Dr N Someshwara Column: ನಮಗೆಂಥ ಶಿಕ್ಷಣ ಬೇಕೆಂದು ನಮಗೇಕೆ ತಿಳಿದಿಲ್ಲ ?

ನೋಡಿದರೆ ಎಲ್ಲವೂ ಹಳೆಗನ್ನಡದ ಪದ್ಯಗಳು. ಗಂಭೀರವಾದ ನೀತಿಬೋಧಕ ಪದ್ಯಗಳು. ಆ ಪದ್ಯ ಗಳನ್ನು ದೊಡ್ಡವರೇ ಓದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು. ಜತೆಗೆ ಅತ್ಯಂತ ಅನಾಕರ್ಷಕ, ಅರ್ಥವಾಗದ ಭಾಷೆ. ಮಕ್ಕಳ ಭಾವಕ್ಕೆ ಹಾಗೂ ಬುದ್ಧಿಗೆ ನಿಲುಕದ ವಿಚಾರಧಾರೆ. ತುಂಬಾ ಬೇಸರ ದಿಂದ ಹೇಗೋ ಅಂದಿನ ತರಗತಿಯನ್ನು ಪೂರ್ಣಗೊಳಿಸಿದರು

Dr N Someshwara Column
Profile Ashok Nayak January 22, 2025

Source : Vishwavani Daily News Paper

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಜಿ.ಪಿ.ರಾಜರತ್ನಮ್ ಕನ್ನಡಿಗರಿಗೆ ಸುಪರಿಚಿತರು. ಒಂದು ಸಲ ಇವರ ತಂದೆಗೆ ಅನಾರೋಗ್ಯ ವಾಯಿತು. ಆಗ ಅವರು ಮಗನನ್ನು ಕರೆದು, ತಾವು ಅಧ್ಯಾಪಕರಾಗಿದ್ದ ಶಾಲೆಗೆ ಹೋಗಿ ಎರಡನೆಯ ತರಗತಿಯ ಮಕ್ಕಳಿಗೆ ಪಾಠ ಮಾಡುವಂತೆ ಸೂಚಿಸಿದರು. ರಾಜರತ್ನಮ್ ಶಾಲೆಗೆ ಬಂದು ಪಠ್ಯಪುಸ್ತಕ ವನ್ನು ಕೈಗೆತ್ತಿಕೊಂಡರು.

ನೋಡಿದರೆ ಎಲ್ಲವೂ ಹಳೆಗನ್ನಡದ ಪದ್ಯಗಳು. ಗಂಭೀರವಾದ ನೀತಿಬೋಧಕ ಪದ್ಯಗಳು. ಆ ಪದ್ಯ ಗಳನ್ನು ದೊಡ್ಡವರೇ ಓದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು. ಜತೆಗೆ ಅತ್ಯಂತ ಅನಾಕರ್ಷಕ, ಅರ್ಥವಾಗದ ಭಾಷೆ. ಮಕ್ಕಳ ಭಾವಕ್ಕೆ ಹಾಗೂ ಬುದ್ಧಿಗೆ ನಿಲುಕದ ವಿಚಾರಧಾರೆ. ತುಂಬಾ ಬೇಸರ ದಿಂದ ಹೇಗೋ ಅಂದಿನ ತರಗತಿಯನ್ನು ಪೂರ್ಣಗೊಳಿಸಿದರು.

ಶಾಲೆಯಿಂದ ಹೊರಟು ಚಾಮುಂಡಿ ಬೆಟ್ಟದ ಬುಡದಲ್ಲಿದ್ದ ಒಂದು ಕೆರೆಯ ಸುತ್ತಲೂ ನಡೆಯಲಾ ರಂಭಿಸಿದರು. ಆಗ ಅವರಿಗೆ ಹೊಳೆಯಿತು ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’ ಎಂಬ ಪದ್ಯ. ಮರುದಿನ ಶಾಲೆಗೆ ಬಂದವರೆ ಆ ಪದ್ಯವನ್ನು ಮಕ್ಕಳಿಗೆ ಹೇಳಿಕೊಟ್ಟರಂತೆ! ಮಕ್ಕಳಿಗೆ ತುಂಬಾ ಖುಷಿಯಾಯಿತು. ಎಲ್ಲರೂ ಆ ಹಾಡನ್ನು ತಮಗೆ ಬಂದ ಹಾಗೆ ಹಾಡುತ್ತಾ ಕುಣಿಯ ತೊಡಗಿದರಂತೆ.

ಆನಂತರ ರಾಜರತ್ನಮ್ ಅವರು ‘ನಾಯಿಮರಿ ನಾಯಿಮರಿ, ತಿಂಡಿ ಬೇಕೆ?’, ‘ಒಂದು ಎರಡು ಬಾಳೆಲೆ ಹರಡು’, ‘ಹತ್ತು ಹತ್ತು ಇಪ್ಪತ್ತು’, ‘ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು’ ಮುಂತಾದ ಕವನಗಳನ್ನು ಬರೆದರು. ಆ ಪದ್ಯಗಳು ಅಪಾರ ಜನಪ್ರಿಯತೆಯನ್ನು ಪಡೆದವು. ಆಗ ಸರಕಾರವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ರಚಿಸುವಾಗ ಸರಳ ಶಿಶುಪದ್ಯಗಳಿಗೆ ಆದ್ಯತೆ ನೀಡಿತು.

ಈ ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಹೆತ್ತವರಾಗಿ ನಮ್ಮ ಮಕ್ಕಳನ್ನು ಪಾಲಿಸುವುದು, ಪೋಷಿಸುವುದು (ಪೇರೆಂಟಿಂಗ್). ಅದರಲ್ಲೂ ಅವರನ್ನು ಶೈಕ್ಷಣಿಕವಾಗಿ ಹೇಗೆ ಬೆಳೆಸಬೇಕು ಎನ್ನುವ ಸ್ಪಷ್ಟ ಪರಿಕಲ್ಪನೆಯು ಇರದಿರುವುದು. ಒಂದು ಸಿದ್ಧ ರೂಪ ಮಾದರಿಯು ಇಲ್ಲದಿರುವುದು. ಹಾಗಾಗಿ ಹೆತ್ತವರು ತಮಗೆ ತೋಚಿದಂತೆ ಮಕ್ಕಳನ್ನು ಬೆಳೆಸುತ್ತಿದ್ದಾರೆ.

ಇದರ ಜತೆಗೆ ನಮ್ಮ ಸರಕಾರದ ಹುಚ್ಚಾಟವು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯುತ್ತಿದೆ. ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ನೀಡಬೇಕೆನ್ನುವ ತಜ್ಞರ ಹೇಳಿಕೆಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ. ಇನ್ನು ಪಠ್ಯಪುಸ್ತಕಗಳು! ಚಂದ್ರನ ಮೆಟ್ಟಿ, ಮಂಗಳಕ್ಕೆ ಜಿಗಿದಿರುವ ನಾವು ನಮ್ಮ ಮಕ್ಕಳಿಗೆ ಒಂದು ಮಾದರಿ ಪಠ್ಯವನ್ನು ರೂಪಿಸಲು ವಿಫಲರಾಗಿದ್ದೇವೆ.

ಬಹುಶಃ ಫಿನ್ಲ್ಯಾಂಡಿನ ಶೈಕ್ಷಣಿಕ ಪದ್ಧತಿಯು ವಿಶ್ವದಲ್ಲಿಯೇ ಸರ್ವಶ್ರೇಷ್ಠ ಪದ್ಧತಿಯೆನಿಸುತ್ತದೆ. ಎಲ್ಲ ಶಾಲಾ ಕಾಲೇಜುಗಳನ್ನು ಸರಕಾರವೇ ನಡೆಸುತ್ತದೆ. ವಿದ್ಯಾರ್ಥಿ-ಕೇಂದ್ರಿತ ಆಟಪಾಠಗಳು. ಉರು ಹಚ್ಚುವುದಕ್ಕೆ ಅವಕಾಶವಿಲ್ಲ. ಬದಲಾಗಿ ಆಟದ ಮೂಲಕ, ಸೃಜನಶೀಲ ಚಟುವಟಿಕೆಗಳ

ಮೂಲಕ ಮಗುವು ಆಲೋಚಿಸುವುದನ್ನು ಕಲಿಯುತ್ತದೆ. ಹೋಮ್‌ವರ್ಕ್ ಎನ್ನುವ ಪರಿಕಲ್ಪನೆಗೆ ಆದ್ಯತೆಯಿಲ್ಲ. ಹಾಗೆ ಕೊಟ್ಟರೂ ಅದು ಕನಿಷ್ಠ ಪ್ರಮಾಣವನ್ನು ಮೀರುವುದಿಲ್ಲ. ಶಾಲಾವಧಿಯು ದೀರ್ಘವಾಗಿರುವುದಿಲ್ಲ. ದೈಹಿಕ-ಮಾನಸಿಕ ಬೆಳವಣಿಗೆಗೆ ಆದ್ಯತೆ. ಈ ದೇಶದಲ್ಲಿ ಅಧ್ಯಾಪಕರಾಗು ವುದು ಅತ್ಯಂತ ಕಷ್ಟದ ಕೆಲಸ. ಆದರೆ ಅಧ್ಯಾಪಕರಾಗಿ ಆಯ್ಕೆಯಾದವರಿಗೆ ಅತ್ಯುತ್ತಮ ಸಂಬಳ ಹಾಗೂ ಎಲ್ಲೆಡೆ ಗೌರವ ದೊರೆಯುತ್ತದೆ. ಇನ್ನು ಪಠ್ಯಪುಸ್ತಕಗಳು ಹಾಗೂ ಸಿಲಬಸ್ಸಿಗೆ ಬಂದರೆ ನಮ್ಮ ಮುಂದೆ ಲಂಡನ್ನಿನ ಆಕ್ಸ್ ಫರ್ಡ್, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಫ್ರಾನ್ಸಿನ ಸೋರ್ಬೋರ್ನ್ ವಿಶ್ವವಿದ್ಯಾಲಯಗಳು ಮಾದರಿಯಾಗಿವೆ.

ನಮ್ಮ ಮಕ್ಕಳಿಗೆ ಎಂಥ ಶಿಕ್ಷಣವನ್ನು ನೀಡಬೇಕು ಎಂಬುದರ ಬಗ್ಗೆ ಯೋಚಿಸಿದವರಲ್ಲಿ ಜನ್ ಜಾಕ್ವೆಸ್ ರೂಸೋ (1712-1778) ಮೊದಲಿಗ. ಪಾಶ್ಚಾತ್ಯ ಜಗತ್ತಿನಲ್ಲಿ, ವಿಶೇಷವಾಗಿ ಯುರೋಪಿ ನಲ್ಲಿ ಶಾಲಾ ಮಕ್ಕಳಿಗೆ ದೇವರು-ಧರ್ಮ, ಪಾಪ-ಪುಣ್ಯ ಇತ್ಯಾದಿಗಳ ಬಗ್ಗೆಯೂ ಅರೆದು ಹೊಯ್ಯು ತ್ತಿದ್ದರು. ಈ ವಿಚಾರಗಳು ಮಕ್ಕಳಿಗೆ ಅರ್ಥವಾಗದಿದ್ದ ಕಾರಣ, ಅವರು ಎಲ್ಲವನ್ನೂ ಉರುಹಚ್ಚಲು ಪ್ರಯತ್ನಿಸುತ್ತಿದ್ದರು. ನೆನಪಿನ ಶಕ್ತಿಯಿದ್ದವರು ಬುದ್ಧಿವಂತರು ಎಂದು ಕರೆಸಿಕೊಂಡರು.

ನೆನಪಿನ ಶಕ್ತಿ ಕಡಿಮೆ ಇದ್ದವರು ದಡ್ಡರು ಎಂದು ಮೂದಲಿಸಿಕೊಂಡು ಇದ್ದಲ್ಲಿಯೇ ಮುರುಟಿ ಹೋದರು. ಪ್ರತಿಯೊಂದು ಮಗುವಿನಲ್ಲಿ ಒಂದು ಜನ್ಮದತ್ತ ಪ್ರತಿಭೆ ಇರುತ್ತದೆ ಎನ್ನುವ ಪರಿಕಲ್ಪನೆ ಯು ಅಂದಿನವರಿಗೆ ಇರಲಿಲ್ಲ. ಹಾಗಾಗಿ ಉರು ಹಚ್ಚಬಲ್ಲವನೇ ಪ್ರತಿಭಾಶಾಲಿಯೆಂದು ಕರೆಯಿಸಿ ಕೊಂಡ.

ಈ ಹಿನ್ನೆಲೆಯಲ್ಲಿ ಜನ್ ಜಾಕ್ವೆಸ್ ರೂಸೋ ಬರೆದ ಉಞಜ್ಝಿಛಿ, u SಛಿZಠಿಜಿoಛಿ ಟ್ಞ ಉbZಠಿಜಿಟ್ಞ ಎಂಬ ಕಾದಂಬರಿಯು ಒಂದು ದೊಡ್ಡ ಕೋಲಾಹಲವನ್ನೇ ಸೃಜಿಸಿತು. ಮೊದಲಿಗೆ ಯುರೋಪಿನ ಚರ್ಚ್ ಎಮಿಲಿಯನ್ನು ಉಗ್ರವಾಗಿ ಖಂಡಿಸಿತು. ಚರ್ಚಿನ ಮತ್ತೊಂದು ಮುಖವಾಗಿರುವ ಸರಕಾರ ಗಳೂ ಚರ್ಚಿನ ನಿಲುವನ್ನೇ ಎತ್ತಿ ಹಿಡಿದವು.

ಇತ್ಯಾತ್ಮಕ ಅಂಶಗಳು ರೂಸೋ ವಿದ್ಯಾರ್ಥಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡ ತನ್ನ ಕಾದಂ ಬರಿಯನ್ನು ಬರೆದ. ಮನುಷ್ಯನ ಬದುಕಿನಲ್ಲಿ ಬಾಲ್ಯವು ಒಂದು ಪ್ರಮುಖವಾದ ಘಟ್ಟ. ಈ ಘಟ್ಟ ದಲ್ಲಿ ಮಗುವು ಏನನ್ನು ಕಲಿಯುತ್ತದೆಯೋ, ಅದು ಆ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.

ಒಂದು ಮಗುವು ಹುಟ್ಟುವ ಮನೆಯ ಪರಿಸರ, ಆ ಮಗುವಿನ ಲಾಲನೆಯನ್ನು ಮಾಡುವ ತಾಯಿ ಹಾಗೂ ಮಗುವು ಮನೆಯ ಹೊಸಿಲನ್ನು ದಾಟಿ ಹೊರಗೆ ಹೆಜ್ಜೆಯನ್ನು ಇಟ್ಟಕೂಡಲೇ ಆ ಮಗುವು ನೋಡುವ ಪರಿಸರವು ಮಗುವಿನ ಅನುಭವದ ಜಗತ್ತನ್ನು ಹಿಗ್ಗಿಸುತ್ತದೆ. ಮಕ್ಕಳಿಗೆ ಅತೀವ ಕುತೂ ಹಲವಿರುತ್ತದೆ.

ಮಗುವು ತಾನು ಕಾಣುವ ಪ್ರತಿಯೊಂದರ ಬಗ್ಗೆಯೂ ಪ್ರಶ್ನಿಸುತ್ತದೆ. ಇದು ಜನ್ಮದತ್ತ ಕುತೂಹಲ. ಹಾಗಾಗಿ ಪಾಲಕರು/ ಅಧ್ಯಾಪಕರು ಮಗುವಿಗೆ ತಿಳಿಯುವ ಬಾಲಭಾಷೆಯಲ್ಲಿ ವಿವರಿಸಬೇಕು. ಎಲ್ಲಿಯವರೆಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶವನ್ನು ಮಾಡಿಕೊಡುತ್ತವೆಯೋ, ಅಲ್ಲಿಯ ವರೆಗೆ, ತಿಳಿಯುವ ಹಾಗೂ ಕಲಿಯುವ ಕುತೂಹಲವು ಮಕ್ಕಳಲ್ಲಿ ಇರುತ್ತದೆ.

ಮಗುವು ಪ್ರಕೃತಿಯೊಡನೆ ನೇರ ಸಂಪರ್ಕಕ್ಕೆ ಬರುತ್ತದೆ. ಬಿಸಿಲು, ನೆರಳು, ಚಳಿ, ಮಳೆ, ಗಾಳಿ, ನೀರು, ಗಿಡ, ಮರ, ಪ್ರಾಣಿ, ಪಶು, ಪಕ್ಷಿಗಳನ್ನು ನೋಡುವ ಕಾರಣ ಅವುಗಳ ಬಗ್ಗೆ ಅತೀವ ಕುತೂಹಲವನ್ನು ಬೆಳೆಸಿಕೊಳ್ಳುತ್ತದೆ. ಮಗುವು ಯಾವುದೇ ವಿಷಯವನ್ನು ಉರುಹಚ್ಚಿ ಒಪ್ಪಿಸಬೇಕಾದ ಒತ್ತಡದಲ್ಲಿ ಇರುವುದಿಲ್ಲ. ಹಾಗಾಗಿ ಮಗುವು ಸ್ವಾಭಾವಿಕವಾಗಿ ಯಾವುದೇ ಒತ್ತಡವಿಲ್ಲದೆ ಬೆಳೆಯುತ್ತದೆ. ಹಣ್ಣು-ತರಕಾರಿ-ಹೂವುಗಳನ್ನು, ಕಲ್ಲು ಮಣ್ಣನ್ನು, ಪ್ರಾಣಿಗಳನ್ನು ಮುಟ್ಟುವ, ಆಟವಾಡುವ ಅವಕಾಶವು ದೊರೆಯುತ್ತದೆ.

ಮಗುವು ತನಗೆ ನಿಲುಕುವ ಆಟಗಳನ್ನು ಉದಾಹರೆಗೆ, ಮರಳಿನಲ್ಲಿ ಕಪ್ಪೆಗೂಡನ್ನು ಕಟ್ಟುವುದನ್ನು ಆಡುತ್ತದೆ. ಮಗುವು ತನ್ನ ಸಮಸ್ಯೆಗಳನ್ನು ನೇರವಾಗಿ ಎದುರಿಸಿ ಉತ್ತರವನ್ನು ಕಂಡುಕೊಳ್ಳುತ್ತದೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಚೆನ್ನಾಗಿ ಕೈಗಳನ್ನು ತೊಳೆಯದಿದ್ದರೆ, ಅದೇ ಕೈಯಲ್ಲಿ ಊಟ ವನ್ನು ಮಾಡಿದರೆ ಬಾಯಿಯಲ್ಲಿ ಮಣ್ಣು ಸೇರಿಕೊಳ್ಳುತ್ತದೆ ಎನ್ನುವುದನ್ನು ಮಗುವು ಒಂದು ಸಲ ಕಲಿತರೆ, ಆಗ ತಪ್ಪದೇ ತನ್ನ ಕೈಗಳನ್ನು ತೊಳೆದುಕೊಂಡು ಊಟಕ್ಕೆ ಬರುತ್ತದೆ.

ಸಿದ್ಧಾಂತಗಳು ಮತ್ತು ಪ್ರಾಯೋಗಿಕ ಸತ್ಯಗಳ ಅನುಭವವಾಗುತ್ತಾ ಹೋಗುತ್ತದೆ. ದೀಪವನ್ನು ಮುಟ್ಟಬೇಡ ಎಂದರೆ ಅರ್ಥವಾಗುವುದಿಲ್ಲ. ಆದರೆ ದೀಪದ ಹತ್ತಿರಕ್ಕೆ ಹೋಗುತ್ತಿದ್ದ ಹಾಗೆ ಅದರ ಅನುಭವಕ್ಕೆ ಬರುವ ಶಾಖವು ಮಗುವನ್ನು ಮುಂದುವರಿಯದಂತೆ ತಡೆಯುತ್ತದೆ. ಹೀಗೆ ಯಾವ ಯಾವುದರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಪಾಠಗಳನ್ನು ಸ್ವಯಂ ಕಲಿಯಲಾರಂಬಿಸುತ್ತದೆ.

ಮಗುವು ತನ್ನ ಸ್ವಂತ ಅನುಭವಗಳ ಆಧಾರದ ಮೇಲೆ ಹೊಸ ವಿಷಯಗಳಲ್ಲಿ ಕಲಿಯುತ್ತದೆ. ಸ್ವಯಂ ಅನ್ವೇಷಣೆಯ ಮೂಲಕ ಹುಡುಕಾಟದ ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳು ತ್ತದೆ. ಮಗುವು ಆಲೋಚಿಸುವುದನ್ನು ಕಲಿಯುತ್ತದೆ. ಈ ಸ್ವತಂತ್ರ ಆಲೋಚನೆಯು ಮಗುವಿನ ವರ್ತನೆಯನ್ನು ಹಾಗೂ ವ್ಯಕ್ತಿತ್ವವನ್ನು ನಿರ್ವಹಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಮಗುವು ತನಗೆ ಏನು ಬೇಕು, ಯಾವುದರಲ್ಲಿ ತನಗೆ ಆಸಕ್ತಿ ಇದೆ ಎನ್ನುವುದನ್ನು ಸ್ವಯಂ ನಿರ್ಧರಿಸು ತ್ತದೆ. ಹಾಗಾಗಿ ತನ್ನ ಮೆಚ್ಚಿನ ವಿಷಯವನ್ನು ಕುರಿತು ಹೆಚ್ಚಿನ ಮುತುವರ್ಜಿಯಿಂದ ಕಲಿಯುತ್ತದೆ. ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆಯು ಸಹಜವಾಗಿ ನಡೆಯುತ್ತದೆ.

ಶೈಕ್ಷಣಿಕ ಕಲಿಕೆಯೊಂದಿಗೆ ನೈತಿಕ ವಿಚಾರಗಳನ್ನು ಕಲಿಯುತ್ತದೆ. ಸಮಾಜದಲ್ಲಿ ಬದುಕಲು ಸಹಾನು ಭೂತಿ ಮುಖ್ಯ ಎನ್ನುವುದನ್ನು ಕಲಿಯುತ್ತದೆ. ಇದು ಮಗುವನ್ನು ನಾಡಿನ ಸತ್ಪ್ರಜೆಯನ್ನಾಗಿಸುತ್ತದೆ. ನೇತ್ಯಾತ್ಮಕ ಅಂಶಗಳು ರೂಸೋವಿನ ಶೈಕ್ಷಣಿಕ ಪದ್ಧತಿಯು ನೋಡಲು ಆಕರ್ಷಕವಾಗಿದ್ದರೂ ಪ್ರಾಯೋಗಿಕವಾಗಿ ಅಸಾಧ್ಯ.

ಒಂದೊಂದು ಮಗುವಿಗೆ ಒಬ್ಬೊಬ್ಬ ಅಧ್ಯಾಪಕನನ್ನು ಎಲ್ಲಿಂದ ತರುವುದು? ಈ ವಿಧಾನದಿಂದ ಸಾಮೂಹಿಕ ಶಿಕ್ಷಣ ಅಸಾಧ್ಯ. ಈ ವಿಧಾನವು ದುಬಾರಿ. ಪ್ರತಿಯೊಂದು ಮಗುವಿಗೂ ಒಂದು ಮಾದರಿ ಪರಿಸರ ದೊರೆಯಬೇಕಾಗುತ್ತದೆ. ಇಂಥದ್ದನ್ನು ಶ್ರೀಮಂತರು ಒದಗಿಸಬಹುದು, ಬಡವರಿಗೆ ಅಸಾಧ್ಯ. ಸಾಂಪ್ರದಾಯಿಕ ಶಿಕ್ಷಣಕ್ಕಿಂತಲೂ, ರೂಸೋವಿನ ಶಿಕ್ಷಣವನ್ನು ಪಡೆಯಲು ಹೆಚ್ಚು ಸಮಯವು ಬೇಕಾಗುತ್ತದೆ.

ಮಕ್ಕಳಿಗೆ ಇತರ ಮಕ್ಕಳೊಡನೆ ಬೆರೆಯುವ ಅವಕಾಶವು ಕಡಿಮೆಯಾಗುತ್ತದೆ. ‘ಗ್ರೂಪ್ ಸ್ಟಡಿ’ ಎನ್ನುವುದಕ್ಕೆ ಅವಕಾಶವೇ ಇರುವುದಿಲ್ಲ. ಇದು ಮಗುವಿನ ಪರಿಪೂರ್ಣ ಬೆಳವಣಿಗೆಗೆ ಮಾರಕವಾಗ ಬಹುದು. ಮಗುವು ತನ್ನದೇ ಆದ ಭಾವಲೋಕದಲ್ಲಿ ಬೆಳೆದರೆ, ಸಮಾಜದ ಕ್ರೂರ ವ್ಯವಸ್ಥೆಗಳ ನಡುವೆ ಯಶಸ್ವಿ ಬದುಕನ್ನು ನಡೆಸಲಾರದು. ಹಾಗಾಗಿ ಯಶಸ್ವಿ ಸಾಮಾಜಿಕ ಹೊಂದಾಣಿಕೆಯು ಕನಸಾಗಬಹುದು.

ರೂಸೋ ಮಾನವ ಸ್ವಭಾವವನ್ನು ಸರಳೀಕರಿಸಿದ್ದಾನೆ. ಪ್ರತಿಯೊಂದು ಮಗುವಿಗೆ ‘ಮಾದರಿ ಪರಿಸರ’ ವನ್ನು ನಿರ್ಮಿಸಬಹುದೆನ್ನುವ ಪರಿಕಲ್ಪನೆಯು ಪ್ರಾಯೋಗಿಕವಾಗಿ ಅಸಾಧ್ಯವೆನಿಸುತ್ತದೆ. ಮಗುವು ನಿಜವಾದ ಜಗತ್ತಿನ ಕ್ರೌರ್ಯವನ್ನು ಅರಿಯುವಲ್ಲಿ ವಿಫಲವಾಗುತ್ತದೆ. ರೂಸೋವಿನ ಶಿಕ್ಷಣ ಪರಿಕಲ್ಪನೆಯು ಲಿಂಗ ತಾರತಮ್ಯಕ್ಕೆ ಪೂರಕವಾಗಿದೆ. ಹೆಣ್ಣು ಮಕ್ಕಳನ್ನು ‘ಸಾಂಪ್ರದಾಯಿಕ’ ಕೆಲಸಕ್ಕೆ ಮಾತ್ರ ಲಾಯಕ್ಕು, ಪುರುಷನ ಪಡಿ ನೆರಳಾಗಿ ಇರಬೇಕು ಎನ್ನುವುದು ಅಸಾಧು ಹಾಗೂ ಅವೈಜ್ಞಾನಿಕ.

ಮಕ್ಕಳ ಬದುಕಿಗೆ ಅಗತ್ಯವಾದ ಕ್ರಮಬದ್ಧ ಶಿಕ್ಷಣ (ಮೂರು ಭಾಷೆ, ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ಇತ್ಯಾದಿ) ದೊರೆಯುವುದಿಲ್ಲ. ಮಗುವಿನ ಮೌಲ್ಯಮಾಪನವು ಅಸಾಧ್ಯವಾಗುತ್ತದೆ. ನಿಷೇಧ ಮತ್ತು ಗಡಿಪಾರು ರೂಸೋವಿನ ಎಮಿಲಿ ಕಾದಂಬರಿಯನ್ನು ರೋಮನ್ ಕ್ಯಾಥೋಲಿಕ್ ಚರ್ಚ್ ಉಗ್ರವಾಗಿ ಪ್ರತಿಭಟಿಸಿತು. ಪ್ಯಾರಿಸ್ಸಿನ ಆರ್ಚ್ ಬಿಷಪ್ ರೂಸೋವಿನ ಎಮಿಲಿಯನ್ನು ದೈವನಿಂದೆ ಹಾಗೂ ಧರ್ಮನಿಂದೆಯ ಬರಹ ಎಂದ, ಅದನ್ನು ನಿಷೇಧಿಸಿದ. ಚರ್ಚಿನ ಕೈಗೊಂಬೆ ಯಾದ ಫ್ರಾನ್ಸ್ ಪಾರ್ಲಿಮೆಂಟ್ ರೂಸೋವಿನ ಬಂಧನಕ್ಕೆ ಆeಯನ್ನು ನೀಡಿತು.

ಪುಸ್ತಕವನ್ನು ನಿಷೇಧಿಸುವುದರ ಜತೆಯಲ್ಲಿ ಅದನ್ನು ಬಹಿರಂಗವಾಗಿ ಸುಟ್ಟಿತು. ರೂಸೋ ಸ್ವಿಜ಼ ರ್ಲ್ಯಾಂಡಿಗೆ ಓಡಿಹೋದ. ಜಿನೇವಾದಲ್ಲಿ ಅವನ ಪುಸ್ತಕವನ್ನು ಬಹಿಷ್ಕರಿಸಿದರು. ಅಲ್ಲಿಂದ ಪ್ರಷ್ಯಾ ಮತ್ತು ಇಂಗ್ಲೆಂಡ್‌ಗೆ ಪಲಾಯನ ಮಾಡಿದ. ಕೊನೆಗೆ ಮಾನಸಿಕ ಸ್ತಿಮಿತವನ್ನು ಕಳೆದು ಕೊಳ್ಳುವ ಹಂತಕ್ಕೆ ಬಂದ. ಚರ್ಚ್ ಮತ್ತು ಸರಕಾರವು ರೂಸೋವಿನ ಕೃತಿಯನ್ನು ಬಹಿಷ್ಕರಿಸಿದರೂ, ಜನಸಾಮಾನ್ಯರು ಸ್ವಾಗತಿಸಿದರು.

ಇವನು ಪ್ರತಿಪಾದಿಸಿದ ವ್ಯಕ್ತಿ ಸ್ವಾತಂತ್ರ್ಯ, ಮಕ್ಕಳ ಹಕ್ಕುಗಳು, ಸ್ವತಂತ್ರ ಕಲಿಕೆಗೆ ಅವಕಾಶ ಮುಂತಾ ದವನ್ನು ಅಪ್ಪಿದ ಜನರು, ಚರ್ಚ್ ಮತ್ತು ಅರಸನ ದಬ್ಬಾಳಿಕೆಯಿಂದ ರೋಸಿಹೋಗಿದ್ದ ಶ್ರೀಸಾಮಾ ನ್ಯರು ರೂಸೋವಿನ ಕೃತಿಯನ್ನು ಮೆಚ್ಚಿ ಮುಂದೆ ಫ್ರಾನ್ಸಿನ ಮಹಾಕ್ರಾಂತಿಗೆ ಭದ್ರವಾದ ಬುನಾದಿ ಯನ್ನು ಹಾಕಿದರು.

ಪ್ರಭಾವ: ರೂಸೋವಿನ ಎಮಿಲಿ ಆಧುನಿಕ ಶಿಕ್ಷಣ ಪದ್ಧತಿಯ ಮೇಲೆ ಪ್ರಭಾವವನ್ನು ಬೀರಿದೆ. ಮಾಂಟೆಸರಿ ಶಿಕ್ಷಣ, ವಾಲ್ಡಾ- ಶಿಕ್ಷಣ, ಫಾರೆಸ್ಟ್ ಸ್ಕೂಲ್ ಮುಂತಾದ ಪರಿಕಲ್ಪನೆಗಳು ಅಸ್ತಿತ್ವಕ್ಕೆ ಬಂದಿವೆ. ಹಾಗೆಯೇ ಫಿನ್ಲ್ಯಾಂಡಿನ ಇಂದಿನ ಶಿಕ್ಷಣಕ್ಕೆ ಸ್ಪೂರ್ತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: Dr N Someshwara Column: ಅವರು ಸ್ವತಃ ಆಪರೇಶನ್‌ ಮಾಡಿಕೊಂಡರು !

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ