ ಮತ್ತೆಲ್ಲವೂ ಸರಿಯಾಗೆ ನಡೆಯುತ್ತಿದೆ. ಆದರೂ ಈ ಪ್ರಶ್ನೆ ಮತ್ತೇಕೆ ಉದ್ಭವವಾಯ್ತು ಎಂದು ಯೋಚಿಸುತ್ತ ಛತ್ರವಿದ್ದ ಜಾಗವನ್ನು ತಲುಪುತ್ತಾನೆ.
ಇದನ್ನೂ ಓದಿ: Rangaswamy Mookanahalli Column: ಸಂವಹನದ ರೀತಿ ಬದಲಿಸಿದ ಸೋಶಿಯಲ್ ಮೀಡಿಯಾಗಳು !
ಅಲ್ಲಿ ಅರಳಿಕಟ್ಟೆಯಲ್ಲಿ ಹರಟೆ ಹೊಡೆಯುತ್ತಾ ಕುಳಿತ ಐದಾರು ಜನರಬ್ಬ ರಾಜನನ್ನು ನೋಡಿ ‘ಏಯ್ ದಾರಿಹೋಕ ಹುಷಾರು, ಛತ್ರದಲ್ಲಿ ಊಟ ಮಾಡಬೇಡ. ಅಲ್ಲಿ ಊಟ ಮಾಡಿದವರೆಲ್ಲ ಸಾಯುತ್ತಾರೆ. ಇದು ರಾಜನದೇ ಏನೋ ಕಿತಾಪತಿ ಇರಬೇಕು’ ಎನ್ನುತ್ತಾನೆ.
ಇನ್ನೊಬ್ಬನಂತೂ ರಾಜನನ್ನು ಜಾತಿವಾದಿ, ತನ್ನ ಜಾತಿಯವರಲ್ಲದೆ ಇತರ ಜಾತಿಯವರನ್ನು ಕೊಲ್ಲಲು ಮಾಡಿರುವ ಹುನ್ನಾರವಿದು ಎನ್ನುವ ಮಾತನ್ನು ಆಡುತ್ತಾನೆ. ಮಾರುವೇಷದಲ್ಲಿದ್ದ ರಾಜ ನಕ್ಕು ಘಟನೆ ಹೇಗಾಗಿರಬಹುದು ಎನ್ನುವುದರ ನೈಜ ಚಿತ್ರಣ ಪಡೆದು ಮರಳುತ್ತಾನೆ. ಮರುದಿನ ಮಾರುವೇಷದಲ್ಲಿ ಚಿತ್ರಗುಪ್ತ ಬಂದಾಗ ರಾಜ ಅವನನ್ನು ಕುರಿತು ಅರಳಿಕಟ್ಟೆಯ ಮೇಲೆ ಕುಳಿತು ಊಹಾಪೋಹದ ಮಾತುಗಳನ್ನು ಆಡುತ್ತಿರುವ ಐವರ ಹೆಸರು ಹೇಳಿ ಈ ಸಾವು ನೋವಿನ ಲೆಕ್ಕವನ್ನು ಅವರ ಖಾತೆಗೆ ಹಾಕು ಎನ್ನುತ್ತಾನೆ.
ಚಿತ್ರಗುಪ್ತನಿಗೆ ಆಶ್ಚರ್ಯವಾಗಿ, ನೀವು ಹೇಳಿದಂತೆ ಮಾಡುವೆ, ಆದರೆ ಒಂದು ಪ್ರಶ್ನೆ. ಅವರ ತಪ್ಪಾದರೂ ಏನು? ಎನ್ನುತ್ತಾನೆ. ಆಗ ರಾಜ ನೋಡು ನಾನು ಬೇರೆ ಊರಿನಿಂದ ಬರುವ ಯಾತ್ರಿಕ ರಿಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ಛತ್ರ ಕಟ್ಟಿಸಿದೆ, ಹೀಗಾಗಿ ನನ್ನ ತಪ್ಪಿಲ್ಲ. ಪಾಪದ ಹದ್ದು ಹೊಟ್ಟೆ ಹಸಿವಿನ ಕಾರಣ ಹಾವನ್ನು ಹಿಡಿದಿದೆ, ಹೀಗಾಗಿ ಅದರ ತಪ್ಪು ಕೂಡ ಇಲ್ಲ. ಇನ್ನು ಹಾವು ಅದಕ್ಕೆ ಜೀವ ಭಯದ ಕಾರಣದಿಂದ ಅದರ ಬಾಯಿಯಿಂದ ವಿಷ ತೊಟ್ಟಿಕ್ಕಿದೆ.
ಹೀಗಾಗಿ ಅದರ ತಪ್ಪು ಕೂಡ ಇಲ್ಲ. ಹೀಗಾಗಿ ನಿಜಕ್ಕೂ ಸಾವು ನೋವಿನ ಲೆಕ್ಕಾಚಾರ ಯಾರ ಖಾತೆಗೆ ಹಾಕುವುದು ಎನ್ನುವುದು ಬಹಳ ಕಷ್ಟದ ವಿಚಾರ. ಆದರೆ ಆ ಅರಳೀಕಟ್ಟೆಯಲ್ಲಿ ಕುಳಿತು ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ನಿಂದಿಸುತ್ತಿರುವ ಆ ಐವರ ಹೆಸರನ್ನು ತಪ್ಪಿನ ಲೆಕ್ಕಕ್ಕೆ ಬರೆದು ಕೊಳ್ಳುವುದು ತಪ್ಪಲ್ಲ ಎನ್ನುತ್ತಾನೆ.
ಈ ಉತ್ತರದಿಂದ ಸಂಪ್ರೀತನಾದ ಚಿತ್ರಗುಪ್ತ ಯಮಲೋಕಕ್ಕೆ ಮರಳುತ್ತಾನೆ. ಇದು ಕಥೆ ಎನ್ನಿಸುತ್ತದೆ ಅಲ್ಲವೇ? ಹೌದು ಇದು ಕಥೆ. ಆದರೆ ಈ ಕಥೆಯಲ್ಲಿ ಬರುವ ಅರಳೀಕಟ್ಟೆಯಲ್ಲಿ ಕುಳಿತ ಐವರಂತೆ ನಮ್ಮ ಸಮಾಜದಲ್ಲಿ ಕೋಟಿ ಕೋಟಿ ಜನರಿದ್ದಾರೆ ಎಂದು ಹೇಳಲು ಈ ಕಥೆ ಹೇಳಬೇಕಾಯ್ತು.
ಸಾಮಾಜಿಕ ಜಾಲತಾಣ ಎನ್ನುವುದು ಹೊಸ ಅರಳೀಕಟ್ಟೆ. ಹಿಂದೆ ಮುಂದೆ ಗೊತ್ತಿಲ್ಲದೇ ಎಲ್ಲದಕ್ಕೂ ಅಭಿಪ್ರಾಯ ಮಂಡಿಸುವವರು ಆ ಅರಳೀಕಟ್ಟೆಯಲ್ಲಿ ಕುಳಿತವರಂತೆ! ಮಧ್ಯರಾತ್ರಿಯಲ್ಲಿ ಸ್ವಲ್ಪ ಸದ್ದಾದರೂ ಸಾಕು ಶ್ವಾನಗಳು ಬೊಗಳಲು ಶುರು ಮಾಡುತ್ತವೆ. ಒಂದು ಬೊಗಳಿತು ಎಂದು ಇನ್ನೊಂದು, ಇನ್ನೊಂದು ಬೊಗಳಿತು ಎಂದು ಮತ್ತೊಂದು! ಏತಕ್ಕೆ ಬೊಗಳುತ್ತಿದ್ದೇವೆ ಎನ್ನುವ ಪರಿಜ್ಞಾನ ಯಾವ ಶ್ವಾನಕ್ಕೂ ಇರುವುದಿಲ್ಲ.
ನಾವು ಈ ರೀತಿ ವರ್ತಿಸುವುದು ಬೇಡ ಅಲ್ಲವೇ? ನಾವು ಕೋಟಿಯಲ್ಲಿ ಒಬ್ಬರಾಗುವುದಕ್ಕೂ, ಕೋಟಿ ಗೊಬ್ಬರಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಗೀತೆ, ಉಪನಿಷತ್ತು, ಹಠ ಯೋಗ ಇತ್ಯಾದಿ ಎಲ್ಲವೂ ಇದನ್ನೇ ಸಾರುತ್ತದೆ.
ಯೋಗ ವಸಿಷ್ಠದ ಒಂದು ಶ್ಲೋಕ:
‘ಯೈವ ಸಿದ್ ಭುವನಾ ಭೋಗಭೂಷನೇ ವ್ರೋಮ್ನಿ ಭಾಸ್ಕರೇ
ಧಾರಾವಿವರಕೋಶಸ್ಥೇ ಸೈವ ಚಿತ್ಕಿಟಕೋದರೇ!’
ಅರ್ಥ, ಸೃಷ್ಟಿಯಲ್ಲಿರುವ ಶಕ್ತಿ ಒಂದೇ ಎಂದು ಹೇಳುತ್ತದೆ. ಅಗಾಧವಾಗಿ ಬೆಳಕುತ್ತಿರುವ ಸೂರ್ಯ ನಲ್ಲಿ ಮತ್ತು ಅತ್ಯಂತ ಸಣ್ಣ ಕ್ರಿಮಿಯಲ್ಲಿರುವ ಶಕ್ತಿ ಒಂದೇ, ಎರಡರಲ್ಲೂ ಇರುವ ಆ ಶಕ್ತಿ ದೈವ ಸ್ವರೂಪಿಯಾಗಿದೆ. ಹೀಗಾಗಿ ಬುದ್ಧಿ, ಸಂಪತ್ತು, ಸಾಮಾಜಿಕ ಶ್ರೇಣಿಯಿಂದ ಬೇರ್ಪಡಿಸಿ ನೋಡುವುದು ಯುಕ್ತವಲ್ಲ ಎನ್ನುತ್ತದೆ.
ಅಷ್ಟಾವಕ್ರ ಗೀತೆಯಲ್ಲಿ ಒಂದು ಸಾಲು, ‘ಏಕೋ ಹುಂ ದೇಹವಾನಪಿ’ ಎಂದು ಹೇಳುತ್ತದೆ. ಅಂದರೆ ದೇಹದ ರಚನೆಯಿಂದ ನಾವು ಬೇರೆ ಬೇರೆ ಅಷ್ಟೇ. ನಾವು ಹೇಳುವ ಕರಿಯ, ಬಿಳಿಯ, ದಪ್ಪ, ಸಣ್ಣ ಎಲ್ಲವೂ ದೈಹಿಕ ರಚನೆಯಿಂದ ನಮ್ಮಲ್ಲಿರುವ ಭೇದವನ್ನು ತೋರಿಸುತ್ತದೆ. ಆದರೆ ಆತ್ಮದಲ್ಲಿರುವ ಶಕ್ತಿ, ಚೇತನ ಒಂದೇ ಎನ್ನುವುದು ಇದರರ್ಥ.
ಆತ್ಮದಲ್ಲಿನ ಚೇತನ ಒಂದೇ ಆಗಿದ್ದರೂ ಕೂಡ ಸಮಾಜದಲ್ಲಿ ಇಷ್ಟೊಂದು ವ್ಯತ್ಯಾಸಗಳು ಏತಕ್ಕಿವೆ? ಬಡವ -ಶ್ರೀಮಂತ, ಬುದ್ಧಿವಂತ -ದಡ್ಡ, ಪಾಪ-ಪುಣ್ಯ ಈ ರೀತಿ ವ್ಯತ್ಯಾಸಗಳ ಪಟ್ಟಿಯೇ ಅದೇಕೆ ಇಷ್ಟು ಲಂಬವಾಗಿದೆ.
ನಮ್ಮಲಿರುವ ಚೇತನ ಒಂದೇ ಆಗಿದ್ದು ಕೂಡ ನಾವ್ಯಾಕೆ ಒಂದೇ ಸಮವಾಗಿಲ್ಲ? ನಮ್ಮಲಿರುವ ಆ ಚೇತನವನ್ನು ನಾವೇಗೆ ದುಡಿಸಿಕೊಳ್ಳುವ ಕ್ಷಮತೆ ಹೊಂದಿದ್ದೇವೆ ಎನ್ನುವುದರ ಆಧಾರದ ಮೇಲೆ ನಾವ್ಯಾರು ಎನ್ನುವುದು ಕೂಡ ನಿರ್ಧಾರಾವಾಗುತ್ತದೆ ಎನ್ನುವ ಸರಳ ಸತ್ಯದ ಸಾಕ್ಷಾತ್ಕಾರ ನಮಗಾಗಿ ಬಿಟ್ಟರೆ ಸಾಕು. ಹಿಂತಿರುಗಿ ನೋಡುವ ಪ್ರಮೇಯ ಬರುವುದಿಲ್ಲ.
ಸೃಷ್ಟಿಯಲ್ಲಿನ ಸಣ್ಣ ಕ್ರಿಮಿಯಿಂದ ಪ್ರಜ್ವಲಿಸುವ ಸೂರ್ಯನವರೆಗೆ ಎಲ್ಲರಲ್ಲೂ ಇರುವುದು ಅದೇ ಚೇತನ. ಆದರೂ ಇಷ್ಟೊಂದು ಭೇದ ಉಂಟಾಗಿರುವುದು, ಬಡವ - ಶ್ರೀಮಂತ, ಸೋಲು -ಗೆಲುವು ಇವೆಲ್ಲವೂ ಸೃಷ್ಟಿಯಾಗಿರುವುದು ಕರ್ಮದ ಕಾರಣದಿಂದ, ನಮ್ಮಲ್ಲಿರುವ ಶಕ್ತಿಯನ್ನು ಹೇಗೆ ಬಳಸಿಕೊಂಡೆವು ಎನ್ನುವುದರ ಆಧಾರದ ಮೇಲೆ ಇವು ಸೃಷ್ಟಿಯಾಗಿವೆ.
ನೌಕರ, ಯಜಮಾನ, ಸಿರಿವಂತ, ಬಡವ, ಅಪ್ರಯೋಜಕ ಹೀಗೆ ಸಮಾಜದಲ್ಲಿ ಚಾಲ್ತಿಯಲ್ಲಿರುವ ಸಾವಿರಾರು ಪದಗಳು ನಮ್ಮನ್ನು ವಿಭಜಿಸುತ್ತವೆ. ಹೀಗೇಕೆ? ಅಷ್ಟಾವಕ್ರ ಗೀತೆಯ ಒಂದು ಶ್ಲೋಕ: ತನ್ತುಮಾತ್ರೋ ಭವೇದೇವ ಪಾತೋ ಯದ್ವದ್ವಿಚರಿತಃ ಆತ್ಮಾ ತನ್ಮಾತ್ರಂ ಏವೇದಂ ತದ್ವದ್ವಿಶ್ವಂ ವಿಚಾರಿತಮ್.
ಒಂದು ಬಟ್ಟೆಯನ್ನು ನೋಡಿ, ಅದರಲ್ಲಿರುವುದು ಎಲ್ಲ ನೂಲಿನ ಎಳೆಗಳೇ. ಆದರೆ, ಕೆಲವು ನೂಲುಗಳ ಮೇಲೆ ಚಿತ್ತಾರವಿದೆ, ಕೆಲವುಗಳು ಹಾಗೆ ಉಳಿದುಕೊಂಡಿವೆ. ಒಟ್ಟಾರೆ ಬಟ್ಟೆ ಉತ್ಪನ್ನ ವಾದದ್ದು ಈ ನೂಲುಗಳಿಂದ, ಆದರೆ ಕೆಲವು ನೂಲುಗಳು ಬಣ್ಣದ ಚಿತ್ತಾರ ರೂಪಿಸಿಕೊಂಡು ಅಂದವನ್ನು ಹೆಚ್ಚಿಸಿವೆ.
ಒಂದೇ ನೂಲು ವಿಭಿನ್ನವಾಗುವುದು ತನ್ನಲ್ಲಿರುವ ಅಂತಃಸತ್ವದಿಂದ! ಎನ್ನುವ ಅರ್ಥವನ್ನು ಈ ಶ್ಲೋಕ ನೀಡುತ್ತದೆ. ಮೇಲಿನ ಕಥೆಯ ವಿಚಾರಕ್ಕೆ ಮತ್ತೆ ಬರೋಣ. ಅರಳೀಕಟ್ಟೆಯ ಮೇಲೆ ಕುಳಿತವರು ಹೆಚ್ಚಿನದೇನೂ ಮಾಡದೆ ಅಪಪ್ರಚಾರ ಮಾಡದೆ ಸುಮ್ಮನೆ ಕುಳಿತಿದ್ದರೂ ಸಾಕಿತ್ತು.
ಸಾವು ನೋವಿನ ಲೆಕ್ಕಾಚಾರ ಅವರ ತಲೆಗೆ ಬರುತ್ತಿರಲಿಲ್ಲ. ನಾವ್ಯಾರು ಎನ್ನುವುದನ್ನು ಬರೆದು ಕೊಳ್ಳುವ ಅಮೋಘ ಅವಕಾಶವನ್ನು ಭಗವಂತ ನಮಗೆ ಬಿಟ್ಟಿದ್ದಾನೆ. ಆದರೆ ನಾವೆಂತಹ ಮತಿ ಹೀನರು ಎಂದರೆ ಹಣೆಬರಹ ಬರೆಯುವುದು ಬೇರೆ ಯಾರೋ ಎನ್ನುವ ಉಪೇಕ್ಷೆಯಲ್ಲಿ ಬದುಕು ತ್ತಿದ್ದೇವೆ.
ನಿಮಗೆ ಗೊತ್ತಿರಲಿ ಜಗತ್ತಿನಲ್ಲಿ ಕೇವಲ 3 ಪ್ರತಿಶತ ಜನರಿಗೆ ಮಾತ್ರ ಏನು ಬೇಕು ಎನ್ನುವುದರ ಬಗ್ಗೆ ನಿಖರತೆ ಇರುತ್ತದೆ. ಅಂದರೆ ಈ ಮೂರು ಪ್ರತಿಶತ ಜನ ಮಾತ್ರ ಬದುಕಿನಿಂದ ನನಗೇನು ಬೇಕು ಎನ್ನುವುದರ ಬಗ್ಗೆ ಚಿಂತಿಸಿರುತ್ತಾರೆ. ಉಳಿದ 97 ಪ್ರತಿಶತ ಜನರಿಗೆ ಏನು ಬೇಕು ಎನ್ನುವುದೇ ಗೊತ್ತಿರುವುದಿಲ್ಲ.
ಮುಕ್ಕಾಲು ಪಾಲು ಜನ ಈ ಜಗತ್ತಿನಲ್ಲಿ ಸೋಮಾರಿಗಳು. ಅವರಿಗೆ ಮೈ ಬಗ್ಗಿಸಿ ಕೆಲಸ ಮಾಡುವುದು ಬೇಕಿರುವುದಿಲ್ಲ. ಅವರು ಅಧ್ಯಾತ್ಮದ ಹೆಸರಿನಲ್ಲಿ ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ. ನೀವು ಯಾರಿಗೂ ಉತ್ತರಿಸಬೇಕಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಮೋಸ ಮಾಡಿ ಕೊಳ್ಳದೆ ಉತ್ತರಿಸಿಕೊಳ್ಳಿ.
ಮೇಲಿನ ಸಾಲುಗಳಲ್ಲಿ ನೀವಿಲ್ಲ ಎಂದು ನಿಮ್ಮ ಮನಸ್ಸು ಹೇಳಿದರೆ ಅಷ್ಟು ಸಾಕು. ಜಗತ್ತಿನ ಅನು ಮೋದನೆಗೆ ಕಾಯುವ ಅವಶ್ಯಕತೆಯಿಲ್ಲ. ಮೇಲಿನ ಸಾಲುಗಳಲ್ಲಿ ಹೇಳಿದಂತೆ ಊಹೆ ಮಾಡಿ ಕೊಂಡಾಗ ಎಲ್ಲವೂ ಇದ್ದೂ ಕೂಡ ಬಹು ಜನರು ಏನೂ ಏಕೆ ಮಾಡುವುದಿಲ್ಲ ಎನ್ನವುದಕ್ಕೆ ಉತ್ತರ ಸಿಕ್ಕಿತು ಅಲ್ಲವೇ? ಮೂಲವಾಗಿ ಬೇಕಾಗಿರುವುದು ಆತ್ಮಬಲ ಎನ್ನುವ ಇಂಧನ.
ನಮಗೆ ಬೇಕಾದ, ನಾವು ಬಯಸಿದ ಎಲ್ಲವೂ ನಮ್ಮ ಕೈಯಳತೆಯ ದೂರದಲ್ಲಿ ಇರುತ್ತದೆ. ಅದು ನಮ್ಮದಾಗುತ್ತದೆ ಎನ್ನುವ ಅರಿವು ಕೆಲವೇ ಕೆಲವು ಜನರಿಗೆ ಮಾತ್ರ ಇರುತ್ತದೆ. ಅಷ್ಟೇ ಅಲ್ಲ ಅವರಿಗೆ ಬಯಸಿzಲ್ಲ ಸಿಗುತ್ತದೆ ಎನ್ನುವ ನಂಬಿಕೆ ಕೂಡ ಪ್ರಬಲವಾಗಿರುತ್ತದೆ. ಇತರರಿಗೆ ಇದು ಜಾಳಾಗಿರು ತ್ತದೆ.
ನಾವ್ಯಾರಾಗಬೇಕು ಎನ್ನುವ ನಿರ್ಧಾರ, ಈ ಗುಣವನ್ನು ನಮ್ಮದಾಗಿಸಿಕೊಳ್ಳುವ ಆತುರ ಕೂಡ ನಮ್ಮದಾಗಿರಬೇಕು. ಬಯಸಿದ್ದೆಲ್ಲ ಸಿಗುವುದಿಲ್ಲ ಎನ್ನುವುದು ಮೆಜಾರಿಟಿ ಜನರ ಮೆಂಟಾಲಿಟಿ. qsಟ್ಠ ZಡಿZqso ಜಛಿಠಿ ಡಿeZಠಿ qsಟ್ಠ ಡಿZಠಿ ಎನ್ನುವುದು ಕೆಲವೇ ಕೆಲವು ಜನರ ನಂಬಿಕೆ. ಬಹುಪಾಲು ಜನರು ಮಾಡಿದ್ದನ್ನು ನೀವು ಮಾಡಿದರೆ ಅಥವಾ ಮಾಡುತ್ತಿದ್ದರೆ, ಬಹುಪಾಲು ಜನರಿಗೆ ಸಿಕ್ಕಿದ ಫಲಿತಾಂಶ ಸಿಗುತ್ತದೆ.
ಬಯಸಿದ್ದೆಲ್ಲ ಸಿಗಬೇಕೆಂದರೆ ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಆ ಗುಣದಲ್ಲಿ ನಂಬಿಕೆಯಿಡಬೇಕು. ಒಂದು ದಿನದಲ್ಲಿ ಅದು ರಕ್ತಗತವಾಗುವುದಿಲ್ಲ. ಆದರೆ ಅಸಾಧ್ಯವಂತೂ ಅಲ್ಲ.