ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagalakote Crime News: ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ರೂಪಾ ಹನುಮಂತಗೌಡರ (27) ಎಂಬ ಮಹಿಳೆ ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಬಾಗಲಕೋಟೆ ಮಹಿಳೆ ಆತ್ಮಹತ್ಯೆ ಯತ್ನ -

ಹರೀಶ್‌ ಕೇರ
ಹರೀಶ್‌ ಕೇರ Feb 2, 2026 9:33 AM

ಬಾಗಲಕೋಟೆ, ಫೆ.2 : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಾಗಲಕೋಟೆ (Bagalakote Crime News) ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಮೂವರು ಮಕ್ಕಳನ್ನು ಸ್ವತಃ ತಾಯಿಯೇ ನೇಣು ಬಿಗಿದು (murder) ಕೊಲೆಗೈದು, ತಾನೂ ಆತ್ಮಹತ್ಯೆಗೆ (Self harming) ಯತ್ನಿಸಿದ ದಾರುಣ ಘಟನೆ ನಡೆದಿದೆ.

ರೂಪಾ ಹನುಮಂತಗೌಡರ (27) ಎಂಬ ಮಹಿಳೆ ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರೂಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದು ಮಹಿಳೆ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅತ್ಯಾಚಾರ, ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಮನೆಗೆಲಸದಾತ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಳಿಕ ವ್ಯಕ್ತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಜಧಾನಿಯಲ್ಲಿ (Bengaluru crime news) ನಡೆದಿದೆ. ಮನೆಗೆಲಸದವನೇ ಮನೆಯ ಮಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ಬಳಿಕ ತಾನೂ ಸತ್ತಿದ್ದಾನೆ.

ಕೊಟ್ಟೂರು ತ್ರಿವಳಿ ಕೊಲೆ ಕೇಸ್‌ಗೆ ಟ್ವಿಸ್ಟ್; ಹಣಕ್ಕಾಗಿ ಮಾವನ ಜತೆ ಸೇರಿ ಸ್ವಂತ ಕುಟುಂಬವನ್ನೇ ಕೊಂದ ಕಿರಾತಕ!

ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನು ಅತ್ಯಾಚಾರವೆಸಗಿ, ಬಳಿಕ ನೇಣು ಬಿಗಿದುಕೊಂಡು ಆರೋಪಿ ದೇವರಾಜು (50) ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜು ಮನೆಗೆಲಸ ಮಾಡುತ್ತಿದ್ದ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಕೃತ್ಯ ನಡೆದಾಗ ಮನೆಯ ಮೊದಲ ಮಹಡಿಯಲ್ಲಿ ಮಹಿಳೆಯ ಪುತ್ರಿ ಇದ್ದರು. ಮುಂಜಾನೆ ಮಹಿಳೆಯ ಪತಿ ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.