ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಕೋಗಿಲು ಘಟನೆಯಿಂದ ರಾಜ್ಯ ಎಚ್ಚೆತ್ತುಕೊಳ್ಳಬೇಕಿದೆ !

ಕೊಡಗು, ಚಿಕ್ಕಮಗಳೂರಿನ ಭಾಗದಲ್ಲಂತೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕರು ನಮ್ಮ ದೇಶದವರಂತೂ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈಗ ಅಲ್ಲಿ ಅವರದ್ದೇ ಹೊಸ ಕಾಲೊನಿಗಳ ಸೃಷ್ಟಿಯಾಗಿವೆಯಂತೆ. ಹೀಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬಾಂಗ್ಲಾದೇಶಿಗರು ದಿನದಿಂದ ದಿನಕ್ಕೆ ಪಸರಿಸುತ್ತಿದ್ದಾರೆ.

ಕೋಗಿಲು ಘಟನೆಯಿಂದ ರಾಜ್ಯ ಎಚ್ಚೆತ್ತುಕೊಳ್ಳಬೇಕಿದೆ !

-

ವಿದ್ಯಮಾನ

ಬೆಂಗಳೂರಿನ ಬಹುತೇಕ ಹೋಟೆಲುಗಳಲ್ಲಿನ ಸಪ್ಲೈಯರ್‌ಗಳನ್ನು ವಿಚಾರಿಸಿದರೆ, ‘ನಾವು ಬೆಂಗಾಲ್‌ ನಿಂದ ಬಂದವರು’ ಎನ್ನುತ್ತಾರೆ. ಅವರ ಹೆಸರು ಕೇಳಿದಾಗ, ಅವರು ಬಹುತೇಕ ‘ಬ್ರದರ್ಸ್’ ವರ್ಗಕ್ಕೆ ಸೇರಿದವರು ಎನ್ನುವುದು ಅರಿವಾಗುತ್ತದೆ. ಅವರು ಎಲ್ಲಿಯವರಾದ ರೇನು? ತಿಂಡಿಯನ್ನು ಬೇಗ ತಂದುಕೊಟ್ಟರೆ ಖುಷಿಯಾಗುವ ನಾವೂ ಅವರ ಭಾಷೆಯ ಮಾತಾಡಿ ಟಿಪ್ಸ್ ಕೊಟ್ಟು ಬರುತ್ತೇವೆ. ಇಂದು ಕರ್ನಾಟಕದ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುವ ಹೆಚ್ಚಿನವರು ಬಾಂಗ್ಲಾದವರು ಎಂದರೆ ನಿಮಗೆ ಅಚ್ಚರಿಯಾಗಬಹುದು.

2016ರ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಬಾಂಗ್ಲಾದೇಶಿಗರು ಅಕ್ರಮವಾಗಿ ವಾಸಿಸುತ್ತಿದ್ದಾರೆ. ಅವರಲ್ಲಿ ಸಿಂಹಪಾಲು ಮಂದಿ ಪಶ್ಚಿಮ ಬಂಗಾಳ ರಾಜ್ಯದಲ್ಲಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದರಿಂದ ಅದು ಸ್ವಾಭಾವಿಕ ಎಂದು ಸುಮ್ಮನಾಗಿಬಿಡಬಹುದು.

ಅಲ್ಲಿನ ಸರಕಾರಕ್ಕೂ ಇವರೇ ಮತದಾರರಾಗಿರುವುದರಿಂದ ಅದು ಹೆಚ್ಚು ಸ್ವಾಭಾವಿಕ. ಆದರೆ ಬಾಂಗ್ಲಾದಿಂದ ವಲಸೆ ಬಂದವರು ದೂರದ ಕರ್ನಾಟಕದಲ್ಲಿ ಲಕ್ಷಗಳ ಸಂಖ್ಯೆಯಲ್ಲಿದ್ದಾರೆನ್ನುವು ದನ್ನು ತಿಳಿದಾಗ ಆಶ್ಚರ್ಯವಾಗುತ್ತದೆಯಲ್ಲವೇ? ಆದರೆ ಇದು ಸತ್ಯ.

ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ನಡುವೆ ಇರುವುದು ತೆರೆದ ಗಡಿರೇಖೆಯಾಗಿದೆ. ಅಲ್ಲಿ ಪಾಕಿಸ್ತಾನದ ಗಡಿಯಲ್ಲಿರುವಂತೆ ಬೇಲಿಯ ವ್ಯವಸ್ಥೆ ಇಲ್ಲ. ಬೇಲಿಯ ವ್ಯವಸ್ಥೆ ಏಕಿಲ್ಲ ಎಂದರೆ, ‘ನಾವು ಆರು ಬಾರಿ ಪತ್ರ ಬರೆದರೂ ಅಲ್ಲಿನ ರಾಜ್ಯ ಸರಕಾರ ತಡೆಗೋಡೆಯ ನಿರ್ಮಾಣಕ್ಕೆ ಅಗತ್ಯ ಜಮೀನು ಕೊಡುತ್ತಿಲ್ಲ’ ಎನ್ನುವುದು ಕೇಂದ್ರ ಗೃಹ ಇಲಾಖೆಯ ಉತ್ತರ.

ಹಾಗಂತ, ಕೇಂದ್ರದ ಈ ಉತ್ತರ ಸಮಾಧಾನ ಕೊಡುವುದಿಲ್ಲ. ದೇಶದ ಭದ್ರತೆಯ ವಿಷಯ ವಾಗಿರುವುದರಿಂದ ರಾಜ್ಯ ಸರಕಾರಗಳ ನಿರ್ಧಾರವನ್ನು ಕೇಂದ್ರವು ಮೀರಿ ನಿರ್ಧರಿಸಬಹದಾಗಿದೆ. ರಾಜ್ಯ ಸರಕಾರದ ಮೇಲೆ ದೂರು ಹಾಕಿ ಸುಮ್ಮನಿರುವ ಹಾಗಿಲ್ಲ. ಈ ತರಹದ ಹೇಳಿಕೆಗಳನ್ನು ನೀಡಿ ಕೇಂದ್ರ ಗೃಹಸಚಿವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೇಕಾದಷ್ಟು ಕಠಿಣ ನಿರ್ಧಾರಗಳನ್ನು ನಿಭಾಯಿಸಿದ ಕೇಂದ್ರ ಸರಕಾರಕ್ಕೆ ಶಾಶ್ವತ ಗಡಿಬೇಲಿಯ ನಿರ್ಮಾಣ ದೊಡ್ಡ ವಿಷಯವಾಗಬಾರದು.

ಇದನ್ನೂ ಓದಿ: Vinayaka V Bhat Column: ಬರ್ಲಿನ್‌ ಶಾಲೆಯಲ್ಲಿ ಮತ್ತದೇ ರಾಗಾಲಾಪ !

ಇರಲಿ, ಬೆಂಗಳೂರಿನ ಯಾವುದೇ ಹೋಟೆಲಿಗೆ ಹೋಗಿ ನೋಡಿ, ಅಲ್ಲಿ ನಿಮ್ಮ ಆರ್ಡರ್ ತೆಗೆದು ಕೊಳ್ಳುವವರು, ಸರಬರಾಜು ಮಾಡುವವರನ್ನು ಮಾತನಾಡಿಸಿ ನೋಡಿ, ಅತ್ಯಂತ ವಿನಯ ವಿಧೇಯತೆಯಿಂದ ಅವರು ‘ನಾ ಬೆಂಗಾಲ್‌ನಿಂದ ಬಂದವರು’ ಎನ್ನುತ್ತಾರೆ. ಒಂದು ಹೆಜ್ಜೆ ಮುಂದೆ ಹೋಗಿ ಅವರ ಹೆಸರು ಕೇಳಿನೋಡಿ, ಅವರು ನೂರಕ್ಕೆ ನೂರು ಪ್ರತಿಶತ ‘ಬ್ರದರ್ಸ್’ ವರ್ಗಕ್ಕೆ ಸೇರಿದವರು ಎನ್ನುವುದು ನಿಮ್ಮ ಗಮನಕ್ಕೆ ಬರುತ್ತದೆ. ಅಲ್ಲಿಗೆ ನಮ್ಮ ವಿಚಾರಣೆ ನಿಂತುಬಿಡುತ್ತದೆ.

ಅವರು ಎಲ್ಲಿಯವರಾದರೆ ನಮಗೇನು? ನಮ್ಮ ತಿಂಡಿಯನ್ನು ಬೇಗ ತಂದುಕೊಟ್ಟರೆ ನಾವು ಹ್ಯಾಪಿ. ನಾವೂ ಅವರ ಭಾಷೆಯ ಮಾತಾಡಿ ಟಿಪ್ಸ್ ಕೊಟ್ಟು ಬರುತ್ತೇವೆ. ಇಂದು ಕರ್ನಾಟಕದ ಹೋಟೆಲ್ ಉದ್ಯಮದಲ್ಲಿ ಕೆಲಸಮಾಡುವ ಬಹುತೇಕರು ಬಾಂಗ್ಲಾದವರು ಎಂದರೆ ನಿಮಗೆ ಅಚ್ಚರಿಯಾಗ ಬಹುದು. ಅದರೆ ಅದೇ ಸತ್ಯ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅನೇಕ ಬೃಹತ್ ಉದ್ದಿಮೆಗಳು ಕಾರ್ಯ ನಿರ್ವಹಿಸುತ್ತಿವೆ, ಅ ಕೆಲಸಗಾರರ ತುಟಾಗ್ರತೆಯಿದೆ. ಹಾಗಾಗಿ ಉತ್ತರಪ್ರದೇಶ ಅಥವಾ ಬಿಹಾರದಂತೆ ಅಲ್ಲಿನ ಜನರು ಕೆಲಸ ಹುಡುಕಿಕೊಂಡು ಬೇರೆ ಾಜ್ಯಗಳಿಗೆ ವಲಸೆ ಹೋಗುವುದು ಕಡಿಮೆಯೇ, ಹಾಗಾಗಿ ದಕ್ಷಿಣದಲ್ಲಿ ಕೆಲಸ ಹುಡುಕಿ ಬಂದವರು ಪಶ್ಚಿಮ ಬಂಗಾಳ ರಾಜ್ಯದವರಲ್ಲ, ಅಕ್ರಮ ಬಾಂಗ್ಲಾದೇಶದ ವಲಸಿಗರೇ ಆಗಿರಲಿಕ್ಕೆ ಸಾಕು ಎನ್ನುವುದು ನನ್ನ ತರ್ಕ.

ಈ ಕೆಲಸಗಾರರನ್ನು ಬೇರೆ ಬೇರೆ ರಾಜ್ಯಗಳಿಗೆ ಸರಬರಾಜು ಮಾಡುವ ಗುತ್ತಿಗೆದಾರರಿದ್ದಾರೆ. ಹಾಗೆ ಬಾಂಗ್ಲಾದೇಶದಿಂದ ವಲಸೆ ಬಂದವರು ಮೊದಲು ಪಶ್ಚಿಮ ಬಂಗಾಳಕ್ಕೆ ಅಥವಾ ಕೇರಳಕ್ಕೆ ಬರುವುದು (ಇತ್ತೀಚೆಗೆ ಕರ್ನಾಟಕವೂ ಸುಲಭವಾಗಿ ಸೇರಿಕೊಳ್ಳಬಹುದಾದ ರಾಜ್ಯವಾಗಿದೆ). ಅಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಸೃಷ್ಟಿ ಮಾಡಿ ಕೊಂಡು ದೇಶದ ವಿವಿಧೆಡೆ ಹೋಗಿ ಕೆಲಸ ಮಾಡುವುದು.

Screenshot_1 R

ಕೊಡಗು, ಚಿಕ್ಕಮಗಳೂರಿನ ಭಾಗದಲ್ಲಂತೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರಲ್ಲಿ ಬಹು ತೇಕರು ನಮ್ಮ ದೇಶದವರಂತೂ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈಗ ಅಲ್ಲಿ ಅವರದ್ದೇ ಹೊಸ ಕಾಲೊನಿಗಳ ಸೃಷ್ಟಿಯಾಗಿವೆಯಂತೆ. ಹೀಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬಾಂಗ್ಲಾದೇಶಿಗರು ದಿನದಿಂದ ದಿನಕ್ಕೆ ಪಸರಿಸುತ್ತಿದ್ದಾರೆ.

ಎಲ್ಲವನ್ನೂ ನೋಡಿಕೊಂಡು ನಾವು ಸುಮ್ಮನಿದ್ದೇವೆ. ನಮಗೆ ಕೆಲಸಗಾರರು ಬೇಕು ಎನ್ನುವ ಸ್ವಾರ್ಥ. ಕೆಲವು ದಿನಗಳ ಹಿಂದೆ, ಕೇರಳದ ವ್ಯಕ್ತಿಯೊಬ್ಬ ಆನೆ ತುಳಿತದಿಂದ ಮೃತಪಟ್ಟಾಗ ಕರ್ನಾಟಕ ಸರಕಾರ ಆತನಿಗೆ ಪರಿಹಾರ ಕೊಟ್ಟಿರುವುದು ನಿಮಗೆ ಮರೆತುಹೋಗಿರಬಹುದು.

ಕೇರಳದಲ್ಲಿ ಮೃತಪಟ್ಟವನಿಗೆ ಕರ್ನಾಟಕ ಸರಕಾರವೇಕೆ ಪರಿಹಾರ ಕೊಡಬೇಕೆಂದು ಕೇಳಿದರೆ, ಅದಕ್ಕೆ ಮಂತ್ರಿಗಳಿಂದ ಸಂದ ಉತ್ತರ, “ಅದು ಕರ್ನಾಟಕದ ಆನೆಯಾಗಿತ್ತು, ಕೇರಳಕ್ಕೆ ಹೋಗಿ ಆತನನ್ನು ತುಳಿದಿರುವುದರಿಂದ ನಾವೇ ಪರಿಹಾರ ಕೊಡಬೇಕಲ್ಲ" ಎನ್ನುವುದಾಗಿತ್ತು.

ವಯನಾಡಿನಲ್ಲಿ ಪ್ರವಾಹದಿಂದ ಹಾನಿಯುಂಟಾದಾಗ, ಲಕ್ಷ್ಯ ವಹಿಸಿ ಅಲ್ಲಿಯ ನಿರ್ವಸಿತರಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರಕಾರ ಹೆಣಗಿದಷ್ಟು ಕೇರಳ ಸರಕಾರವೂ ತಲೆ ಕೆಡಿಸಿ ಕೊಂಡಿರಲಿಕ್ಕಿಲ್ಲ. ಇವಕ್ಕೆಲ್ಲ ಕಾರಣ ಸರಳ, ಕರ್ನಾಟಕ ಸರಕಾರಕ್ಕೆ ಕೇರಳಿಗರ ಮೇಲೆ ಪ್ರೀತಿ ಅಂತ ಅಲ್ಲ, ಅನಿವಾರ್ಯತೆ ಅಷ್ಟೇ.

ಅಲ್ಲಿ ಆಗ ಸಂಸದರಾಗಿದ್ದವರು ಈಗ ಸಂಸದರಾಗಿರುವವರು ಕಾಂಗ್ರೆಸ್ಸಿನ ಅಧಿನಾಯಕರಾದ ರಾಹುಲ್ ಮತ್ತು ಪ್ರಿಯಾಂಕ ಅವರಲ್ಲವೇ? ಇಷ್ಟೂ ಮಾಡದಿದ್ದರೆ ಹೇಗೆ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಾವುದೋ ದಕ್ಷ ಅಧಿಕಾರಿಯೊಬ್ಬ ಬೆಂಗಳೂರಿನ ಕೋಗಿಲು ಪ್ರದೇಶ‌ ದಲ್ಲಿ ಸರಕಾರದ ಜಾಗದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದವರ ಮನೆಗಳನ್ನು ನೆಲಸಮ ಮಾಡಿ ಒಕ್ಕಲೆ ಬ್ಬಿಸಿದ್ದಾರೆ.

ಹಾಗಂತ ಇದು ಇದ್ದಕ್ಕಿದ್ದ ಹಾಗೆ ನಡೆದ ಕಾರ್ಯಾಚರಣೆಯಲ್ಲ. ಕೊಡಬೇಕಾದ ನೋಟಿಸ್‌ಗಳನ್ನು ನೀಡಿ, ಅದಕ್ಕೆ ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಾನೂನಿನನ್ವಯ ಮನೆಗಳನ್ನು ನೆಲಸಮ ಮಾಡಿದ್ದಾರೆ. ವಾಸ್ತವಿಕವಾಗಿ ಈ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಬೇಕಾಗಿತ್ತು, ಬದಲಿಗೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಕರ್ನಾಟಕ ಸರಕಾರದ ಈ ಕಾರ್ಯಾಚರಣೆಯ ಬೆನ್ನ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗರಂ ಆಗಿಬಿಟ್ಟರು.

“ಕೇರಳದಲ್ಲಿ ಮುಂಬರುವ ಚುನಾವಣೆಯನ್ನು ಲಕ್ಷ್ಯದಲ್ಲಿರಿಸಿ ಪಿಣರಾಯಿ ವಿಜಯನ್ ಈ ರೀತಿ ಮಾತನಾಡುತ್ತಿzರೆ, ಕರ್ನಾಟಕದ ಆಂತರಿಕ ವಿಚಾರದಲ್ಲಿ ಅವರ ಹಸ್ತಕ್ಷೇಪವನ್ನು ನಾವು ಸಹಿಸುವು ದಿಲ್ಲ" ಎಂದು ನಮ್ಮ ಮಂತ್ರಿಗಳು ಗುಡುಗಿದರು.

ವಿಷಯ ಇಲ್ಲಿಗೇ ನಿಂತಿದ್ದರೆ ಚೆನ್ನಾಗಿತ್ತು, ಆದರೆ ಹಾಗಾಗಲಿಲ್ಲ. ಕೇರಳ ರಾಜ್ಯದವರಾದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಈ ಪ್ರಕರಣದಲ್ಲಿ ಮೂಗು ತೂರಿಸಿದರು. “ನೀವು ಏಕಾಏಕಿ ಹೀಗೆ ಮಾಡಿರುವುದು ಮಾನವೀಯತೆಯ ದೃಷ್ಟಿಯಿಂದ ಸರಿಯಲ್ಲ, ಕೂಡಲೇ ಪುನರ್ವಸತಿಗೆ ಏನಾದರೂ ವ್ಯವಸ್ಥೆ ಮಾಡಲೇಬೇಕು" ಎಂದು ಫರ್ಮಾನು ಹೊರಡಿಸಿದರು.

ಅವರಿಗೂ ಸ್ವಾಭಾವಿಕವಾಗಿ ಕೇರಳ ರಾಜ್ಯದ ಚುನಾವಣೆಯದ್ದೇ ಚಿಂತೆ, ಅದರಲ್ಲೂ ಸಂತ್ರಸ್ತ ರಾದವರು ಮುಸ್ಲಿಮರು, ಕೇರಳದ ವಯನಾಡಿನ ಸಂಸದರಿಗೆ ಏನು ಉತ್ತರ ಕೊಡುವುದು ಎನ್ನುವ ಚಿಂತೆ ಬೇರೆ. ಕರ್ನಾಟಕ ಸರಕಾರ ದೊಡ್ಡ ಮಟ್ಟದಲ್ಲಿ ಟೀಕೆ ಟಿಪ್ಪಣೆಗಳನ್ನು ಎದುರಿಸಬೇಕಾಗಬ ಹುದು ಎನ್ನುವ ಚಿಂತೆಯನ್ನೇ ಅವರು ಮಾಡಲಿಲ್ಲ. ವಾಸ್ತವಿಕವಾಗಿ ಫರ್ಮಾನು ಬಂದಿದ್ದು ವಯನಾಡಿನ ಹಾಲಿ ಹಾಗೂ ಮಾಜಿ ಸಂಸದರಿಂದಲೇ ಆಗಿದ್ದರೂ ಸಾರ್ವಜನಿಕವಾಗಿ ಸಿಕ್ಕಿಹಾಕಿ ಕೊಂಡಿದ್ದು ಮಾತ್ರ ವೇಣುಗೋಪಾಲ್, ಪಾಪ!

ಬೆಂಗಳೂರಿನ ಕೋಗಿಲುವಿನಲ್ಲಿ ಕೇರಳದ ಅಕ್ರಮ ವಲಸೆಗಾರರನ್ನು ಹೊರ ಹಾಕಲು ರಾಜ್ಯ ಸರಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದೆ, ಅಧಿಕಾರಿಗಳು ಅವರ ಅಕ್ರಮ ಮನೆಗಳನ್ನು ಧ್ವಂಸಗೊಳಿಸಿ ಉತ್ತಮ ಕಾರ್ಯಮಾಡಿದ್ದಾರೆ ಎನ್ನುತ್ತಿದ್ದ ರಾಜ್ಯಸರಕಾರ ’ಯು-ಟರ್ನ್’ ತೆಗೆದು ಕೊಂಡಿತು. ಹೈಕಮಾಂಡ್ ಫರ್ಮಾನನ್ನು ಪಾಲಿಸಲು ‘ತಾ ಮುಂದು, ನಾ ಮುಂದು’ ಎನ್ನುವಂತೆ ಟೊಂಕ ಕಟ್ಟಿ ನಿಂತುಬಿಟ್ಟರು. ಉಪ ಮುಖ್ಯಮಂತ್ರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

‘ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಗೆ ನಮ್ಮ ಸರಕಾರಕ್ಕೆ ಮಾರ್ಗದರ್ಶನ ನೀಡುವ ಹಕ್ಕಿದೆ, ಮನೆ ಕಳೆದುಕೊಂಡವರಿಗೆ ಮಾನವೀಯತೆಯ ಆಧಾರದಲ್ಲಿ ಇನ್ನೆರಡು ದಿನಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನೀಡಿ ಪುನರ್ವಸತಿ ಕಲ್ಪಿಸ ಲಾಗುವುದು’ ಎಂದುಬಿಟ್ಟರು; ಮುಖ್ಯಮಂತ್ರಿಗಳ ಜತೆಗೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಜನರಿಗೆ ಇಲ್ಲಸಲ್ಲದ ಸಮರ್ಥನೆ-ಸಮಜಾಯಿಷಿ ನೀಡಲು ಪ್ರಾರಂಭಿಸಿದರು.

“ಈಗ ಅಕ್ರಮ ವಲಸಿಗರಿಗೆ ಬೆಂಗಳೂರಿನಲ್ಲಿ ಮನೆ ನೀಡುವುದಾಗಿ ಭರವಸೆ ನೀಡುವ ಮೂಲಕ ಸರಕಾರ ಮಾಡುತ್ತಿರುವುದು ಅಲ್ಪಸಂಖ್ಯಾತರ ತುಷ್ಟೀಕರಣದ ಕೃತ್ಯವಲ್ಲದೆ ಬೇರೇನೂ ಅಲ್ಲ. ಕರ್ನಾಟಕದ ತೆರಿಗೆದಾರರ ಹಣದಿಂದ ಸರಕಾರ ನಿರ್ಮಿಸಿದ ಮನೆಗಳು ಬಡ ಕನ್ನಡಿಗರಿಗಾಗಿ ಇರಬೇಕೇ ಹೊರತು ಮಲಯಾಳಿಗಳಿಗಲ್ಲ. ಕರ್ನಾಟಕದ ಅರ್ಹ ಜನರಿಗೆ ಮನೆ ವಿತರಣೆಗೆ ಸರಕಾರ ಆದ್ಯತೆ ನೀಡಬೇಕು.

ಬೆಳೆ ನಷ್ಟ ಅನುಭವಿಸಿದ ರೈತರಿಗೆ, ನೆರೆ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ರಾಜ್ಯ ಸರಕಾರ ಮೀನ-ಮೇಷ ಎಣಿಸುತ್ತಿದೆ. ಆದರೆ ಕೇರಳಿಗರ ಪುನರ್ವಸತಿಗೆ ತರಾತುರಿ ಮಾಡುತ್ತಿದೆ. ಕರ್ನಾಟಕ ಸಿಎಂ, ಅಲುಗಾಡುತ್ತಿರುವ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಪಕ್ಷದ ಹೈಕಮಾಂಡ್‌ನ ಮಾತನ್ನು ಕೇಳುತ್ತಿದ್ದಾರೆಂದು ತೋರುತ್ತದೆ. ಅವರಿಗೆ ರಾಜ್ಯದ ಜನರ ಹಿತಾಸಕ್ತಿಗಳ ಬಗ್ಗೆ ಯತ್ಕಿಂಚಿತ್ ಗೌರವವಿಲ್ಲ" ಎಂದು ಬಿಜೆಪಿಯ ವಿವಿಧ ಸ್ತರದ ನಾಯಕರುಗಳು ಮಾತನಾಡಿದರು.

ಸ್ಥಳ ಪರಿಶೀಲಿಸಿದ ವಿರೋಧ ಪಕ್ಷದ ನಾಯಕ ಅಶೋಕ, ತ್ವರಿತ ವಸಾಹತು ಬೆಳವಣಿಗೆ, ತ್ವರಿತ ಸೌಲಭ್ಯಗಳು ಮತ್ತು ಇದರಿಂದಾಗುವ ರಾಷ್ಟ್ರೀಯ ಭದ್ರತೆಯ ಅಪಾಯಗಳನ್ನು ಉಲ್ಲೇಖಿಸಿ, ತುಷ್ಟೀಕರಣದ ಮೂಲಕ ಕಾಂಗ್ರೆಸ್ ಬೆಂಗಳೂರಿನಲ್ಲಿ ಮಿನಿ ಬಾಂಗ್ಲಾದೇಶವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸುತ್ತಾ ಎನ್‌ಐಎ ತನಿಖೆಗೆ ಆಗ್ರಹಿಸಿ, ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ರಚಿಸಿ ಸತ್ಯವನ್ನು ಬಯಲಿಗೆಳೆಯಲಿದೆ ಎಂದರು.

ಆದರೆ ಯಾರೂ ಕಾನೂನಿನ ಮೊರೆ ಹೋಗಲು ಮನಸ್ಸು ಮಾಡದಿರುವುದು ದುರದೃಷ್ಟಕರವೇ ಸರಿ. ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ಮಾಡಲಾದ ಸರಕಾರಿ ಭೂಮಿಯಲ್ಲಿ ನಿರ್ಮಿಸ ಲಾದ ಮನೆಗಳನ್ನು ನೆಲಸಮಗೊಳಿಸಿದ ನಂತರ ಅಕ್ರಮ ಬಾಂಗ್ಲಾ ವಲಸಿಗರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಆರೋಪವನ್ನು ಕರ್ನಾಟಕ ಕಾಂಗ್ರೆಸ್ ಸರಕಾರ ತಳ್ಳಿ ಹಾಕಿದೆ.

ಸಾರ್ವಜನಿಕವಾಗಿ ಟೀಕೆಗಳು ಹೆಚ್ಚಾಗುತ್ತಿದ್ದಂತೆ, ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ಮನೆಗಳನ್ನು ನೀಡಲಾಗುವುದು, ಎಲ್ಲರಿಗೂ ಅಲ್ಲ ಎಂದು ಅದು ಹೇಳಿತು. ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್‌ಖಾನ್, ಕರ್ನಾಟಕದವರಲ್ಲದ ಹೊರಗಿನವರಿಗೆ ಮನೆ ಮಂಜೂರು ಮಾಡಲು ಹೇಗೆ ಸಾಧ್ಯ? ಇವರೆಲ್ಲರೂ ಸ್ಥಳೀಯರೇ ಆಗಿದ್ದಾರೆ. ಮನೆ ಕಳೆದುಕೊಂಡವರಲ್ಲಿ ಹೊರಗಿನವರಿದ್ದಲ್ಲಿ ನಾವು ಅವರಿಗೆ ಮನೆಗಳನ್ನು ಮಂಜೂರು ಮಾಡುವುದಿಲ್ಲ ಎನ್ನುತ್ತಾ ಬಿಜೆಪಿಯ ಆರೋಪಗಳನ್ನು ಕೇವಲ ಪ್ರಚಾರ ಎಂದು ಟೀಕಿಸಿದರು. ‌

ಇದ್ದ ಮನೆಗಳನ್ನು ಕೆಡವಿ ಮತ್ತೆರಡು ದಿನಗಳೊಳಗೆ ಪುನರ್ವಸತಿ ಕಲ್ಪಿಸುವುದಾದರೆ ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಾಚರಣೆ ಮಾಡಲಾಯಿತು? ನಿಮಗೆ ಅಷ್ಟೊಂದು ಕಾಳಜಿಯಿದ್ದರೆ ಅವರುಗಳನ್ನು ನಿಮ್ಮ ರಾಜ್ಯಕ್ಕೆ ಕರೆಸಿಕೊಂಡು ಪುನರ್ವಸತಿ ಮಾಡಬಹುದು ಎಂದು ಪಿಣರಾಯಿ ವಿಜಯನ್‌ಗೆ ನಮ್ಮ ಸರಕಾರ ಕಟ್ಟುನಿಟ್ಟಾಗಿ ಏಕೆ ಹೇಳಲಿಲ್ಲ? ಇವರುಗಳಿಗೆ ಪುನರ್ವಸತಿ ನೀಡುವುದೇ ಸರಕಾರದ ನಿರ್ಧಾರವಾಗಿದ್ದರೆ, ಇನ್ನಾವುದೋ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಬಹುದಾಗಿತ್ತಲ್ಲವೇ? ಆಗಲೇ ಹಣ ತುಂಬಿ ಮನೆ ಹಂಚಿಕೆಗೆ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಕನ್ನಡಿಗರಿಗೆ ಪಂಗನಾಮ ಹಾಕಿ, ಹಂಚಿಕೆಗೆ ಸಿದ್ಧವಾಗಿರುವ ಸುವ್ಯವಸ್ಥಿತ ಮನೆಗಳನ್ನು ಅಕ್ರಮ ವಲಸಿಗರಿಗೆ ಕೊಡುವ ತರಾತುರಿ ಏನಿತ್ತು? ಬಾಂಗ್ಲಾ ದೇಶದಲ್ಲಿ ನಿತ್ಯ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೂ ತುಟಿಪಿಟಕ್ಕೆನ್ನದ ಕಾಂಗ್ರೆಸ್ ಪಕ್ಷಕ್ಕೆ, ಈಗ ಮಾನವೀಯತೆಯ ನೆನಪಾಗಿದ್ದು ಹೇಗೆ? ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ನೆಮ್ಮದಿಯಿಂದ ಬದುಕಲು ಅವಕಾಶವಾಗುವವರೆಗೆ ಅಧಿಕಾರಿಗಳು, ಅಲ್ಲಿನ ಶಾಸಕರು ಏನು ಮಾಡುತ್ತಿದ್ದರು? ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಮುಂತಾದ ಉತ್ತರಿಸಲು ಸಾಧ್ಯವಾಗದ ನೂರಾರು ಪ್ರಶ್ನೆಗಳು ಕರ್ನಾಟಕ ಸರಕಾರದ ಮುಂದಿವೆ.

ಅಸಮರ್ಥನೀಯವಾದುದದನ್ನು ಸಮರ್ಥಿಸಿಕೊಳ್ಳುವ ಜಾಣ್ಮೆಯಂತೂ ನಮ್ಮ ಸರಕಾರಕ್ಕಿದೆ ಬಿಡಿ. ಕೋಗಿಲು ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೀಸಲಿಟ್ಟ ಸರಕಾರಿ ಭೂಮಿಯಲ್ಲಿ ಫಕೀರ್ ಮತ್ತು ವಸೀಮ್ ಕಾಲೊನಿಗಳಲ್ಲಿ ಅನಽಕೃತ ಮನೆಗಳನ್ನು ನೆಲಸಮಗೊಳಿಸಿದ ನಂತರ ಹೊತ್ತಿದ ಕಿಡಿ, ಈಗ ದೊಡ್ಡ ಉರಿಯಾಗಿ ಕರ್ನಾಟಕ ಸರಕಾರವನ್ನು ಸುಡುತ್ತಿರುವುದಂತೂ ಸತ್ಯ.

ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಪ್ರತಿಕ್ರಿಯೆಯ ನಂತರ ಮಾನವ ಹಕ್ಕು ಆಯೋಗವೂ ಈ ಪ್ರಕರಣದಲ್ಲಿ ಪ್ರವೇಶಿಸಿತು. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ ಎನ್ನುವ ಮಾತುಗಳು ಪಾಕಿಸ್ತಾನದಲ್ಲೂ ಕೇಳಿಬಂದವು. ಭಾರತಕ್ಕೆ ‘ಭೂತದ ಬಾಯಿಂದ ಭಗವದ್ಗೀತೆ’ ಕೇಳಬೇಕಾದ ಸ್ಥಿತಿ ಉಂಟಾಯಿತು.

ಕಳೆದ ವರ್ಷ, ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಅಧಾರದಲ್ಲಿ ಕೇಂದ್ರವು ಶೋಧ ನಡೆಸಿ ದಾಗ ಕೆಲವು ಪಾಕಿಸ್ತಾನಿ ಕುಟುಂಬಗಳು ಅಕ್ರಮವಾಗಿ ಬೆಂಗಳೂರಿನ ಸುತ್ತಮುತ್ತ ನೆಮ್ಮದಿ ಯಿಂದ ಜೀವನ ಸಾಗಿಸುತ್ತಿರುವುದು ತಿಳಿದುಬಂತು. ಮುಂದೆ ಏನಾಯಿತೋ ನಮಗಂತೂ ತಿಳಿಯದು.

ಈ ರೀತಿಯಲ್ಲಿ ಪಾಕಿಸ್ತಾನ ಅಥವಾ ಬಾಂಗ್ಲಾ ದೇಶದವರು ಇನ್ನೂ ಎಷ್ಟು ಜನ ರಾಜ್ಯ ದಲ್ಲಿರಬಹುದು ಎಂದು ಹುಡುಕುವ ಗೋಜಿಗೆ ನಮ್ಮ ಸರಕಾರ ಹೋದಂತೆ ಕಾಣುವುದಿಲ್ಲ. ಅದು ಹಾಗೇ ತಾನೆ? ಕರ್ನಾಟಕದಲ್ಲಿ ಹರಡುತ್ತಿರುವ ‘ಡ್ರU’ ದಂಧೆಯನ್ನು ಪತ್ತೆ ಹಚ್ಚಿ ಹೇಳಲು ಮಹಾ ರಾಷ್ಟ್ರದ ಪೊಲೀಸರು ಬರಬೇಕು, ಅಕ್ರಮ ವಲಸಿಗರ ಬಗ್ಗೆ ಮಾಹಿತಿಗಳನ್ನು ಎನ್‌ಐಎ ಬಂದು ತಿಳಿಸಬೇಕು, ನಮ್ಮ ಪೊಲೀಸ್ ಇಲಾಖೆ ಮತ್ತು ಗ್ರಹ ಸಚಿವಾಲಯದ ಅಧಿಕಾರಿಗಳಿಗೆ ಮಾಡಲು ಬೇರೆ ಮಹತ್ವದ ಕೆಲಸಗಳಿರುವುದರಿಂದ, ಈ ತರಹದ ಚಿಲ್ಲರೆ ಕೆಲಸಗಳಿಗೆ ಅವರಲ್ಲಿ ಸಮಯವಿಲ್ಲ ಎಂದು ನಾವು ಅಂದುಕೊಳ್ಳಬಹುದೇನೋ! ಸೂಕ್ಷ್ಮವಾಗಿ ಯೋಚನೆ ಮಾಡಿದರೆ, ಬೆಂಗಳೂರಿನ ಕೋಗಿಲುವಿನಲ್ಲಿ ನಡೆದ ಈ ತೆರವು ಕಾರ್ಯಾಚರಣೆ ಬಹು ಆಯಾಮಗಳನ್ನು ಹೊಂದಿದ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ, ರಾಜ್ಯವು ಎಚ್ಚೆತ್ತುಕೊಳ್ಳಬೇಕಿದೆ ಅಷ್ಟೇ!