ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ನಮ್ಮನ್ನು ಸೋಲಿಸುವ ಅಸ್ತ್ರ, ನಮ್ಮದೇ ಅಹಂಕಾರ !

ಅಹಂಕಾರದಿಂದ ಕಣ್ಣು ಕಾಣದಾಗಿದ್ದ ರಾವಣನು ನಂದೀಶ್ವರನ ವಾನರ ಸದೃಶ ಮುಖವನ್ನು ನೋಡಿ ಅಟ್ಟಹಾಸಗೈದನು. ನಂದಿಯನ್ನು ಒಬ್ಬ ಸಾಮಾನ್ಯ ವಿಕಾರ ಮುಖದ ಪ್ರಾಣಿ ಎಂದು ನಮ್ಮ ವಿಳಾಸ ತೀರಾ ಕೀಳಾಗಿ ನಿಂದಿಸಿ, ಅಪಹಾಸ್ಯ ಮಾಡಿದನು. ತನ್ನ ಆರಾಧ್ಯ ದೈವದ ದ್ವಾರದ ತನಗೆ ನಡೆದ ಈ ಅವಮಾನದಿಂದ ಮತ್ತು ರಾವಣನ ಮಿತಿ ಮೀರಿದ ಗರ್ವದಿಂದ ನಂದೀಶ್ವರನಿಗೆ ತೀವ್ರ ಕೋಪ ಬಂದಿತು.

ನಮ್ಮನ್ನು ಸೋಲಿಸುವ ಅಸ್ತ್ರ, ನಮ್ಮದೇ ಅಹಂಕಾರ !

-

ಒಂದೊಳ್ಳೆ ಮಾತು

ರಾವಣನು ಶ್ರೀರಾಮನ ಎದುರು ಯುದ್ಧಭೂಮಿಯಲ್ಲಿ ನಿಲ್ಲುವುದಕ್ಕೂ ಎಷ್ಟೋ ವರ್ಷಗಳ ಮುನ್ನವೇ ಆತನ ವಿನಾಶದ ಮುನ್ನುಡಿ ಬರೆಯಲ್ಪಟ್ಟಿತ್ತು. ಅದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಪರಮಶಿವನ ಪವಿತ್ರ ನಿವಾಸವಾದ ಕೈಲಾಸ ಪರ್ವತದ ದ್ವಾರದಲ್ಲಿ! ಒಂದು ಸಣ್ಣ ಅವಮಾನ, ಒಂದು ಭೀಕರ ಶಾಪ-ಕೊನೆಗೆ ಇಡೀ ಸುವರ್ಣ ಲಂಕೆ ಹನು ಮಂತ ಮತ್ತು ವಾನರ ಸೇನೆಯಿಂದ ಭಸ್ಮವಾಗಲು ಕಾರಣವಾಯಿತು.

ಕೆಲವು ಪತನಗಳು ಹಠಾತ್ತಾಗಿ ಸಂಭವಿಸುವುದಿಲ್ಲ, ಅವು ಬಹಳ ಹಿಂದೆಯೇ ಲಿಖಿತವಾಗಿರುತ್ತವೆ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ರಾವಣನು ಜಗತ್ತನ್ನೇ ಗೆದ್ದು, ಬ್ರಹ್ಮನಿಂದ ದೇವತೆಗಳು ಅಥವಾ ದಾನವರಿಂದ ತನಗೆ ಸಾವು ಬರಬಾರದೆಂಬ ಅಪ್ರತಿಮ ವರಗಳನ್ನು ಪಡೆದು ಬೀಗುತ್ತಿದ್ದ ಕಾಲವದು. ಒಂದು ದಿನ ಆತ ತನ್ನ ಪುಷ್ಪಕ ವಿಮಾನದಲ್ಲಿ ಆಕಾಶಮಾರ್ಗವಾಗಿ ಚಲಿಸುತ್ತಿರುವಾಗ, ಕೈಲಾಸ ಪರ್ವತದ ಬಳಿ ವಿಮಾನವು ದಿಢೀರನೆ ನಿಂತುಹೋಯಿತು. ತನ್ನ ದಾರಿಗೆ ಅಡ್ಡಿಪಡಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗಿದೆ ಎಂದು ಕ್ರೋಧದಿಂದ ರಾವಣನು ಕೆಳಗಿಳಿದನು.

ಇದನ್ನೂ ಓದಿ:Roopa Gururaj Column: ಅದ್ಯಧಾರಾ ಸದಾಧಾರಾ: ಭೋಜಪ್ರಬಂಧದ ಅಮರ ಕಾವ್ಯ

ಅಲ್ಲಿ ಕೈಲಾಸದ ದ್ವಾರಪಾಲಕನೂ, ಶಿವನ ಪರಮ ಭಕ್ತನೂ ಆದ ನಂದೀಶ್ವರನು ರಾವಣನನ್ನು ತಡೆದನು. ಶಿವ-ಪಾರ್ವತಿಯರು ಏಕಾಂತದಲ್ಲಿದ್ದಾರೆ, ಹಾಗಾಗಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಶಾಂತವಾಗಿ ತಿಳಿಸಿದನು.

ಅಹಂಕಾರದಿಂದ ಕಣ್ಣು ಕಾಣದಾಗಿದ್ದ ರಾವಣನು ನಂದೀಶ್ವರನ ವಾನರ ಸದೃಶ ಮುಖವನ್ನು ನೋಡಿ ಅಟ್ಟಹಾಸಗೈದನು. ನಂದಿಯನ್ನು ಒಬ್ಬ ಸಾಮಾನ್ಯ ವಿಕಾರ ಮುಖದ ಪ್ರಾಣಿ ಎಂದು ನಮ್ಮ ವಿಳಾಸ ತೀರಾ ಕೀಳಾಗಿ ನಿಂದಿಸಿ, ಅಪಹಾಸ್ಯ ಮಾಡಿದನು. ತನ್ನ ಆರಾಧ್ಯ ದೈವದ ದ್ವಾರದ ತನಗೆ ನಡೆದ ಈ ಅವಮಾನದಿಂದ ಮತ್ತು ರಾವಣನ ಮಿತಿ ಮೀರಿದ ಗರ್ವದಿಂದ ನಂದೀಶ್ವರನಿಗೆ ತೀವ್ರ ಕೋಪ ಬಂದಿತು.

ಆತ ರಾವಣನ ಕಣ್ಣುಗಳನ್ನು ನೇರವಾಗಿ ನೋಡಿ ಶಾಪವನ್ನು ನೀಡಿದನು: ಯಾವ ವಾನರ ಮುಖವನ್ನು ನೋಡಿ ನೀನು ಹೀಗೆ ಅಟ್ಟಹಾಸಗೈದು ಅವಮಾನಿಸಿದೆಯೋ, ಅದೇ ವಾನರ ಜನಾಂಗವೇ ನಿನ್ನ ವಿನಾಶಕ್ಕೆ ಕಾರಣವಾಗಲಿ. ದೇವ-ದಾನವರಿಂದ ನಿನಗೆ ಸಾವು ಬರದಿದ್ದರೂ, ನನ್ನದೇ ರೂಪ ಮತ್ತು ಪರಾಕ್ರಮವನ್ನು ಹೊಂದಲಿರುವ ವಾನರರು ಸೃಷ್ಟಿಯಾಗಲಿದ್ದಾರೆ. ಅವರು ನಿನ್ನ ಹೆಮ್ಮೆಯ ಸುವರ್ಣ ಲಂಕೆಯನ್ನು ಸುಟ್ಟು ಬೂದಿ ಮಾಡುತ್ತಾರೆ ಮತ್ತು ನಿನ್ನ ಅಹಂಕಾರದ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಧೂಳೀಪಟ ಮಾಡುತ್ತಾರೆ.

ರಾವಣನು ದೇವತೆಗಳ ಎದುರು ತಾನು ಅಮರನೆಂಬ ಭ್ರಮೆಯಲ್ಲಿದ್ದ ಕಾರಣ, ಕೇವಲ ಕೋತಿಗಳು ತನ್ನನ್ನು ಏನು ಮಾಡಲು ಸಾಧ್ಯ ಎಂದು ಆ ಶಾಪವನ್ನು ನಿರ್ಲಕ್ಷಿಸಿದನು. ತಾನು ಬ್ರಹ್ಮನಿಂದ ವರ ಕೇಳುವಾಗ ಮನುಷ್ಯರನ್ನು ಮತ್ತು ವಾನರರನ್ನು ತೀರಾ ಕೀಳೆಂದು ಭಾವಿಸಿ, ಅವರಿಂದ ರಕ್ಷಣೆ ಕೇಳುವುದನ್ನೇ ಮರೆತಿದ್ದ ಪ್ರಮಾದ ಅಹಂಕಾರದ ಅಮಲಿನಲ್ಲಿ ಆತನಿಗೆ ನೆನಪಾಗಲಿಲ್ಲ. ನಂದಿಯ ಶಾಪಕ್ಕೆ ಪ್ರತಿಯಾಗಿ ತನ್ನ ತಾಕತ್ತನ್ನು ಪ್ರದರ್ಶಿಸಲು, ರಾವಣನು ಕೈಲಾಸ ಪರ್ವತದ ಕೆಳಗೆ ತನ್ನ ಇಪ್ಪತ್ತು ಪರ್ವತವನ್ನೇ ಮೇಲೆತ್ತಲು ಯತ್ನಿಸಿದನು.

ಇಡೀ ಪರ್ವತವು ನಡುಗತೊಡಗಿತು. ಆಗ ಶಿವನು ಅತ್ಯಂತ ಸಹಜವಾಗಿ ತನ್ನ ಕಾಲಿನ ಹೆಬ್ಬೆರಳಿ ನಿಂದ ಪರ್ವತವನ್ನು ಸಲ್ಪ ಒತ್ತಿದನು. ಆ ಭಾರಕ್ಕೆ ರಾವಣನ ಕೈಗಳು ಪರ್ವತದ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾದವು. ನೋವಿನ್ನು ತಡೆಯಲಾರದೆ ರಾವಣನು ಮಾಡಿದ ಭೀಕರ ಕಿರುಚಾಟಕ್ಕೆ ಜಗತ್ತೇ ನಡುಗಿತು (ಹೀಗಾಗಿಯೇ ಆತನಿಗೆ ‘ರಾವಣ’-ಭೀಕರವಾಗಿ ಕಿರುಚುವವನು ಎಂಬ ಹೆಸರು ಬಂದಿತು). ನಂತರ ಶಿವನನ್ನು ಪ್ರಸನ್ನಗೊಳಿಸಲು ಆತ ಸಾವಿರ ವರ್ಷಗಳ ಕಾಲ ‘ಶಿವ ತಾಂಡವ ಸ್ತೋತ್ರ’ವನ್ನು ಹಾಡಿ ಪ್ರಾರ್ಥಿಸಿದ ಮೇಲಷ್ಟೇ ಶಿವನು ಆತನನ್ನು ಮುಕ್ತಗೊಳಿಸಿದನು.

ಮುಂದೆ ಹನುಮಂತನು ಸಮುದ್ರವನ್ನು ಲಂಘಿಸಿ, ತನ್ನ ಬಾಲದ ಬೆಂಕಿಯಿಂದ ಇಡೀ ಲಂಕೆ ಯನ್ನು ದಹಿಸಿದಾಗ ಮತ್ತು ವಾನರ ಸೇನೆಯು ರಾಮಸೇತುವನ್ನು ಕಟ್ಟಿ ಲಂಕೆಯ ಕೋಟೆಯ ಬಾಗಿಲನ್ನು ಮುರಿದಾಗ, ಅದು ಕೇವಲ ಆ ಕ್ಷಣದ ಯುದ್ಧದ ವಿಜಯವಾಗಿರಲಿಲ್ಲ. ಅದು ಶತಮಾನ ಗಳ ಹಿಂದೆ ಕೈಲಾಸದ ಕೈಗಳನ್ನಿಟ್ಟು ಇಡೀ ಪವಿತ್ರ ಮಣ್ಣಿನಲ್ಲಿ ನಂದೀಶ್ವರನು ನೀಡಿದ ಶಾಪದ ಸಾಕ್ಷಾತ್ಕಾರವಾಗಿತ್ತು.

ನಾವು ಉತ್ಕೃಷ್ಟರು ಎನ್ನುವ ಅಹಂಕಾರದಲ್ಲಿ ಮತ್ತೊಬ್ಬರಿಗೆ ಅವಮಾನ ಮಾಡುವ ಮೊದಲು ನೂರು ಬಾರಿ ಯೋಚಿಸಿ. ಬೇರೆಯವರ ನಡೆ-ನುಡಿಗಳಿಗಿಂತ ಹೆಚ್ಚು ನಮ್ಮ ಅಹಂಕಾರವೇನಮ್ಮನ್ನು ಭೂಮಿಗೆ ಇಳಿಸುತ್ತದೆ. ಈ ಪ್ರಜ್ಞೆ ಇದ್ದಾಗ ಸಮಚಿತ್ತದಿಂದ ವ್ಯವಹರಿಸುವ ತಾಳ್ಮೆ ಬೆಳೆಸಿಕೊಳ್ಳು ತ್ತೇವೆ.