ಮೂರು ಹುದ್ದೆಗೆ 108 ಅರ್ಜಿ ಸಲ್ಲಿಕೆ
ರಾಜ್ಯ ಸರಕಾರ ಮೊದಲ ಹಂತದಲ್ಲಿ ಏಳು ಮಂದಿಯನ್ನು ಆಯುಕ್ತರ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಆದರೀಗ ಖಾಲಿಯಿರುವ ಮೂರು ಸ್ಥಾನಕ್ಕೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಹಿಂದೆ ನ್ಯಾಯಾಂಗ ವ್ಯವಸ್ಥೆ ಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಆರ್ ಟಿಐ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದವರು ಅರ್ಜಿ ಸಲ್ಲಿಸುತ್ತಿದ್ದರು. ಆದರೀಗ ಈ ಅನುಭವ ಇಲ್ಲದ ಅನೇಕರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.


ಅಪರ್ಣಾ ಎ.ಎಸ್
ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಭಾರಿ ಬೇಡಿಕೆ
62 ಮಂದಿ ಬೆಂಗಳೂರಿನವರಿಂದಲೇ ಅರ್ಜಿ ಸಲ್ಲಿಕೆ
ಪಾರದರ್ಶಕ ಆಡಳಿತವನ್ನು ನೀಡಬೇಕೆಂಬ ಉದ್ದೇಶದಿಂದ ಜಾರಿಯಾಗಿರುವ ಮಾಹಿತಿ ಹಕ್ಕು ಕಾಯಿದೆಯ ಹಿತಾಸಕ್ತಿ ಕಾಪಾಡಲು ರೂಪುಗೊಂಡಿರುವ ಆರ್‌ಟಿಐ ಆಯೋಗದ ಆಯುಕ್ತ ಸ್ಥಾನಕ್ಕೆ ಭಾರಿ ಬೇಡಿಕೆಯಿದ್ದು, ಖಾಲಿಯಿರುವ ಮೂರು ಸ್ಥಾನಕ್ಕೆ 108 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರಕಾರ ಮೊದಲ ಹಂತದಲ್ಲಿ ಏಳು ಮಂದಿಯನ್ನು ಆಯುಕ್ತರ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಆದರೀಗ ಖಾಲಿಯಿರುವ ಮೂರು ಸ್ಥಾನಕ್ಕೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಹಿಂದೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಆರ್ ಟಿಐ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದವರು ಅರ್ಜಿ ಸಲ್ಲಿಸುತ್ತಿದ್ದರು. ಆದರೀಗ ಈ ಅನುಭವ ಇಲ್ಲದ ಅನೇಕರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಆರ್‌ಟಿಐ ಆಯುಕ್ತರ ಸ್ಥಾನಕ್ಕೆ ನಿರ್ದಿಷ್ಠ ಮಾರ್ಗಸೂಚಿಗಳಿಲ್ಲದಿದ್ದರೂ, ಮಾಹಿತಿ ಹಕ್ಕು ಕಾಯಿದೆ ಹಾಗೂ ಕಾನೂನಿನ ಬಗ್ಗೆ ಅರಿವಿರಬೇಕು. ಸಮಾಜ ಸೇವೆ, ಪತ್ರಿಕೋದ್ಯಮ, ನ್ಯಾಯಾಂಗ, ತಂತ್ರ ಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಜ್ಞಾನವಿರುವ ಹಾಗೂ ಸಾಮಾಜಿಕ ಕಳಕಳಿಯಿರುವವರನ್ನು ಸರಕಾರ ನೇಮಿಸಬೇಕು ಹಾಗೂ 65 ವರ್ಷದೊಳಗಿನವರಿಗೆ ಅವಕಾಶ ನೀಡಬೇಕು ಎನ್ನುವ ನಿಯಮ ಕಾಯಿದೆಯಲ್ಲಿದೆ.
ಇದನ್ನೂ ಓದಿ: Vishweshwar Bhat Column: ಕೊನೆಗೂ ಗಡ್ಡ ಕೆರೆದ ನಂತರವೇ ಆತ ನೇಣಿಗೆ ಕೊರಳು ಕೊಟ್ಟ !
ಆದರೆ ನಿರ್ದಿಷ್ಠ ಮಾನದಂಡಗಳಿಲ್ಲದೇ ಇರುವುದು, ಈ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಲು ಕಾರಣ ಎನ್ನಲಾಗಿದೆ. ಇದರೊಂದಿಗೆ ಆರ್‌ಟಿಐ ಆಯುಕ್ತರ ಹುದ್ದೆ ಆಯಕಟ್ಟಿನ ಹುದ್ದೆಯಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ದೊಡ್ಡಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಬೆಂಗಳೂರಿನವರೇ ಅತಿಹೆಚ್ಚು: ಇನ್ನು ಆರ್‌ಟಿಐ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ಅರ್ಜಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದರೂ, ಅತಿಹೆಚ್ಚು ಅರ್ಜಿ ಸಲ್ಲಿಕೆಯಾಗಿರುವುದು ರಾಜ ಧಾನಿ ಬೆಂಗಳೂರಿನಲ್ಲಿ. ಇರುವ ಮೂರು ಹುದ್ದೆಗಳಿಗೆ 108 ಜನರು ಆಸಕ್ತಿ ತೋರಿಸಿದ್ದು, ಇದರಲ್ಲಿ 64 ಅರ್ಜಿಗಳು ಬೆಂಗಳೂರಿನ ಅಭ್ಯರ್ಥಿಗಳು ಸಲ್ಲಿಸಿದ್ದಾರೆ.
ಇನ್ನುಳಿದಂತೆ ಬೆಳಗಾವಿಯಿಂದ ಏಳು, ಮೈಸೂರಿನಿಂದ ಆರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅತಿ ಕಡಿಮೆ ಅಂದರೆ ಕೊಡಗು ಹಾಗೂ ದಕ್ಷಿಣ ಕನ್ನಡದಿಂದ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ. 10ಕ್ಕೂ ಅಧಿಕ ಜಿಲ್ಲೆಗಳಿಂದ ಯಾವುದೇ ರೀತಿಯ ಅರ್ಜಿಗಳು ದಾಖಲಾಗಿಲ್ಲ ಎನ್ನುವು ಗಮನಾರ್ಹ ಅಂಶವಾಗಿದೆ.
ಆರ್‌ಟಿಐ ಅರ್ಜಿಯನ್ನೇ ಸಲ್ಲಿಸದ ಅನೇಕರಿಂದ ಅರ್ಜಿ ಸಲ್ಲಿಕೆ: ಆದರೆ ಆಯುಕ್ತರಾಗಲು ಅರ್ಜಿ ಸಲ್ಲಿಸಿರುವವರ ಸಂಖ್ಯೆ ದೊಡ್ಡದಾಗಿದ್ದರೂ, ಇವರಲ್ಲಿ ಬಹುತೇಕರು ಆರ್‌ಟಿಐ ಅರ್ಜಿ ಸಲ್ಲಿಸಿದ ಅಥವಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಹೆಸರು ಹೆಚ್ಚಾಗಿ ಕಾಣಿಸುತ್ತಿಲ್ಲ.
ಆರಂಭದ ದಿನದಲ್ಲಿ ಈ ಹುದ್ದೆಗೆ ನಿವೃತ್ತ ನ್ಯಾಯಾಧೀಶರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅರ್ಜಿ ಸಲ್ಲಿಸಿರುವ ಅನೇಕರು ಈವರೆಗೆ ಒಂದೇ ಒಂದು ಆರ್‌ಟಿಐ ಅರ್ಜಿ ಸಲ್ಲಿಸಿಲ್ಲ. ಈ ಹುದ್ದೆಯ ಮೌಲ್ಯವನ್ನೇ ಅರಿಯದ ಅನೇಕರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾತುಗಳನ್ನು ಆರ್‌ಟಿಐ ಕಾರ್ಯಕರ್ತರು ಹೇಳಿದ್ದಾರೆ.
ಯಾರಿಗೆಲ್ಲ ಅವಕಾಶವಿಲ್ಲ?
ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ಪರಿಷತ್‌ನ ಸದಸ್ಯರಾಗಿರಬಾರದು
ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು
ಯಾವುದೇ ರಾಜಕೀಯ ಪಕ್ಷದೊಂದಿಗೆ ಸಕ್ರಿಯವಾಗಿ ಕಾಣಿಸಿಕೊಂಡಿರಬಾರದು
ಯಾವುದೇ ಉದ್ದಿಮೆ ಅಥವಾ ಯಾವುದೇ ರೀತಿಯ ಹುದ್ದೆಯಲ್ಲಿರಬಾರದು
*
ಆರ್‌ಟಿಐ ಅರ್ಜಿ ಸಲ್ಲಿಸದೇ ಇರುವ ಅನೇಕರಿಂದ ಆಯುಕ್ತ ಹುದ್ದೆಗೆ ಅರ್ಜಿ ಸಲ್ಲಿಕೆ
ಆಯುಕ್ತ ಸ್ಥಾನಕ್ಕೆ ಅರ್ಜಿಯನ್ನೇ ಸಲ್ಲಿಸದ 10ಕ್ಕೂ ಅಧಿಕ ಜಿಲ್ಲೆಯ ಮಂದಿ
ಪತ್ರಕರ್ತರ ಕೋಟಾದಲ್ಲಿ ಮತ್ತಷ್ಟು ಮಂದಿಯಿಂದ ಅರ್ಜಿ ಸಲ್ಲಿಕೆ
ಆಯುಕ್ತರ ನೇಮಕಕ್ಕೆ ಸರಕಾರದ ಮೇಲೆ ಹೆಚ್ಚಿದ ರಾಜಕೀಯ ಲಾಬಿ