ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಜೀವಾಮೃತವೇ ವಿಷವಾದರೆ...

ಬಿಹಾರ ರಾಜ್ಯದ ಆರು ಜಿಲ್ಲೆಗಳಲ್ಲಿನ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹಾಲಿನಲ್ಲಿನ ಯುರೇನಿಯಂ ಅಂಶ ಹೆಚ್ಚಾದಲ್ಲಿ ಶಿಶುಗಳನ್ನು ಅದು ಬಾಧಿಸುವುದರ ಜತೆಗೆ ದೇಹದ ತೂಕವನ್ನೂ ತಗ್ಗಿಸುತ್ತದೆ. ಯುರೇನಿಯಂ ಅಂಶವು ಮೂತ್ರಪಿಂಡದ ಹಾನಿ, ನರದೌರ್ಬಲ್ಯ, ಅರಿವಿನ ವಿಳಂಬಕ್ಕೂ ಕಾರಣವಾಗಬಹು ದಾಗಿದೆ, ಕ್ಯಾನ್ಸರ್ ಅಮರಿಕೊಳ್ಳುವ ಅಪಾಯವನ್ನೂ ಹೆಚ್ಚಿಸಬಲ್ಲದಾಗಿದೆ ಎಂಬುದು ಬಲ್ಲವರ ಅಭಿಮತ.

Vishwavani Editorial: ಜೀವಾಮೃತವೇ ವಿಷವಾದರೆ...

-

Ashok Nayak
Ashok Nayak Nov 25, 2025 10:11 AM

ಬಿಹಾರ ರಾಜ್ಯದ ಆರು ಜಿಲ್ಲೆಗಳಲ್ಲಿನ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹಾಲಿನಲ್ಲಿನ ಯುರೇನಿಯಂ ಅಂಶ ಹೆಚ್ಚಾದಲ್ಲಿ ಶಿಶುಗಳನ್ನು ಅದು ಬಾಧಿಸುವುದರ ಜತೆಗೆ ದೇಹದ ತೂಕವನ್ನೂ ತಗ್ಗಿಸುತ್ತದೆ. ಯುರೇನಿಯಂ ಅಂಶವು ಮೂತ್ರಪಿಂಡದ ಹಾನಿ, ನರದೌರ್ಬಲ್ಯ, ಅರಿವಿನ ವಿಳಂಬಕ್ಕೂ ಕಾರಣವಾಗಬಹುದಾಗಿದೆ, ಕ್ಯಾನ್ಸರ್ ಅಮರಿಕೊಳ್ಳುವ ಅಪಾಯವನ್ನೂ ಹೆಚ್ಚಿಸಬಲ್ಲ ದಾಗಿದೆ ಎಂಬುದು ಬಲ್ಲವರ ಅಭಿಮತ. ಇದು ನಿಜಕ್ಕೂ ತಲ್ಲಣದ ಸಂಗತಿಯೇ. ಮಕ್ಕಳಿಗೆ ಬಾಹ್ಯ ಸ್ವರೂಪದಲ್ಲಿ ನೀಡುವ ಆಹಾರದಲ್ಲಿ ಹೆಚ್ಚು- ಕಮ್ಮಿ ಆಗಿರಲು, ನಂಜು ಸೇರಿಕೊಳ್ಳಲು ಸಾಧ್ಯವಿದೆ; ಆದರೆ ಅಮೃತಸದೃಶವಾದ ತಾಯಿಯ ಹಾಲು ಹಾಗಾಗುವು ದಿಲ್ಲ ಎಂಬುದು ಜನಮಾನಸದಲ್ಲಿರುವ ಸ್ಥಾಪಿತ ಗ್ರಹಿಕೆ.

ಇದನ್ನೂ ಓದಿ: Vishwavani Editorial: ಬಯಲಾದ ಸ್ಫೋಟಕ ಸತ್ಯ

ಆದರೆ ಬದಲಾಗುತ್ತಿರುವ ಜೀವನಶೈಲಿ, ಪರಿಸರ ವ್ಯವಸ್ಥೆಯಲ್ಲಿನ ಅತಿರೇಕಗಳು ಮುಂತಾದ ಕಾರಣಗಳಿಂದಾಗಿ ಈ ಗ್ರಹಿಕೆಯೂ ಕುಸಿಯುವಂತಾಗಿದೆ. ಅಭಿವೃದ್ಧಿ ಚಟುವಟಿಕೆಗಳ ಹೆಸರಿನಲ್ಲಿ ನಡೆಯುತ್ತಿರುವ ಮಿತಿಮೀರಿದ ಕೈಗಾರಿಕೀಕರಣ, ಅತಿರೇಕದ ಪ್ರಮಾಣದಲ್ಲಿ ರುವ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ, ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆಯೇ ವಿಲೇವಾರಿ ಮಾಡುವಿಕೆ ಮುಂತಾದ ನಡೆಗಳಿಂದಾಗಿ ಸೀಸ, ಪಾದರಸ, ಆರ್ಸೆನಿಕ್ ಮುಂತಾದ ವಿಷಕಾರಿ ಅಂಶಗಳು ಮಣ್ಣು, ನೀರು ಮತ್ತು ಗಾಳಿಯಲ್ಲಿ ಸೇರಿ ಕೊಂಡು, ಪರಿಣಾಮವಾಗಿ ಯುರೇನಿಯಂನಂಥ ಅಪಾಯಕಾರಿ ವಿಷವು ತಾಯಿಯ ಎದೆಹಾಲನ್ನೂ ಸೇರಿಕೊಳ್ಳುವಂತಾಗಿದೆ ಎಂಬುದು ತಜ್ಞರಿಂದ ಹೊಮ್ಮಿರುವ ವಿವರಣೆ.

ಈ ಬೆಳವಣಿಗೆಯನ್ನು ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬೇಕು. ಮೇಲೆ ಉಲ್ಲೇಖಿಸಿರುವ ಅನಪೇಕ್ಷಿತ ಚಟುವಟಿಕೆಗಳನ್ನು ತಹಬಂದಿಗೆ ತರುವುದು ಕೇವಲ ಸರಕಾರದ ಕೆಲಸವಷ್ಟೇ ಅಲ್ಲ; ಸಂಘ-ಸಂಸ್ಥೆಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ನಾವುಗಳು ಕೂಡ ಇದಕ್ಕೆ ಕೈಜೋಡಿಸಬೇಕು. ಅದು ಈ ಕ್ಷಣದ ನಿವಾರ್ಯತೆ.