ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

ಅವಳು ತನ್ನೊಳಗೆ ಚಿಂತಿಸಿದಳು ಕ್ಷಣಿಕವಾದ ಸುಖ, ಹಣ ಮತ್ತು ಜನರ ಮೆಚ್ಚುಗೆಗಾಗಿ ನಾನು ಎಷ್ಟು ನಿಕೃಷ್ಟವಾಗಿ ಇತರರನ್ನು ಅವಲಂಬಿಸಿದ್ದೆ! ನಶ್ವರವಾದ ದೇಹವನ್ನು ಪ್ರೀತಿಸುವ, ಕ್ಷಣಮಾತ್ರದಲ್ಲಿ ಬದಲಾಗುವ ಮನುಷ್ಯರಿಂದ ನಾನು ಶಾಶ್ವತ ಸುಖವನ್ನು ನಿರೀಕ್ಷಿ ಸುತ್ತಿದ್ದೆ. ಆದರೆ ನನ್ನ ಹೃದಯದಲ್ಲೇ ಸದಾ ನೆಲೆಸಿರುವ ಪರಮಾತ್ಮನನ್ನು (ಶ್ರೀಕೃಷ್ಣನನ್ನು) ಮರೆತಿದ್ದೆ.

ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

-

ಒಂದೊಳ್ಳೆ ಮಾತು

ಪ್ರಾ ಚೀನ ಕಾಲದಲ್ಲಿ ವಿದೇಹ ನಗರದಲ್ಲಿ ಪಿಂಗಳೆ ಎಂಬ ಸುಪ್ರಸಿದ್ಧ ಗಣಿಕೆ (ನೃತ್ಯಗಾರ್ತಿ) ವಾಸಿಸುತ್ತಿದ್ದಳು. ಸೌಂದರ್ಯ, ಕಲೆ ಮತ್ತು ವೈಭವಕ್ಕೆ ಅವಳು ಹೆಸರಾಗಿದ್ದಳು. ಪ್ರತಿದಿನ ಸಂಜೆ ಅವಳ ಮನೆಯಲ್ಲಿ ಶ್ರೀಮಂತ ವ್ಯಾಪಾರಿಗಳು, ರಾಜವಂಶಸ್ಥರು ಹಾಗೂ ಸಂಗೀತ -ನೃತ್ಯದ ಸಭೆಗಳು ಕಳೆಯುತ್ತಿದ್ದವು. ಚಿನ್ನ, ರತ್ನಾಭರಣಗಳು, ಆಡಂಬರದ ಜೀವನ ಮತ್ತು ಜನರ ಮೆಚ್ಚುಗೆ ಹೀಗೆ ಪ್ರಪಂಚದ ದೃಷ್ಟಿಯಲ್ಲಿ ಅವಳಿಗೆ ಎಲ್ಲವೂ ಇತ್ತು. ಆದರೆ, ಆ ಎಲ್ಲಾ ಸುಖ-ಭೋಗಗಳ ನಡುವೆ ಯೂ ಅವಳ ಮನಸ್ಸಿನ ಆಳದಲ್ಲಿ ಒಂದು ರೀತಿಯ ಅತೃಪ್ತಿ ಮತ್ತು ಶೂನ್ಯತೆ ಕಾಡುತ್ತಲೇ ಇತ್ತು.

ಇನ್ನೂ ಹೆಚ್ಚು ಹಣ, ಮತ್ತಷ್ಟು ಪ್ರಶಂಸೆ ಹಾಗೂ ಜನರ ಗಮನ ಸಿಕ್ಕರೆ ತನಗೆ ನಿಜವಾದ ನೆಮ್ಮದಿ ಸಿಗಬಹುದೇನೋ ಎಂದು ಅವಳು ಭ್ರಮೆಯಲ್ಲಿದ್ದಳು. ಒಂದು ದಿನ ಎಂದಿನಂತೆ ಪಿಂಗಳೆ ಶೃಂಗಾರ ಗೊಂಡು, ಯಾರಾದರೂ ಶ್ರೀಮಂತ ವ್ಯಕ್ತಿ ಬಂದು ತನಗೆ ಅಪಾರ ಸಂಪತ್ತನ್ನು ನೀಡುವನೆಂಬ ಆಸೆಯಿಂದ ಬಾಗಿಲಲ್ಲೇ ಕಾದು ನಿಂತಳು. ಸಂಜೆ ಕಳೆದು ರಾತ್ರಿಯಾಯಿತು, ನಡುರಾತ್ರಿಯೂ ಸಮೀಪಿಸಿತು. ಆದರೆ ಅಂದು ಯಾರೊಬ್ಬರೂ ಅವಳ ಮನೆಯತ್ತ ಬರಲಿಲ್ಲ. ಬಾಗಿಲು ಬಡಿಯುವ ಶಬ್ದವಾಗಲಿ, ಹೆಜ್ಜೆಯ ಸಪ್ಪಳವಾಗಲಿ ಕೇಳಿಸಲಿಲ್ಲ. ಕಾಯ್ದು ಕಾಯ್ದು ಅವಳ ಕಣ್ಣುಗಳು ಮತ್ತು ದೇಹ ದಣಿದವು. ಕೊನೆಗೆ ಬೆಳಗಿನ ಜಾವದ ಹೊತ್ತಿಗೆ, ತನ್ನೆಲ್ಲಾ ಆಭರಣಗಳನ್ನು ಕಳಚಿ ಕೆಳಗಿಡುತ್ತಾ ಆ ಮೌನದಲ್ಲಿ ಕುಳಿತಾಗ ಅವಳಿಗೆ ಇದ್ದಕ್ಕಿ ದ್ದಂತೆ ಜ್ಞಾನೋದಯವಾಗಿ ವಿವೇಕ ಜಾಗೃತ ವಾಯಿತು.

ಇದನ್ನೂ ಓದಿ: Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

ಅವಳು ತನ್ನೊಳಗೆ ಚಿಂತಿಸಿದಳು ಕ್ಷಣಿಕವಾದ ಸುಖ, ಹಣ ಮತ್ತು ಜನರ ಮೆಚ್ಚುಗೆಗಾಗಿ ನಾನು ಎಷ್ಟು ನಿಕೃಷ್ಟವಾಗಿ ಇತರರನ್ನು ಅವಲಂಬಿಸಿದ್ದೆ! ನಶ್ವರವಾದ ದೇಹವನ್ನು ಪ್ರೀತಿಸುವ, ಕ್ಷಣ ಮಾತ್ರದಲ್ಲಿ ಬದಲಾಗುವ ಮನುಷ್ಯರಿಂದ ನಾನು ಶಾಶ್ವತ ಸುಖವನ್ನು ನಿರೀಕ್ಷಿಸುತ್ತಿದ್ದೆ. ಆದರೆ ನನ್ನ ಹೃದಯದಲ್ಲೇ ಸದಾ ನೆಲೆಸಿರುವ ಪರಮಾತ್ಮನನ್ನು (ಶ್ರೀಕೃಷ್ಣನನ್ನು) ಮರೆತಿದ್ದೆ.

ನನ್ನ ದುಃಖಕ್ಕೆ ಹೊರಗಿನ ಪ್ರಪಂಚ ಅಥವಾ ವ್ಯಕ್ತಿಗಳು ಕಾರಣರಲ್ಲ; ನನ್ನ ಅತಿಯಾದ ನಿರೀಕ್ಷೆಗಳೇ ಕಾರಣ. ಯಾವ ಕ್ಷಣದಲ್ಲಿ ಅವಳು ಲೌಕಿಕ ನಿರೀಕ್ಷೆಗಳನ್ನು ಮತ್ತು ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸಿದಳೋ, ಅದೇ ಕ್ಷಣದಲ್ಲಿ ಅವಳ ಮನಸ್ಸು ಶಾಂತವಾಗಿ ಮುಕ್ತಿಯನ್ನು ಅನುಭವಿಸಿತು. ಆಕೆಯ ಆ ರಾತ್ರಿಯ ನಿದ್ರೆ ಕೇವಲ ದೈಹಿಕ ವಿಶ್ರಾಂತಿಯಾಗಿರದೆ, ಆತ್ಮದ ಪರಮ ಶಾಂತಿಯಾಯಿತು.

ಈ ಕಥೆ ಶ್ರೀಮದ್ ಭಾಗವತ ಮಹಾ ಪುರಾಣದ 11ನೇ ಸ್ಕಂಧದ ‘ಉದ್ಧವ ಗೀತೆ’ ಭಾಗದಲ್ಲಿದೆ. ಶ್ರೀಕೃಷ್ಣನು ಉದ್ಧವನಿಗೆ ನೀಡುವ ಉಪದೇಶದಲ್ಲಿ, ಅವಧೂತ ದತ್ತಾತ್ರೇಯರು ಪ್ರಕೃತಿಯಿಂದ ಜ್ಞಾನ ಪಡೆದ 24 ಗುರುಗಳ ಕಥೆ ಬರುತ್ತದೆ. ಆ 24 ಗುರುಗಳಲ್ಲಿ ಒಬ್ಬಳಾಗಿ ಪಿಂಗಳೆ ಎಂಬ ಮಹಿಳೆ ಬಂದು ‘ವೈರಾಗ್ಯ’ ಹಾಗೂ ‘ಆಶಾಪಾಶಗಳಿಂದ ಮುಕ್ತಿ’ಯ ಮಹತ್ವವನ್ನು ಬೋಧಿಸುತ್ತಾಳೆ.

ಇಂದಿನ ಡಿಜಿಟಲ್ ಮತ್ತು ವೇಗದ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ಕಾಮೆಂಟ್ಸ್ ಮತ್ತು ಜನರ ಮೆಚ್ಚುಗೆಯ ಕೆಲವೊಮ್ಮೆ ನಮ್ಮ ದಿನದ ಸಂತೋಷದ ಕ್ಷಣಗಳು ನಿರ್ಧಾರ ವಾಗುತ್ತದೆ. ಎಷ್ಟೋ ಬಾರಿ ಇದರಿಂದ ನಾವು ಬೇಸರಗೊಳ್ಳುವುದೂ ಉಂಟು. ಅಷ್ಟೇ ಅಲ್ಲ ಸಂಬಂಧಗಳಲ್ಲಿ ಸದಾ ಅತಿಯಾದ ನಿರೀಕ್ಷೆ ಗಳನ್ನು ಇರಿಸಿಕೊಂಡು ಬಿಡುತ್ತೇವೆ. ಬೇರೆಯ ವರು ನನ್ನನ್ನು ಸದಾ ಖುಷಿಯಾಗಿಡಬೇಕು ಎಂಬ ನಿರೀಕ್ಷೆಯೇ ಕೆಲವೊಮ್ಮೆ ಆ ಸಂಬಂಧಗಳು ಮುರಿದುಬೀಳಲು ಕಾರಣವಾಗಿ ಬಿಡುತ್ತವೆ.

ಜೀವನದಲ್ಲಿ ಹೊರಗಿನ ಪ್ರಪಂಚದಿಂದ ನೆಮ್ಮದಿ ಯನ್ನು ಅರಸುವುದನ್ನು ನಿಲ್ಲಿಸಿ, ನಮ್ಮ ಆಂತರಿಕ ಶಾಂತಿ, ಗುರಿಯ ಕಡೆಗೆ ಗಮನಹರಿಸಿದಾಗ ಸಂತೃಪ್ತಿಯ ಬದುಕು ನಮ್ಮದಾಗುತ್ತದೆ. ಪ್ರಪಂಚ ನಮಗೆ ಎಲ್ಲವನ್ನೂ ಕೊಟ್ಟಾಗ ಸಂತೋಷ ನೆಮ್ಮದಿ ಸಿಗುವುದಿಲ್ಲ; ಬದಲಾಗಿ ಪ್ರಪಂಚ ದಿಂದ ನಾವು ನಿರೀಕ್ಷಿಸುವುದನ್ನು ನಿಲ್ಲಿಸಿದಾಗ ನಿಜವಾದ ಸಂತೃಪ್ತಿ ನಮ್ಮದಾಗುತ್ತದೆ.