ವಿದ್ಯಾರ್ಥಿ ದೆಸೆಯಿಂದಲೇ ಯಡಿಯೂರಪ್ಪ ಹೋರಾಟ
ಆರ್ಥಿಕವಾಗಿ ಸೀಮಿತ ಪರಿಸ್ಥಿತಿಯ ಬೆಳೆದ ಯಡಿಯೂರಪ್ಪನವರು ಬಾಲ್ಯದಿಂದಲೇ ಓದು ಮತ್ತು ಶಿಸ್ತು ಇವರ ಜೀವನದ ಪ್ರಮುಖ ಅಂಶವಾಗಿತ್ತು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಊರ ಪೂರ್ಣ ಗೊಳಿಸಿ. ನಂತರ ತಮ್ಮ ಉನ್ನತ ಶಿಕ್ಷಣವನ್ನು ಶಿವಮೊಗ್ಗ ನಗರದ ಎಲ್.ವಿ.ಡಿ. ಕಾಲೇಜಿನಲ್ಲಿ ಪೂರೈಸಿ ಬಿ.ಎ. ಪದವಿಯನ್ನು ಪಡೆದರು.
-
ಅರುಣ್ ಶಹಾಪೂರ
ವಿಧಾನ ಪರಿಷತ್ ಮಾಜಿ ಸದಸ್ಯರು
ಹೋರಾಟದಿಂದಲೇ ಮುಖ್ಯಮಂತ್ರಿ ಗದ್ದುಗೆವರೆಗೆ ಬಿಎಸ್‌ವೈ ಪಯಣ
ತಳಮಟ್ಟದಿಂದ ಬಿಜೆಪಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಕೀರ್ತಿ
ಬಿ.ಎಸ್.ಯಡಿಯೂರಪ್ಪ ಅವರು ಫೆಬ್ರವರಿ 27, 1943ರಂದು ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮ ದಲ್ಲಿ ಜನಿಸಿದರು. ಅವರ ಕುಟುಂಬ ಕೃಷಿ ಹಿನ್ನೆಲೆಯದ್ದಾಗಿದ್ದು ಸರಳ ಜೀವನ ಶೈಲಿಯಿಂದ ಕೂಡಿತ್ತು. ತಂದೆ-ಸಿದ್ದಲಿಂಗಯ್ಯ, ತಾಯಿ- ಪುತ್ತತಾಯಮ್ಮ ಇವರು ಶ್ರಮ ಮತ್ತು ನೈತಿಕ ಮೌಲ್ಯ ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಆರ್ಥಿಕವಾಗಿ ಸೀಮಿತ ಪರಿಸ್ಥಿತಿಯ ಬೆಳೆದ ಯಡಿಯೂರಪ್ಪನವರು ಬಾಲ್ಯದಿಂದಲೇ ಓದು ಮತ್ತು ಶಿಸ್ತು ಇವರ ಜೀವನದ ಪ್ರಮುಖ ಅಂಶವಾಗಿತ್ತು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಊರ ಪೂರ್ಣಗೊಳಿಸಿ. ನಂತರ ತಮ್ಮ ಉನ್ನತ ಶಿಕ್ಷಣವನ್ನು ಶಿವಮೊಗ್ಗ ನಗರದ ಎಲ್.ವಿ.ಡಿ. ಕಾಲೇಜಿ ನಲ್ಲಿ ಪೂರೈಸಿ ಬಿ.ಎ. ಪದವಿಯನ್ನು ಪಡೆದರು.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ: ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜದ ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಹಲವು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ನಂತರದ ದಿನಗಳಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆ ಸಂಪರ್ಕ ಹೊಂದಿದರು. ಇದು ಅವರ ಜೀವನದ ವ್ಯಕ್ತಿತ್ವ ಮತ್ತು ನಾಯಕತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ನಂತರ ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿದರು.
ಜೀತ ಪದ್ಧತಿ ವಿರುದ್ಧ ಧ್ವನಿ: ಯಡಿಯೂರಪ್ಪ ಅವರ ಜೀವನದಲ್ಲಿ ಜೀತ ಪದ್ಧತಿ ವಿರುದ್ಧದ ಹೋರಾಟ ಒಂದು ಮಹತ್ವದ ಅಧ್ಯಾಯವಾಗಿದೆ. ಅವರು ಸಾಮಾನ್ಯ ರೈತ ಕುಟುಂಬದಿಂದ ಬಂದವರು. ಬಾಲ್ಯದಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ಅವರು ನೇರವಾಗಿ ಕಂಡಿದ್ದರು. ಬಡವರು ಶ್ರೀಮಂತರ ಮನೆಗಳಲ್ಲಿ ಅಥವಾ ಜಮೀನಿನಲ್ಲಿ ಕಡಿಮೆ ವೇತನಕ್ಕೆ ಅಥವಾ ವೇತನವಿಲ್ಲದೆ ಕೆಲಸ ಮಾಡುವ ದಾಸ್ಯ ವ್ಯವಸ್ಥೆಯ ವಿರುದ್ಧ ಅವರು ಹೋರಾಟ ಆರಂಭಿಸಿದರು.
ಇದನ್ನೂ ಓದಿ: Celebration of Yediyurappa: ಪಕ್ಷ ಕಟ್ಟಿದ ಧೀಮಂತ ನಾಯಕ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ : ಸಿ.ಮುನಿರಾಜು
ಕಾರ್ಮಿಕರಲ್ಲಿ ಜಾಗೃತಿ: ಗ್ರಾಮಗಳಲ್ಲಿನ ಜನರನ್ನು ಸಂಘಟಿಸಿ, ಜೀತಕ್ಕೆ ಒಳಗಾಗಿದ್ದ ಕಾರ್ಮಿಕ ರಲ್ಲಿ ಜಾಗೃತಿ ಮೂಡಿಸಿ ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ ಎಂಬ ಸಂದೇಶವನ್ನು ಸಾರಿದರು. ಬಡ ರೈತರು ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿ ಸರಿಯಾದ ಕೂಲಿ ಮತ್ತು ಮಾನವೀಯ ಜೀವನದ ಹಕ್ಕಿಗಾಗಿ ಸಮಾಜದಲ್ಲಿ ಸಮಾನತೆ ಮತ್ತು ಗೌರವದ ಅರಿವು ಮೂಡಿಸುವ ಕಾರ್ಯವನ್ನು ಅವರು ಮುಂದುವರಿಸಿದರು. ಈ ಹೋರಾಟದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜೀತ ಪದ್ಧತಿಯ ವಿರುದ್ಧ ಜಾಗೃತಿ ಹೆಚ್ಚಿತು.
ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿದರು. ಇದು ಯಡಿಯೂರಪ್ಪನವರ ರಾಜಕೀಯ ಜೀವನಕ್ಕೂ ದಿಕ್ಕು ನೀಡಿತು ಮತ್ತು ಜನರು ಅವರನ್ನು ಜನನಾಯಕನನ್ನಾಗಿ ನೋಡಿದರು. ಮೊದಲ ಸ್ಪರ್ಧೆಯಲ್ಲೇ ವಿಧಾನಸೌಧ ಪ್ರವೇಶ: ಬಿ.ಎಸ್.ಯಡಿಯೂರಪ್ಪನವರು 1983ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಪಕ್ಷದ ಸಂಘಟನೆಗೆ ತಳಮಟ್ಟದಿಂದ ಕೆಲಸ ಮಾಡಿ ಬಾರಿ ಜನ ಬೆಂಬಲವನ್ನು ಗಳಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವುದು ಅಷ್ಟು ಸುಲಭವಾಗಿರಲಿಲ್ಲ. ದಕ್ಷಿಣ ಭಾರತದಲ್ಲಿ ನ್ಯಾಷನಲ್ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವೂ ಹೆಚ್ಚಿತ್ತು. ಆದರೂ ಯಡಿಯೂರಪ್ಪನವರು ಗ್ರಾಮ ಮಟ್ಟದಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.
2007ರಲ್ಲಿ ಮೊದಲ ಬಾರಿ ಜೆಡಿಎಸ್ ಜೊತೆಗಿನ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ಅವರು ಮೈತ್ರಿ ಪಕ್ಷದ ಬೆಂಬಲ ಹಿಂಪಡೆಯುವಿಕೆ ಮತ್ತು ರಾಜಕೀಯ ಒಪ್ಪಂದ ಮುರಿದು ಹೋದ ಕಾರಣ ಅಲ್ಪ ಅವಧಿಯ ಸ್ಥಾನ ತ್ಯಜಿಸಬೇಕಾಯಿತು. ನಂತರ 2008ರಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡನೆಯ ಬಾರಿ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಿದರು.
ನಂತರ 2018ರಲ್ಲಿ ಮೂರನೇ ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಂತದಲ್ಲಿ ರಾಜಕೀಯ ಒತ್ತಡ, ಆಂತರಿಕ ಕಲಹಗಳು, ಆರೋಪಗಳು, ಕಾನೂನು ಸವಾಲುಗಳ ಮಧ್ಯೆ ಕೆಲವೇ ದಿನಗಳಲ್ಲಿ ತಮ್ಮ ಸ್ಥಾನವನ್ನು ತ್ಯಜಿಸಬೇಕಾಯಿತು. ನಂತರ 2019ರಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಸ್ವೀಕರಿಸಿ 2021ರವರೆಗೆ ಜನಪರ ಆಡಳಿತವನ್ನು ನಡೆಸಿ ದರು. ಪ್ರಸ್ತುತ ಬಿ.ಎಸ್ ಯಡಿಯೂರಪ್ಪನವರು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆಯಿಂದ ಬದುಕ ಹಸನು: ಅಧಿಕಾರಕ್ಕೆ ಬಂದ ಬಳಿಕ ಭಾಗ್ಯಲಕ್ಷ್ಮಿ ಯೋಜನೆ, ರೈತರ ಸಾಲ ಮನ್ನಾ, ಕೃಷಿ ಬಜೆಟ್, ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಭಾಗ್ಯಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಳಪಟ್ಟಿರುತ್ತದೆ.
ಇದು ವಿಶೇಷವಾಗಿ ಬಡ ಕುಟುಂಬಗಳ ಹೆಣ್ಣುಮಕ್ಕಳ ಭವಿಷ್ಯದ ಭದ್ರತೆಗಾಗಿ ರೂಪಿಸಲಾಗಿದೆ. ಈ ಯೋಜನೆ 2006ರಲ್ಲಿ ಪ್ರಾರಂಭಗೊಳ್ಳುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮೊದಲನೇ ಹೆಣ್ಣು ಮಗುವಿಗೆ 19300 ರು. ಎರಡನೇ ಹೆಣ್ಣು ಮಗುವಿಗೆ 18,350 ರು.ರಂತೆ ಠೇವಣಿ ಮಾಡಿ ಮಗುವಿಗೆ 18 ವರ್ಷಗಳು ತುಂಬಿದ ನಂತರ ಒಂದು ಲಕ್ಷ ರೂಪಾಯಿ ನಗದು ಹಣ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಹೆಣ್ಣುಮಗುವಿನ ಜನನವನ್ನು ಉತ್ತೇಜಿಸುವುದು, ಹೆಣ್ಣು ಭ್ರೂಣಲಿಂಗ ಹತ್ಯೆಯನ್ನು ತಡೆಯುವುದು, ಬಾಲ್ಯ ವಿವಾಹವನ್ನು ನಿಲ್ಲಿಸುವುದು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಭದ್ರತೆಯನ್ನು ಒದಗಿಸುವುದು.
ರೈತರು ತೆಗೆದುಕೊಂಡಿರುವ ಕೃಷಿ ಸಾಲವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ರದ್ದುಪಡಿಸುವ ಯೋಜನೆಯಾಗಿದೆ. ಇದು ವಿಶೇಷವಾಗಿ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವನ್ನು ಒದಗಿಸಲು ರೂಪಿಸಲಾಗಿದೆ. ರೈತರು ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸರಕಾರ ವೇ ತೀರಿಸಿ, ರೈತನನ್ನು ಸಾಲಭಾರದಿಂದ ಮುಕ್ತಗೊಳಿಸಲಾಗುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶ ರೈತರ ಸಾಲಭಾರ ಕಡಿಮೆ ಮಾಡುವುದು, ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಸ್ಥಿರತೆ ತರುವುದು, ರೈತರ ಆತ್ಮಹತ್ಯೆ ಮತ್ತು ಸಂಕಷ್ಟಗಳನ್ನು ಕಡಿಮೆ ಮಾಡುವುದು, ರೈತರ ಜೀವನಮಟ್ಟ ಸುಧಾರಿಸುವುದು.
ರೈತರಿಗೆ ಮನ ಮಿಡಿಯುವ ನಾಯಕ: ಯಡಿಯೂರಪ್ಪನವರ ಕೃಷಿ ಬಜೆಟ್ ಕರ್ನಾಟಕದಲ್ಲಿ ಬಹಳ ವಿಶೇಷವಾಗಿದೆ. ಅವರು ತಮ್ಮ ಬಜೆಟ್‌ಗಳಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಒತ್ತು ನೀಡಿ, ರೈತರ ಅಭಿವೃದ್ಧಿಯನ್ನು ಮುಖ್ಯಗುರಿಯನ್ನಾಗಿ ಮಾಡಿಕೊಂಡಿದ್ದರು. ಇದು ಕರ್ನಾಟಕದಲ್ಲಿ ಕೃಷಿಯ ಮಹತ್ವವನ್ನು ಹೆಚ್ಚಿಸುವುದರ ಜೊತೆಗೆ ದೇಶದೆಡೆ ಮಾದರಿಯಾಯಿತು. 2011-12ರ ಕೃಷಿ ಬಜೆಟ್ಟಿ ನಲ್ಲಿ ಸುಮಾರು 17000 ಕೋಟಿ ಹಣವನ್ನು ಹಾಗೆ 2020-21ರ ಬಜೆಟ್ ನಲ್ಲಿ 25000 ಕೋಟಿ ಒಟ್ಟು 37000 ಕೋಟಿ ಮೀಸಲಿರಿಸಲಾಯಿತು.
ತುಂಗಭದ್ರಾ, ಕಾವೇರಿ ಹೀಗೆ ಅನೇಕ ಪ್ರಮುಖ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ವನ್ನು ನೀಡಲಾಯಿತು. ಇದರ ಮುಖ್ಯ ಉದ್ದೇಶ ರೈತರ ತಲಾ ಆದಾಯವನ್ನು ಹೆಚ್ಚಿಸು ವುದು, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸುವುದು, ಗ್ರಾಮೀಣ ಪ್ರದೇಶದ ಆರ್ಥಿಕತೆ ಯನ್ನು ಬಲಪಡಿಸುವುದು, ಕೃಷಿ ಹಾಗೂ ನೀರಾವರಿ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸು ವುದು, ಪ್ರಕೃತಿ ವಿಪತ್ತುಗಳಿಂದ ರೈತರ ರಕ್ಷಣೆ ಮಾಡುವುದು.
ಬಿ.ಎಸ್.ಯಡಿಯೂರಪ್ಪನವರ ಆಡಳಿತ ಅವಧಿಯಲ್ಲಿ ಮುಖ್ಯವಾಗಿ 2008-2011 ಮತ್ತು 2019-2021 ಮಠ-ಮಂದಿರ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಅನುದಾನ ಹಾಗೂ ಪ್ರೋತ್ಸಾಹ ನೀಡುವ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಡಿಯೂರಪ್ಪನವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ ಗುರುತು ಮೂಡಿಸಿದ ನಾಯಕರಲ್ಲಿ ಪ್ರಮುಖರು. ಸಾಮಾನ್ಯ ರೈತ ಕುಟುಂಬದಿಂದ ಪ್ರಾರಂಭಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಏರಿದ ಅವರ ಜೀವನಯಾನ ಅನೇಕ ಜನರಿಗೆ ಪ್ರೇರಣೆಯಾಗಿದೆ.
ಪರಿಶ್ರಮ, ಧೈರ್ಯ ಮತ್ತು ಜನಸೇವೆ ಎಂಬ ಮೌಲ್ಯಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ಅವರು ಜನರ ವಿಶ್ವಾಸವನ್ನು ಗಳಿಸಿದರು. ಅವರ ಆಡಳಿತಾವಧಿಯಲ್ಲಿ ಕೃಷಿ, ಗ್ರಾಮೀಣ ಅಭಿವೃದ್ಧಿ, ಮೂಲಸೌಕರ್ಯ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದರು. ರೈತರ ಸಾಲಮನ್ನಾ, ಭಾಗ್ಯಲಕ್ಷ್ಮಿ ಯೋಜನೆ, ಆಶ್ರಯ ಯೋಜನೆಗಳಂತಹ ಕ್ರಮಗಳು ಜನಜೀವನದ ಮೇಲೆ ಸ್ಪಷ್ಟ ಪರಿಣಾಮ ಬೀರಿವೆ. ವಿಶೇಷ ವಾಗಿ ರೈತರ ಸಮಸ್ಯೆಗಳ ಬಗ್ಗೆ ಅವರು ತೋರಿದ ಕಾಳಜಿ ಗಮನಾರ್ಹವಾಗಿದೆ.
ಇಂದಿಗೂ ನೆನಪು ಉಚಿತ ಬೈಸಿಕಲ್ ಯೋಜನೆ
ಉಚಿತ ಬೈಸಿಕಲ್ ವಿತರಣಾ ಯೋಜನೆ ಎಂಬುದು ಸರಕಾರ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿ ಸಲು ಮತ್ತು ಶಾಲೆಯನ್ನು ತೊರೆಯುವ ವಿದ್ಯಾರ್ಥಿಗಳ ಪ್ರಮಾಣವನ್ನು ಕಡಿಮೆ ಮಾಡಲು ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದ ಪ್ರಮುಖ ಯೋಜನೆಯಾಗಿದೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆಂದೇ ವಿಶೇಷವಾಗಿ ರೂಪಿಸಿದ ಯೋಜನೆಯಾಗಿದೆ.
ಇದರ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಾಲೆಗೆ ಸುಲಭವಾಗಿ ಹೋಗಲು ಸಹಾಯ ಮಾಡುವುದು, ವಿಶೇಷವಾಗಿ ಹುಡುಗಿಯರ ಶಿಕ್ಷಣವನ್ನು ಉತ್ತೇಜಿಸುವುದು, ಶಾಲೆಗೆ ನಿರಂತರ ಹಾಜರಾತಿಯನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಸುವುದು.
ಛಲ ಬಿಡದ ಧೈರ‍್ಯವಂತರು ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ವಿವಾದಗಳು ಮತ್ತು ಸವಾಲುಗಳೂ ಇದ್ದವು. ಆದರೆ ಅವುಗಳ ನಡುವೆಯೂ ಅವರು ತಮ್ಮ ನಾಯಕತ್ವವನ್ನು ಸ್ಥಿರವಾಗಿ ಮುಂದು ವರಿಸಿಕೊಂಡು ಹೋಗಿದ್ದಾರೆ. ಇದು ಅವರ ಧೈರ್ಯ ಮತ್ತು ರಾಜಕೀಯ ಚಾತುರ್ಯವನ್ನು ತೋರಿಸುತ್ತದೆ. ಒಟ್ಟಿನಲ್ಲಿ, ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರ ವಲ್ಲ, ಜನಪರ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ನಾಯಕ. ಅವರ ಸಾಧನೆಗಳು ಮತ್ತು ಹೋರಾಟಗಳು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ವಾಗುತ್ತವೆ.