ಗ್ರಾಮೀಣ ನಾಟಕಗಳ ಪ್ರಚಾರಕ್ಕೂ ಎಐ ಬಳಕೆ
ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನ ಕಾಣುತ್ತಿರುವ ಗುಳೇದಗುಡ್ಡದ ಸಂಗಮೇಶ್ವರ ನಾಟ್ಯ ಸಂಘದಿಂದ ಪಕ್ಕದ ಮನಿ ಚಂದ್ರಿ, ನೋಡಾಕ ನೀ ಸುಂದ್ರಿ ನಾಟಕ ಹಾಗೂ ಕೆಬಿಆರ್ ಡ್ರಾಮಾ ಕಂಪನಿ ಯ ಗಿಚ್ಚ ಗಿಲಿಗಲಿ ನಾಯಕಿ ಸೇರಿದಂತೆ ವಿವಿಧ ಅನೇಕ ಕಂಪನಿಗಳು ಎಐ ತಂತ್ರಜ್ಞಾನಗಳನ್ನು ಬಳಸಿ ಪ್ರಚಾರ ಕೈಗೊಂಡಿದ್ದು, ಇದಕ್ಕೆ ಲಕ್ಷಗಟ್ಟಲೇ ಜನರು ವೀಕ್ಷಣೆ ಮಾಡಿದ್ದಾರೆ. ಎಐ ಪ್ರಚಾರದ ವಿಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಇಲ್ಲಿಯವರೆಗೆ 24 ಲಕ್ಷಕ್ಕಿಂತ ಹೆಚ್ಚಿನ ಜನರು ವಿಡಿಯೊ ವೀಕ್ಷಿಸಿದ್ದಾರೆ.