ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ

ಜಗತ್ತಿನ ಇತಿಹಾಸದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿ ತನ್ನ ಉಪಜೀವನಕ್ಕೂ ಕೂಡ ಏನಿದೆ ಎಂಬು ದನ್ನು ಪರಿಗಣಿಸದೆ ಎಲ್ಲ ಆಸ್ತಿ ಭೂಮಿ ನಗದು ಬಂಗಾರದ ಆಭರಣಗಳು ವಜ್ರ ವೈಡೂರ್ಯ ಎಲ್ಲ ವನ್ನೂ ಸಮಾಜದ ಏಳಿಗೆಗಾಗಿ, ಬಡವರ ಶಿಕ್ಷಣ ಸೌಲಭ್ಯಕ್ಕಾಗಿ ದಾನ ಮಾಡಿ ತ್ಯಾಗವೀರರು ಎನಿಸಿ ಕೊಂಡವರು ಶಿರಸಂಗಿ ಲಿಂಗರಾಜ ಸರ್ದೇಸಾಯಿ. ‌

ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ

-

Ashok Nayak
Ashok Nayak Jan 15, 2026 12:42 PM

ಪ್ರಸ್ತುತ

ನಾಡೋಜ ಡಾ.ಮನು ಬಳಿಗಾರ್

ಜಗತ್ತಿನ ಇತಿಹಾಸದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿ ತನ್ನ ಉಪಜೀವನಕ್ಕೂ ಕೂಡ ಏನಿದೆ ಎಂಬುದನ್ನು ಪರಿಗಣಿಸದೆ ಎಲ್ಲ ಆಸ್ತಿ ಭೂಮಿ ನಗದು ಬಂಗಾರದ ಆಭರಣಗಳು ವಜ್ರ ವೈಡೂರ್ಯ ಎಲ್ಲವನ್ನೂ ಸಮಾಜದ ಏಳಿಗೆಗಾಗಿ, ಬಡವರ ಶಿಕ್ಷಣ ಸೌಲಭ್ಯಕ್ಕಾಗಿ ದಾನ ಮಾಡಿ ತ್ಯಾಗವೀರರು ಎನಿಸಿಕೊಂಡವರು ಶಿರಸಂಗಿ ಲಿಂಗರಾಜ ಸರ್ದೇಸಾಯಿ. ‌

ವಿಚಿತ್ರವೆಂದರೆ ಇಡೀ ವಿಶ್ವದಲ್ಲಿ ಹೀಗೆ ಸರ್ವಸ್ವವನ್ನು ಲೋಕದ ಹಿತಕ್ಕಾಗಿ ಧಾರೆ ಎರೆದವರು ಅತ್ಯಂತ ವಿರಳವಾಗಿದ್ದಾರೆ. ಅಂತಹ ಅಪರೂಪದಲ್ಲಿ ಅಪರೂಪರಾದವರು ಈ ಮಹಾದಾನಿಗಳು. ಲಿಂಗರಾಜರು ಬದುಕಿದ್ದು ಕೇವಲ 46 ವರ್ಷಗಳು. ಆ ಸೀಮಿತ ಅವಧಿಯ ಜೀವನದಲ್ಲಿಯೇ ತಮ್ಮ ಸಕಲ ಸಂಪತ್ತು ಸಿರಿ ಸಂತೋಷಗಳನ್ನು ಬದಿಗಿಟ್ಟು ಸಮಾಜದಲ್ಲಿ ನೊಂದವರ ಹಿಂದುಳಿದವರ ಬಡಬಗ್ಗರ ಕಷ್ಟಗಳನ್ನು ಪರಿಹರಿಸಿದವರು ಈ ಪುಣ್ಯಾತ್ಮರು.

ತಮ್ಮೆಲ್ಲ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡುವುದು ಅಲ್ಲದೆ ತಮ್ಮ ವಿಲ್ ಹಾಗೂ ಟ್ರಸ್ಟ್ ರಚನೆಯ ಎಂಓಯು ಅನ್ನು ರಿಜಿಸ್ಟರ್ ಡೀಡ್ ಮಾಡಿ ಇಡೀ ಆಸ್ತಿಯ ಮೇಲ್ವಿಚಾರಣೆಗಾಗಿ ಸಮಾ ಜದ ಗಣ್ಯರ ಸಮಿತಿ ಒಂದನ್ನು ರಚಿಸಿ ಅದಕ್ಕೆ ಆಗಿನ ಕಲೆಕ್ಟರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಪೂರ್ವ ಎನಿಸುವ ಕೈಂಕರ್ಯವನ್ನು ನೆರವೇರಿಸಿದರು.

ಇಂತಹ ಪುಣ್ಯಾತ್ಮರು ಹುಟ್ಟಿದ್ದು 1861 ಜನವರಿ 10ರಂದು. ಶ್ರೀಯುತರು ಖ್ಯಾತನಾಮರಾದದ್ದು ಶಿರಸಂಗಿ ಲಿಂಗರಾಜ ದೇಸಾಯಿ ಎಂದಿದ್ದರೂ, ಇವರು ಅಂದಿನ ಧಾರವಾಡ ಜಿಲ್ಲೆಯ (ಈಗ ಗದಗ ಜಿಲ್ಲೆ) ಶಿಗ್ಲಿ ಗ್ರಾಮದ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದವರು. 11 ವರ್ಷದ ಬಾಲಕನಾಗಿzಗ ಶಿರಸಂಗಿ ಸಂಸ್ಥಾನಕ್ಕೆ ದತ್ತಕ ಮಗನಾಗಿ ಬಂದರು. ಸಂಸ್ಥಾನದ ರಾಜಮಾತೆ, ಇವರ ದತ್ತಕ ತಾಯಿ ಗಂಗಾಬಾಯಿಯವರು ಸ್ವಂತ ಮಗನಂತೆಯೇ ಇವರನ್ನು ಬೆಳೆಸಿದ್ದರಾದರೂ ಅವರ ನಂತರ ಮಲತಾಯಿಯ ಆಶ್ರಯದಲ್ಲಿ ಬೆಳೆಯಬೇಕಾದಾಗ ಬಹಳಷ್ಟು ತೊಂದರೆಗಳಿಗೆ ಲಿಂಗರಾಜರು ಒಳಗಾದರು.

ಇದನ್ನೂ ಓದಿ: Dr Vijay Darda Column: ತೈವಾನ್‌ ಮೇಲೆ ಯುದ್ದ ಸಾರಲಿದೆಯೇ ಚೀನಾ ?

ಎಷ್ಟೇ ಕಷ್ಟಗಳು ಎದುರಾದರೂ ಅವುಗಳನ್ನೆಲ್ಲ ಬಹಳ ಶಾಂತಿ ಸಮಾಧಾನ ಹಾಗೂ ತುಂಬ ವಿವೇಚನೆಯಿಂದಲೇ ಪರಿಹರಿಸಿಕೊಂಡು ಮುನ್ನಡೆದ ಆದರ್ಶ ಜೀವಿ ಇವರು. ಒಟ್ಟಾರೆಯಾಗಿ ಆರು ಸಲ ಮದುವೆಯಾದರೂ ಇಬ್ಬರಿಗೆ ಮಕ್ಕಳಾದರೂ ಅವರಾರೂ ಉಳಿಯಲಿಲ್ಲ. ಹೀಗೆ ವಾರಸುದಾರ ರಿಲ್ಲದಾಗ ಕೊರಗುತ್ತಾ ಕುಳಿತುಕೊಳ್ಳದೆ ಲಿಂಗರಾಜರು ತಮ್ಮ ಆತ್ಮೀಯ ಮಿತ್ರರಾದ ಅರಟಾಳ ರುದ್ರಗೌಡರು, ರಾಜಾಲಕಮನಗೌಡರು, ವಂಟಮುರಿ ದೇಸಾಯಿಯವರು ಮುಂತಾದ ಮಹನೀಯ ರನ್ನು ಸಂಪರ್ಕಿಸಿ ಸುದೀರ್ಘವಾದ ಚರ್ಚೆಗಳನ್ನು ನಡೆಸಿ ಸಮಗ್ರ ಸಂಪತ್ತನ್ನು ಸಮಾಜಕ್ಕಾಗಿ ವಿನಿಯೋಗಿಸುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡರು.

ಹೀಗೆ ರಚಿತವಾದ ನವಲಗುಂದ -ಶಿರಸಂಗಿ ಟ್ರಸ್ಟ್ ವತಿಯಿಂದ ದೊರಕಿದ ಸ್ಕಾಲರ್‌ಶಿಪ್ ಹಣದಿಂದ ತಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡ/ಪೂರೈಸಿಕೊಂಡ ಸಾವಿರ ಸಾವಿರ ವಿದ್ಯಾರ್ಥಿಗಳು ವಿಶ್ವದಡೆ ಇಂದು ತಮ್ಮ ಜೀವನೋದ್ಧಾರ ಮಾಡಿಕೊಳ್ಳುತ್ತಿದ್ದಾರೆ.

ಇತಿಹಾಸದಲ್ಲಿ ಇಣುಕಿ ನೋಡಿದಾಗ ಈ ಒಂದು ಲಾಭವನ್ನು ಅಂದರೆ ಸಹಾಯಧನವನ್ನು ಪಡೆದು ಕೊಂಡು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಂಡ ಮೇಧಾವಿಗಳಲ್ಲಿ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ ಬಿ.ಡಿ.ಜತ್ತಿಯವರು, ಪಂಜಾಬ್-ಹರ್ಯಾಣ ರಾಜ್ಯಗಳ ರಾಜ್ಯಪಾಲರಾಗಿದ್ದ ಡಿಸಿ ಪಾವಟೆಯವರು, ಮಹಾರಾಷ್ಟ್ರ ರಾಜ್ಯದಲ್ಲಿ ಮಂತ್ರಿಗಳಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ ರತ್ನಪ್ಪಣ್ಣ ಕುಂಬಾರ್, ಕರ್ನಾಟಕದ ಮುಖ್ಯ ಮಂತ್ರಿಗಳಾದ ಎಸ್.ಆರ್.ಕಂಠೀ ಅವರು, ಎಸ್.ಆರ್.ಬೊಮ್ಮಾಯಿ ಅವರಂತವರು ಇರುವುದು ಅತ್ಯಂತ ಹೆಮ್ಮೆಯ ವಿಷಯ.

ಲಿಂಗರಾಜರ ವಿದ್ಯಾಪ್ರೇಮದಂತೆಯೇ ಕೃಷಿ ಸಹಕಾರ ಈ ಕ್ಷೇತ್ರಗಳ ಮೇಲಿನ ಪ್ರೀತಿಯೂ ಅಪಾರ ವಾಗಿತ್ತು. ಇದಕ್ಕಾಗಿ ಅವರು ತಮ್ಮ ಸಂಸ್ಥಾನದ ಗ್ರಾಮಗಳಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಕೊರತೆ ನೀರಾವರಿ ಸೌಲಭ್ಯಗಳ ಅವಶ್ಯಕತೆ ಇರುವವೋ, ಅಲ್ಲಲ್ಲ ಕುಡಿಯುವ ನೀರಿನ ಬಾವಿಗಳು ಕೆರೆಗಳು ನೀರಾವರಿ ಕಾಲುವೆಗಳು ದೊಡ್ಡ ಕೊಳಗಳು ಇಂತಹವನ್ನೆಲ್ಲ ನಿರ್ಮಿಸಿ ಪ್ರಜಾಪ್ರೀತಿ ಯನ್ನು ಮನ್ನಣೆಯನ್ನು ಸಹಜವಾಗಿಯೇ ಗಳಿಸಿಕೊಂಡರು.

ಅವರ ಕೃಷಿಪ್ರೇಮ ಎಷ್ಟಿತ್ತೆಂದರೆ ಹಿಂದಿನ ಶತಮಾನದಲ್ಲಿಯೇ ರೈತರ ಮಕ್ಕಳಿಗಾಗಿ ಕೃಷಿ ತರಬೇತಿ ಪಾಠಶಾಲೆಗಳನ್ನು ದೇವಿ ಹೊಸೂರು ಮುಂತಾದ ಕಡೆಗಳಲ್ಲಿ ಸ್ಥಾಪಿಸಿದರು. ಸುಧಾರಿತ ಬೇಸಾಯ ಕ್ರಮವು ಅಂದಿನ ಅವಶ್ಯಕತೆ ಎಂದು ತಿಳಿದು ನಾಡಿನಲ್ಲಿ ಅಸಂಖ್ಯ ಪ್ರಗತಿಪರ ರೈತರು, ಕೃಷಿ ವಿeನಿಗಳು ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಅಂದು ಈ ಪುಣ್ಯಾತ್ಮರು ನಿರ್ಮಿಸಿದ ಕೆರೆಕುಂಟೆಗಳು ಆ ತರಬೇತಿ ಶಾಲೆಗಳು ಇಂದಿಗೂ ಗ್ರಾಮೀಣ ಭಾಗದ ಜನರ ವಿಶೇಷ ವಾಗಿ ರೈತರ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಲಿಂಗರಾಜರನ್ನು ಸದಾ ನೆನೆಯು ವಂತೆ ಮಾಡುತ್ತಿದೆ.

ಇದಲ್ಲದೆ ಶ್ರೀಯುತರು ಹಲವಾರು ಗುಡಿಗುಂಡಾರಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ ಪೀಠಗಳಿಗೆ ಯಥೇಚ್ಛವಾಗಿ ದಾನ ದಾಸೋಹದ ಅವಕಾಶ ಮಾಡಿಕೊಟ್ಟರು. ಸಮಾಜದ ಒಳಿತಿಗಾಗಿ ಸಹಕಾರ ಸಂಘಸಂಸ್ಥೆಗಳನ್ನು ಸ್ಥಾಪಿಸುವುದು ಹಾಗೂ ಸಮಾಜ ಸೇವಾ ಸಂಘಟನೆಗಳನ್ನು ಹುಟ್ಟು ಹಾಕು ವುದು ಅತಿ ಅವಶ್ಯಕ ಎಂಬುದನ್ನು ಮನಗಂಡು ಲಿಂಗರಾಜರು ಅಂದಿನ ಕೆಲ ಮಹಾ ಸ್ವಾಮೀಜಿಗಳ ಇಚ್ಛೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದರು.

ಹಾಗೆ ನೋಡಿದರೆ ಇದರ ಪ್ರಮುಖ ರೂವಾರಿ ಇವರೇ ಆಗಿದ್ದರು ಎಂಬುದನ್ನು ನಾವು ಆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅಂದರೆ (1904)ರಲ್ಲಿ ಕಾಣಬಹುದಾಗಿದೆ. ಆ ವರ್ಷಗಳಲ್ಲಿ ನೆರವೇರಿದ ಪ್ರಥಮ ಅಖಿಲ ಭಾರತ ವೀರಶೈವ ಮಹಾ ಅಧಿವೇಶನ ಹಾಗೂ ಎರಡನೆಯ ಅಧಿವೇಶನಗಳಿಗೆ (ಧಾರವಾಡ ಹಾಗೂ ಬೆಂಗಳೂರು)ಲಿಂಗರಾಜ ದೇಸಾಯಿ ಅವರೇ ಅಧ್ಯಕ್ಷರಾಗಿ ನಾಡಿಗೆ ಅತ್ಯಂತ ಉಪಯೋಗ ಆಗುವಂತಹ ದಿಕ್ಸೂಚಿ ಭಾಷಣಗಳನ್ನು ಮಾಡಿ ಅವುಗಳನ್ನು ಅಚ್ಚು ಹಾಕಿಸಿ ನೆರೆದ ಸಾವಿರಾರು ಜನರಿಗೆ ಹಂಚುವ ವ್ಯವಸ್ಥೆಯನ್ನು ಮಾಡಿದ್ದರು.

ಆ ಕಾಲದ ಬಹುತೇಕ ಸಂಘ ಸಂಸ್ಥೆಗಳು ಸಂಘಟನೆಗಳು ಲಿಂಗರಾಜರ ಸಹಾಯ ಹಸ್ತದಿಂದ ನಡೆಯುತ್ತಿದ್ದವು ಎಂಬುದು ಗಮನಾರ್ಹವಾದದ್ದು. ಈ ಮಹಾಸಭೆಯ ಅವರ ಅಧ್ಯಕ್ಷತೆಯ ಭಾಷಣಗಳು ಕರ್ನಾಟಕದ ಅನೇಕ ಮಹನೀಯರನ್ನು ದಟ್ಟವಾಗಿ ಪ್ರಭಾವಿಸಿದವು.

ಸಮಾಜ ಕಲ್ಯಾಣಕ್ಕಾಗಿ ತಾವು ಏನನ್ನಾದರೂ ಮಾಡಲೇಬೇಕೆಂದು ಪಣತೊಟ್ಟ ಮಹಾ ಮಹಿಮ ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರೂ ಒಬ್ಬರು ಎಂಬುದು ಗಮನಾರ್ಹ. ಬೆಳಗಾವಿ ಜಿಲ್ಲೆಯ ಶಿರಸಂಗಿ ಸಂಸ್ಥಾನದ ಈ ದೊರೆ ತಮ್ಮ ವಿಶಿಷ್ಟ ಕೆಲಸ ಕಾರ್ಯಗಳಿಂದಾಗಿ ಆಧುನಿಕ ಆಲೋಚನೆಗಳಿಂದಾಗಿ ಜಗತ್ತಿನ ಮಹಾಪುರುಷರ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ರಚಿಸಿದ ಆ ನವಲಗುಂದ-ಶಿರಸಂಗಿ ಟ್ರಸ್ಟ್ ಇಂದಿಗೂ ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆಲಸ ಮಾಡುತ್ತಿದೆ.

ಖೇದದ ವಿಷಯವೆಂದರೆ ಈ ಈ ಟ್ರಸ್ಟ್‌ನಿಂದ ತಮ್ಮ ಜೀವನೋದ್ಧಾರ ಮಾಡಿಕೊಂಡ ಫಲಾನುಭವಿ ಗಳು ಇದನ್ನು ಬೆಳೆಸಲಿಕ್ಕಾಗಿ ಹೇಳಿಕೊಳ್ಳುವಂತಹ ಯಾವ ಕೆಲಸಗಳನ್ನು ಮಾಡಲಿಲ್ಲ. ಈಗಲಾದರೂ ಜಗತ್ತಿನಾದ್ಯಂತ ಇರುವ ಇವರೆಲ್ಲ ಈ ಟ್ರಸ್ಟ್ ಫಂಡ್ ಬೆಳೆಯುವ ಹಾಗೆ ಮುಂದಿನ ತಲೆಮಾರಿಗೆ ಹೆಚ್ಚೆಚ್ಚು ಉಪಯೋಗವಾಗುವ ಹಾಗೆ ಮಾಡಲು ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ. ನಾವು ಚಿಕ್ಕವರಿದ್ದಾಗ ಅಂದಾಜು 50 ವರ್ಷಗಳ ಹಿಂದೆ ಲಿಂಗರಾಜ ದೇಸಾಯಿವರ ಜೀವನ ಚರಿತ್ರೆಯು ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಲ್ಲಿ ಪಠ್ಯವಾಗಿ ಇರುತ್ತಿತ್ತು.

ಇಂದಿಗೆ ಅದು ಎಲ್ಲೂ ಕಾಣುತ್ತಿಲ್ಲ. ಸರಕಾರ ಈ ಬಗ್ಗೆ ಪರಿಶೀಲಿಸಿ ಪುನಃ ಅದನ್ನು ಪಠ್ಯಕ್ರಮದಲ್ಲಿ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನನ್ನ ಕೋರಿಕೆಯಾಗಿದೆ.