RCB vs MI: ಮುಂಬೈ ವಿರುದ್ಧ ಗೆದ್ದು ಚೆನ್ನೈ ದಾಖಲೆ ಸರಿಗಟ್ಟಿದ ಆರ್‌ಸಿಬಿ
Royal Challengers Bengaluru: ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿದ್ದು ಐಪಿಎಲ್‌ನಲ್ಲಿ ಜಂಟಿ 2ನೇ ಗರಿಷ್ಠ. 2025-26ರಲ್ಲಿ ಸನ್‌ರೈಸರ್ಸ್ ಸತತ 5 ಬಾರಿ ಈ ಸಾಧನೆ. 2023ರಲ್ಲಿ ಪಂಜಾಬ್, 2024ರಲ್ಲಿ ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿವೆ.
Royal Challengers Bengaluru -
ಮುಂಬಯಿ, ಎ.13: 2026 ರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs MI) ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಎಪ್ರಿಲ್ 12 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ 18 ರನ್ ಅಂತರದ ಗೆಲುವು ಸಾಧಿಸಿತು. ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಾಖಲೆಯೊಂದನ್ನು ಆರ್‌ಸಿಬಿ ಸರಿಗಟ್ಟಿದೆ.
ಐಪಿಎಲ್‌ನಲ್ಲಿ 200+ ಗುರಿಯನ್ನು ರಕ್ಷಿಸುವ ಮೂಲಕ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡವಾಯಿತು. ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಐಪಿಎಲ್‌ನಲ್ಲಿ ಈವರೆಗೆ ತಲಾ 23 ಬಾರಿ 200 ಪ್ಲಸ್ ಮೊತ್ತವನ್ನು ಡಿಫೆಂಡ್ ಮಾಡಿದೆ. ಮುಂಬೈ ಮತ್ತು ಹೈದರಾಬಾದ್ 18 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿವೆ ಮತ್ತು ಆರ್‌ಆರ್ ಮತ್ತು ಕೆಕೆಆರ್ 15 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.
ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿದ್ದು ಐಪಿಎಲ್‌ನಲ್ಲಿ ಜಂಟಿ 2ನೇ ಗರಿಷ್ಠ. 2025-26ರಲ್ಲಿ ಸನ್‌ರೈಸರ್ಸ್ ಸತತ 5 ಬಾರಿ ಈ ಸಾಧನೆ. 2023ರಲ್ಲಿ ಪಂಜಾಬ್, 2024ರಲ್ಲಿ ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿವೆ.
ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. "ಅದ್ಭುತವೆನಿಸುತ್ತದೆ. ನಾವು ಮುಂಬೈಗೆ ಬಂದಾಗಲೆಲ್ಲಾ, ವಿಶೇಷವಾಗಿ ಈ ಮೈದಾನದಲ್ಲಿ, ವಾತಾವರಣ, ಅಭಿಮಾನಿಗಳು, ಅವರೊಂದಿಗೆ ಆಟವಾಡುವುದು ಮತ್ತು ತುಂಬಿ ತುಳುಕುವ ಕ್ರೀಡಾಂಗಣದಲ್ಲಿ ಆಡುವುದು, ಅದು ವಿಭಿನ್ನ ಭಾವನೆ. ವಿರಾಟ್ ಭಾಯ್ ಮತ್ತು ಸಾಲ್ಟ್ ಇನ್ನಿಂಗ್ಸ್ ಪ್ರಾರಂಭಿಸಿದ ರೀತಿ, ನಮ್ಮನ್ನು ಚಾಲನಾ ಸ್ಥಾನದಲ್ಲಿರಿಸಿದೆ" ಎಂದು ರಜತ್ ಪಟಿದಾರ್ ಹೇಳಿದರು.
ಕೊಹ್ಲಿ, ರೋಹಿತ್‌ಗೆ ಗಾಯ; ಮುಂದಿನ ಐಪಿಎಲ್ ಪಂದ್ಯಗಳಿಗೆ ಅನುಮಾನ!
ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರ್‌ಸಿಬಿ 4 ವಿಕೆಟ್‌ಗೆ ಬರೋಬ್ಬರಿ 240 ರನ್ ಸಿಡಿಸಿತು. ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 222 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸೂರ್ಯಕುಮಾರ್ 33, ಹಾರ್ದಿಕ್ ಪಾಂಡ್ಯ 40 ಹಾಗೂ ರುಥರ್‌ಫೋರ್ಡ್ 31 ಎಸೆತಕ್ಕೆ ಅಜೇಯ 71 ರನ್ ಗಳಿಸಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 240/4 (ಸಾಲ್ಟ್ 78, ರಜತ್ 53, ಕೊಹ್ಲಿ 50, ಡೇವಿಡ್ 34, ಶಾರ್ದೂಲ್ 1-32), ಮುಂಬೈ 20 ಓವರ್‌ನಲ್ಲಿ 222/5 (ರುಥರ್‌ಫೋರ್ಡ್ 71, ಹಾರ್ದಿಕ್ ಪಾಂಡ್ಯ 40, ಸುಯಶ್ 2-47).