ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ 22: ಸಂಬಂಧಗಳ ಗೋಜಲು ಮತ್ತು ವಿವೇಕದ ಮೌನ

ಸಣ್ಣ ಹೆಜ್ಜೆಯುಳ್ಳ ಸುಕುಮಾರಿ ಕನ್ಯೆಯನ್ನು ನಾನು ವರಿಸುತ್ತೇನೆ; ದೊಡ್ಡ ಹೆಜ್ಜೆಯುಳ್ಳ ಮಹಿಳೆಯನ್ನು ನೀವು ವಿವಾಹವಾಗಿ ಅರಮನೆಗೆ ಕರೆದೊಯ್ಯಿರಿ. ತಂದೆಯೂ ಮಗನ ಮಾತಿಗೆ ಸಂತೋಷದಿಂದ ಸಮ್ಮತಿಸುತ್ತಾನೆ. ಆದರೆ ಅಲ್ಲಿ ವಿಽಯೊಂದು ವಿಪರ್ಯಾಸದ ಆಟವಾಡಿತ್ತು! ತಾಯಿಯ ಪಾದಗಳು ಸಹಜ ವಾಗಿಯೇ ಸಣ್ಣದಾಗಿದ್ದು, ಮಗಳ ಪಾದಗಳು ಎತ್ತರ ಮತ್ತು ದಷ್ಟಪುಷ್ಟ ಮೈಕಟ್ಟಿನ ಕಾರಣ ದೊಡ್ಡದಾಗಿದ್ದವು!

ವಿಕ್ರಮ ಬೇತಾಳ 22: ಸಂಬಂಧಗಳ ಗೋಜಲು ಮತ್ತು ವಿವೇಕದ ಮೌನ

-

ಒಂದೊಳ್ಳೆ ಮಾತು

ದಕ್ಷಿಣಾಪಥದ ರಾಜ ಧರ್ಮಸೇನನ ಆಳ್ವಿಕೆಯಲ್ಲಿ, ದಾಯಾದಿಗಳ ಕಲಹದಿಂದಾಗಿ ಚಂದ್ರಸಿಂಹ ನೆಂಬ ರಾಜನು ರಾಜ್ಯಭ್ರಷ್ಟನಾಗಿ ತನ್ನ ರಾಣಿ ಮತ್ತು ಮುದ್ದಿನ ಮಗಳೊಂದಿಗೆ ಕಾಡಿಗೆ ಓಡಿ ಹೋಗುತ್ತಾನೆ. ದುರಾದೃಷ್ಟವಶಾತ್ ಕಾಡಿನಲ್ಲಿ ಬಿಲ್ಲರು ಅವರ ಮೇಲೆ ದಾಳಿ ಮಾಡುತ್ತಾರೆ. ಪತ್ನಿ ಮತ್ತು ಮಗಳನ್ನು ರಕ್ಷಿಸಲು ಚಂದ್ರಸಿಂಹನು ಜೀವದ ಹಂಗು ತೊರೆದು ಹೋರಾಡಿ ಕೊನೆಗೆ ಕಾಡಿನ ವೀರಮರಣವನ್ನ ಪ್ಪುತ್ತಾನೆ.

ಪತಿಯ ಸಾವಿನಿಂದ ಕಂಗಾಲಾದ ರಾಣಿ ತನ್ನ ಮಗಳ ಕೈಹಿಡಿದು ಜೀವಭಯದಿಂದ ದಟ್ಟಾರಣ್ಯ ದೊಳಗೆ ಓಡಿಹೋಗುತ್ತಾಳೆ. ಅದೇ ಸಮಯದಲ್ಲಿ, ಸಮೀಪದ ನಗರದ ರಾಜ ಮತ್ತು ಆತನ ಯುವಕ ಪುತ್ರ ಬೇಟೆಗೆಂದು ಅದೇ ಅರಣ್ಯಕ್ಕೆ ಕುದುರೆಗಳನ್ನೇರಿ ಬರುತ್ತಾರೆ. ನೆಲದ ಮೇಲೆ ಹೊಸದಾಗಿ ಮೂಡಿದ ಎರಡು ಜೊತೆ ಸ್ತ್ರೀಯರ ಹೆಜ್ಜೆಗುರುತುಗಳು ಅವರ ಕಣ್ಣಿಗೆ ಬೀಳುತ್ತವೆ. ಒಂದು ದೊಡ್ಡ ಹೆಜ್ಜೆ, ಮತ್ತೊಂದು ಚಿಕ್ಕ ಹೆಜ್ಜೆ. ತಕ್ಷಣವೇ ಯುವಕ ರಾಜಕುಮಾರನಿಗೆ ಆಸೆ ಚಿಗುರಿ ತಂದೆಯ ಮುಂದೆ ಒಂದು ಪ್ರಸ್ತಾಪ ಇಡುತ್ತಾನೆ: ತಂದೆಯೇ, ನಾವಿಬ್ಬರೂ ಈ ಹೆಜ್ಜೆಗಳನ್ನು ಹಿಂಬಾಲಿಸೋಣ.

ಸಣ್ಣ ಹೆಜ್ಜೆಯುಳ್ಳ ಸುಕುಮಾರಿ ಕನ್ಯೆಯನ್ನು ನಾನು ವರಿಸುತ್ತೇನೆ; ದೊಡ್ಡ ಹೆಜ್ಜೆಯುಳ್ಳ ಮಹಿಳೆಯನ್ನು ನೀವು ವಿವಾಹವಾಗಿ ಅರಮನೆಗೆ ಕರೆದೊಯ್ಯಿರಿ. ತಂದೆಯೂ ಮಗನ ಮಾತಿಗೆ ಸಂತೋಷದಿಂದ ಸಮ್ಮತಿಸುತ್ತಾನೆ. ಆದರೆ ಅಲ್ಲಿ ವಿಽಯೊಂದು ವಿಪರ್ಯಾಸದ ಆಟವಾಡಿತ್ತು! ತಾಯಿಯ ಪಾದಗಳು ಸಹಜ ವಾಗಿಯೇ ಸಣ್ಣದಾಗಿದ್ದು, ಮಗಳ ಪಾದಗಳು ಎತ್ತರ ಮತ್ತು ದಷ್ಟಪುಷ್ಟ ಮೈಕಟ್ಟಿನ ಕಾರಣ ದೊಡ್ಡದಾಗಿದ್ದವು!

ಹೆಜ್ಜೆಗುರುತುಗಳನ್ನು ಹಿಂಬಾಲಿಸಿ ಹೋದ ರಾಜ ಮತ್ತು ರಾಜಕುಮಾರರಿಗೆ, ಮರೆಯಲ್ಲಿ ಅಳುತ್ತಿದ್ದ ತಾಯಿ-ಮಗಳು ಸಿಗುತ್ತಾರೆ. ತಾವು ಮುಂಚೆಯೇ ಮಾಡಿಕೊಂಡ ಕರಾರಿನಂತೆ, ದೊಡ್ಡ ಹೆಜ್ಜೆಯಿದ್ದ ಮಗಳನ್ನು ತಂದೆಯಾದ ರಾಜನು ವಿವಾಹವಾಗುತ್ತಾನೆ; ಸಣ್ಣ ಹೆಜ್ಜೆಯಿದ್ದ ತಾಯಿಯನ್ನು ಮಗನಾದ ರಾಜ ಕುಮಾರನು ಮದುವೆಯಾಗುತ್ತಾನೆ!

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 21: ವಿಕ್ರಮಾದಿತ್ಯನಿಗೆ ಸಿಕ್ಕ ಉಡುಗೊರೆಗಳ ಬೆಲೆ

ಹೀಗೆ ತಂದೆಯು ಮಗಳನ್ನು, ಮಗನು ತಾಯಿಯನ್ನು ವರಿಸಿ ಅರಮನೆಗೆ ಕರೆತರುತ್ತಾರೆ. ಕಾಲ ಕ್ರಮೇಣ ಇಬ್ಬರಿಗೂ ಮಕ್ಕಳಾಗುತ್ತವೆ; ತಂದೆ ಮತ್ತು ಮಗಳ ದಾಂಪತ್ಯದಿಂದಲೂ ಸಂತಾನ ಬೆಳೆಯುತ್ತದೆ, ಮಗ ಮತ್ತು ತಾಯಿಯ ಸಂಸಾರದಿಂದಲೂ ಮಕ್ಕಳು ಜನಿಸುತ್ತವೆ.

ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಕ್ಲಿಷ್ಟವಾದ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಈಗ ಇವರಿಬ್ಬರ ಮಕ್ಕಳ ನಡುವಿನ ಸಂಬಂಧವೇನು? ತಂದೆಯ ಪತ್ನಿಯಾದ ಮಗಳಿಗೆ ಹುಟ್ಟಿದ ಮಕ್ಕಳು ಮತ್ತು ಮಗನ ಪತ್ನಿಯಾದ ತಾಯಿಗೆ ಹುಟ್ಟಿದ ಮಕ್ಕಳು ಪರಸ್ಪರರಿಗೆ ಏನಾಗಬೇಕು? ಈ ಸಂಬಂಧಗಳ ಗೋಜಲನ್ನು ಬಿಡಿಸು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಸಿಡಿದು ನೂರು ಹೋಳಾಗುತ್ತದೆ! ಆದರೆ ಎಲ್ಲ ಕಥೆಗಳಿಗೂ ತಕ್ಷಣವೇ ಸೂಕ್ತ ತೀರ್ಪು ನೀಡುತ್ತಿದ್ದ ನ್ಯಾಯನಿಪುಣ ವಿಕ್ರಮಾದಿತ್ಯ ಈ ಪ್ರಶ್ನೆಗೆ ಸಂಪೂರ್ಣವಾಗಿ ಮೌನ ವಹಿಸುತ್ತಾನೆ!

ಆತನಿಗೆ ಆ ಸಂಬಂಧಗಳ ಗೋಜಲಿಗೆ ಉತ್ತರವಿಲ್ಲವೆಂದಲ್ಲ. ತರ್ಕ ಮತ್ತು ಬುದ್ಧಿಯ ಎಲ್ಲ ಎಲ್ಲೆ ಗಳನ್ನು ಮೀರಿ ನಿಲ್ಲುವ ಅಂತಹ ನೈತಿಕ ಮತ್ತು ಸಾಮಾಜಿಕ ಜಟಿಲತೆಗೆ ಯಾವುದೇ ಶಾಸ್ತ್ರದಲ್ಲೂ ಸ್ಪಷ್ಟ ಉತ್ತರವಿಲ್ಲ ಎಂಬುದನ್ನು ಅರಿತ ಅವನು ಪ್ರeಪೂರ್ವಕವಾಗಿ ತುಟಿಬಿಚ್ಚದೆ ಶಾಂತವಾಗಿ ಮುನ್ನಡೆಯುತ್ತಾನೆ. ರಾಜನ ಆ ಗಂಭೀರ ಮೌನದಿಂದಾಗಿ ಬೇತಾಳನ ಷರತ್ತು ಮುರಿದುಬಿದ್ದು, ಆತನಿಗೆ ಶಾಪವಿಮೋಚನೆಯ ಹಾದಿ ಸುಗಮವಾಗುತ್ತದೆ.

ಜೀವನದಲ್ಲಿ ಪ್ರತಿಯೊಂದಕ್ಕೂ ಕೇವಲ ತರ್ಕ, ಲೆಕ್ಕಾಚಾರ ಅಥವಾ ಕಟ್ಟುನಿಟ್ಟಿನ ವ್ಯಾಖ್ಯಾನಗಳ ಮೂಲಕವೇ ಉತ್ತರ ಹುಡುಕಲು ಸಾಧ್ಯವಿಲ್ಲ. ಎಷ್ಟೋ ಬಾರಿ ನಾವು ನಮ್ಮದೇ ಸ್ವಾರ್ಥ ಅಥವಾ ಬಾಹ್ಯ ಆಕರ್ಷಣೆಯ ತೀರ್ಮಾನಗಳಿಂದ ಸಂಬಂಧಗಳನ್ನು ಜಟಿಲಗೊಳಿಸಿಕೊಂಡು ಬಿಡು ತ್ತೇವೆ. ಕೆಲವು ಬಿಕ್ಕಟ್ಟುಗಳು ಎದುರಾದಾಗ ಅನ ಗತ್ಯ ವಾದ-ವಿವಾದಗಳಲ್ಲಿ ಮುಳುಗುವುದಕ್ಕಿಂತ, ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತು ಮೌನ ವಾಗಿರುವುದೇ ಪರಮ ವಿವೇಕ. ಎಲ್ಲ ಗೋಜಲು ಗಳಿಗೂ ಮಾತಿನ ಪರಿಹಾರವಿರುವುದಿಲ್ಲ; ಕೆಲವು ಸೂಕ್ಷ್ಮ ಸತ್ಯಗಳನ್ನು ಮೌನ ಮತ್ತು ಕಾಲದ ಪ್ರವಾಹಕ್ಕೇ ಬಿಟ್ಟುಕೊಡುವುದೇ ನಿಜವಾದ ಜಾಣತನ.