Vishweshwar Bhat Column: ಉಗ್ರರು ಹೀಗೇಕೆ ಮಾಡುತ್ತಾರೆ ?
ಭಯೋತ್ಪಾದನೆಯು ಮೂಲಭೂತವಾಗಿ ಒಂದು ರೀತಿಯ ಸಂವಹನ ತಂತ್ರ’. ಹಿಂಸಾಚಾರದ ಮೂಲಕ ಸಂದೇಶ ರವಾನಿಸುವುದು ಅವರ ಉದ್ದೇಶವಾಗಿರುತ್ತದೆ. ದಾಳಿಯ ಹೊಣೆ ಹೊರುವು ದರಿಂದ ಅವರಿಗೆ ಕೆಲವು ಲಾಭಗಳಿವೆ. ಯಾವುದೇ ಭಯೋತ್ಪಾದನಾ ಗುಂಪು ತಾನು ಸಕ್ರಿಯವಾಗಿದ್ದೇನೆ ಮತ್ತು ಶಕ್ತಿಯುತ ವಾಗಿದ್ದೇನೆ ಎಂದು ತೋರಿಸಿಕೊಳ್ಳಲು ತಕ್ಷಣ ದಾಳಿಯ ಜವಾಬ್ದಾರಿಯನ್ನು ಹೊರುತ್ತದೆ.
-
ಸಂಪಾದಕರ ಸದ್ಯಶೋಧನೆ
ಜಗತ್ತಿನಲ್ಲಿ ಎಲ್ಲಿಯೇ ಭಯೋತ್ಪಾದಕ ಅಥವಾ ವಿಧ್ವಂಸಕ ಕೃತ್ಯಗಳು ಜರುಗಲಿ, ಭಯೋತ್ಪಾದನಾ ಗುಂಪುಗಳು ಈ ಕೃತ್ಯವನ್ನು ನಾವೇ ಮಾಡಿದ್ದು ಎಂದು ಸ್ವಯಂ ಘೋಷಿಸಿಕೊಳ್ಳುತ್ತವೆ. ಇನ್ನು ಕೆಲವು ದಾಳಿಗಳ ಬಗ್ಗೆ ಮೌನ ವಹಿಸುತ್ತವೆ ಅಥವಾ ನಿರಾಕರಿಸುತ್ತವೆ. ಇದು ಕೇವಲ ಕಾಕತಾಳೀಯ ವಲ್ಲ. ಇದರ ಹಿಂದೆ ಆಳವಾದ ಕಾರ್ಯತಂತ್ರದ ಲೆಕ್ಕಾಚಾರ, ರಾಜಕೀಯ ಲಾಭ-ನಷ್ಟದ ವಿಶ್ಲೇಷಣೆ ಮತ್ತು ಸಾರ್ವಜನಿಕ ಸಂಬಂಧಗಳ ತಂತ್ರಗಾರಿಕೆ ಅಡಗಿರುತ್ತದೆ.
ಭಯೋತ್ಪಾದನೆಯು ಮೂಲಭೂತವಾಗಿ ಒಂದು ರೀತಿಯ ಸಂವಹನ ತಂತ್ರ’. ಹಿಂಸಾಚಾರದ ಮೂಲಕ ಸಂದೇಶ ರವಾನಿಸುವುದು ಅವರ ಉದ್ದೇಶವಾಗಿರುತ್ತದೆ. ದಾಳಿಯ ಹೊಣೆ ಹೊರುವು ದರಿಂದ ಅವರಿಗೆ ಕೆಲವು ಲಾಭಗಳಿವೆ. ಯಾವುದೇ ಭಯೋತ್ಪಾದನಾ ಗುಂಪು ತಾನು ಸಕ್ರಿಯವಾಗಿ ದ್ದೇನೆ ಮತ್ತು ಶಕ್ತಿಯುತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ತಕ್ಷಣ ದಾಳಿಯ ಜವಾಬ್ದಾರಿಯನ್ನು ಹೊರುತ್ತದೆ.
ಉದಾಹರಣೆಗೆ, ಐಸಿಸ್ ತನ್ನ ಪ್ರಭಾವ ಕುಗ್ಗುತ್ತಿದೆ ಎಂಬ ವದಂತಿಗಳು ಹರಡಿದಾಗ, ಸಣ್ಣಪುಟ್ಟ ದಾಳಿಗಳಿಗೂ ತನ್ನ ಹೆಸರನ್ನು ಸೇರಿಸಿಕೊಳ್ಳುತ್ತದೆ. ಇದು ಅವರ ಬೆಂಬಲಿಗರಲ್ಲಿ ಉತ್ಸಾಹ ತುಂಬಲು ಮತ್ತು ಶತ್ರುಗಳಲ್ಲಿ ಭೀತಿ ಮೂಡಿಸಲು ಸಹಕಾರಿ. ಭೀಕರ ದಾಳಿಯ ಜವಾಬ್ದಾರಿ ಹೊರುವುದರಿಂದ ಆ ಸಂಘಟನೆಯು ಉಗ್ರಗಾಮಿ ವಲಯದಲ್ಲಿ ದೊಡ್ಡಣ್ಣ’ ಆಗಿ ಬಿಂಬಿತವಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಆವಕಾಡೊ ಮತ್ತು ಅಪರಾಧ
ಇದು ಆನ್ಲೈನ್ ಮೂಲಕ ಹೊಸ ಯುವಕರನ್ನು ಆಕರ್ಷಿಸಲು ಮತ್ತು ಪ್ರಪಂಚದಾದ್ಯಂತ ಇರುವ ಮೂಲಭೂತವಾದಿಗಳಿಂದ ದೇಣಿಗೆ ಪಡೆಯಲು ಸುಲಭವಾಗುತ್ತದೆ. ನೋಡಿ, ನಾವು ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸಿದ್ದೇವೆ’ ಎಂಬ ಪ್ರಚಾರವು ಅವರ ಆರ್ಥಿಕ ಮೂಲಗಳಿಗೆ ಬಲ ನೀಡು ತ್ತದೆ. ಸರಕಾರಗಳ ಮೇಲೆ ಒತ್ತಡ ಹೇರಲು ಇವರು ಜವಾಬ್ದಾರಿಯನ್ನು ಹೊರುತ್ತಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆಯೂ ಇಂಥ ದಾಳಿಗಳು ನಡೆಯುತ್ತವೆ ಎಂದು ಎಚ್ಚರಿಸಲು ಇದು ಸುಲಭವಾದ ಮಾರ್ಗ. ಹಾಗಾದರೆ ಕೆಲವು ದಾಳಿಗಳ ಬಗ್ಗೆ ಮೌನ ವಹಿಸುವುದು ಏಕೆ? ಕೆಲವು ಸಂದರ್ಭಗಳಲ್ಲಿ, ದಾಳಿ ನಡೆದಿದ್ದರೂ ಉಗ್ರಗಾಮಿಗಳು ಅದರ ಹೊಣೆ ಹೊರುವುದಿಲ್ಲ ಅಥವಾ ಸಾರಾಸಗಟಾಗಿ ನಿರಾಕರಿಸುತ್ತಾರೆ. ಇದರ ಹಿಂದೆಯೂ ಬಲವಾದ ಕಾರಣಗಳಿವೆ.
ಯಾವುದೇ ಉಗ್ರ ಸಂಘಟನೆಗೆ ತನ್ನದೇ ಆದ ಒಂದು ಜನಕೋಟಿಯ ಬೆಂಬಲವಿರುತ್ತದೆ. ಒಂದು ವೇಳೆ ದಾಳಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಮಕ್ಕಳು ಅಥವಾ ತಮಗೆ ಬೆಂಬಲ ನೀಡುವ ಸಮುದಾಯದವರೇ ಮೃತಪಟ್ಟರೆ, ಅಂಥ ದಾಳಿಯ ಜವಾಬ್ದಾರಿಯನ್ನು ಅವರು ಹೊರುವುದಿಲ್ಲ.
ಉದಾಹರಣೆಗೆ, ಮಸೀದಿ ಅಥವಾ ಶಾಲೆಗಳ ಮೇಲೆ ನಡೆದ ದಾಳಿಗಳಲ್ಲಿ ಮುಸ್ಲಿಮರೇ ಹೆಚ್ಚಾಗಿ ಮೃತಪಟ್ಟಾಗ, ಅಲ್-ಖೈದಾದಂಥ ಸಂಘಟನೆಗಳು ಜಾಣ ಮೌನ ವಹಿಸುತ್ತವೆ. ಅತಿರೇಕದ ಹಿಂಸೆ ತಮ್ಮ ಸಂಘಟನೆಯ ಇಮೇಜ್ ಅನ್ನು ಕೆಡಿಸುತ್ತದೆ ಎಂದು ಅವರಿಗೆ ತಿಳಿದಾಗ ಹೀಗೆ ಮಾಡುತ್ತವೆ. ಜವಾಬ್ದಾರಿಯನ್ನು ಹೊರುವುದರಿಂದ ತನಿಖಾ ಸಂಸ್ಥೆಗಳಿಗೆ ಪುರಾವೆ ಒದಗಿಸಿದಂತಾಗುತ್ತದೆ.
ದಾಳಿ ನಡೆಸಿದ ಘಟಕ ಅಥವಾ ಸೆಲ್ ನ್ನು ರಕ್ಷಿಸಲು ಮತ್ತು ತನಿಖಾ ಸಂಸ್ಥೆಗಳ ಸಂಪೂರ್ಣ ಗಮನ ತಮ್ಮತ್ತ ಬೀಳದಂತೆ ತಡೆಯಲು ಅವರು ಮೌನ ವಹಿಸುತ್ತಾರೆ. ಹೊಣೆ ಹೊತ್ತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಗಳು ಬಿಗಿಯಾಗಬಹುದು ಅಥವಾ ನಿಖರ ದಾಳಿ ನಡೆಯಬಹುದು ಎಂಬ ಭಯವಿರುತ್ತದೆ.
ಯಾರು ದಾಳಿ ನಡೆಸಿದ್ದಾರೆ ಎಂದು ತಿಳಿಯದಿದ್ದಾಗ ದೇಶದೊಳಗೆ ಗೊಂದಲ ಸೃಷ್ಟಿಯಾಗುತ್ತದೆ. ಸರಕಾರವು ಪ್ರತಿಪಕ್ಷದ ಮೇಲೆ ಅಥವಾ ಅನ್ಯ ದೇಶದ ಮೇಲೆ ಸಂಶಯ ಪಡಬಹುದು. ಈ ಆಂತರಿಕ ಕಚ್ಚಾಟ ಭಯೋತ್ಪಾದಕರಿಗೆ ಲಾsದಾಯಕ. ಹೊಣೆ ಹೊರದೇ ಇದ್ದಾಗ ಜನರಲ್ಲಿ ಯಾರು ಬೇಕಾ ದರೂ ನಮ್ಮ ಮೇಲೆ ದಾಳಿ ಮಾಡಬಹುದು’ ಎಂಬ ಅತೀಂದ್ರಿಯ ಭಯ ಹೆಚ್ಚಾಗುತ್ತದೆ.
ಕೆಲವೊಮ್ಮೆ ಒಂದೇ ದಾಳಿಗೆ ಎರಡು-ಮೂರು ಸಂಘಟನೆಗಳು ಜವಾಬ್ದಾರಿ ಘೋಷಿಸುತ್ತವೆ. ಇದನ್ನು ಕ್ರೆಡಿಟ್‌ಕ ಎನ್ನಲಾಗುತ್ತದೆ. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಗೆ ತಾಲಿಬಾನ್ ಮತ್ತು ಐಸಿಸ್ ಎರಡೂ ಹೊಣೆ ಹೊತ್ತ ಸಂದರ್ಭಗಳಿವೆ. ಇದು ತಮ್ಮ ಸಂಘಟನೆಯೇ ಹೆಚ್ಚು ಪ್ರಬಲ ಎಂದು ತೋರಿಸಿಕೊಳ್ಳುವ ಪೈಪೋಟಿ. ಮತ್ತೊಂದೆಡೆ, ಉಗ್ರ ಸಂಘಟನೆಯು ತನ್ನ ಶ್ರೇಣಿಯ ಕೆಳಮಟ್ಟದ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮಾಡಿದ ದಾಳಿಯನ್ನು ತನ್ನದೇ ಯೋಜನೆ ಎಂದು ಬಿಂಬಿಸಿಕೊಳ್ಳುತ್ತದೆ. ಇದು ಅವರಿಗೆ ಉಚಿತ ಪ್ರಚಾರ’ ನೀಡುತ್ತದೆ.