ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ: ಸೋಮ ಪ್ರಭೆಗೆ ಸೂಕ್ತ ವರ ಯಾರು ?

ತಂದೆ ಹರಿದತ್ತನು ದೇಶಾಟನೆಯಲ್ಲಿ ಭೇಟಿಯಾದ ಒಬ್ಬ ‘ಜ್ಞಾನಿ’ ಯುವಕನಿಗೆ ಮಗಳನ್ನು ಕೊಡು ವುದಾಗಿ ವಚನ ನೀಡುತ್ತಾನೆ. ಇತ್ತ ಮನೆಯಲ್ಲಿದ್ದ ತಾಯಿ, ತನ್ನ ಕಡೆಯ ಸಂಬಂಧಿಕರ ಮೂಲಕ ಬಂದ ಒಬ್ಬ ‘ಮಾಯಾವಿ’ಗೆ (ವಿಜ್ಞಾನ ಅಥವಾ ತಂತ್ರವಿದ್ಯೆಯಲ್ಲಿ ನಿಪುಣನಾದವನಿಗೆ) ಮಗಳನ್ನು ಕೊಡು ವುದಾಗಿ ಮಾತು ಕೊಡುತ್ತಾಳೆ. ಅದೇ ವೇಳೆಗೆ ಆಕೆಯ ಸಹೋದರನು ತನ್ನ ಆಪ್ತ ಮಿತ್ರನಾದ ಒಬ್ಬ ‘ಶೂರ’ ಯೋಧನಿಗೆ ತನ್ನ ತಂಗಿಯನ್ನು ವರಿಸಲು ಒಪ್ಪಿಗೆ ನೀಡಿರುತ್ತಾನೆ.

ವಿಕ್ರಮ ಬೇತಾಳ: ಸೋಮ ಪ್ರಭೆಗೆ ಸೂಕ್ತ ವರ ಯಾರು ?

-

ಒಂದೊಳ್ಳೆ ಮಾತು

‘ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ನಾಲ್ಕನೆಯ ಕಥೆಯು ಸಾಂಕ ಶ್ರಮ, ವಿಭಿನ್ನ ಪ್ರತಿಭೆಗಳ ಸಮ್ಮಿಲನ ಹಾಗೂ ಧರ್ಮನಿರ್ಣಯದ ಆಳವಾದ ಸೂಕ್ಷ ತೆ ಯನ್ನು ಬಿಂಬಿಸುವ ಒಂದು ಅದ್ಭುತ ಪ್ರಸಂಗ. ಮಾಳವ ದೇಶದ ಅಗ್ರಹಾರವೊಂದರಲ್ಲಿ ಹರಿದತ್ತನೆಂಬ ಬ್ರಾಹ್ಮಣನಿಗೆ ಸೋಮಪ್ರಭೆ ಎಂಬ ಅಪ್ರತಿಮ ಸುಂದರಿಯಾದ ಮಗಳಿರುತ್ತಾಳೆ. ಆಕೆಯ ವಿವಾಹದ ವಯಸ್ಸು ಬಂದಾಗ, ಮನೆ ಯಲ್ಲಿ ಸರಿಯಾದ ಮಾತುಕತೆ ಇಲ್ಲದೆ ಒಂದು ವಿಚಿತ್ರ ಗೊಂದಲ ಸೃಷ್ಟಿಯಾಗು ತ್ತದೆ.

ತಂದೆ ಹರಿದತ್ತನು ದೇಶಾಟನೆಯಲ್ಲಿ ಭೇಟಿಯಾದ ಒಬ್ಬ ‘ಜ್ಞಾನಿ’ ಯುವಕನಿಗೆ ಮಗಳನ್ನು ಕೊಡು ವುದಾಗಿ ವಚನ ನೀಡುತ್ತಾನೆ. ಇತ್ತ ಮನೆಯಲ್ಲಿದ್ದ ತಾಯಿ, ತನ್ನ ಕಡೆಯ ಸಂಬಂಧಿಕರ ಮೂಲಕ ಬಂದ ಒಬ್ಬ ‘ಮಾಯಾವಿ’ಗೆ (ವಿಜ್ಞಾನ ಅಥವಾ ತಂತ್ರವಿದ್ಯೆಯಲ್ಲಿ ನಿಪುಣನಾದವನಿಗೆ) ಮಗಳನ್ನು ಕೊಡು ವುದಾಗಿ ಮಾತು ಕೊಡುತ್ತಾಳೆ. ಅದೇ ವೇಳೆಗೆ ಆಕೆಯ ಸಹೋದರನು ತನ್ನ ಆಪ್ತ ಮಿತ್ರನಾದ ಒಬ್ಬ ‘ಶೂರ’ ಯೋಧನಿಗೆ ತನ್ನ ತಂಗಿಯನ್ನು ವರಿಸಲು ಒಪ್ಪಿಗೆ ನೀಡಿರುತ್ತಾನೆ.

ಮೂವರೂ ವರರು ಒಂದೇ ಮುಹೂರ್ತಕ್ಕೆ ಮದುವೆ ಮನೆಗೆ ಬಂದು ನಿಂತಾಗ, ಮನೆಯವ ರಿಗೆ ತಾವು ಮಾಡಿದ ಪ್ರಮಾದದ ಅರಿವಾಗಿ ದಿಕ್ಕು ತೋಚದಂತಾಗುತ್ತದೆ. ಆದರೆ ಅದೇ ಕ್ಷಣದಲ್ಲಿ ಮತ್ತೊಂದು ಮಹಾ ದುರಂತ ಸಂಭವಿಸುತ್ತದೆ; ಧೂಮ್ರಶಿಖನೆಂಬ ಕ್ರೂರ ರಾಕ್ಷಸನೊಬ್ಬ ಅಂತಃ ಪುರದಲ್ಲಿದ್ದ ಸೋಮಪ್ರಭೆಯನ್ನು ಅಪಹರಿಸಿ ವಿಂಧ್ಯಾಟವಿಯ ದುರ್ಗಮ ಗುಹೆಗೆ ಒಯ್ದು ಬಿಡುತ್ತಾನೆ. ಮದುವೆ ಮನೆ ರೋದನದಲ್ಲಿ ಮುಳುಗಿದಾಗ, ಮೂವರೂ ವರರು ಕನ್ಯೆಯನ್ನು ಉಳಿಸಲು ಒಟ್ಟಾಗಿ ಹೊರಡುತ್ತಾರೆ.

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ: ರಾಜ ರೂಪಸೇನ ಮತ್ತು ವೀರವರ, ಯಾರ ತ್ಯಾಗ ಹಿರಿದು ?

ಮೊದಲನೆಯವನಾದ ‘ಜ್ಞಾನಿ’ಯು ತನ್ನ ದಿವ್ಯದೃಷ್ಟಿಯ ಜ್ಞಾನದಿಂದ ಕನ್ಯೆ ಎಲ್ಲಿದ್ದಾಳೆಂಬ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಿ ಹೇಳುತ್ತಾನೆ. ಎರಡನೆಯವ ನಾದ ‘ಮಾಯಾವಿ’ಯು ತನ್ನ ತಾಂತ್ರಿಕ ಕೌಶಲ ದಿಂದ ಕ್ಷಣಮಾತ್ರದಲ್ಲಿ ಗಾಳಿ ಯಲ್ಲಿ ಹಾರಬಲ್ಲ ಮಾಯಾರಥವನ್ನು ನಿರ್ಮಿಸಿ, ಎಲ್ಲರನ್ನೂ ಆ ಅರಣ್ಯಕ್ಕೆ ಕೊಂಡೊಯ್ಯುತ್ತಾನೆ. ಮೂರನೆಯವನಾದ ‘ಶೂರ’ನು ಗುಹೆ ಯನ್ನು ಹೊಕ್ಕು, ಆ ಭೀಕರ ರಾಕ್ಷಸನೊಂದಿಗೆ ಜೀವದ ಹಂಗು ತೊರೆದು ಘೋರ ಯುದ್ಧ ಮಾಡಿ ಅವನನ್ನು ಸಂಹರಿಸಿ, ಕನ್ಯೆಯನ್ನು ಸುರಕ್ಷಿತವಾಗಿ ಮರಳಿ ಕರೆತರುತ್ತಾನೆ.

ಕನ್ಯೆ ಪಾರಾದ ನಂತರ ಮತ್ತೆ ವಿವಾದ ಪ್ರಾರಂಭವಾ ಗುತ್ತದೆ. ನನ್ನ ಜ್ಞಾನವಿಲ್ಲದಿದ್ದರೆ ಆಕೆ ಸಿಗು ತ್ತಿರಲಿಲ್ಲ ಎಂದು ಜ್ಞಾನಿ, ನನ್ನ ರಥವಿಲ್ಲದಿದ್ದರೆ ಅಲ್ಲಿಗೆ ತಲುಪಲು ಸಾಧ್ಯವಿರಲಿಲ್ಲ ಎಂದು ಮಾಯಾವಿ, ನನ್ನ ಶೌರ್ಯವಿಲ್ಲದಿದ್ದರೆ ಆಕೆ ಬದುಕಿ ಬರುತ್ತಿರಲಿಲ್ಲ ಎಂದು ಶೂರ- ಮೂವರೂ ಕನ್ಯೆ ತಮಗೇ ಸಲ್ಲಬೇಕೆಂದು ವಾದಿಸುತ್ತಾರೆ.

ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆಕೆಯನ್ನು ಪತ್ನಿಯಾಗಿ ಪಡೆಯಲು ನಿಜವಾದ ಅರ್ಹತೆ ಯಾರಿಗೆ ಸೇರುತ್ತದೆ? ವಿಕ್ರಮಾದಿತ್ಯನು ಆಳವಾದ ವಿವೇಕದಿಂದ ಉತ್ತರಿಸುತ್ತಾನೆ: ಜ್ಞಾನಿ ಮತ್ತು ಮಾಯಾವಿ ಇಬ್ಬರೂ ತಮ್ಮ ವಿದ್ಯೆ ಮತ್ತು ಬುದ್ಧಿಯ ನೆರವು ನೀಡಿದರು; ಆ ಶ್ರಮಕ್ಕೆ ಗೌರವ ಮತ್ತು ಸೂಕ್ತ ಸಂಭಾವನೆಯನ್ನು ನೀಡಿ ಸತ್ಕರಿಸಬಹುದು. ಆದರೆ, ಆಕೆಯ ಮಾನ ಮತ್ತು ಪ್ರಾಣವನ್ನು ರಕ್ಷಿಸಲು ಸಾವು-ಬದುಕಿನ ನಡುವೆ ರಕ್ತ ಹರಿಸಿ, ತನ್ನ ಸ್ವಂತ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಆ ‘ಶೂರ’ನೊಬ್ಬನೇ ಆಕೆಯ ಕೈಹಿಡಿಯಲು ಸರ್ವಥಾ ಯೋಗ್ಯ!

ಮೈಮೇಲೆ ಗಾಯಗಳನ್ನು ಹೊತ್ತು ಪ್ರಾಣರಕ್ಷಣೆ ಮಾಡಿದವನ ಬದ್ಧತೆಯ ಮುಂದೆ ಉಳಿದವರ ತಾಂತ್ರಿಕ ನೆರವು ಕೇವಲ ಸಹಯೋಗವಷ್ಟೇ. ಈ ಕಥೆ ಇಂದಿನ ನಮ್ಮ ಬದುಕಿಗೂ ಅನೇಕ ಸೂಕ್ಷ ಗಳನ್ನು ತಿಳಿಸುತ್ತದೆ. ಯಾವುದೇ ಒಂದು ಕೆಲಸದಲ್ಲಿ ಯೋಜನೆ ರೂಪಿಸುವ ಜ್ಞಾನವಿರಬಹುದು, ಸಂಪನ್ಮೂಲಗಳನ್ನು ಒದಗಿಸುವ ತಾಂತ್ರಿಕ ಚಾತುರ್ಯವಿರಬಹುದು.

ಅವೆಲ್ಲವೂ ಅಗತ್ಯವೇ ಅಲ್ಲಗೆಳೆಯುವಂತಿಲ್ಲ. ಆದರೆ ನಿಜವಾದ ಪರೀಕ್ಷೆಯ ಗಳಿಗೆಯಲ್ಲಿ, ಎಲ್ಲಾ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತು, ಪ್ರತ್ಯಕ್ಷವಾಗಿ ಕಾರ್ಯಪ್ರವೃತ್ತನಾಗುವ ವ್ಯಕ್ತಿಯ ಬದ್ಧತೆಯೇ ಅತ್ಯಂತ ಶ್ರೇಷ್ಠವಾದುದು. ಸಂಬಂಧಗಳಲ್ಲೂ ಅಷ್ಟೇ; ಮಾತಿನ ಸಮಾಧಾನ ಹೇಳುವವರಿಗಿಂತ, ಕೇವಲ ಸಲಹೆ ಕೊಡುವವರಿಗಿಂತ, ಕಷ್ಟದ ಸುಳಿಗೆ ಸ್ವತಃ ಇಳಿದು ನಮ್ಮ ಕೈಹಿಡಿದು ಮೇಲೆತ್ತುವವರೇ ನಮ್ಮ ನಿಜವಾದ ಆಪ್ತರು.

ಜ್ಞಾನ ಮತ್ತು ಸೌಲಭ್ಯಗಳು ಕೇವಲ ಸಾಧನಗಳಷ್ಟೇ; ಆದರೆ ಎಲ್ಲವನ್ನೂ ಪಣಕ್ಕಿಟ್ಟು ನಿಲ್ಲುವ ನಿಸ್ವಾರ್ಥ ಸ್ನೇಹ ಮತ್ತು ಬಾಂಧವ್ಯ ಹಂಚಿಕೊಳ್ಳುವವರನ್ನು ಎಂದಿಗೂ ನಾವು ಜೀವನದಲ್ಲಿ ಮರೆಯಬಾರದು.