G Prathap Kodancha Column: ಟ್ರಂಪ್ ಆಟ: ಒಂದೇ ಏಟಿಗೆ ಹಲವು ಹಕ್ಕಿ
ಮೊನ್ನೆಯ ಸೌದಿ ದೊರೆ, ಎಂಬಿಎಸ್ ಜತೆಗಿನ ಮಾತುಕತೆಯಲ್ಲಿ ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆಗೆ ಮಾತುಕತೆ ಮಾಡಿದ್ದಾರೆ. ಎರಡೂ ಕಡೆಯವರು ಇದನ್ನು ಖಚಿತಪಡಿಸಿದ ನಂತರ ಒಂದೆ ರಡು ದಿನಗಳಲ್ಲಿ ನಡೆದದ್ದು ಕುತೂಹಲಕಾರಿ ಅಂಶ. ಟ್ರಂಪ್‌ರೊಂದಿಗೆ ಮಾತುಕತೆಯ ನಂತರ ಸೌದಿ ದೊರೆ ಚೀನಾ ಅಧ್ಯಕ್ಷರೊಂದಿಗೆ ಕೂಡ ಮಾತುಕತೆ ನಡೆಸಿದರು ಎಂಬ ಅಂತಾ ರಾಷ್ಟ್ರೀಯ ರಾಜಕೀಯ ವಲಯದ ಸುದ್ದಿ ಹರಡಲಾರಂಭಿಸಿತು
ಪ್ರಸ್ತುತ
ಜಿ.ಪ್ರತಾಪ್ ಕೊಡಂಚ
ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ಸೌದಿ ದೊರೆ ಮಹಮದ್ ಬಿನ್ ಸಲ್ಮಾನ್ (ಎಂಬಿಎಸ್)ರ ಜತೆ ತಮ್ಮ ಮೊಟ್ಟಮೊದಲ ಸಾಗರೋತ್ತರ ಮಾತುಕತೆ ಆರಂಭಿಸಿದರು. ಅಮೆರಿಕ ಜಾತ್ಯತೀತ ಸಾಂವಿಧಾನಿಕ ಪ್ರಜಾಪ್ರಭುತ್ವದ ಬಲದಲ್ಲಿ ಮುನ್ನಡೆಯುತ್ತಿದ್ದರೆ ಸೌದಿಯದು ಇಸ್ಲಾಮಿಕ್ ರಾಜಪ್ರಭುತ್ವ. ಆ ದೃಷ್ಟಿಯಲ್ಲಿ ಪರಸ್ಪರ ವಿರುದ್ಧ ನಿಲುವಿನ ಪ್ರಭುತ್ವಗಳಾದರೂ ಉಭಯ ರಾಷ್ಟ್ರ ಗಳ ನಡುವಿನ ಸಖ್ಯ, ದ್ವಿಪಕ್ಷೀಯ ಸಂಬಂಧ ಹೊಸತೇನು ಅಲ್ಲ ಬಿಡಿ.
ಈ ಎರಡೂ ರಾಷ್ಟ್ರಗಳ ಕೊಡುಕೊಳ್ಳುವಿಕೆಯ ಸಂಬಂಧದ ಅಧಿಕೃತ ಮೊಹರು ಬಿದ್ದಿದ್ದು 1951ರ ಪರಸ್ಪರ ರಕ್ಷಣಾ ನೆರವಿನ ಒಪ್ಪಂದದ ಮೂಲಕ. ಇದರ ಪ್ರಕಾರ ಸೌದಿ ಅಗತ್ಯ ಪ್ರಮಾಣದ ತೈಲೋ ತ್ಪಾದನೆ ಮತ್ತು ತೈಲದ ಬೆಲೆ ಮತ್ತು ವಹಿವಾಟು ಅಮೆರಿಕನ್ ಡಾಲರಿನ ಮಾಡುವುದರ ಜತೆ ಅಮೆರಿಕದ ವಿದೇಶಾಂಗ ನಿಲುವಿನ ಸಮರ್ಥಕನಾಗಿರಲು ಒಪ್ಪಿಕೊಂಡರೆ, ಅದಕ್ಕೆ ಪ್ರತಿಯಾಗಿ ಅಮೆರಿಕವು ಸೌದಿಗೆ ಮಿಲಿಟರಿ ರಕ್ಷಣೆ ಸಹಕಾರ ನೀಡುವ ಒಡಂಬಡಿಕೆ ಆಗಿತ್ತು. ಆ ಮೂಲಕವೇ ಸೌದಿಯ ದ್ರವ ಬಂಗಾರದ ಮೇಲಿನ ಪರೋಕ್ಷ ಸ್ವಾಮ್ಯ ಸಾಧಿಸುವ ಜತೆಗೆ ಡಾಲರ್ ಅನ್ನು ಪ್ರಪಂಚ ದ ಬಲಾಢ್ಯ ಕರೆನ್ಸಿಯಾಗಿ ಹೊಮ್ಮುವಂತೆ ಮಾಡಿತ್ತು ಚಾಣಾಕ್ಷ ಅಮೆರಿಕ!
ಇದನ್ನೂ ಓದಿ: Laxman Rao Nirani Column: ಸಶಕ್ತ ಭಾರತ: ಆರ್‌ಎಸ್‌ಎಸ್ ಗುರಿ
ಹಾಗಾಗಿ ಅಂದಿನ ಅಮೆರಿಕನ್ ಅಧ್ಯಕ್ಷರಾಗಿದ್ದ ಹ್ಯಾರಿ ಎಸ್ ಟ್ರುಮೆನ್ ಕೂಡ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದಿದ್ದರು. ಅಮೆರಿಕದ ಅಣತಿಯಂತೆ ಸೌದಿ ನಡೆಯುತ್ತಿದ್ದರಿಂದ ಬೇರೆಲ್ಲ ಕಡೆ ಚಿಕ್ಕಪುಟ್ಟ ವಿಷಯಕ್ಕೆ, ನಿರಂಕುಶತೆ ಎಂದು ದೊಡ್ಡಣ್ಣನ ವೇಷದಲ್ಲಿ ಮೂಗುತೂರಿಸುವ ಅಮೆರಿಕ ವು ಸೌದಿ ಮಟ್ಟಿಗೆ ಜಾಣ ಕುರುಡುತನ ತೋರಿಸಿ ಮುನ್ನಡೆಯುತ್ತಿತ್ತು.
ಅಂಥಹ ಸಂಧರ್ಭಗಳ, ಇಂತಹ ನಡೆಗಳನ್ನು ಗಮನಿಸಿಯೂ ದೊಡ್ಡವರ ವ್ಯವಹಾರವೆಂದು ಜಗತ್ತಿನ ಅನೇಕ ರಾಷ್ಟ್ರಗಳು ಕಣ್ಣು ಮಿಟುಕಿಸಿ ಸುಮ್ಮನಾಗಿದ್ದವು. ಆದರೆ ಇತ್ತೀಚಿನ ಕೆಲ ವರ್ಷ ಗಳಿಂದ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯ, ಕುಸಿಯುತ್ತಿರುವ ಅಮೆರಿಕದ ಬಲಾಢ್ಯತೆಗಳನ್ನು ಅರಿತ ಸೌದಿ, ತೈಲ ಬೆಲೆ, ತೈಲ ಉತ್ಪಾದನೆಯ ವಿಷಯಕ್ಕೆ ಬಂದಾಗ ಅಮೆರಿಕದ ಬೇಡಿಕೆಗೆ ಮುಂಚಿನಂತೆ ಬಗ್ಗದೇ ತನ್ನಿಷ್ಟದಂತೆ ಮುಂದುವರಿದ ಕೆಲವು ನಿದರ್ಶನಗಳಿವೆ.
ಚೀನಾದೊಂದಿಗಿನ ತಂತಮ್ಮ ಕರೆನ್ಸಿಯಲ್ಲಿಯೇ ವ್ಯವಹರಿಸುವ ಪೆಟ್ರೋ-ರಿಯಾಲ್/ಪೆಟ್ರೋ-ಯುವಾನ್ ಪ್ರಸ್ತಾಪಗಳನ್ನು ಸೇರಿ, ರಷ್ಯಾದೊಂದಿಗೆ ಸಂಬಂಧ, ಬ್ರಿಕ್ಸ್ ದೇಶಗಳನ್ನು ಸೇರುವ ಪ್ರಸ್ತಾಪ, ಆ ಮೂಲಕ ಡಾಲರ್‌ಗೆ ಬದಲಾಗಿ ಬ್ರಿಕ್ಸ್ ಕರೆನ್ಸಿ ಹೊರತರುವ ಚರ್ಚೆಗಳಲ್ಲಿ ಸೌದಿ ಕೂಡ ಅಮೆರಿಕದೊಂದಿಗೆ ಕಣ್ಣಾಮುಚ್ಚಾಲೆ ಆಡಿತ್ತು.
ಮೊನ್ನೆಯ ಸೌದಿ ದೊರೆ, ಎಂಬಿಎಸ್ ಜತೆಗಿನ ಮಾತುಕತೆಯಲ್ಲಿ ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆಗೆ ಮಾತುಕತೆ ಮಾಡಿದ್ದಾರೆ. ಎರಡೂ ಕಡೆಯವರು ಇದನ್ನು ಖಚಿತಪಡಿಸಿದ ನಂತರ ಒಂದೆರಡು ದಿನಗಳಲ್ಲಿ ನಡೆದದ್ದು ಕುತೂಹಲಕಾರಿ ಅಂಶ. ಟ್ರಂಪ್‌ರೊಂದಿಗೆ ಮಾತುಕತೆಯ ನಂತರ ಸೌದಿ ದೊರೆ ಚೀನಾ ಅಧ್ಯಕ್ಷರೊಂದಿಗೆ ಕೂಡ ಮಾತುಕತೆ ನಡೆಸಿದರು ಎಂಬ ಅಂತಾ ರಾಷ್ಟ್ರೀಯ ರಾಜಕೀಯ ವಲಯದ ಸುದ್ದಿ ಹರಡಲಾರಂಭಿಸಿತು.
ಈ ಸುದ್ದಿ ಶ್ವೇತಭವನದ ಗೋಡೆಗಳಿಗೂ ಕೇಳಿಸಿರದಿರುತ್ತದೆಯೇ? ಮೊದಲ ಚೀನಾ ಅಮೆರಿಕದ ಕೆಂಗಣ್ಣಿನಲ್ಲಿದೆ. ಟ್ರಂಪ್, ಅಮೆರಿಕದ ಸಾರ್ವಭೌಮತ್ವ ಮರುಸ್ಥಾಪಿಸುವುದೇ ಗುರಿ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದು ಬಂದ ನೂತನ ಅಧ್ಯಕ್ಷರು. ಅವರದ್ದು ಆನೆ ನಡದದ್ದೇ ದಾರಿ ಎಂದು ಮುನ್ನುಗ್ಗುತ್ತಿರುವ ಪ್ರವೃತ್ತಿ. ಮರು ದಿನವೇ ಮಾಧ್ಯಮದರು ಕೇಳಿದ ಸೌದಿ ಅಮೆರಿಕ ನಡುವಿನ ಸಂಬಂಧ ಪ್ರಶ್ನೆಗೆ, ‘ಎಂಬಿಎಸ್ ಜತೆ ಮಾತಾಡಿದ್ದೇನೆ.
ಅವರು 600 ಬಿಲಿಯನ್ ಡಾಲರ್ ಹೂಡಿಕೆಗೆ ಒಪ್ಪಿಯಾಗಿದೆ, ಆದರೆ ನಾನು ಒಂದು ಟ್ರಿಲಿಯನ್ ಹೂಡಿಕೆ ಮಾಡಲು ಆಗ್ರಹಿಸುತ್ತೇನೆ. ಅವರಿಗೇನು? ಬೇಕಾದಷ್ಟು ದುಡ್ಡಿದೆ. ಅದೂ ದ್ರವ ಬಂಗಾರ ವೆನಿಸಿಕೊಂಡ ಪೆಟ್ರೋಲ್ ಸಂಪನ್ಮೂಲಗಳ ಮೂಲಕ ಬಂದ ಹಣವಲ್ಲವೇ? ನಮ್ಮಲ್ಲೂ ಬೇಕಾ ದಷ್ಟು ದ್ರವ ಬಂಗಾರವಿದೆ. ನಾನು ಹೇಳಿದರೆ ಅವರು ನಮ್ಮಲ್ಲಿ ಹೂಡಿಕೆ ಮಾಡದೆ ಇರಲಾಗುತ್ತ ದೆಯೇ?’ ಎಂಬರ್ಥದ ಖಚಿತತೆಯ ಮಾತಾಡಿ ಬಿಟ್ಟಿದ್ದಾರೆ.
ಇದೇನು ಬಾಯಿ ಮಾತಿಗೆ ಹೇಳಿ ಮುನ್ನಡೆದ ನಡೆಯಲ್ಲ, ತಮ್ಮೊಂದಿಗಿನ ಮಾತುಕತೆಯ ನಂತರ ತಮಗಾಗದವರ ಜತೆ ಮಾತಾಡಿದ್ದಕ್ಕೆ ವಿಧಿಸಿದ ದಂಡವೇ ಎಂಬ ಗುಸು ಗುಸು ಅಂತಾರಾಷ್ಟ್ರೀಯ ವಿದೇಶಾಂಗ ವ್ಯವಹಾರಗಳ ಪಡಸಾಲೆಗಳಲ್ಲಿ ಸದ್ಯ ಹರಿದಾಡುತ್ತಿರುವ ಸುದ್ದಿ. ಇದು ಒಂದು ರೀತಿಯಲ್ಲಿ ಮೊದಲ ಕರೆಗೆ ಬಿದ್ದ ಹೊರೆಯೆಂದು ಸೌದಿ ಸಾಮ್ರಾಟರಿಗೆ ಎನಿಸಿರಲಿಕ್ಕಿಲ್ಲ.
ವಿದೇಶಾಂಗ ವ್ಯವಹಾರಗಳ ಪಡಸಾಲೆಯಲ್ಲಿ ಹರಿದಾಡುವ ಸುದ್ದಿಗಳ ಪ್ರಕಾರ, ಹೊರೆಯ ಜತೆಗೆ ಅಮೆರಿಕದ ಹೊರತಾಗಿ ಸೌದಿ ಬೇರೆ ಕಡೆ ಹೂಡಿಕೆ ಮಾಡದಂತೆ ಅವರೆಲ್ಲ ಹೂಡಿಕೆ ಅಮೆರಿಕದಲ್ಲಿ ಕಟ್ಟಿಹಾಕಿ, ಆ ಮೂಲಕ ಅಮೆರಿಕನ್ ಡಾಲರ್ ಬಲಹೀನಗೊಳಿಸುವ ಪ್ರಯತ್ನಗಳಿಗೆ ತಿಲಾಂಜಲಿ ಇಡುವ ಮಾಸ್ಟರ್ ಸ್ಟ್ರೋಕ್ ಟ್ರಂಪ್ ರದ್ದು ಎನ್ನಲಾಗುತ್ತಿದೆ.
ನಿರೀಕ್ಷೆಗೆ ಸಿಲುಕದೆ, ವಿವಾದಕ್ಕೆ ಹೆದರದೆ, ವಿವಾದವನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳುವ ಅಪ್ರತಿಮ ಚಾಕಚಕ್ಯತೆ ಟ್ರಂಪ್‌ರದ್ದು. ಇದರೊಂದಿಗೆ ಡಿ-ಡಾಲರೈಸೇಷನ್ ಕನಸು ಕಾಣುತ್ತಿರುವ ಅಮೆರಿಕ ವಿರೋಧಿ ಪಡೆಗಳಿಗೆ ಸದ್ಯಕ್ಕಂತೂ ಟ್ರಂಪ್ ಕ್ಷಿಪ್ರ ಪ್ರಹಾರವೇ ಮಾಡಿದ್ದಾರೆ. ಹಾಗಾಗಿ ಇಲ್ಲಿಯೂ ಟ್ರಂಪ್‌ರ ರಂಪ, ರಂಪಾಟ ಒಂದು ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದುರುಳಿಸಿದಂತಿದೆ. ಹೇಳಿದ ಹಾಗೆ ಕೇಳಿ, ಇಲ್ಲದಿದ್ರೆ ಏನು ಮಾಡ್ತೀನಿ ನೋಡಿ, ನೋಡ್ತಾ ಇರಿ!..
ಅಕ್ರಮ ವಲಸಿಗರನ್ನು ಹೊರದಬ್ಬುತ್ತೇನೆ, ಅಮೆರಿಕವನ್ನು ಇನ್ನಷ್ಟು ಸುಭದ್ರ, ಸುರಕ್ಷಿತ ವಾಗಿಸು ತ್ತೇನೆ ಎಂಬ ಚುನಾವಣಾ ಪೂರ್ವ ಆಶ್ವಾಸನೆಗಳ ಮೇಲೆ ಈ ಬಾರಿ ಅಮೆರಿಕದಲ್ಲಿ ಗೆದ್ದು ಬಂದಿ ದ್ದಾರೆ ಟ್ರಂಪ್. ಜನವರಿ ಇಪ್ಪತ್ತರ ಅಧಿಕಾರ ಸ್ವೀಕಾರದ ದಿನದಿಂದಲೇ ಹತ್ತು ಹಲವು ಆದೇಶ ಗಳನ್ನು ಹೊರಡಿಸಿ ಎಂದಿನಂತೆ ತನ್ನ ಕ್ಷಿಪ್ರ ಕಾರ್ಯಾರಂಭ ಭರ್ಜರಿಯಾಗಿಯೇ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಇನ್ನಾವ ಹೊಸ ಆದೇಶ ಹೊರಬರುತ್ತಿದೆಯಪ್ಪಾ? ಎಂದು ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ಸದ್ಯ ಅಮೆರಿಕ ಮತ್ತದರ ಕೆಂಗಣ್ಣಿಗೆ ಗುರಿಯಾಗಿರುವ ಸುತ್ತಲಿನ ದೇಶಗಳದ್ದು!
ಅಕ್ರಮ ವಲಸಿಗರ, ಅದರಲ್ಲೂ ಕ್ರಿಮಿನಲ್ ಹಿನ್ನೆಲೆಯ ವಲಸಿಗರನ್ನು ಹುಡುಕಿ ಹಿಡಿದು, ಅವರ ವರ ದೇಶಗಳಿಗೆ ವಾಪಸು ಕಳುಗಿಸುತ್ತೇವೆ ಎಂಬ ಅವರ ನಿಲುವ ಸದ್ಯಕ್ಕೆ ಸಡಿಲವಾಗುವಂತೆ ಕಾಣು ತ್ತಿಲ್ಲ. ಇಂತಹದೇ ಒಂದು ಪ್ರಯತ್ನದಲ್ಲಿ ಕೊಲಂಬಿಯಾದ ಸುಮಾರು 200 ಅಕ್ರಮ ವಲಸಿ ಗರನ್ನು ಅಮೆರಿಕ ಮಿಲಿಟರಿ ವಿಮಾನದಲ್ಲಿ ಕೊಲಂಬಿಯಾಕ್ಕೆ ಕಳುಹಿಸಿದೆ. ಈ ವಾಪಸಾತಿಯ ಪ್ರಕ್ರಿಯೆ ಯಲ್ಲಿ ‘ಅಕ್ರಮ ವಲಸಿಗರಿಗೆ ಕೈ-ಕೊಳ ತೊಡಿಸಿ ಕಳುಹಿಸಿಕೊಡಲಾಗಿದೆ.
ನಮ್ಮೊಂದಿಗೆ ಚರ್ಚಿಸಿಲ್ಲ, ನಮ್ಮವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂಬಿತ್ಯಾದಿ ತಕರಾರು ಕೊಲಂಬಿಯಾ ಅಧ್ಯಕ್ಷರದ್ದು. ಇವೆಲ್ಲ ಕಾರಣಗಳಿಂದ ತಮ್ಮ ದೇಶದವರೇ ಆದ ಅಕ್ರಮ ಅಮೆರಿಕ ವಲಸಿಗರನ್ನು ಹೊತ್ತುತಂದ ವಿಮಾನಗಳನ್ನು ಕೊಲಂಬಿಯಾದ ನೆಲದಲ್ಲಿ ಇಳಿಯಲು ಅನುಮತಿ ನೀಡದೇ ಕೊಲಂಬಿಯಾ ಅಧ್ಯಕ್ಷ ಗುತ್ಸಾವೋ ಪೆಟ್ರೋ ತಡೆ ಹಿಡಿದಿದ್ದಾರೆ.
ಟ್ರಂಪ್‌ರ ರಂಪ ಕಡಿಮೆಯದೇ. ರಚ್ಚೆ ಹಿಡಿದರೆ, ಟ್ರಂಪ್ ಸಾಹೇಬರೇನು ಹಿಡಿದ ಪಟ್ಟು ಬಿಡು ವವರೇ? ಇಳಿಯ ಬಿಡದಿದ್ದರೆ ಕೊಲಂಬಿಯಾದ ಮೇಲೆ ಅಧಿಕ ತೆರಿಗೆ ಹೊರೆ ಹೊರಿಸುತ್ತೇವೆ, ರಾಜ ತಾಂತ್ರಿಕ ಸಂಬಂಧ ನಿಲ್ಲಿಸುತ್ತೇವೆ, ಕೊಲಂಬಿಯನ್‌ರ ಅಮೆರಿಕನ್ ವೀಸಾ ರದ್ದುಗೊಳಿಸಿ ಬಿಡು ತ್ತೇವೆ ಎಂಬ ಬಾಣಗಳನ್ನು ಚಕಚಕನೆ ಎಸೆದೇ ಬಿಟ್ಟಿದ್ದಾರೆ. ಬರಿಯ ಮಾತಿನ ಬರೆಯಲ್ಲ, ಇಂತಹ ಎಲ್ಲ ಆದೇಶಗಳನ್ನೂ ಕೆಲವೇ ಗಂಟೆಗಳಲ್ಲಿ ಹೊರಡಿಸಿಯೇ ಬಿಟ್ಟಿದ್ದಾರೆ. ಮೊದಲಿಗೆ ನಾವು ಪ್ರತಿ ಬಂಧಕ ತೆರಿಗೆ ವಿಧಿಸುತ್ತೇವೆ ಎಂದು ವೀರಾವೇಶದ ಮಾತುಗಳನ್ನಾಡಿದ ಕೊಲಂಬಿಯನ್ ಅಧ್ಯ ಕ್ಷರು, ಕೇವಲ 2 ಗಂಟೆಗಳಲ್ಲಿ ತಮ್ಮೆಲ್ಲ ಶಸ್ತ್ರ ತ್ಯಾಗ ಮಾಡಿ ಅಮೆರಿಕದ ಎಲ್ಲ ಷರತ್ತುಗಳಿಗೆ ಒಪ್ಪಿ ಕೊಂಡು ತಮ್ಮ ಅಕ್ರಮ ವಲಸಿಗರನ್ನು ಕೊಲಂಬಿಯಾದಲ್ಲಿ ಇಳಿಸಿಕೊಂಡಿದೆ.
ಇವೆರೆಡೂ ದೇಶಗಳ ನಡುವೆ ಚೌಕಾಶಿ ನಡೆಯುತ್ತಿರುವ 2 ಗಂಟೆಗಳ ಕಾಲ ಇಳಿಯುತ್ತೇವೆಯೂ, ಇಲ್ಲವೋ? ಎಂಬುದನ್ನು ಅರಿಯದೆ ವಿಮಾನದೊಳಗೆ ದಿಗ್ಬ್ರಾಂತರಾಗಿ ಕುಳಿತ ಗಡಿಪಾರಾಗಿರುವ ಅಕ್ರಮ ವಲಸಿಗರ ಕಥೆ ಏನಾಗಿರಬೇಕು ಹೇಳಿ? ಅಂದ ಹಾಗೆ ಬ್ರೆಜಿಲ್‌ಗೆ ಅಮೆರಿಕ ಗಡಿಪಾರು ಮಾಡಿ ದ ಅಕ್ರಮ ವಲಸಿಗರಿಗೂ ಕೈ-ಕೊಳ ತೊಡಿಸಿ ಕಳುಹಿಸಿ ಕೊಡಲಾಗಿದೆ. ಅದಕ್ಕೆ ಬ್ರೆಜಿಲ್ ಕೂಡ ಮಾನ ವ ಹಕ್ಕುಗಳ ಉಲ್ಲಂಘನೆ ಎಂದು ತಕರಾರು ತೆಗೆಯುತ್ತಿದೆ.
ತಮ್ಮದೇ ದೇಶದಲ್ಲಿ ಬದುಕುವ ಹಕ್ಕು ಸಹ್ಯವೆನಿಸದೆ ಅಕ್ರಮ ವಲಸೆ ಬಂದ ವಲಸಿಗರ ಮಾನವ ಹಕ್ಕು ಉಲ್ಲಂಘನೆ ಎಂದು ಇಂತಹ ದೇಶಗಳು ಕೂಗಿಕೊಳ್ಳುವ ಬದಲು ತಮ್ಮ ತಮ್ಮ ದೇಶದ ಜನಜೀವದ ಭರವಸೆಯನ್ನೇ ತೊರೆದು ’ಅಕ್ರಮ’ ವಲಸೆ ಹೋಗಬಾರದಂತಹ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇಕೆ? ವಲಸೆ ತಪ್ಪಲ್ಲ, ಬದುಕು ಕಟ್ಟಿಕೊಳ್ಳುವ ಆಸೆ, ಪ್ರಯತ್ನ, ಆದರೆ ಅಕ್ರಮ ವಲಸೆ ದುರಾಸೆಯೆನ್ನದೇ ವಿಧಿಯಿಲ್ಲ. ಆದರೆ ಟ್ರಂಪ್ ಸಾಹೇಬರ ಪ್ರಕಾರ ಇದು ಟ್ರೈಲರ್, ಪಿಕ್ಚರ್ ಅಭೀ ಬಾಕಿ ಹೈ. ಎಲ್ಲರಿಗೂ ಅವರzಂದೇ ಮಂತ್ರ.. ಹೇಳಿದ ಹಾಗೆ ಕೇಳಿ, ಇಲ್ಲದಿದ್ರೆ ಏನು ಮಾಡ್ತೀನಿ ನೋಡಿ, ನೋಡ್ತಾ ಇರಿ!..