ಸಹಾಯಹಸ್ತ ಚಾಚುವ ಮುನ್ನ ಎಚ್ಚರ... ಎಚ್ಚರ!
ಕಷ್ಟದಲ್ಲಿರುವವರನ್ನು ಕಂಡಾಗ ಅನುಕಂಪ ತೋರಿಸಿ ಸಹಾಯ ಮಾಡುವುದು ನಿಮ್ಮ ಒಳ್ಳೆಯತನ ಮತ್ತು ಕನಿಕರವನ್ನು ತೋರಿಸುತ್ತದೆ. ಹೀಗೆ ಸಹಾಯ ಮಾಡುವುದರಿಂದ ನಿಮಗೆ ಸಂತೋಷ ಮತ್ತು ಸಮಾಧಾನ ಆಗುತ್ತಗೆಯೆಂದು ಭಾವಿಸುತ್ತೇನೆ. ಒಂದು ವೇಳೆ ನೀವು ಸಹಾಯ ಮಾಡಲಿಲ್ಲವೆಂದರೆ ಬಹುಶಃ ನಿಮಗೆ ಬೇಸರವೆನಿಸಿ ಪಾಪಪ್ರಜ್ಞೆಯಿಂದ ಪಶ್ಚಾತ್ತಾಪ ಪಡಬಹುದಲ್ಲವೇ ?