ಯುವಕರಿಗೆ ಕೋಲುಗಳನ್ನು ವಿತರಿಸಿದ ಉತ್ತರ ಪ್ರದೇಶ ಸಚಿವರು!
Suheldev Bharatiya Samaj Party: ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ಭರ್, ತಮ್ಮ ಪಕ್ಷದಿಂದ ರಚಿಸಲ್ಪಟ್ಟ ರಾಷ್ಟ್ರೀಯ ಸುಹೇಲ್ದೇವ್ ಸೇನೆಯ 2,500ಕ್ಕೂ ಹೆಚ್ಚು ಯುವಕರಿಗೆ ಸ್ವರಕ್ಷಣೆಗೆ ಕೋಲುಗಳನ್ನು ವಿತರಿಸಿದ್ದಾರೆ. ಈ ಕ್ರಮವು ಯುವಕರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಲು, ಶಾರೀರಿಕ ಹಾಗೂ ಮಾನಸಿಕವಾಗಿ ಸಜ್ಜಾಗಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.