Dr Vijay Darda Column: ಟ್ರಂಪ್ ಏಕೆ ಭಾರತದ ಮೇಲೆ ಅಷ್ಟೊಂದು ಸಿಟ್ಟಾಗಿದ್ದಾರೆ ?
ನಮ್ಮ ದೇಶದ ರಾಜತಾಂತ್ರಿಕ ವ್ಯವಸ್ಥೆ ಈಗ ಅತಿದೊಡ್ಡ ಮತ್ತು ಅತ್ಯಂತ ಗಂಭೀರವಾದ ಸವಾಲನ್ನು ಎದುರಿಸುತ್ತಿದೆ. ಅದನ್ನು ಬಗೆಹರಿಸಿಕೊಳ್ಳಬೇಕು ಅಂದರೆ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು. ಆ ಪ್ರಶ್ನೆ- ಟ್ರಂಪ್‌ಗೆ ನಿಜಕ್ಕೂ ಬೇಕಾಗಿರುವುದು ಏನು? ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಭವಿಸ ಲಿದ್ದ ಯುದ್ಧವನ್ನು ಟ್ರಂಪ್ ನಿಲ್ಲಿಸಿದರು ಎಂಬುದು ಭಾರತೀಯ ರಿಗೆ ಖಂಡಿತ ಗೊತ್ತಿರಲಿಲ್ಲ. ಆದರೆ ಟ್ರಂಪ್‌ಗೆ ಗೊತ್ತಿತ್ತು!


ಹಿರಿಯ ಪತ್ರಿಕೋದ್ಯಮಿ
ಡಾ.ವಿಜಯ್ ದರಡಾ
ಪಾಕಿಸ್ತಾನವೀಗ ಟ್ರಂಪ್ ಮಡಿಲಲ್ಲಿ ಕುಳಿತುಕೊಂಡಿರುವುದರಿಂದ ಭಾರತಕ್ಕೆ ಸಮಸ್ಯೆಗಳು ಹೆಚ್ಚಾಗುವುದು ನಿಶ್ಚಿತ. ಮೊದಲೇ ಚೀನಾ ಜೊತೆ ಕೈಜೋಡಿಸಿರುವ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲವೂ ಸಿಕ್ಕಿಬಿಟ್ಟರೆ ಭಾರತದ ಕತೆ ಏನಾದೀತು?
ಜಾಗತಿಕ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸುವ ಎಲ್ಲರ ಮುಂದೆ ಈಗ ಎದ್ದು ನಿಂತಿರುವ ದೊಡ್ಡ ಪ್ರಶ್ನೆ ಏಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ಇಷ್ಟೊಂದು ಸಿಟ್ಟಾಗಿದ್ದಾರೆ? ಈಗಲೂ ನಾನು ಭಾರತದ ಸ್ನೇಹಿತನೆಂದೇ ಅವರು ಹೇಳಿಕೊಳ್ಳುತ್ತಾರೆ. ಹಿಂದೆಯೂ ಅವರು ಭಾರತದ ಸ್ನೇಹಿತನೇ ಆಗಿದ್ದರು. ಆದರೆ ಈಗ ಏಕಾಏಕಿ ಭಾರತದ ಬಗ್ಗೆ ಸಿಟ್ಟುಗೊಂಡು, ಭಾರತದಿಂದ ಅಮೆರಿಕಕ್ಕೆ ಬರುವ ಸರಕುಗಳ ಮೇಲೆ ಭಾರೀ ಪ್ರಮಾಣದ ತೆರಿಗೆ ವಿಧಿಸಿದ್ದಾರೆ.
ಅದೇ ವೇಳೆ, ಭಾರತದ ಜೊತೆಗೆ ನನಗೆ ಯಾವತ್ತೂ ಒಳ್ಳೆಯ ಸಂಬಂಧವೇ ಇರಲಿಲ್ಲ ಎನ್ನುವಂತೆ ಪಾಕಿಸ್ತಾನವನ್ನು ಬಿಗಿದಪ್ಪಿಕೊಂಡಿದ್ದಾರೆ. ಏಕೆ ಹೀಗಾಯ್ತು? ನಾವಿದಕ್ಕೆ ಉತ್ತರ ಹುಡುಕಲೇಬೇಕು. ಹಾಗಂತ ನಾವು ಅಮೆರಿಕದ ಮುಂದೆ ಮಂಡಿಯೂರಬೇಕು ಅಥವಾ ತಲೆಬಾಗಬೇಕು ಎಂದು ನಾನು ಹೇಳುತ್ತಿಲ್ಲ.
ನಮ್ಮ ದೇಶದ ರಾಜತಾಂತ್ರಿಕ ವ್ಯವಸ್ಥೆ ಈಗ ಅತಿದೊಡ್ಡ ಮತ್ತು ಅತ್ಯಂತ ಗಂಭೀರವಾದ ಸವಾಲನ್ನು ಎದುರಿಸುತ್ತಿದೆ. ಅದನ್ನು ಬಗೆಹರಿಸಿಕೊಳ್ಳಬೇಕು ಅಂದರೆ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು. ಆ ಪ್ರಶ್ನೆ- ಟ್ರಂಪ್‌ಗೆ ನಿಜಕ್ಕೂ ಬೇಕಾಗಿರುವುದು ಏನು? ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಭವಿಸಲಿದ್ದ ಯುದ್ಧವನ್ನು ಟ್ರಂಪ್ ನಿಲ್ಲಿಸಿದರು ಎಂಬುದು ಭಾರತೀಯ ರಿಗೆ ಖಂಡಿತ ಗೊತ್ತಿರಲಿಲ್ಲ. ಆದರೆ ಟ್ರಂಪ್‌ಗೆ ಗೊತ್ತಿತ್ತು!
ಇದನ್ನೂ ಓದಿ: Dr Vijay Darda Column: ಅವರೇನು ಕಾರ್ಯಕರ್ತರೋ ಅಥವಾ ಗೂಂಡಾಗಳೋ ?
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಘೋಷಣೆಯಾದಾಗ ಟ್ರಂಪ್ ಪದೇಪದೇ ಮಾಧ್ಯಮಗಳ ಮುಂದೆ ಬಂದು ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಅವರ ಮಾತಿಗೆ ಭಾರತ ಕೊಂಚವೂ ತಲೆಕೆಡಿಸಿಕೊಳ್ಳಲಿಲ್ಲ. ಅದನ್ನು ನೋಡಿ ಟ್ರಂಪ್ ಕೂಡ ತಲೆಕೆಡಿಸಿಕೊಳ್ಳಲಿಲ್ಲ.
ಆದರೆ ಈಗ ನೋಡಿ: ಬಡ ಪಾಕಿಸ್ತಾನೀಯರಿಗೆ ತಮ್ಮ ದೇಶದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣ ದಲ್ಲಿ ತೈಲ ನಿಕ್ಷೇಪವಿದೆ ಎಂಬುದನ್ನು ಟ್ರಂಪ್ ತೋರಿಸಿಕೊಟ್ಟರು.
ಅದನ್ನು ಒಂದು ದಿನ ಭಾರತಕ್ಕೆ ಮಾರಾಟ ಮಾಡುವ ಸಾಮರ್ಥ್ಯ ತಮಗಿದೆ ಎಂದು ಪಾಕಿಸ್ತಾನೀ ಯರು ಯೋಚನೆ ಕೂಡ ಮಾಡಿರಲಿಲ್ಲ. ಪಾಕಿಸ್ತಾನದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ತೈಲ ನಿಕ್ಷೇಪವಿದೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದು ಕೊಂಡಾಗಲೇ ಪಾಕ್‌ಗೆ ಆ ವಿಷಯ ತಿಳಿಯಿತು. ಬಹುಶಃ ಒಂದು ದಿನ ಭಾರತಕ್ಕೆ ಈ ತೈಲವನ್ನು ಪಾಕಿಸ್ತಾನ ಮಾರಾಟ ಮಾಡಬಹುದು ಎಂದೂ ಟ್ರಂಪ್ ಅವರೇ ಹೇಳಿದರು!
ಎಂಥಾ ದುರಂತ ನೋಡಿ. ಇವತ್ತಿಗೂ ಪಾಕಿಸ್ತಾನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಯದ್ವಾ ತದ್ವಾ ಕೊರತೆಯಿದೆ. ತೈಲ ಬೆಲೆ ಗಗನಕ್ಕೆ ಏರಿದೆ. ಅವರ ತೈಲೋತ್ಪಾದನೆ ಪ್ರಮಾಣ ಇತ್ತೀಚೆಗಷ್ಟೇ ಶೇ.11ರಷ್ಟು ಕುಸಿದಿದೆ. ಈಗ ಅವರಿಗೆ ಟ್ರಂಪ್ ಸಿಹಿಯಾದ ಕನಸು ತೋರಿಸುತ್ತಿದ್ದಾರೆ. ಪಾಕಿಸ್ತಾನ ವೀಗ ಮನಸ್ಸಿನಲ್ಲೇ ಮಂಡಿಗೆ ತಿನ್ನಲು ಆರಂಭಿಸಿರುತ್ತದೆ.
ನಮ್ಮಲ್ಲಿ ಭಾರೀ ತೈಲ ನಿಕ್ಷೇಪವಿದೆ, ನಾವು ಕೂಡ ಅರಬ್ ದೇಶದವರಂತೆ ಜಗತ್ತಿಗೆ ತೈಲೋತ್ಪನ್ನ ಮಾರಾಟ ಮಾಡಿ ಶ್ರೀಮಂತರಾಗಬಹುದು ಎಂದು ಪಾಕಿಗಳು ಲೆಕ್ಕಾಚಾರ ಹಾಕಲು ಶುರು ಮಾಡಿರುತ್ತಾರೆ. ಮುಂದೇನಾಗುತ್ತದೆ? ಇಡೀ ದೇಶ ಭ್ರಮೆಯಲ್ಲಿ ಮುಳುಗಿ ಒಂಥರಾ ಹುಚ್ಚ ನಂತಾಗುತ್ತದೆ ಎಂದು ನಿಮಗೆ ಅನ್ನಿಸುವುದಿಲ್ಲವೆ? ತಲೆಯಲ್ಲಿ ಸ್ವಲ್ಪವಾದರೂ ಬುದ್ಧಿಯಿದ್ದರೆ ಅಥವಾ ತಕ್ಕಮಟ್ಟಿಗೆ ಓದಿಕೊಂಡಿದ್ದರೆ ಯಾರಿಗೇ ಆದರೂ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತೆಗೆಯುವುದಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ಅರಿವಿರುತ್ತದೆ.
ಭಾರತದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಸದ್ಯಕ್ಕೆ 560ಮಿಲಿಯನ್ ಬ್ಯಾರಲ್ ಗಳಷ್ಟು ತೈಲ ಸಂಗ್ರಹ ವಿದೆ. ಆದರೆ ಪಾಕಿಸ್ತಾನದಲ್ಲಿ ಕೇವಲ 23.6 ಮಿಲಿಯನ್ ಬ್ಯಾರಲ್ ತೈಲ ಸಂಗ್ರಹವಿದೆ. ಅಂಕಿಅಂಶ ಗಳ ಪ್ರಕಾರ, 2025ರ ಫೆಬ್ರವರಿಯಲ್ಲಿ ಭಾರತ ಪ್ರತಿದಿನ 6 ಲಕ್ಷ ಬ್ಯಾರಲ್‌ಗಳಷ್ಟು ತೈಲ ಉತ್ಪಾದನೆ ಮಾಡಿದೆ.
ಅದೇ ವೇಳೆಯಲ್ಲಿ ಪಾಕಿಸ್ತಾನ ಪ್ರತಿದಿನ 68000 ಬ್ಯಾರಲ್ ಮಾತ್ರ ಉತ್ಪಾದನೆ ಮಾಡುತ್ತಿತ್ತು. ನಿಜ, ಈ ಹಿಂದೆಯೂ ಆಗಾಗ ಪಾಕಿಸ್ತಾನದಲ್ಲಿ ಅಗಾಧ ಪ್ರಮಾಣದ ತೈಲ ನಿಕ್ಷೇಪವಿದೆ ಎಂಬಂತಹ ಮಾತುಗಳು ಕೇಳಿಬರುತ್ತಿದ್ದವು. 2015ರಲ್ಲಿ ಅಮೆರಿಕದ ಇಂಧನ ಮಾಹಿತಿ ಆಡಳಿತ ಇಲಾಖೆಯು ಯಾವುದೇ ಸಮೀಕ್ಷೆ ಅಥವಾ ಅಧ್ಯಯನ ನಡೆಸದೆ, ಕೇವಲ ವಿಶ್ಲೇಷಣೆಯ ಆಧಾರದಲ್ಲಿ, ಪಾಕಿಸ್ತಾನದಲ್ಲಿ 9 ಬಿಲಿಯನ್ ಬ್ಯಾರಲ್‌ಗಳಷ್ಟು ತೈಲ ಸಂಗ್ರಹ ಇರಬಹುದು ಎಂದು ಅಂದಾಜು ಮಾಡಿತ್ತು.
ಆಶ್ಚರ್ಯಕರ ಸಂಗತಿ ಏನೆಂದರೆ, ಭಾರತದಲ್ಲಿ 3.8 ಬಿಲಿಯನ್ ಬ್ಯಾರಲ್ ತೈಲ ಸಂಗ್ರಹ ಇರಬಹುದು ಎಂದು ಅದೇ ಸಮೀಕ್ಷೆ ತಿಳಿಸಿತ್ತು. ಹೀಗಾಗಿ ಆಗಲೂ ಅಮೆರಿಕದ ಉದ್ದೇಶವೇನು ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಕೆಲವರು ಅದನ್ನು ಬಹಿರಂಗವಾಗಿಯೇ ಕೇಳಿದರು. ಆದರೆ ಯಾವುದೂ ಅಧ್ಯಯನಕ್ಕೆ ಒಳಪಟ್ಟು ಪ್ರಕಟಗೊಂಡ ಅಂಕಿ ಅಂಶ ಆಗಿರಲಿಲ್ಲವಾದ ಕಾರಣ ವಿವಾದ ವಿಕೋಪಕ್ಕೆ ಹೋಗಿರಲಿಲ್ಲ. ಜಗತ್ತಿಗೆ ಸತ್ಯ ತಿಳಿಯಲು ಕೆಲ ಸಮಯ ಬೇಕಾಯಿತು. ಈಗಲೂ ಇಲ್ಲಿರುವ ನಿಜವಾದ ಪ್ರಶ್ನೆಯೇನೆಂದರೆ, ಟ್ರಂಪ್ ಯಾವ ಸಂದೇಶ ರವಾನೆ ಮಾಡಲು ಯತ್ನಿಸುತ್ತಿದ್ದಾರೆ? ಅನುಮಾನವೇ ಬೇಡ, ಅವರು ಭಾರತವನ್ನು ಕೆಣಕಲು ಯತ್ನಿಸುತ್ತಿದ್ದಾರೆ.
ಪಾಕಿಸ್ತಾನದಲ್ಲಿರುವ ತೈಲವನ್ನು ಅಮೆರಿಕನ್ ಕಂಪನಿಗಳು ಹೊರ ತೆಗೆದು ಪಾಕಿಸ್ತಾನವನ್ನು ಶ್ರೀಮಂತ ದೇಶವನ್ನಾಗಿ ಮಾಡುತ್ತವೆ ಎಂದು ಅವರು ಹೇಳಿದ್ದಾರೆ. ಆದರೆ, ಹೀಗೆ ಕಾಗಕ್ಕ ಗೂಬಕ್ಕನ ಕತೆ ಹೇಳಿ ಭಾರತವನ್ನು ಕೆಣಕಲು ಸಾಧ್ಯವಿದೆಯೇ? ಅಮೆರಿಕದ ಹಾಲನ್ನು ಅಥವಾ ಡೈರಿ ಉತ್ಪನ್ನ ಗಳನ್ನು ಭಾರತ ಖರೀದಿಸುತ್ತದೆ ಎಂದು ಟ್ರಂಪ್ ಯಾವ ಲೆಕ್ಕದಲ್ಲಿ ನಂಬಿದ್ದಾರೆ? ಏರು ಧ್ವನಿಯಲ್ಲಿ ಹೇಳಿದಾಕ್ಷಣ ಅಮೆರಿಕದ ಹಾಲನ್ನು ಭಾರತ ಖರೀದಿಸುತ್ತದೆಯೇ? ಅಮೆರಿಕದಲ್ಲಿ ಹಸುಗಳಿಗೆ ಮಾಂಸದಿಂದ ತಯಾರಿಸಿದ ಹಿಂಡಿ ನೀಡುತ್ತಾರೆ.
ಹಸುಗಳು ಆರೋಗ್ಯವಾಗಿರಬೇಕು ಮತ್ತು ಹೆಚ್ಚು ಹಾಲು ಕೊಡಬೇಕು ಎಂದು ಹೀಗೆ ಮಾಡುತ್ತಾರೆ. ಅಂತಹ ಹಾಲನ್ನು ಭಾರತೀಯರು ಕುಡಿಯುತ್ತಾರೆಯೇ? ಬಹುಶಃ ಟ್ರಂಪ್‌ಗೆ ಭಾರತದ ಸಂಸ್ಕೃತಿ ಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ ದಲ್ಲಿದ್ದರೂ ಟ್ರಂಪ್ ಕಂಡ ಕನಸು ನನಸಾಗುವುದಕ್ಕೆ ಸಾಧ್ಯವೇ ಇಲ್ಲ. ನಾವು ‘ರಕ್ತಸಿಕ್ತ’ ಹಾಲು ಖಂಡಿತ ಕುಡಿಯುವುದಿಲ್ಲ! ಹೀಗಾಗಿಯೇ ಭಾರತ ಸರ್ಕಾರ ಟ್ರಂಪ್‌ಗೆ ತಲೆಬಾಗಲು ಸಿದ್ಧವಿಲ್ಲ. ಡಿಯರ್ ಸರ್, ಭಾರತ ಮತ್ತು ಅಮೆರಿಕದ ನಡುವೆ ಅಗಾಧವಾದ ಸಾಂಸ್ಕೃತಿಕ ಅಂತರವಿದೆ. ಹೀಗಾಗಿ ನಮ್ಮನ್ನು ಕೆಣಕಲು ಯತ್ನಿಸಬೇಡಿ!
ಯಾವ ದೇಶದ ಆರ್ಥಿಕತೆ ಸತ್ತಿದೆ? ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂದೂ ಟ್ರಂಪ್ ಹೇಳಿದ್ದಾರೆ. ‘ಭಾರತದ್ದು ಸತ್ತ ಆರ್ಥಿಕತೆ ಎಂಬುದು ಅವರ ವಿಶ್ಲೇಷಣೆ. ಈ ಮಾತು ಹೇಳುವುದಕ್ಕೆ ಮೊದಲು ಅವರು ಸ್ವಲ್ಪ ಅಂಕಿಅಂಶಗಳನ್ನು ಪರಿಶೀಲಿಸಬೇಕಿತ್ತು. ಭಾರತದ ಜಿಡಿಪಿ ಕಳೆದ 10 ವರ್ಷಗಳಲ್ಲಿ ಶೇ.105ರಷ್ಟು ಬೆಳೆದಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್ ) 2025 ಮತ್ತು 2026ರಲ್ಲಿ ಭಾರತದ ಆರ್ಥಿಕತೆ ಶೇ.6.4ರ ದರದಲ್ಲಿ ವೃದ್ಧಿಸುತ್ತದೆ ಎಂದು ಹೇಳಿದೆ. ಇದೇ 2025 ಮತ್ತು 2026ರಲ್ಲಿ ಅಮೆರಿಕದ ಆರ್ಥಿಕತೆ ಶೇ.1.9 ಮತ್ತು ಶೇ.2.0ದರದಲ್ಲಿ ಬೆಳವಣಿಗೆ ಹೊಂದುವ ಸಾಧ್ಯತೆಯಿದೆ.
ಭಾರತದ ಅಭಿವೃದ್ಧಿಯ ದರಕ್ಕೂ ಅಮೆರಿಕದ ಅಭಿವೃದ್ಧಿಯ ದರಕ್ಕೂ ಇರುವ ವ್ಯತ್ಯಾಸ ಗಮನಿಸಿ. ಅದಕ್ಕಿಂತ ಹೆಚ್ಚಾಗಿ, ಐಎಂಎಫ್ ಅಂದಾಜಿನ ಪ್ರಕಾರ ಈ ಅವಧಿಯಲ್ಲಿ ಜಗತ್ತಿನ ಆರ್ಥಿಕತೆ ಸರಾಸರಿ ಶೇ.3ರ ದರದಲ್ಲಿ ಬೆಳವಣಿಗೆ ಕಾಣಲಿದೆ. ಭಾರತದ ಅಭಿವೃದ್ಧಿ ದರ ಜಾಗತಿಕ ಸರಾಸರಿಗಿಂತ ದುಪ್ಪಟ್ಟಿದೆ. ಈ ಅಂಕಿಅಂಶಗಳು ಆರ್ಥಿಕವಾಗಿ ಭಾರತದ ಶಕ್ತಿಯೇನು ಎಂಬುದನ್ನು ತೋರಿಸು ತ್ತಿವೆ.
ಭಾರತ ಈ ವೇಗದಲ್ಲಿ ಅಭಿವೃದ್ಧಿ ಹೊಂದಿರದೆ ಇದ್ದಿದ್ದರೆ ನಾವಿಂದು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲು ಸಾಧ್ಯವಿತ್ತೆ? ಶೀಘ್ರದಲ್ಲೇ ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಯಾಗುವ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಟ್ರಂಪ್‌ಗೆ ಎದುರಾಗಿರುವ ನಿಜವಾದ ಭಯ ಇದು. ಚೀನಾ ಈಗಾಗಲೇ ಅಮೆರಿಕದ ವಿರೋಧಿ ಶಕ್ತಿಯಾಗಿದೆ.
ಈಗ ಭಾರತ ಕೂಡ ಭವಿಷ್ಯದ ಸವಾಲುಗಾರನಂತೆ ಬೆಳೆಯತೊಡಗಿದರೆ ಸೋಕಾಲ್ಡ್ ಸೂಪರ್ ಪವರ್ ರಾಷ್ಟ್ರಕ್ಕೆ ಬೇಸರವಾಗದೆ ಇರುತ್ತದೆಯೇ? ಹೀಗಾಗಿಯೇ ಟ್ರಂಪ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಿಕೊಳ್ಳಲು ಸಾಕಷ್ಟು ‘ಕೊಳಕು’ ಆಟವನ್ನೂ ಆಡುತ್ತಿದ್ದಾರೆ. ‘ಲಂಗಡಿ ಮಾರ‍್ನಾ ಅಂತ ಒಂದು ಆಟವಿದೆ. ಓಡುವ ಹುಡುಗರ ಕಾಲಿಗೆ ಕಿಡಿಗೇಡಿ ಬಾಲಕನೊಬ್ಬ ಕೋಲನ್ನು ಅಡ್ಡ ಇರಿಸಿ ಅವರನ್ನು ಬೀಳಿಸುವುದು. ಈಗ ಟ್ರಂಪ್ ಮಾಡುತ್ತಿರುವುದು ಅದನ್ನೇ. ಆದರೆ ನಾವು ಬೀಳುವವರಲ್ಲ!
ಹಾಗಂತ ಈ ಸಂದರ್ಭದಲ್ಲಿ ಭಾರತಕ್ಕೆ ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ನಾವು ಪರಿಸ್ಥಿತಿ ಯನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕು. ಯಾರು ಏನೇ ಹೇಳಿದರೂ ಅಮೆರಿಕ ವೆಂಬುದು ಇವತ್ತಿಗೂ ಜಾಗತಿಕ ಮಟ್ಟದಲ್ಲಿ ಅತ್ಯಂತ ಶಕ್ತಿಶಾಲಿ ಆರ್ಥಿಕತೆ. ಆ ದೇಶ ಬಹಿರಂಗವಾಗಿ ಪಾಕಿಸ್ತಾನ ದ ಬೆಂಬಲಕ್ಕೆ ನಿಲ್ಲುತ್ತದೆ ಅಂತಾದರೆ ನಮಗದು ದೊಡ್ಡ ತಲೆನೋವೇ ಆಗಬಹುದು. ಮೇಲಾಗಿ ಚೀನಾ ಈಗಾಗಲೇ ಪಾಕಿಸ್ತಾನದ ಜೊತೆ ಕೈಜೋಡಿಸಿದೆ. ಅಮೆರಿಕವೂ ಈ ಕೂಟಕ್ಕೆ ಸೇರಿ ಬಿಟ್ಟರೆ ತುಂಬಾ ಕಷ್ಟವಿದೆ. ಒಂದೇ ಒಂದು ಸಮಾಧಾನಕರ ಸಂಗತಿಯೆಂದರೆ ರಷ್ಯಾ ಇವತ್ತಿಗೂ ನಮ್ಮ ಜೊತೆಗೆ ನಿಂತಿದೆ.
ಭಾರತ ಮತ್ತು ರಷ್ಯಾ ನಡುವಿನ ಐತಿಹಾಸಿಕ ಸ್ನೇಹಕ್ಕೆ ಕಲ್ಲು ಹಾಕಲು ಸಾಕಷ್ಟು ಪ್ರಯತ್ನಗಳು ನಡೆದವು. ಈ ಸ್ನೇಹದ ಮೇಲೆ ಹಲವರ ವಕ್ರದೃಷ್ಟಿ ಬಿದ್ದಿತ್ತು. ಅದರ ಬಗ್ಗೆ ನಾವು ಎಷ್ಟು ಎಚ್ಚರಿಕೆ ಯಿಂದ ಇದ್ದರೂ ಸಾಲದು. ಸನ್ನಿವೇಶಗಳು ಸಂಕೀರ್ಣವೂ, ಕಷ್ಟಕರವೂ ಆಗಿವೆ. ಆದರೆ ಭಾರತಕ್ಕೆ ಅವೆಲ್ಲವನ್ನೂ ಮೀರಿ ಮುಂದೆ ಸಾಗುವ ಶಕ್ತಿಯಿದೆ.
ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಗೊತ್ತು. ಆದ್ದರಿಂದಲೇ ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಾ ಮುಂದೆ ಸಾಗುತ್ತಿರುವುದು. ಅಭಿವೃದ್ಧಿ ಹೊಂದಬೇಕು ಅಂದರೆ ಯಾವುದೇ ದೇಶಕ್ಕೆ ಹೆಚ್ಚು ಸ್ನೇಹಿತರು ಇರಬೇಕು ಮತ್ತು ಕಡಿಮೆ ಶತ್ರುಗಳು ಇರಬೇಕು. ಸ್ನೇಹ ವೃದ್ಧಿಸಿಕೊಳ್ಳಲು ಮಾತುಕತೆಗಿಂತ ಒಳ್ಳೆಯ ದಾರಿ ಯಾವುದಿದೆ?