Thimmanna Bhagwat Column: ಜನಪ್ರತಿನಿಧಿಗಳಿಗೆ ಕನಿಷ್ಠ ಶೈಕ್ಷಣಿಕ ಮಾನದಂಡ ಬೇಡವೇ ?

ಶ್ರೇಷ್ಠ ಸಂಸದೀಯ ಪಟುವೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಈ ಕುರಿತು ಹೇಳಿದ್ದು ಹೀಗೆ: “ಆರ್ಥಿಕತೆಗಳ ಹೊಸ ಸ್ವರೂಪಗಳು ಮತ್ತು ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಆಡಳಿತವು ಹೆಚ್ಚೆಚ್ಚು ಸಂಕೀರ್ಣವಾಗುತ್ತಿದೆ.

Thimmanna Bhagwat Column 2201
Profile Ashok Nayak January 22, 2025

Source : Vishwavani Daily News Paper

ನ್ಯೂನ ಕಾನೂನು

ತಿಮ್ಮಣ್ಣ ಭಾಗ್ವತ್

ನಿಜಾರ್ಥದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂದರೆ, ಜನಪ್ರತಿನಿಧಿಗಳಿಗೆ ಸ್ವಂತ ವಿವೇಚನೆ ಯಿಂದ ತೀರ್ಮಾನಿಸುವ ಅರ್ಹತೆಯಿರಬೇಕೇ ವಿನಾ, ಅಧಿಕಾರಿಗಳು ತೋರಿಸಿ ದೆಡೆ ಸಹಿ ಹಾಕುವು ದಲ್ಲ. ಅಂಥ ಸಹಿಗೆ ‘ಹೆಬ್ಬೆಟ್ಟು’ ಅಂತಲೇ ಹೆಸರು! ಅನಕ್ಷರಸ್ಥ ಪ್ರತಿನಿಧಿ ಗಳು ಊರ ಮುಖಂಡರ ‘ಛಾಯಾ ಪ್ರತಿನಿಧಿ’ ಆಗುವುದರಿಂದ ಪರೋಕ್ಷ ಅಧಿಕಾರ ಚಲಾವಣೆ ಯಾಗುತ್ತಿರುವ ಉದಾಹರಣೆಗಳಿವೆ.

ಒಬ್ಬ ಚಹಾ ಮಾರುವವನೂ ದೇಶದ ಪ್ರಧಾನಿಯಾಗಬಹುದು ಎಂಬುದು ಭಾರತದ ಪ್ರಜಾ ಪ್ರಭುತ್ವದ ಸೌಂದರ್ಯ. ನರೇಂದ್ರ ಮೋದಿಯವರು ಇದಕ್ಕೆ ಉದಾಹರಣೆಯಾದರೂ, ನಮ್ಮ ಸಂವಿ ಧಾನದಲ್ಲಿ ಕಲ್ಪಿಸಲಾಗಿರುವ ಸಮಾನತೆಯ ಅವಕಾಶವನ್ನೂ ಇದು ವಿವರಿಸುತ್ತದೆ. ಆದರೆ, ಮೋದಿ ಯವರ ಅಸಾಧಾರಣ ಪ್ರತಿಭೆ ಮತ್ತು ಸಂಘಟನಾ ಸಾಮರ್ಥ್ಯಗಳೇ ಅವರನ್ನು ಈ ಹುದ್ದೆಗೆ ಏರಿಸಿ ದವೇ ಹೊರತು, ಇದು ಸಾಧಾರಣ ವ್ಯಕ್ತಿಯಾಗಿ ಅವರಿಗೆ ದಕ್ಕಿದ್ದಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Vinayak Bhat Naroor Column: ತೆಂಗಿನಕಾಯಿ ಸಿಪ್ಪೆ ಸುಲಿದು ಹಾಕುತ್ತಿರುವ ನಿಶಾಚರಿ‌!

Screenshot_1

ವಿವಿಧ ಸ್ತರದ ಆಡಳಿತ ವ್ಯವಸ್ಥೆಯಲ್ಲಿನ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯದ ಕೊರತೆಯು ಭಾರತವೂ ಸೇರಿದಂತೆ ಅನೇಕ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಬಹುಚರ್ಚಿತ ವಿಷಯ. ಶ್ರೇಷ್ಠ ಸಂಸ ದೀಯ ಪಟುವೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಈ ಕುರಿತು ಹೇಳಿದ್ದು ಹೀಗೆ: “ಆರ್ಥಿಕತೆಗಳ ಹೊಸ ಸ್ವರೂಪಗಳು ಮತ್ತು ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಆಡಳಿತವು ಹೆಚ್ಚೆಚ್ಚು ಸಂಕೀರ್ಣವಾಗುತ್ತಿದೆ.

ಇಂಥ ಸಂಕೀರ್ಣತೆಗಳನ್ನು ನಿರ್ವಹಿಸಬಲ್ಲ ಸಂಸದರನ್ನು, ಗೋಜಲಿನ ಮತ್ತು ಅವ್ಯವಸ್ಥಿತ ಚುನಾ ವಣೆಗಳ ಮೂಲಕ ಅಧಿಕಾರಕ್ಕೆ ತರುವುದು ಹೇಗೆಂಬುದು ಎಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಗಳ ಮುಂದಿರುವ ದೊಡ್ಡ ಸವಾಲು". ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಸಾಮರ್ಥ್ಯದ ಕುರಿತಂತೆ ನಮ್ಮ ಸಂವಿಧಾನದಲ್ಲಾಗಲೀ, ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಾ ಗಲೀ ಯಾವುದೇ ಮಾನದಂಡಗಳಿಲ್ಲ.

ಇಲ್ಲಿ ವಯೋಮಿತಿ, ಅಪರಾಧದ ಹಿನ್ನೆಲೆ, ಮಾನಸಿಕ ಸ್ವಸ್ಥತೆ ಮತ್ತು ದಿವಾಳಿತನ ( insolvency ) ಸಂಬಂಧಿತ ಕೆಲ ಮಾನದಂಡಗಳನ್ನು ಬಿಟ್ಟರೆ ಬೇರಾವುದೇ ನಿಯಮಗಳಿಲ್ಲ. ಒಬ್ಬ ಗುಮಾಸ್ತನಾಗಿ ಕೆಲಸಕ್ಕೆ ಸೇರಲು ಕೂಡ ವಿದ್ಯಾರ್ಹತೆಯ ಅಗತ್ಯವಿರುವಾಗ, ಆಡಳಿತಗಾರರಿಗೆ ಯಾವ ಮಾನ‌ ದಂಡವೂ ಅಗತ್ಯವಿಲ್ಲದಿರುವುದು ಅಸಂಗತವೆನಿಸುತ್ತದೆ ಮತ್ತು ಬದಲಾದ ಜಗತ್ತಿನಲ್ಲಿ ಕೇವಲ ಅಷ್ಟೇ ಅರ್ಹತೆಯಿದ್ದರೆ ದಕ್ಷ-ಸುಸೂತ್ರ ಆಡಳಿತ ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆಯಾಗುತ್ತದೆ.

ಸಂವಿಧಾನದ 73ನೇ ತಿದ್ದುಪಡಿಯನ್ವಯ, ಕರ್ನಾಟಕದಲ್ಲಿ ಕೂಡ 3 ಹಂತದ ಪಂಚಾಯತ್‌ರಾಜ್ ವ್ಯವಸ್ಥೆಯನ್ನು 1993ರ ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಯ ಮೂಲಕ ಜಾರಿ ಮಾಡಲಾ ಯಿತು. ಇದರನ್ವಯ ಗ್ರಾಮ ಪಂಚಾಯತಿಗಳಿಗೆ ಆರೋಗ್ಯ, ನೈರ್ಮಲ್ಯ, ರಸ್ತೆ, ಚರಂಡಿ, ಕುಡಿಯುವ ನೀರು ಮುಂತಾದ ಮೂಲಭೂತ ಅವಶ್ಯಕತೆಗಳ ಜವಾಬ್ದಾರಿಗಳನ್ನು ವಿಕೇಂದ್ರೀಕರಣ ಗೊಳಿಸ ಲಾಗಿದೆ.

ಜತೆಗೆ, ಆಸ್ತಿಗಳ ಕರ ನಿರ್ಧರಿಸುವಿಕೆ ಮತ್ತು ಸಂಗ್ರಹ, ಆಸ್ತಿಗಳ ಮಾಲೀಕತ್ವ ವರ್ಗಾವಣೆ, ಕಟ್ಟಡ ನಿರ್ಮಾಣದ ನಕ್ಷೆಗಳ ದೃಢೀಕರಣ ಮತ್ತು ನಿರ್ಮಿತಿ ಪರವಾನಗಿ, ಗ್ರಾಮ ಮಟ್ಟದಲ್ಲಿ ನಿರ್ಮಿಸುವ ಲೇ-ಔಟ್‌ಗಳಿಗೆ ಪರವಾನಗಿ ಮುಂತಾದ, ಕಾನೂನು ಮತ್ತು ತಾಂತ್ರಿಕಜ್ಞಾನದ ಅಗತ್ಯವಿರುವ ಅನೇಕ ವಿಷಯಗಳು ಗ್ರಾಮ ಪಂಚಾಯತಿಯ ಕಾರ್ಯವ್ಯಾಪ್ತಿಯಲ್ಲಿ ಬರುತ್ತವೆ.

ಭಾರಿ ಯೋಜನಾ ಗಾತ್ರವನ್ನು ಹೊಂದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗ್ರಾಮ ಪಂಚಾ ಯತಿಗಳ ಸುಪರ್ದಿಯಲ್ಲಿ ನಡೆಯುತ್ತವೆ. ಈ ಪೈಕಿ ಕೆಲವು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳಡಿ ಇರುವಂಥವು. ಹೀಗಾಗಿ, ಜನಪ್ರತಿನಿಧಿಗಳಿಗೆ ಆಯಾ ಯೋಜನೆಗಳ ನಿಯಮಾವಳಿಗಳ ಜ್ಞಾನವಿರಬೇಕು.

ಇಂಥ ಕಾಮಗಾರಿಗಳ ಮಂಜೂರಿ, ಟೆಂಡರ್ ಪ್ರಕ್ರಿಯೆ, ಯೋಜನಾ ನಕ್ಷೆ, ಅಂದಾಜುವೆಚ್ಚ, ವಿವಿಧ ಹಂತಗಳಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಬಿಲ್ ಅನುಮೋದನೆ ಮುಂತಾದ ಪ್ರಕ್ರಿಯೆಗಳು ಆಯಾ ಪಂಚಾಯತಿಗಳ ಚುನಾಯಿತ ಸದಸ್ಯರ ಸಭೆಯಲ್ಲೇ ನಡೆಯಬೇಕು. ಇಂಥ ಸಂದರ್ಭದಲ್ಲಿ ಸದಸ್ಯರಿಗೆ ಕೇವಲ ಓದು-ಬರಹಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ, ವ್ಯಾವಹಾರಿಕ ಪ್ರಜ್ಞೆ ಇರಬೇಕಾ ಗುತ್ತದೆ. ಚೆಕ್‌ಗಳು ಕೂಡ ಪಂಚಾಯತಿಯ ಅಧ್ಯಕ್ಷರು ಮತ್ತು ಪಿಡಿಒಗಳ ಜಂಟಿಸಹಿಯಲ್ಲಿ ನೀಡಲ್ಪ ಡುತ್ತವೆ. ಒಂದೊಮ್ಮೆ ಅವರು ಸಾಕ್ಷರರಲ್ಲದಿದ್ದರೆ ಹೆಬ್ಬೆಟ್ಟು ಒತ್ತಿಸಬೇಕಾಗುತ್ತದೆ!

ಇಂಥವರಿಗೆ, ಅದು ಯಾವುದಕ್ಕೆ ಸಂಬಂಧಿಸಿದ ಚೆಕ್, ಎಷ್ಟು ಮೊತ್ತಕ್ಕೆ ಬರೆಯಲಾಗಿದೆ, ಬಿಲ್ ಎಷ್ಟಕ್ಕೆ ಮಂಜೂರಾಗಿದೆ ಎಂಬಿತ್ಯಾದಿ ವಿಷಯಗಳು ತಿಳಿಯುವುದಿಲ್ಲ. ಈಗಿನ ಆಧುನಿಕ ಯುಗ ದಲ್ಲಿ ಅನೇಕ ಆಡಳಿತಾತ್ಮಕ ವಿಷಯಗಳು ಮಾಹಿತಿ ತಂತ್ರಜ್ಞಾನ ಆಧರಿತ ಸಾಧನಗಳ ಮೂಲಕವೇ ನಡೆಯಬೇಕು. ಉದಾಹರಣೆಗೆ, ಇ-ಸ್ವತ್ತು, ಕಟ್ಟಡ ನಿರ್ಮಾಣದ ನಕ್ಷೆಯ ದೃಢೀಕರಣ, ಆಸ್ತಿ ವರ್ಗಾ ವಣೆ ಮುಂತಾದವು ಅಧ್ಯಕ್ಷರ ಮತ್ತು ಪಿಡಿಒರವರ ಬಯೋಮೆಟ್ರಿಕ್ ಮೂಲಕವೇ ನಡೆಯಬೇಕು.

ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಗಳಂತೂ ಮತ್ತಷ್ಟು ಸಂಕೀರ್ಣವಾಗಿರುತ್ತವೆ. ನಿಜಾರ್ಥ ದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂದರೆ, ಜನಪ್ರತಿನಿಧಿಗಳಿಗೆ ಸ್ವಂತ ವಿವೇಚನೆಯಿಂದ ತೀರ್ಮಾನಿಸುವ ಅರ್ಹತೆಯಿರಬೇಕೇ ವಿನಾ, ಅಧಿಕಾರಿಗಳು ತೋರಿಸಿದೆಡೆ ಸಹಿ ಹಾಕುವುದಲ್ಲ. ಏನು ಬರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳದೆ ಮಾಡಿದ ಸಹಿಗೆ ‘ಹೆಬ್ಬೆಟ್ಟು’ ಅಂತಲೇ ಹೆಸರು!

ಅನಕ್ಷರಸ್ಥ ಪ್ರತಿನಿಧಿಗಳು ಊರ ಮುಖಂಡರ, ಸಾಹುಕಾರರ ‘ಛಾಯಾ ಪ್ರತಿನಿಧಿ’ ಆಗುವುದರಿಂದ ಪರೋಕ್ಷ ಅಧಿಕಾರ ಚಲಾವಣೆಯಾಗುತ್ತಿರುವ ಉದಾಹರಣೆಗಳಿವೆ. ಇನ್ನು ವಿಧಾನಸಭೆ ಮತ್ತು ಸಂಸತ್ ಸದಸ್ಯರಿಗಂತೂ ಶಾಸನ ರೂಪಿಸಬೇಕಾದ ಮಹತ್ತರ ಹೊಣೆಯಿದೆ. ಶಾಸಕಾಂಗದಿಂದ ಅಂಗೀಕೃತವಾದ ಶಾಸನವು ಕೋಟ್ಯಂತರ ಮಂದಿಯ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂಥದ್ದು. ಕೆಲ ಶಾಸನಗಳು ದೇಶದ ಸುರಕ್ಷತೆ, ವಿದೇಶಾಂಗ ವ್ಯವಹಾರ, ಆರ್ಥಿಕತೆ ಮುಂತಾದವುಗಳ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವಂಥವಾಗಿರುತ್ತವೆ.

ಅಧಿಕಾರಿಗಳು ತಯಾರಿಸುವ ಕರಡು ಶಾಸನಗಳು ಮಂತ್ರಿಮಂಡಲ ಮತ್ತು ಆಯಾ ಶಾಸನ ಸಮಿತಿ ಗಳಲ್ಲಿ ಚರ್ಚೆಯಾದ ನಂತರವಷ್ಟೇ ಶಾಸಕಾಂಗದ ಅಂಗೀಕಾರಕ್ಕೆ ಬರುವುದು ನಿಜವಾದರೂ, ಮಂತ್ರಿ ಮಂಡಲ ಮತ್ತು ಶಾಸನ ಸಮಿತಿಗಳಲ್ಲಿ ಇರುವವರೂ ಚುನಾಯಿತ ಸದಸ್ಯರೇ ಎಂಬು ದನ್ನು ಗಮನಿಸಬೇಕು. ಪ್ರಜಾಪ್ರತಿನಿಧಿ ಸಭೆಗಳಲ್ಲಿ ಭಾಷಣ ಮಾಡುವ ಸದಸ್ಯರೆಲ್ಲರಿಗೂ ವಿಷಯ ಜ್ಞಾನ ವಿರುತ್ತದೆ ಎಂದು ಭಾವಿಸಲಾಗದು.

ಇಂಥ ಸದಸ್ಯರು ಮಂತ್ರಿಗಳಾದಾಗ, ಹಣಕಾಸು, ವಿದೇಶಾಂಗ ವ್ಯವಹಾರ, ಸೇನೆ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಕಾನೂನು ಮುಂತಾದ ಪ್ರಮುಖ ಖಾತೆಗಳನ್ನು ನಿಭಾಯಿಸಬೇಕಾಗುತ್ತದೆ. ಅಧಿಕಾರಿ ಗಳು ನೀಡುವ ಮಾಹಿತಿಯ ಸತ್ಯಾಸತ್ಯತೆಯನ್ನು ವಿಮರ್ಶಿಸುವ, ಸಮಸ್ಯೆಗಳಿಗೆ ಪರಿಹಾರವನ್ನು ವಿವೇಚನೆಯಿಂದ ತೀರ್ಮಾನಿಸುವ ಸಾಮರ್ಥ್ಯ ಅವರಲ್ಲಿರಬೇಕಾಗುತ್ತದೆ.

ಇವೆಲ್ಲಕ್ಕೂ ಸಾಕಷ್ಟು ವಿದ್ಯಾರ್ಹತೆ ಅಗತ್ಯ. ಆದರೆ, ಪ್ರಜಾಪ್ರಭುತ್ವವಿರುವ ಬಹುತೇಕ ದೇಶಗಳ ಸಂವಿಧಾನಗಳು ಈ ಕುರಿತಾದ ಯಾವುದೇ ಮಾನದಂಡಗಳನ್ನು ವಿಧಿಸಿಲ್ಲ. ಪಾಶ್ಚಾತ್ಯರಲ್ಲಿ ಶೈಕ್ಷಣಿಕ ಅರ್ಹತೆ ಸಾಕಷ್ಟಿರುತ್ತದೆ ಎಂಬ ಕಾರಣಕ್ಕೆ ಅಲ್ಲಿ ಈ ಸಮಸ್ಯೆ ಇಲ್ಲದಿರಬಹುದು; ಆದರೆ ಸಾಕ್ಷರತೆಯ ಪ್ರಮಾಣ ತುಲನಾತ್ಮಕವಾಗಿ ಕಮ್ಮಿಯಿರುವ ಭಾರತದಂಥ ರಾಷ್ಟ್ರಗಳಲ್ಲಿ ವಿದ್ಯಾರ್ಹತೆ ಕುರಿತು ‘ಸಾಂವಿಧಾನಿಕ ಅನುವು’ ಅತ್ಯಗತ್ಯ. ಜನರು ಉತ್ತಮರನ್ನೇ ಚುನಾಯಿಸುತ್ತಾರೆ ಎಂಬುದು ಸುಳ್ಳೆಂದು ಅನೇಕ ಸಲ ಸಾಬೀತಾಗಿದೆ.

ಶೈಕ್ಷಣಿಕವಾಗಿ ಉತ್ತಮ ಅರ್ಹತೆಯಿದ್ದ ಅನೇಕರು ಚುನಾವಣೆ ಮೂಲಕ ಆಯ್ಕೆಯಾಗಿರಲಿಲ್ಲ. ಅರ್ಥಮಂತ್ರಿ ಮತ್ತು ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್‌ರಂಥ ಮೇಧಾವಿ ಎಂದೂ ಲೋಕಸಭಾ ಸದಸ್ಯರಾಗಿರಲಿಲ್ಲ. ಶೈಕ್ಷಣಿಕ ಅರ್ಹತೆಯಿಲ್ಲದವರೇ ಒಂದೊಮ್ಮೆ ಹೆಚ್ಚಿನ ಸಂಖ್ಯೆ ಯಲ್ಲಿ ಚುನಾಯಿತರಾದಲ್ಲಿ ಹಣಕಾಸು, ವಿದೇಶಾಂಗ ವ್ಯವಹಾರ ಮುಂತಾದ ಪ್ರಮುಖ ಖಾತೆಗಳ ನಿರ್ವಹಣೆಗೆ ಯಾರನ್ನು ನಿಯೋಜಿಸುವುದು? ರಾಜ್ಯಸಭೆಯ ಮೂಲಕ ಸೂಕ್ತ ಪ್ರತಿನಿಧಿಗಳನ್ನು ಆಯ್ಕೆಮಾಡಬಹುದಾದರೂ, ಅಲ್ಲಿ ಅವಕಾಶ ಇರಬೇಕಾಗುತ್ತದೆ.

ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಅನೇಕ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ವಿಶ್ವಸಂಸ್ಥೆಯ ಸಭೆಯಲ್ಲಿ ಅವಿದ್ಯಾವಂತ ಮಂತ್ರಿಯೊಬ್ಬರು ಭಾರತವನ್ನು ಪ್ರತಿನಿಧಿಸಿದರೆ ಹೇಗಿರಬಹುದೆಂದು ಊಹಿಸಿ!

ನಮ್ಮಲ್ಲಿ ‘ಅನಕ್ಷರಸ್ಥರೊಬ್ಬರು ಶಿಕ್ಷಣ ಮಂತ್ರಿಯಾಗಬಾರದು’ ಎಂಬ ಯಾವ ನಿಯಮ ವೂ ಇಲ್ಲ, ಅವರು ಉನ್ನತ ಶಿಕ್ಷಣ ಅಥವಾ ವಿಜ್ಞಾನ-ತಂತ್ರಜ್ಞಾನ ಸಚಿವರಾದರೂ ಬಾಧಕವಿಲ್ಲ! ಹಾಗೆಂದ ಮಾತ್ರಕ್ಕೆ ಜನಪ್ರತಿನಿಧಿಗಳೆಲ್ಲರೂ ಐಐಎಂನಿಂದ ಎಂಬಿಎ ಮಾಡಿರಬೇಕು, ಡಾಕ್ಟರೇಟ್ ಪಡೆದಿರ ಬೇಕು ಅಂತಲ್ಲ, ಅಥವಾ ಭಾರಿ ವಿದ್ಯಾವಂತರೆಲ್ಲ ಉತ್ತಮರೆಂದೂ ಅಲ್ಲ. ಹೆಚ್ಚೆಚ್ಚು ಓದಿಕೊಂಡಿ ರುವ ಅನೇಕರು ರಾಜಕೀಯಕ್ಕೆ ಬರಲು ಹಿಂದೇಟುಹಾಕಬಹುದು. ಆದರೆ, ಜನಪ್ರತಿನಿಧಿ ಗಳಿಗೆ ಒಂದಷ್ಟು ಶೈಕ್ಷಣಿಕ ಅರ್ಹತೆಯಂತೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಅಗತ್ಯ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಮುಂದೆ ಉಲ್ಲೇಖಿಸಿರುವಂಥ ಒಂದಷ್ಟು ನಿಯಮಗಳನ್ನು ಸೇರಿಸುವುದು ಅಪೇಕ್ಷಣೀಯ: ಪ್ರತಿ ರಾಜಕೀಯ ಪಕ್ಷವು ಚುನಾವಣಾ ಸ್ಪರ್ಧೆಗೆ ಹೆಸರಿಸುವವರ ಪೈಕಿ ಕನಿಷ್ಠಪಕ್ಷ 10-15 ಪ್ರತಿಶತ ಅಭ್ಯರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ತಂತ್ರಜ್ಞಾನ, ಆಡಳಿತ, ಶಿಕ್ಷಣ ಮುಂತಾದ ಕ್ಷೇತ್ರಗಳ ತಜ್ಞರಾಗಿರಬೇಕು.

ಏನಿಲ್ಲವೆಂದರೂ, 60 ಪ್ರತಿಶತ ಅಭ್ಯರ್ಥಿಗಳು ಎಸ್‌ಎಸ್ ಎಲ್‌ಸಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು. ಮಿಕ್ಕವರು ಕನಿಷ್ಠಪಕ್ಷ ಓದು-ಬರಹ ಬಲ್ಲವರಾಗಿರಬೇಕು. ಅಭ್ಯರ್ಥಿಗಳ ಯಾದಿ ಸಲ್ಲಿಸುವ ಹಂತದಲ್ಲೇ ಈ ನಿಯಮದ ಪಾಲನೆಯಾಗಬೇಕು, ಯಾಕೆಂದರೆ ಜನರ ಆಯ್ಕೆಯ ಸ್ವಾತಂತ್ರ್ಯಕ್ಕೆ ಬಾಹ್ಯ ನಿಯಂತ್ರಣ ಸಾಧ್ಯವಿಲ್ಲ.

ರಾಜ್ಯಪಾಲರು, ಮಂತ್ರಿಗಳು ಪಂಚಾಯತ್‌ರಾಜ್ ಸಂಸ್ಥೆಗಳ ಅಧ್ಯಕ್ಷರು/ಉಪಾಧ್ಯಕ್ಷರಿಗೆ ಹೆಚ್ಚಿನ ವಿದ್ಯಾರ್ಹತೆಯ ಮಾನದಂಡವಿರಬೇಕು. ಹಣಕಾಸು, ವಿದೇಶಾಂಗ ವ್ಯವಹಾರ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು, ಶಿಕ್ಷಣ ಮುಂತಾದ ಪ್ರಮುಖ ಖಾತೆಗಳ ಮಂತ್ರಿಗಳಾಗಿ ಆಯಾ ಕ್ಷೇತ್ರಗಳ ಪರಿಣತರನ್ನೇ ನೇಮಿಸಬೇಕು.

ಗ್ರಾಮ ಮಟ್ಟದಲ್ಲಿ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗದ ಸಾಧ್ಯತೆಯಿರುವುದರಿಂದ, ಸರಕಾರಗಳು ಪಂಚಾಯತ್ ಸಮಿತಿಗಳಲ್ಲಿ ನಾಮ ನಿರ್ದೇಶನದ ಮೂಲಕ ಸಮರ್ಥರನ್ನು ಹೆಚ್ಚು ವರಿ ಸದಸ್ಯರಾಗಿ ನೇಮಿಸಬೇಕು. ಇಂಥ ವೇಳೆ ಸ್ಥಳೀಯವಾಗಿ ಲಭ್ಯವಿರುವ ನಿವೃತ್ತ ಶಿಕ್ಷಕರು, ಬ್ಯಾಂಕ್ ಅಥವಾ ಸರಕಾರಿ ನೌಕರರು, ವಕೀಲರು, ವೈದ್ಯರು ಮುಂತಾದವರಿಗೆ ಆದ್ಯತೆ ನೀಡಬೇಕು. ಅಂಥವರು ಸಿಗದಿದ್ದಲ್ಲಿ, ಹಾಲಿ ಸರಕಾರಿ ಅಧಿಕಾರಿಗಳನ್ನು ಪದನಿಮಿತ್ತ ಸದಸ್ಯರಾಗಿ ನಾಮ ನಿರ್ದೇಶನ ಮಾಡಬೇಕು.

ಸಮರ್ಥರು ಜನಪ್ರತಿನಿಧಿಗಳಾಗಲು ಇಂಥ ಕೆಲವು ನಿಯಮಗಳು ನೆರವಾಗಬಲ್ಲವು. ಈ ನಿಟ್ಟಿನಲ್ಲಿ, ಹರಿಯಾಣ ಸರಕಾರವು ಪಂಚಾಯತಿ ಚುನಾವಣಾ ಸ್ಪರ್ಧಿಗಳಿಗೆ ಶೈಕ್ಷಣಿಕ ಮಾನದಂಡಗಳನ್ನು ವಿಧಿಸುವ 2015ರ ಪಂಚಾಯತ್‌ರಾಜ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿತು.

ಇದನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, “ಒಳ್ಳೆಯದು-ಕೆಟ್ಟದ್ದು ಹಾಗೂ ಸರಿ-ತಪ್ಪು ಎಂಬುದನ್ನು ನಿರ್ಧರಿಸುವ ಶಕ್ತಿಯನ್ನು ಶಿಕ್ಷಣವಷ್ಟೇ ಕೊಡಬಲ್ಲದು" ಎಂದು ಉದ್ಗರಿಸಿತು. ಅಂತೆಯೇ, ರಾಜ ಸ್ಥಾನ, ಅಸ್ಸಾಂ, ಬಿಹಾರ ಸರಕಾರಗಳೂ ಇಂಥ ಮಾನದಂಡಗಳನ್ನು ವಿಧಿಸಿವೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನಾವಕಾಶ ಇರಬೇಕೆಂಬುದು ಸಂವಿಧಾನದತ್ತ ಮೂಲಭೂತ ಹಕ್ಕಾ ದರೂ, ದೇಶದ ಹಿತದೃಷ್ಟಿಯಿಂದ ಒಂದಷ್ಟು ಮಾನದಂಡಗಳನ್ನು ಹೀಗೆ ಜಾರಿಗೊಳಿಸುವುದು ಸ್ವಾಗತಾರ್ಹ. ಈ ಪಂಕ್ತಿಗೆ ಮಿಕ್ಕ ರಾಜ್ಯಗಳು ಹಾಗೂ ಕೇಂದ್ರ ಸರಕಾರ ಆದಷ್ಟು ಬೇಗ ಸೇರಬೇಕು.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)

ಇದನ್ನೂ ಓದಿ: Shashi Tharoor Column: ಅಮೆರಿಕ-ಭಾರತ ಮತ್ತೊಮ್ಮೆ ಮಹೋನ್ನತ ವಾಗುವ ಕಾಲ ಬಂತು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ