ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪದ ಹಕೀಕತ್ತು !

ಅಂದಿನ ಮುಖ್ಯಮಂತ್ರಿಗಳು ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯನ್ನು ರಚಿಸಿದರು. ಈ ಸಮಿತಿಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ ದಾಸ್ ವಹಿಸಿದ್ದರೆ, ಸಾಹಿತಿ-ಚಿಂತಕ-ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ವಕೀಲರೂ, ತನಿಖಾ-ಪತ್ರಕರ್ತರೂ, ಚಿಂತಕ ಸಾಹಿತಿಗಳೂ ಆದ ಸಿ.ಎಸ್. ದ್ವಾರಕನಾಥ, ಪತ್ರಕರ್ತ-ಸಾಹಿತಿ ಸರಜೂ ಕಾಟ್ಕರ್, ಸಾಹಿತಿ ಪ್ರೊ. ರಾಮ ಕೃಷ್ಣ ಮರಾಠೆ, ಸಂಶೋಧಕ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ-ಸಂಶೋಧಕ ಪ್ರೊ. ಮುಜಾಫರ್ ಅಸಾದಿ ಮತ್ತು ಲೇಖಕಿ-ಸಂಶೋಧಕಿ ಹನುಮಾಕ್ಷಿ ಗೋಗಿ ಈ ಸಮಿತಿಯ ಸದಸ್ಯರಾ ಗಿದ್ದರು.

ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪದ ಹಕೀಕತ್ತು !

-

Ashok Nayak
Ashok Nayak Dec 15, 2025 8:02 AM

ಬಸವ ಮಂಟಪ (ಭಾಗ-1)

ರವಿ ಹಂಜ್

ಪ್ರತ್ಯೇಕ ಧರ್ಮ ಶಿಫಾರಸನ್ನು ಕೇಂದ್ರಕ್ಕೆ ಕಳಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪಕ್ಷ ರಾಜಕೀಯ ದಾಳಕ್ಕೆ ಅಖಂಡ ವೀರಶೈವ ಲಿಂಗಾಯತರು ಬಲಿಯಾದರು. ಒಂದು ವೇಳೆ ಈ ನಾಯಕರ ಉದ್ದೇಶ ಅಖಂಡ ವೀರಶೈವ ಲಿಂಗಾಯತರನ್ನು ಉದ್ಧಾರ ಮಾಡುವುದೇ ಆಗಿದ್ದರೆ, ಈಗಲೂ ಯಾವ ಕೇಂದ್ರದ ಒಪ್ಪಿಗೆ ಬೇಕಿಲ್ಲದ ಒಂದು ಕಾರ್ಯವನ್ನು ಇವರು ಮಾಡಬಹುದು.

ಹಿಂದಿನ ಲೇಖನದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಇರುವ ಕೇಂದ್ರ ಸರಕಾರದ ಕೆಲವು ಯೋಜನೆಗಳನ್ನು ಗಮನಿಸಿದ್ದೇವಷ್ಟೇ. ಅದೇ ರೀತಿ ಇಂದಿನ ಲೇಖನದಲ್ಲಿ, ಕೇಂದ್ರ ಸರಕಾರವು ಧರ್ಮಾತೀತವಾಗಿ ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಗಮನಿಸೋಣ.

ಪ್ರಮುಖವಾಗಿ ಕೇಂದ್ರ ಸರಕಾರವು ವಸತಿ, ಆರೋಗ್ಯ, ಹಣಕಾಸು, ಆಹಾರ, ಗ್ರಾಮಾಂತರ ಅಭಿವೃದ್ಧಿ, ಕೌಶಲ ತರಬೇತಿ ಮತ್ತು ಸಾಮಾಜಿಕ ಭದ್ರತೆ ಮೊದಲಾದ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಇವುಗಳ ಉದ್ದೇಶವೆಂದರೆ ಕೈಗೆಟಕುವ ವಸತಿ, ಆರೋಗ್ಯ ರಕ್ಷಣೆ, ಹಣಕಾಸು ಸೌಲಭ್ಯ, ಉದ್ಯೋಗವಲ್ಲದೆ ಶುದ್ಧ ಅಡುಗೆ ಅನಿಲ ಮತ್ತು ಶೌಚಾಲಯಗಳಂಥ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.

ಇದನ್ನೂ ಓದಿ: Ravi Hunj Column: ಡಾಲ್ಡಾವನ್ನೇ ನಂದಿನಿ ತುಪ್ಪ ಎನ್ನುವ ತಪ್ಪು ಕಲ್ಪನೆ ಸೃಷ್ಸಿಸಿದವರು !

ಅಂಥ ಕೆಲವು ಯೋಜನೆಗಳು ಹೀಗಿವೆ:

ವಸತಿ ಮತ್ತು ಸ್ವಚ್ಛತೆಗಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಬಡವರಿಗೆ ಕೈಗೆಟಕುವ ವಸತಿ. ‘ಸ್ವಚ್ಛ್ ಭಾರತ್ ಮಿಷನ್’ ಅಡಿಯಲ್ಲಿ ಎಲ್ಲರಿಗೂ ಶೌಚಾಲಯಗಳು, ಸ್ವಚ್ಛತೆಯನ್ನು ಉತ್ತೇಜಿಸುವುದು.‌

‘ಜಲ್ ಜೀವನ್ ಮಿಷನ್’ ಅಡಿಯಲ್ಲಿ ಪ್ರತಿ ಮನೆಗೂ ನೀರು ಸಂಪರ್ಕ.

ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗಾಗಿ, ‘ಆಯುಷ್ಮಾನ್ ಭಾರತ್’ ಅಡಿಯಲ್ಲಿ ದ್ವಿತೀಯಕ ಮತ್ತು ತೃತೀಯಕ ಆರೈಕೆಗಾಗಿ ಆರೋಗ್ಯ ವಿಮೆ.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆಯುಷ್ಮಾನ್ ಭಾರತ್‌ನ ಭಾಗವಾಗಿ ಆರೋಗ್ಯ ಸೇವೆಗಳಿಗೆ ಪ್ರವೇಶ.

ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ವೃದ್ಧಾಪ್ಯ ಪಿಂಚಣಿ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಆಕಸ್ಮಿಕ ವಿಮೆ.

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಜೀವ ವಿಮೆ.

ಹಣಕಾಸು ಸೇರ್ಪಡೆ ಮತ್ತು ಜೀವನೋಪಾಯಕ್ಕಾಗಿ, ಪ್ರಧಾನಮಂತ್ರಿ ಜನ ಧನ್ ಯೋಜನೆ ಅಡಿಯಲ್ಲಿ ಎಲ್ಲರಿಗೂ ಬ್ಯಾಂಕಿಂಗ್, ಸಾಲ ಮತ್ತು ವಿಮೆಗೆ ಪ್ರವೇಶ.

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮ ಗಳಿಗೆ ಸಾಲ; ‘ಪಿಎಂ ಸ್ವನಿಧಿ’ ಅಡಿಯಲ್ಲಿ ರಸ್ತೆ ವ್ಯಾಪಾರಿಗಳಿಗೆ ಸಾಲ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಖಾತ್ರಿಯಾದ ಕೂಲಿ ಉದ್ಯೋಗ.

ಪಿಎಂ ವಿಶ್ವಕರ್ಮಾ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ಮತ್ತು ಕರಕುಶಲ ಕೆಲಸಗಾರರಿಗೆ ಬೆಂಬಲ.

ಆಹಾರ ಮತ್ತು ಇಂಧನಕ್ಕಾಗಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಉಚಿತ ಆಹಾರಧಾನ್ಯ.

ಪ್ರಧಾನಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ.

ಒಂದೇ ರಾಷ್ಟ್ರ, ಒಂದೇ ರೇಷನ್ ಕಾರ್ಡ್ ಯೋಜನೆಯ ಅಡಿಯಲ್ಲಿ ಆಹಾರ ಭದ್ರತಾ ಸೌಲಭ್ಯದ ಸುಲಭ ಬದಲಾವಣೆ (ಪೋರ್ಟಬಿಲಿಟಿ).

ಕೌಶಲಾಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ, ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ ಅಡಿಯಲ್ಲಿ ಯುವಕರಿಗೆ ಕೌಶಲ ತರಬೇತಿ.

ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಸಮಗ್ರ ಕೌಶಲಾಭಿವೃದ್ಧಿ ಕಾರ್ಯಕ್ರಮ.

ಕೃಷಿ ಮತ್ತು ಗ್ರಾಮಾಂತರ ಅಭಿವೃದ್ಧಿಗಾಗಿ, ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಆದಾಯ ಬೆಂಬಲ.

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಅಡಿಯಲ್ಲಿ ಗ್ರಾಮೀಣ ಯುವಕರ ಕೌಶಲ ತರಬೇತಿ.

ಮಹಿಳಾ ಮತ್ತು ಬಾಲ ಅಭಿವೃದ್ಧಿಗಾಗಿ, ಪಿಎಂ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ ಪ್ರಸೂತಿ ಲಾಭಗಳು.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ/ಸಬಲೀಕರಣ.

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆ.

ಹೀಗೆ ಕೇಂದ್ರ ಸರಕಾರದ ಅನೇಕ ಯೋಜನೆಗಳಿವೆ. ಇದೇ ರೀತಿ ರಾಜ್ಯ ಸರಕಾರಗಳೂ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅಸಲಿಗೆ ಈ ಎಲ್ಲಾ ಯೋಜನೆಗಳು ನೇರವಾಗಿ ವೈಯಕ್ತಿಕ ನಾಗರಿಕರನ್ನು ಕುರಿತಾಗಿವೆಯೇ ಹೊರತು ಯಾವುದೇ ಸೀಮಿತ ಜಾತಿ, ಮತದ ಪರಿಮಿತಿಯಲ್ಲಲ್ಲ. ಇನ್ನು ಬಹುಸಂಖ್ಯಾತ ಹಿಂದೂ ಜಾತಿಯಾಧಾರಿತ ಪ್ರವರ್ಗಗಳಿಗೆ ಅನುಗುಣವಾದ ಮೀಸಲಾತಿ ಸೌಲಭ್ಯಗಳಿವೆ. ಔದ್ಯೋಗಿಕವಾಗಿ ಜಾತಿಯಾಧಾರಿತ ಮೀಸಲಾತಿಯನ್ನು ಸಹಜವಾಗಿ ಜನರು ತಾವಾಗಿಯೇ ಹುಡುಕಿಕೊಂಡು ಪಡೆದುಕೊಳ್ಳುತ್ತಾರೆ. ಜಾತಿ ಪ್ರಮಾಣಪತ್ರ ಎನ್ನುವುದು ಒಂದು ಅತ್ಯಂತ ತುರ್ತಿನ ದಾಖಲೆಯೇ ಎನಿಸಿರುವ ಕಾರಣ ಈ ಕುರಿತಾದ ಸೌಲಭ್ಯಗಳ ಬಗ್ಗೆ ಜನರೇ ಅರಿತುಕೊಂಡಿರುತ್ತಾರೆ. ಈ ಕಾರಣವಾಗಿಯೇ ಸಾಮಾನ್ಯ ಜನರಲ್ಲಿ ಯಾವುದೇ ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಮೀಸಲಾತಿ ಅತ್ಯವಶ್ಯಕ ಎಂಬ ಸಾಮಾನ್ಯ ಕಲ್ಪನೆಯಿದೆ.

ಆದರೆ ಜಾತಿ ಮೀಸಲಾತಿ ಇರದ ಮೇಲ್ಕಾಣಿಸಿದ ಸರಕಾರಿ ಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಪ್ರಜೆಗಳಿಗೆ ತಿಳಿವಳಿಕೆ ನೀಡಿ ಆದಷ್ಟು ಈ ಸೌಲಭ್ಯಗಳು ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ಮಾಡುವುದು ಅವರ ಸಾಂವಿಧಾನಿಕ ಕರ್ತವ್ಯಗಳಂದಾಗಿದೆ. ಪಕ್ಷಾತೀತವಾಗಿ ಇಂಥ ಕರ್ತವ್ಯನಿಷ್ಠ ಜನಪ್ರತಿನಿಧಿಗಳು ಎಷ್ಟಿದ್ದಾರೆ?! ಈ ಎಲ್ಲ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಸಮರ್ಪಕವಾಗಿ ಜನರಿಗೆ ತಲುಪಿಸಿದ್ದಿದ್ದರೆ, ಇಂದು ಮೀಸಲಾತಿ ಬಯಸುವವರ ಸಂಖ್ಯೆ ಈ ಮಟ್ಟಿ ಗಿರುತ್ತಿರಲಿಲ್ಲ.

ಅದರಲ್ಲೂ ಪ್ರಮುಖವಾಗಿ ಮೀಸಲಾತಿಯನ್ನು ಬಯಸಿಯೇ ಭುಗಿಲೆದ್ದ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಇರುತ್ತಲೇ ಇರಲಿಲ್ಲ!

ಆರ್ಥಿಕವಾಗಿ ಹಿಂದುಳಿದವರಿಗಾಗಿ ಇರುವ ಮೇಲ್ಕಾಣಿಸಿದ ಸರಕಾರಿ ಸೌಲಭ್ಯವನ್ನು ಜನರಿಗೆ ತಿಳಿಸದೆ ಕರ್ತವ್ಯಲೋಪ ಎಸಗಿದ ಅನೇಕ ಶಾಸಕರು, ಮಂತ್ರಿಮಹೋದಯರನೇಕರು ತಮ್ಮ ವಿದ್ಯಾಸಂಸ್ಥೆಗಳ ವೈಯಕ್ತಿಕ ಲಾಭಾಂಶಕ್ಕಾಗಿ ಜನರನ್ನು ಪ್ರಚೋದಿಸಿದರು. ಅಲ್ಪಸಂಖ್ಯೆಗಾಗಿ ‘ವೀರಶೈವ ಬೇರೆ, ಲಿಂಗಾಯತ ಬೇರೆ’ ಎಂಬ ಧರ್ಮಭಂಜನೆಯ ಭಜನೆ ಮಾಡಿದರು.

2018ರಲ್ಲಿ, ಸಮ ಸಮಾಜದ ವಕ್ತಾರ, ಜಾತಿಮುಕ್ತ ಸಮಾಜದ ವಕ್ತಾರರೆಂದೇ ಹಕ್ಕೊತ್ತಾಯ ಮಂಡಿಸುವ ರಾಯರೆಡ್ಡಿ ಅವರು, “ನಾವು ನಾಲ್ಕು ಜನ ಮಂತ್ರಿಗಳು ನಾಲ್ಕು ದಿಕ್ಕಿಗೆ ಹೋಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ನೆಲೆ ನಿಲ್ಲಿಸುತ್ತೇವೆ" ಎಂದು ಚುನಾವಣೆಯಲ್ಲಿ ಸೋತು ತಮ್ಮ ನೆಲೆಯನ್ನು ಕಳೆದುಕೊಂಡರು. ಅವರೊಟ್ಟಿಗೆ ‘ನನಗೆ ಜಾತಿ ಜಂಗಮರ ವೋಟುಗಳೇ ಬೇಕಿಲ್ಲ’ ಎಂದ ಇನ್ನಿಬ್ಬರು ಪಾಟೀಲರು ನೆಲೆ ಕಳೆದುಕೊಂಡರು.

ಈ ಇಡೀ ಪ್ರತ್ಯೇಕವಾದಿ ಗುಂಪಿನಲ್ಲಿ ಗೆದ್ದದ್ದು ಓರ್ವ ಪಾಟೀಲ್ ಮಾತ್ರ. ಅವರ ಗೆಲುವಿಗೆ ‘ಇವಿಎಂ’ ಕಾರಣ ಎಂಬ ಅಪವಾದದ ಬಗ್ಗೆ ಇಡೀ ರಾಜ್ಯವೇ ಮಾತನಾಡಿಕೊಂಡಿತ್ತಾದರೂ ಅದಕ್ಕೆ ಪ್ರಮುಖ ಕಾರಣ ಇವರು ತಮ್ಮ ಕ್ಷೇತ್ರದ ಪ್ರತಿಯೊಬ್ಬ ಜಂಗಮ ಮತದಾರನಿಗೆ 5000 ರುಪಾಯಿಗಳ ದಕ್ಷಿಣೆ ಕೊಟ್ಟು ಕೈ ಮುಗಿದಿದ್ದು ಎಂದು ಈ ಕ್ಷೇತ್ರದ ಮತದಾರರು ಮಾತನಾಡಿಕೊಂಡಿದ್ದು ಸುದ್ದಿ ಯಾಗಿತ್ತು.

ಒಟ್ಟಾರೆ ಈ ಮಹೋದಯರ ಸೋಲು ಮತ್ತು ಪ್ರಯಾಸದ ಗೆಲುವು ಅವರ ಧರ್ಮಭಂಜನೆಯ ಕಾರಣವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅಲ್ಲವೇ! ಅದರಲ್ಲೂ ಪ್ರಜಾಪ್ರಭುತ್ವದ ಪ್ರತಿನಿಧಿಗಳಾಗಿ ಎಲ್ಲಾ ಸಮುದಾಯವನ್ನು ಪ್ರತಿನಿಧಿಸಬೇಕಾದ ಈ ಜನನಾಯಕರು ತಮ್ಮ ಸಂವಿಧಾನಿಕ ಕರ್ತವ್ಯವನ್ನು ಮರೆತು ಜಾತೀಯತೆಯ ಪಕ್ಷಪಾತವನ್ನು ತೋರಿ ಅದಕ್ಕಾಗಿ ಸರಕಾರಿ ಯಂತ್ರವನ್ನು ಬಳಸಿದ್ದು ಅಕ್ಷಮ್ಯ ಅಪರಾಧವೆಂದು ಪ್ರಜೆಗಳು ಅವರಿಗೆ ತಕ್ಕ ಸ್ಥಾನಮಾನ ನೀಡಿ ದರು.

ಇನ್ನು ಇವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಐತಿಹಾಸಿಕ ಸಂಶೋಧನೆಯ ಅತ್ಯಂತ ಪ್ರಶ್ನಾರ್ಹ ಸತ್ಯಶೋಧನೆಯ ವರದಿ ನೀಡಿದವರು, ನಾಡಿನ ಸಾಕ್ಷಿಪ್ರeಯ ವಾರಸುದಾರರೆನಿಸಿದ ಬುದ್ಧಿಜೀವಿ ಗಳು!

ಅಂದಿನ ಮುಖ್ಯಮಂತ್ರಿಗಳು ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯನ್ನು ರಚಿಸಿದರು. ಈ ಸಮಿತಿ ಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ ದಾಸ್ ವಹಿಸಿದ್ದರೆ, ಸಾಹಿತಿ-ಚಿಂತಕ-ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ವಕೀಲರೂ, ತನಿಖಾ-ಪತ್ರಕರ್ತರೂ, ಚಿಂತಕ ಸಾಹಿತಿಗಳೂ ಆದ ಸಿ.ಎಸ್. ದ್ವಾರಕನಾಥ, ಪತ್ರಕರ್ತ-ಸಾಹಿತಿ ಸರಜೂ ಕಾಟ್ಕರ್, ಸಾಹಿತಿ ಪ್ರೊ. ರಾಮಕೃಷ್ಣ ಮರಾಠೆ, ಸಂಶೋಧಕ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ-ಸಂಶೋ ಧಕ ಪ್ರೊ. ಮುಜಾಫರ್ ಅಸಾದಿ ಮತ್ತು ಲೇಖಕಿ-ಸಂಶೋಧಕಿ ಹನುಮಾಕ್ಷಿ ಗೋಗಿ ಈ ಸಮಿತಿಯ ಸದಸ್ಯರಾಗಿದ್ದರು.

ಈ ಸಂಶೋಧನೆಗೆ ವಚನಗಳೇ ಬಹುಪಾಲು ಆಧಾರವಾಗಿ ವೀರಶೈವ ಎಂಬ ಪದವಿರುವ ಅಸಂಖ್ಯಾ ತ ವಚನಗಳನ್ನು ಪರಿಗಣಿಸದೆ ಕೇವಲ ಬೆರಳೆಣಿಕೆಯ ವಚನಗಳನ್ನು ಪರಿಗಣಿಸಿದರು. ಪುಟದಿಂದ ಪುಟಕ್ಕೆ ರzಗುವ ಕಲಬುರ್ಗಿ ಸಂಶೋಧನೆಗಳು ಇವರ ಮೂಲಾಧಾರವಾಯಿತು.

ಪೆದ್ದುಪೆದ್ದಾಗಿ ಕ್ಯೂಬಾದ ಕ್ಯಾಸ್ಟ್ರೋ ಬಸವಾದಿ ಶರಣರಂತೆ ಪಣ್ಯಸೀಯರಿಗೆ ಬಾಳು ಕೊಡಿಸಿದ ಮಹಾತ್ಮ ಎಂದ ಎಸ್.ಜಿ.ಸಿದ್ದರಾಮಯ್ಯ ಈ ಕಮಿಟಿಯಲ್ಲಿನ ಸದಸ್ಯ ಎಂದರೆ ಉಳಿದಂತೆ ನೀವೇ ಊಹಿಸಿಕೊಳ್ಳಿ. ಹೀಗೆ ವಚನಗಳಲ್ಲಿನ ಅಧಿಕೃತ ಕನಿಷ್ಠ ಅಂಕಿ-ಅಂಶಗಳನ್ನೇ ಕೆದಕದ ಈ ಸಮಿತಿ ಯಲ್ಲಿದ್ದ ಖ್ಯಾತ ನಿವೃತ್ತ ನ್ಯಾಯಾಧೀಶರು, ಸಂಶೋಧನ ಹಿನ್ನೆಲೆಯ ಪ್ರಾಧ್ಯಾಪಕರು, ತನಿಖಾ ವಿಶ್ಲೇಷಣಾ ವರದಿಗಾರ ತಜ್ಞ ಪತ್ರಕರ್ತರು ಅವರವರ ವೃತ್ತಿಗಳಲ್ಲಿ ಈವರೆಗೆ ಕೈಗೊಂಡ ನ್ಯಾಯ ನಿರ್ಣಯ, ಸಂಶೋಧನೆಗಳು ಮತ್ತು ತನಿಖಾ ವರದಿಗಳು ಎಷ್ಟರ ಮಟ್ಟಿಗೆ ಸತ್ಯನಿಷ್ಠೆ ಯಿಂದ ಕೂಡಿದ್ದವು ಎಂಬ ಧನಾ(ಋಣಾ)ತ್ಮಕ ಸಂಶಯವನ್ನು ಸಹಜವಾಗಿ ಮೂಡಿಸುತ್ತವೆ!

ಓರ್ವ ಅಧಿಕಾರಸ್ಥ ರಾಜಕಾರಣಿ ರಚಿಸಿದ ಸಮಿತಿಯು ಆ ರಾಜಕಾರಣಿಗೆ ಬದ್ಧವಿರುತ್ತದೆಯೇ ಹೊರತು ವಿಷಯಕ್ಕಲ್ಲ ಎಂದು ಈ ಸಮಿತಿಯ ವರದಿ ಸಾಬೀತು ಮಾಡಿತು. ಪ್ರತ್ಯೇಕ ಧರ್ಮ ವಾಗುವುದು ಸಾಧ್ಯವೇ ಇಲ್ಲ ಎಂದು ತಿಳಿದಿದ್ದೂ ಪ್ರತ್ಯೇಕ ಧರ್ಮ ಶಿಫಾರಸನ್ನು ಕೇಂದ್ರಕ್ಕೆ ಕಳಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪಕ್ಷ ರಾಜಕೀಯ ದಾಳಕ್ಕೆ ಅಖಂಡ ವೀರಶೈವ ಲಿಂಗಾಯತರು ಬಲಿಯಾದರು.

ಒಂದು ವೇಳೆ ಈ ರಾಜಕೀಯ ನಾಯಕರ ಉದ್ದೇಶ ಅಖಂಡ ವೀರಶೈವ ಲಿಂಗಾಯತರನ್ನು ಉದ್ಧಾರ ಮಾಡುವುದೇ ಆಗಿದ್ದರೆ, ಈಗಲೂ ಯಾವ ಕೇಂದ್ರದ ಒಪ್ಪಿಗೆ ಬೇಕಿಲ್ಲದ ಒಂದು ಸರಳ ಕಾರ್ಯ ವನ್ನು ಇವರು ಮಾಡಬಹುದು.

ಯಾವುದು ಆ ಸರಳ ಕಾರ್ಯ?

ಲಿಂಗಾಯತರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ಜಾತಿಗಳು ಸೇರಿರುತ್ತವೆ. ಈ ಸತ್ಯವನ್ನು ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳು ತಮ್ಮ ವರದಿಯಲ್ಲಿ ಒಪ್ಪಿಕೊಂಡು, ‘ಲಿಂಗಾಯತ ಒಂದು ಜಾತಿಯಲ್ಲ. ಅದು ಹಿಂದೂ ಧರ್ಮದಂತೆಯೇ ಒಂದು ಜಾತಿಗಳ ಸಮೂಹ. ಲಿಂಗಾಯತರಲ್ಲಿ ಬಹಳಷ್ಟು ಹಿಂದುಳಿದ ಜಾತಿಗಳು ಇದ್ದು, ಈ ಹಿಂದುಳಿದ ಜಾತಿಗಳನ್ನು ವಿವಿಧ ಹಿಂದುಳಿದ ವರ್ಗಗಳ ಪಟ್ಟಿಗಳಲ್ಲಿ ಸೇರಿಸುವುದು ಸೂಕ್ತವಾಗಿದೆ’ ಎಂದು ಬಹಳ ಸ್ಪಷ್ಟವಾಗಿ ನಮೂದಿಸಿವೆ. ಆದರೆ ಈ ಪಟ್ಟಿಗಳನ್ನು ಪ್ರಕಟಿಸುವಾಗ ಲಿಂಗಾಯತ ಪರಂಪರೆಯ ವಿವಿಧ ಹಿಂದುಳಿದ ಜಾತಿಗಳನ್ನು, ಅವುಗಳ ಹಿಂದುಳಿ ವಿಕೆಯ ಪ್ರಮಾಣವನ್ನು ಪರಿಶೀಲಿಸದೆ ಸಾರಾ ಸಗಟಾಗಿ ಒಂದೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಅಂದರೆ ‘೩-ಬಿ ಪ್ರವರ್ಗ’ ದಲ್ಲಿ ಸೇರಿಸಿದ್ದಾರೆ.

ಇದರಿಂದಾಗಿ ಲಿಂಗಾಯತ ಪರಂಪರೆಯ ಅತ್ಯಂತ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ಕಳೆದ 50 ವರ್ಷಗಳಿಂದ ಘೋರ ಅನ್ಯಾಯವಾಗಿದೆ. ಅಲ್ಲದೆ ಒಕ್ಕೂಟ ಸರಕಾರದ ಹಿಂದುಳಿದ ಆಯೋಗವು ಲಿಂಗಾಯತ ಜನಾಂಗ ಅತ್ಯಂತ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳನ್ನು ಸ್ಪಷ್ಟವಾಗಿ ಲಿಂಗಾಯತ ಜಾತಿಗಳೆಂದು ಗುರುತಿಸಿ, ಅವುಗಳನ್ನು ಒಕ್ಕೂಟ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದೆ. ಜಾತಿಗಳನ್ನು ಲಿಂಗಾಯತ ಜಾತಿಗಳೆಂದು ಸ್ಪಷ್ಟವಾಗಿ ನಮೂದಿಸಿದೆ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)