Jayashree Kalkundri Column: ಯುದ್ಧೋನ್ಮಾದ, ಇದ್ದವರ ಹುಚ್ಚಾಟ- ಇಲ್ಲದವರ ಗೋಳಾಟ
ಸಮರಕ್ಕೆ ವಿರಾಮ ಘೋಷಿಸಿದಂತೆ ನಟಿಸುವುದು, ಯುದ್ಧ ಕೊನೆಗೊಳಿಸುವುದಾಗಿ ಹೇಳಿಕೆ ಗಳನ್ನು ಕೊಡುವುದು, ಮಾತುಕತೆಗೆ ಸಿದ್ಧವೆಂದು ಹುಸಿ ಭರವಸೆ ನೀಡುವುದು, ಯುದ್ಧವನ್ನು ಕೊನೆಗೊಳಿಸಲು ತಮ್ಮ ದೇಶಕ್ಕೆ ಮಾತ್ರ ಉಪಯುಕ್ತವಾಗುವಂತಹ ಷರತ್ತುಗಳನ್ನು ವಿಧಿಸು ವುದು, ತಾವು ವಿಧಿಸುವ ಷರತ್ತುಗಳನ್ನು ತಿರಸ್ಕರಿಸಿದರೆ ಅಂತಹ ದೇಶವನ್ನೇ ನಾಶ ಮಾಡುವು ದಾಗಿ ಬೆದರಿಕೆಯೊಡ್ಡುವುದು ಮುಂತಾದ ಸಮರ ಪ್ರಹಸನ ಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.
-
ಪ್ರಸ್ತುತ
ಜಯಶ್ರೀ ಕಾಲ್ಕುಂದ್ರಿ
ಯುದ್ಧ ಯಾರಿಗೆ ಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಜನಸಾಮಾನ್ಯ ರಿಗಂತೂ ಖಂಡಿತವಾಗಿಯೂ ಅಲ್ಲ. ಯುದ್ಧದಲ್ಲಿ ಭಾಗಿಯಾಗಿರುವವರೂ ಸಹ ಯುದ್ಧವನ್ನು ಮುಂದುವರಿಸುತ್ತಾ ಶಾಂತಿ, ಸೌಹಾರ್ದತೆ ಕುರಿತು ಮಾತನಾಡುತ್ತಿರು ವುದು ಆಶ್ವರ್ಯಕರ ಸಂಗತಿ. ಯುದ್ಧವೆಂಬುದು ವಿಜಯಪತಾಕೆ ಹಾರಿಸುವುದಕ್ಕೆ ಅಥವಾ ಪ್ರತಿಷ್ಠೆಯ ಸಂಕೇತವೂ ಅಲ್ಲ.
ಯುದ್ಧ ಮುಂದುವರಿಯುತ್ತಿರುವುದನ್ನು ಕುರಿತು, ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವಿಷಯಗಳು ಜನಸಾಮಾನ್ಯರ ನಿದ್ದೆಗೆಡಿಸಿವೆ. ಯುದ್ಧದಲ್ಲಿ ಭಾಗಿಯಾಗಿರುವ ರಾಷ್ಟ್ರಗಳ ಮನಸ್ಥಿತಿಯೇ ರಣಾಂಗಣವಾಗಿರುವಾಗ, ಸಮರ ಸಂಧಾನದ ಸಾಧ್ಯತೆ ಗೋಚರವಾಗು ವುದು ಅಸಾಧ್ಯವೆಂಬ ಮಾತಿನಲ್ಲಿ ಸತ್ಯಾಂಶವಿಲ್ಲದಿಲ್ಲ.
ಸಮರಕ್ಕೆ ವಿರಾಮ ಘೋಷಿಸಿದಂತೆ ನಟಿಸುವುದು, ಯುದ್ಧ ಕೊನೆಗೊಳಿಸುವುದಾಗಿ ಹೇಳಿಕೆಗಳನ್ನು ಕೊಡುವುದು, ಮಾತುಕತೆಗೆ ಸಿದ್ಧವೆಂದು ಹುಸಿ ಭರವಸೆ ನೀಡುವುದು, ಯುದ್ಧವನ್ನು ಕೊನೆಗೊಳಿಸಲು ತಮ್ಮ ದೇಶಕ್ಕೆ ಮಾತ್ರ ಉಪಯುಕ್ತವಾಗುವಂತಹ ಷರತ್ತುಗಳನ್ನು ವಿಧಿಸುವುದು, ತಾವು ವಿಧಿಸುವ ಷರತ್ತುಗಳನ್ನು ತಿರಸ್ಕರಿಸಿದರೆ ಅಂತಹ ದೇಶವನ್ನೇ ನಾಶ ಮಾಡುವುದಾಗಿ ಬೆದರಿಕೆಯೊಡ್ಡುವುದು ಮುಂತಾದ ಸಮರ ಪ್ರಹಸನ ಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.
ಯುದ್ಧ ಯಾರಿಗೆ ಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಜನಸಾಮಾನ್ಯರಿಗಂತೂ ಖಂಡಿತವಾಗಿಯೂ ಅಲ್ಲ. ಯುದ್ಧದಲ್ಲಿ ಭಾಗಿಯಾಗಿರುವವರೂ ಸಹ ಯುದ್ಧವನ್ನು ಮುಂದುವರಿಸುತ್ತಾ ಶಾಂತಿ, ಸಹನೆ ಮತ್ತು ಸೌಹಾರ್ದತೆಗಳನ್ನು ಕುರಿತು ಮಾತನಾಡು ತ್ತಿರುವುದು ನಿಜಕ್ಕೂ ಆಶ್ವರ್ಯಕರ ಸಂಗತಿ.
ಇದನ್ನೂ ಓದಿ: Jayashree Kalkundri Column: ಯೋಗಕ್ಕೀಗ ಸುಯೋಗ
ಯುದ್ಧವೆಂಬುದು ಕೇವಲ ವಿಜಯಪತಾಕೆ ಹಾರಿಸುವುದಕ್ಕೆ ಮಾತ್ರವಲ್ಲ ಅಥವಾ ಕೇವಲ ಪ್ರತಿಷ್ಠೆಯ ಸಂಕೇತವೂ ಅಲ್ಲ. ತನ್ನನ್ನು ತಾನು ಹಿರಿಯಣ್ಣ ಇಲ್ಲವೇ ದೊಡ್ಡಣ್ಣನಂತೆ ಭಾವಿಸಿಕೊಂಡ ದೇಶವೊಂದು ತನ್ನ ಮಾತುಗಳನ್ನು ಮಿಕ್ಕ ದೇಶಗಳು ಪಾಲಿಸುವುದು ಕಡ್ಡಾಯ ಎಂದು ಆದೇಶಿಸುವ ಸಮಯವೊಂದಿತ್ತು. ಈಗ ಕಾಲ ಬದಲಾಗಿದೆ. ದೊಡ್ಡಣ್ಣನ ಮಾತುಗಳೆಲ್ಲವೂ ಸ್ವಾರ್ಥಪೂರಿತವೆಂದು ಮನಗಂಡಿರುವ ಇನ್ನಿತರ ದೇಶಗಳು ಆತನಿಗೆ ಸಡ್ಡು ಹೊಡೆದು ನಿಂತಿವೆ. ಗೋದಾಮಿನಲ್ಲಿ ಶಸ್ತ್ರಾಸ್ತ್ರಗಳನ್ನು ಧಾನ್ಯಗಳಂತೆ ತುಂಬಿರಿಸಿ ಕೊಂಡಿರುವ ದೇಶವೊಂದು, ತನ್ನನ್ನು ಮೀರಿ ಬೆಳೆಯುತ್ತಿರುವ ದೇಶಗಳನ್ನು ನೋಡಿ, ಸಹಿಸಲಾಗದೆ, ಕಿರುಕುಳ ನೀಡುವುದು ಅಥವಾ ಯುದ್ಧಕ್ಕೆ ತಾನು ಸಿದ್ಧವೆಂದು ಘೋಷಿಸುತ್ತಿದೆ.
ಅಣ್ವಸ್ತ್ರಗಳನ್ನು ಇರಿಸಿಕೊಳ್ಳುವ ಪರಮಾಧಿಕಾರ ಕೇವಲ ನನ್ನದು, ಇತರ ದೇಶಗಳು ಇರಿಸಿಕೊಳ್ಳುವಂತಿಲ್ಲ ಎನ್ನುವ ದೇಶಗಳೂ ಸಹ ಯುದ್ಧಕ್ಕೆ ಸಜ್ಜಾಗುತ್ತಿವೆ. ಇತರ ದೇಶ ಗಳಲ್ಲಿರುವ ಸಂಪನ್ಮೂಲಗಳ ಮೇಲೆ ತನಗೆ ಪರಮಾಧಿಕಾರವಿರಬೇಕೆಂಬ ದೇಶಗಳು ರಣಾಂಗಣವನ್ನು ಪ್ರವೇಶಿಸುತ್ತಿವೆ. ದೇಶವೊಂದು ಹಬ್ಬದ ಸಂಭ್ರಮದಲ್ಲಿದ್ದಾಗ, ಅಲ್ಲಿಯ ಅಮಾಯಕರ ಪ್ರಾಣಗಳನ್ನು ತೆಗೆದು, ಸಾಮಾನ್ಯ ನಾಗರಿಕರನ್ನು ಒತ್ತೆಯಾಳಾಗಿರಿಸಿ ಕೊಂಡು ಕ್ರೌರ್ಯ ಮೆರೆದ ನೆರೆಯ ದೇಶಗಳೂ ಯುದ್ಧಕ್ಕೇ ಆಹ್ವಾನವಿತ್ತಿವೆ.
ವಿಸ್ತಾರವಾದವನ್ನೇ ಬಂಡವಾಳವಾಗಿಸಿಕೊಂಡು ನೆರೆ ದೇಶಗಳ ಶಾಂತಿಗೆ ಕುಂದುಂಟು ಮಾಡುವ ದೇಶಗಳೂ ಸಹ ಯುದ್ಧೋನ್ಮಾದಿಗಳೇ. ಬಲಿಷ್ಠ ರಾಷ್ಟ್ರದ ಜೊತೆ, ನೇರ ಸಂಘರ್ಷ ಸಾಧ್ಯವಿಲ್ಲವೆಂದು ಮನಗಂಡು, ಆ ದೇಶಕ್ಕೆ ಉಗ್ರವಾದಿಗಳನ್ನು ಹಾಗೂ ನುಸುಳುಕೋರರನ್ನು ರವಾನಿಸುವ ದೇಶಗಳೂ ಸಹ ಯುದ್ಧಾಕಾಂಕ್ಷಿಗಳೇ. ಮನುಷ್ಯನ ದೇಹದ ಬಣ್ಣವೂ ಯುದ್ಧಕ್ಕೆ ನಾಂದಿಯಾಗಬಹುದು. ಇನ್ನು ಕೆಲ ದೇಶಗಳು, ಇತರ ದೇಶಗಳ ಬಗ್ಗೆ ವೈಯಕ್ತಿಕ ಮತ್ತು ಸಾಮೂಹಿಕ ಅಹಂಕಾರದಿಂದ ಯುದ್ಧವನ್ನು ಆರಂಭಿಸುತ್ತವೆ.
ನೆರೆದೇಶಗಳ ಜನರ ಅಕ್ರಮ ಪ್ರವೇಶದ ಸಮಸ್ಯೆಯಿಂದ ಉಂಟಾಗುತ್ತಿರುವ ಜನಸಂಖ್ಯಾ ಅಸಮತೋಲನವೂ ಯುದ್ಧಕ್ಕೆ ಕಾರಣವೆನಿಸಬಹುದು. ಧರ್ಮಾಂಧತೆಯೂ ಯುದ್ಧಕ್ಕೆ ನಾಂದಿ ಹಾಡಬಲ್ಲದು. ಯುದ್ಧದಲ್ಲಿ ಗೆದ್ದವರು ದೊಡ್ಡಣ್ಣನೆನಿಸಿಕೊಂಡರೆ, ಗೆಲ್ಲಲಾಗ ದವರು ಸೋತು ಸುಣ್ಣವಾಗಿ ಬಿಡುತ್ತಾರೆ. ವಾರಗಳು, ತಿಂಗಳುಗಳು ಮಾತ್ರವಲ್ಲ, ವರ್ಷ ಗಟ್ಟಲೆ ಕಾದಾಡಿದ ದೇಶಗಳಿವೆ.
ಕೆಲವೊಂದು ದೇಶಗಳಿಗೆ ಯುದ್ಧದ ಸಮಯದಲ್ಲಿ, ಒಂದು ದೇಶದಿಂದುಂಟಾದ ಗಾಯ ಮಾಯುವಷ್ಟರಲ್ಲಿ, ಮತ್ತೊಂದು ದೇಶದ ಇರಿತವನ್ನು ಎದುರಿಸುವ ಸಮಸ್ಯೆ ಕಾಡುತ್ತದೆ. ಯುದ್ಧಗಳಿಂದ ಈ ಜಗತ್ತು ನೆಮ್ಮದಿಯಾಗಿರಲು ಸಾಧ್ಯವಿಲ್ಲವೆಂಬ ಮಾತು ಸರ್ವವಿದಿತ.
1914ರಿಂದ 1918ರವರೆಗೆ ನಡೆದ ಮೊದಲ ಮಹಾಯುದ್ಧದಲ್ಲಿ ಸತ್ತವರು 22 ಮಿಲಿಯನ್ (2.2 ಕೋಟಿ) ಜನರು ಮತ್ತು 1939 ರಿಂದ 1945ರವರೆಗೆ ನಡೆದ ಎರಡನೆಯ ಮಹಾಯುದ್ಧ ದಲ್ಲಿ, ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 75 ಮಿಲಿಯನ್ (7.5 ಕೋಟಿ) ಎಂದು ಅಂಕಿ-ಅಂಶಗಳು ನಿರೂಪಿಸುತ್ತವೆ.
ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ (1971) ಸುಮಾರು ಮೂರು ಲಕ್ಷ ಜನ ಸಾವಿ ಗೀಡಾಗಿದ್ದಾರೆ. ಇಷ್ಟು ಮಾತ್ರವಲ್ಲ, ಬಗೆಹರಿಯದೆ ಉಳಿದಿರುವ ಪ್ಯಾಲೆಸ್ತೀನ್ -ಇಸ್ರೇಲ್ ಸಂಘರ್ಷದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸತ್ತವರು ಸುಮಾರು 55000 ಜನ.
ಯುದ್ಧವೊಂದು ಮಾನವತೆಯ ಮಹಾ ವೈಫಲ್ಯವೆಂಬುದು ಸರ್ವವಿದಿತ. ಯುದ್ಧವು ತಕ್ಷಣದ ನ್ಯಾಯವನ್ನು ಬಯಸುವವರಿಗೆ ಭಾವನಾತ್ಮಕವಾಗಿ ತೃಪ್ತಿಕರವೆನಿಸಿದರೂ, ಅದು ವಿನಾಶಕಾರಿ ವೆಚ್ಚಗಳನ್ನು ಹೊತ್ತು ತರುತ್ತದೆಂಬ ಮಾತನ್ನೂ ಅಲ್ಲಗಳೆಯುವಂತಿಲ್ಲ. ಯುದ್ಧ ಆರಂಭವಾಗುತ್ತಿದ್ದಂತೆಯೇ ಹಲವಾರು ದೇಶಗಳ ನಾಗರಿಕರ ಬದುಕು ಅಸ್ತವ್ಯಸ್ತ ವಾಗಿಬಿಡುತ್ತದೆ. ಶಾಲೆಗಳ ಬಾಗಿಲು ಮುಚ್ಚಿ ಮಕ್ಕಳ ಕಿಲಕಿಲ ನಗು ಮಾಯವಾಗುತ್ತದೆ.
ಇನ್ನೊಂದು ದೇಶ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟ, ನೋವು ಮತ್ತು ಆತಂಕಗಳನ್ನೇ ಬಂಡವಾಳವಾಗಿಸಿಕೊಂಡು ಆ ದೇಶದ ಯುವಕರನ್ನು ದಾರಿ ತಪ್ಪಿಸಿ, ಗ್ರಹ ಯುದ್ಧ ವೊಂದನ್ನು ಸೃಷ್ಟಿಸಿ, ಬಂಡವಾಳ ಮಾಡಿಕೊಳ್ಳುವ ಸ್ವಾರ್ಥ ಬುದ್ಧಿಯ ದೇಶದ ಆಳುಗ ರನ್ನು ಏನೆಂದು ಕರೆಯುವುದು? ಅಂತಹ ದೇಶಗಳ ನಾಗರಿಕರ ಬದುಕೇ ಚೆಲ್ಲಾಪಿಲ್ಲಿಯಾಗು ತ್ತದೆ.
ಆರ್ಥಿಕತೆ ನೆಲ ಕಚ್ಚುತ್ತದೆ. ಉದ್ಯೋಗಾವಕಾಶಗಳು ಸಿಗುವುದಿಲ್ಲ. ಅಲ್ಲಿ ನೆಲೆಸಿರುವ ಅಲ್ಪ ಸಂಖ್ಯಾತ ವಿದೇಶಿ ನಾಗರಿಕರ ಜೀವನವೂ ದುರ್ಭರವಾಗಿಬಿಡುತ್ತದೆ. ಯುದ್ಧ ಆರಂಭವಾದ ದಿನವನ್ನು ನಿಖರವಾಗಿ ಹೇಳಬಹುದೇ ಹೊರತು ಅಂತ್ಯವಾಗುವ ದಿನವನ್ನಲ್ಲ.
ಯುದ್ಧ ಭೀತಿ ಮಾತ್ರದಿಂದಲೇ, ದೇಶದ ಸಂಪನ್ಮೂಲಗಳು, ಯುದ್ಧ ಸಾಮಗ್ರಿಗಳಿಗೆ, ಮತ್ತು ಶಸಾಸಗಳಿಗಾಗಿ ವೆಚ್ಚವಾಗಿ ಆರ್ಥಿಕತೆ ಸಂಪೂರ್ಣವಾಗಿ ಕುಂಠಿತಗೊಳ್ಳುತ್ತದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ರಸ್ತೆಗಳು ಬಾಂಬ್ ದಾಳಿಗೆ ತುತ್ತಾಗಿ ನಾಶವಾಗುತ್ತವೆ. ಆರ್ಥಿಕತೆ ಮಾತ್ರವಲ್ಲ, ಯುದ್ಧದಲ್ಲಿ ಬಳಸುವ ರಾಸಾಯನಿಕ ಮತ್ತು ಬಾಂಬ್‌ಗಳಿಂದ ಪರಿಸರ ಮಾಲಿನ್ಯ ಉಂಟಾಗಿ, ಪ್ರಾಣಿ ಮತ್ತು ಸಸ್ಯವರ್ಗಗಳ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ.
ಲಕ್ಷಾಂತರ ಜನಸಾಮಾನ್ಯರು ಮನೆ, ಮಠಗಳನ್ನು ಕಳೆದುಕೊಂಡು, ಸಂಕಷ್ಟ ಎದುರಿಸು ತ್ತಾರೆ. ಯುದ್ಧವು ಕೊನೆಗೊಂಡರೂ ಯುದ್ಧಪೀಡಿತ ದೇಶಗಳ ಮಧ್ಯೆ ಆಕ್ರೋಶ ಮತ್ತು ಸೇಡಿನ ಜ್ವಾಲೆಗಳು ಹೊಗೆಯಾಡುತ್ತಲೇ ಇರುತ್ತವೆ. ಯುದ್ಧದಲ್ಲಿ ಗೆದ್ದವರದೂ ನಿಜವಾದ ಗೆಲುವೇನೂ ಆಗಿರುವುದಿಲ್ಲ. ಅವರು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕತೆಯ ನಷ್ಟವನ್ನು ಅನುಭವಿಸುತ್ತಾರೆ.
ಜನಸಾಮಾನ್ಯರು ತಾವು ಗಳಿಸಿ, ಉಳಿಸಿದ ಹಣದಿಂದ ಕಟ್ಟಿದ ಕನಸಿನ ಮನೆ ಮಣ್ಣಿನ ಪಾಲಾದಾಗ ಅವರು ಅನುಭವಿಸುವ ವೇದನೆಯನ್ನು ಶಬ್ದಗಳಲ್ಲಿ ಹಿಡಿದಿಡಲಾಗದು. ಎರಡೂ ದೇಶಗಳ ಗಡಿ ಭಾಗ ಮತ್ತು ದಂಡೆಗಳಲ್ಲಿ ಸಂಸ್ಕಾರವಿಲ್ಲದೆ ಬಿದ್ದಿರುವ ಹೆಣಗಳ ರಾಶಿಯನ್ನು ಕಂಡಾಗ ಪ್ರeವಂತ ನಾಗರಿಕರ ಕಣ್ಣುಗಳಲ್ಲಿ ಕಂಬನಿ ಜಿನುಗದಿರಲಾರದು. ಯುದ್ಧ ಕಾಲದಲ್ಲಿ ಬಳಕೆಯಾಗುವ ಕ್ಷಿಪಣಿಗಳು, ಬಾಂಬು ಮತ್ತು ಬುಲೆಟ್ಟುಗಳಿಂದ ಭೂಮಿಯು ಬರಡಾಗುತ್ತದೆ.
ಯುದ್ಧಗ್ರಸ್ತ ದೇಶದ ಜನರು ಜೀವಿಸಲು ಅನ್ಯ ದೇಶಗಳಿಗೆ ಗುಳೆ ಹೋಗಿ, ವಲಸಿಗರೆಂಬ ಹಣೆಪಟ್ಟಿ ಹೊತ್ತು ತಿರಸ್ಕಾರಕ್ಕೆ ಒಳಗಾಗುತ್ತಾರೆ. ಎಲ್ಲಾ ದೂರದಲ್ಲಿ ಸಂಭವಿಸುತ್ತಿರುವ ಯುದ್ಧ ನಮ್ಮ ಅಡುಗೆಯ ಮನೆಯ ಮೇಲೂ ಪರಿಣಾಮ ಬೀರಿದೆ. ನಮ್ಮ ದೇಶಕ್ಕೆ ಸಂಬಂಧವೇ ಇಲ್ಲವೆನಿಸಿರುವ ಈ ಯುದ್ಧ, ನಮ್ಮ ಮೇಲೆ ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರಿದೆ.
ಅಡುಗೆ ಅನಿಲದ ಸಮಸ್ಯೆ ಹೆಚ್ಚಿದೆ. ತೈಲ ಬೆಲೆ ಏರುತ್ತಿದೆ. ರುಪಾಯಿ ಮೌಲ್ಯ ಕುಸಿತ ಕಂಡಿದೆ. ಸರಕು ಸಾಗಾಣೆಯ ವೆಚ್ಚದಲ್ಲಿ ಏರಿಕೆ ಕಂಡಿದೆ. ರಫ್ತು ಕುಸಿತದಿಂದ ಕೃಷಿ ಮತ್ತು ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ. ಯುದ್ಧ ಮುಗಿದದ ನಂತರ ಮೂಡುವುದು ಅಸಹನೀಯ ನೀರವತೆ ಮಾತ್ರ. ಯುದ್ಧದ ಪರಿಣಾಮಗಳನ್ನು ಬಹುಕಾಲ ಅನುಭವಿಸ ಬೇಕಾಗಬಹುದೆಂದು ಯುದ್ಧಪೀಡಿತ ದೇಶಗಳಿಗೆ ಚೆನ್ನಾಗಿ ಗೊತ್ತು. ಆದರೆ ಯುದ್ಧವನ್ನು ಕೊನೆಗಾಣಿಸುವ ಮನಸ್ಥಿತಿಯಲ್ಲಿ ಅಂತಹ ದೇಶಗಳ ಸರ್ಕಾರಗಳಿಲ್ಲವೆಂಬ ಮಾತೂ ಸಹ ಗಮನಾರ್ಹ.
ನನ್ನ ಒಂದು ಕಣ್ಣು ಹೋದರೆ ತೊಂದರೆಯಿಲ್ಲ. ವಿರೋಧಿಗಳ ಎರಡೂ ಕಣ್ಣುಗಳನ್ನೂ ತೆಗೆದೇ ಸಿದ್ಧ, ಎಂಬ ಯುದ್ಧೋನ್ಮಾದಿಗಳಿಗೆ ಶಾಂತಿ ಮಂತ್ರ ರುಚಿಸುವುದೇ? ಇಷ್ಟಕ್ಕೂ ಯುದ್ಧದಲ್ಲಿ ಗೆಲ್ಲುವವರು ಆಯುಧ ವ್ಯಾಪಾರಿಗಳು ಮತ್ತು ಸಾವಿನ ವ್ಯಾಪಾರಿಗಳು ಮಾತ್ರ. ಯುದ್ಧೋನ್ಮಾದ ಉಲ್ಬಣವಾಗದಂತೆ ಜನಸಾಮಾನ್ಯರು ಎಚ್ಚರಿಕೆ ವಹಿಸುವುದೂ ಅತ್ಯ ಗತ್ಯ.
ಯುದ್ಧವನ್ನು ಕುರಿತು ಪ್ರಚೋದಕ ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಜಾಲ ತಾಣಗಳ ಬಗ್ಗೆಯೂ ಗಮನವಿರಿಸುವುದಗತ್ಯ. ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಅನಪೇಕ್ಷಿತ ಸಂದೇಶಗಳನ್ನು ಹರಿಬಿಡುತ್ತಾರೆ.
ತಲೆಮಾರುಗಳ ಸುಖೀ ಜೀವನವನ್ನು ಕಸಿದುಕೊಂಡು, ಮೂಲಸೌಕರ್ಯಗಳನ್ನು ನಾಶ ಪಡಿಸಿ, ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದೆ ತಳ್ಳುವುದು ಮಾತ್ರವಲ್ಲ, ಪ್ರೀತಿಪಾತ್ರ ರನ್ನು ಕಳೆದುಕೊಂಡ ಕುಟುಂಬಗಳ ದುಃಖವನ್ನು ಯಾವ ಪರಿಹಾರದ ಹಣವೂ ತುಂಬಿ ಕೊಡಲಾರದು.
ಅನಾಗರಿಕ ಮನುಷ್ಯರಾದರೂ ಬದುಕು ನಡೆಸಬಲ್ಲರು. ಮನುಷ್ಯತ್ವವೇ ಇಲ್ಲದವರು ಬೆಚ್ಚಗಿನ ಅರಮನೆಯಲ್ಲಿ ಕುಳಿತು ಯುದ್ಧವನ್ನು ನಿಯಂತ್ರಿಸುತ್ತಾರೆ. ಶಸ್ತ್ರಾಸ್ತ್ರಗಳ ಸಂಗ್ರಹ ಕಾರರ ಹುಚ್ಚಾಟ ಮತ್ತು ಇಲ್ಲದವರ ಗೋಳಾಟವೆನಿಸುವ ಹಾಗೂ ವಿನಾಶಕ್ಕೆ ಕಾರಣ ವಾಗುವ ಯುದ್ಧೋನ್ಮಾದವೆಂಬುದು, ಆವೇಶ, ಆಕ್ರೋಶಗಳಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಸರಿ. ಯುದ್ಧವೆಂಬುದು ಕಟ್ಟಕಡೆಯ ಆಯ್ಕೆಯಾಗಿರಲಿ.