ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

35 ವರ್ಷದಲ್ಲಿ 131 ಸಾವಿನ ಪ್ರಕರಣ ದಾಖಲು: ಧರ್ಮಸ್ಥಳ: ಅಸಹಜ ಸಾವುಗಳೆಂಬ 'ಕಟ್ಟುಕತೆ'ಗಳ ಪತನ!

ಧರ್ಮಸ್ಥಳದಲ್ಲಿ 16 ವರ್ಷಗಳಲ್ಲಿ 1480 ಅಸಹಜ ಸಾವುಗಳು ಸಂಭವಿಸಿವೆ ಎಂದು ಆರೋಪಿಸ ಲಾಗಿತ್ತು. ಹಿಂದೆ ಸದನ ದಲ್ಲಿ ಚರ್ಚೆಯಾದ ಉಗ್ರಪ್ಪ ವರದಿಯನ್ನೂ ಮುಂದಿಟ್ಟುಕೊಂಡು, ಧರ್ಮಸ್ಥಳ ದಲ್ಲಿ ಸಾವಿರಾರು ಶವಗಳನ್ನು ಹೂತುಹಾಕಲಾಗಿದೆ. ಅಸಹಜ ಸಾವುಗಳು ಸಂಭವಿಸಿವೆ ಎಂದು ಅಪಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ಇದಾದ ಬಳಿಕ ಹತ್ತು ಹಲವು ಬಾರಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಇಂಥ ಅಪಪ್ರಚಾರದ ಕಟ್ಟುಕಥೆಗಳಿಗೆ ಚಾಲನೆ ನೀಡಲಾಗಿತ್ತು.

ಧರ್ಮಸ್ಥಳ: ಅಸಹಜ ಸಾವುಗಳೆಂಬ 'ಕಟ್ಟುಕತೆ'ಗಳ ಪತನ!

-

Profile
Ashok Nayak Sep 30, 2026 2:12 PM

ಜಿತೇಂದ್ರ ಕುಂದೇಶ್ವರ, ಮಂಗಳೂರು

16 ವರ್ಷಗಳಲ್ಲಿ 1480 ಅಸಹಜ ಸಾವು ವರದಿ ಸುಳ್ಳು

ಧರ್ಮಸ್ಥಳದಲ್ಲಿ 16 ವರ್ಷಗಳಲ್ಲಿ 1480 ಅಸಹಜ ಸಾವುಗಳು ಸಂಭವಿಸಿವೆ ಎಂದು ಆರೋಪಿಸ ಲಾಗಿತ್ತು. ಆದರೆ, ಪೊಲೀಸ್ ಇಲಾಖೆಯ ಅಧಿಕೃತ ಯುಡಿಆರ್ ಕಡತ ಗಳ ಪ್ರಕಾರ, 1990 ರಿಂದ 2025 ರವರೆಗಿನ 35 ವರ್ಷಗಳಲ್ಲಿ ಧರ್ಮಸ್ಥಳದ ವಸತಿಗೃಹ ಗಳು ಮತ್ತು ನೇತ್ರಾವತಿ ಸ್ನಾನಘಟ್ಟ ಪರಿಸರ ದಲ್ಲಿ ಸಂಭವಿಸಿದ ಅಸಹಜ ಸಾವುಗಳ ನೈಜ ಸಂಖ್ಯೆ ಕೇವಲ 131 ಮಾತ್ರ! ಆದರೆ ಬೆಳ್ತಂಗಡಿ ತಾಲೂಕಿನ ಪೊಲೀಸ್ ಠಾಣೆಗಳ 16 ವರ್ಷಗಳಲ್ಲಿ ನಡೆದ ಎಲ್ಲಾ ಅಸಹಜ ಸಾವುಗಳ ಪ್ರಕರಣ ಗಳನ್ನು ಧರ್ಮಸ್ಥಳದ ತಲೆಗೆ ಕಟ್ಟಲಾಗಿತ್ತು!

ಧರ್ಮಸ್ಥಳದಲ್ಲಿ 16 ವರ್ಷಗಳಲ್ಲಿ 1480 ಅಸಹಜ ಸಾವುಗಳು ಸಂಭವಿಸಿವೆ ಎಂದು ಆರೋಪಿಸ ಲಾಗಿತ್ತು. ಹಿಂದೆ ಸದನ ದಲ್ಲಿ ಚರ್ಚೆಯಾದ ಉಗ್ರಪ್ಪ ವರದಿಯನ್ನೂ ಮುಂದಿಟ್ಟುಕೊಂಡು, ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂತುಹಾಕಲಾಗಿದೆ. ಅಸಹಜ ಸಾವುಗಳು ಸಂಭವಿಸಿವೆ ಎಂದು ಅಪಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ಇದಾದ ಬಳಿಕ ಹತ್ತು ಹಲವು ಬಾರಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಇಂಥ ಅಪಪ್ರಚಾರದ ಕಟ್ಟುಕಥೆಗಳಿಗೆ ಚಾಲನೆ ನೀಡಲಾಗಿತ್ತು.

ಇದನ್ನೂ ಓದಿ: Dakshina Kannada: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಾಲು ಸಂಕ: 8 ಮಂದಿಗೆ ತೀವ್ರ ಗಾಯ

ಅದು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದು ಮಾಸ್ಕ್ ಮ್ಯಾನ್ ಚಿನ್ನಯ ಬುರುಡೆ ಹಿಡಿದು ಬಂದಾಗ. ಧರ್ಮಸ್ಥಳದ ಬಂಗ್ಲೆ ಗುಡ್ಡೆಯಲ್ಲಿ ಸಾಮೂಹಿಕ ದಫನ ನಡೆಸಲಾಗಿದೆ, ನಾನೇ ಕೈಯಾರೆ ಹೂತಿದ್ದೇನೆ ಎಂದು ಕೋರ್ಟ್ ಮುಂದೆ ಹೇಳಿದಾಗ ಬಹಳಷ್ಟು ಮಂದಿ ಇದನ್ನು ನಂಬಿದ್ದರು. ಅದರ ತನಿಖೆ ನಡೆಸಲು ಆರೋಪಿಗಳು ಬಯಸಿದ ಅಧಿಕಾರಿಗಳ ನೇತೃತ್ವದಲ್ಲಿಯೇ ಎಸ್‌ಐಟಿ ತಂಡ ಕೂಡ ರಚನೆಯಾಯಿತು. ಆ ಸಂದರ್ಭ ಧರ್ಮ ಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಅಪ ಪ್ರಚಾರ ನಡೆಸಲಾಗಿತ್ತು. ಆದರೆ ಚಿನ್ನಯ ತಾನು ಸುಳ್ಳು ಹೇಳಿರುವುದಾಗಿ ತಪ್ಪೊಪ್ಪಿಕೊಂಡ ಬಳಿಕ ಚಿತ್ರಣವೇ ಬದಲಾಗಿತ್ತು.

ಸತ್ಯ ಹೇಳುವ ದಾಖಲೆಗಳು: ಇದೀಗ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆ ಗಳು ಸತ್ಯವನ್ನು ಹೇಳುತ್ತಿವೆ. ಇಡೀ ಧರ್ಮ ಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷಗಳಲ್ಲಿ ದಾಖಲಾದ ಒಟ್ಟು ಅಸಹಜ ಸಾವುಗಳ ಸಂಖ್ಯೆ 689. ಇದರಲ್ಲಿ ಪುರುಷರ ಸಾವುಗಳೇ 506 ಶೇ.73ಕ್ಕೂ ಹೆಚ್ಚು. ಮಹಿಳೆಯರ ಒಟ್ಟು ಅಸಹಜ ಸಾವು ಕೇವಲ 184. ಹೀಗಾಗಿ ಕೇವಲ ಮಹಿಳೆಯರನ್ನೇ ಗುರಿಯಾಗಿಸಿ ಸಾವುಗಳು ಸಂಭವಿಸಿವೆ ಎಂಬ ಆರೋಪ ಗಳನ್ನು ದಾಖಲೆಗಳ ಅಂಕಿ ಸಂಖ್ಯೆಗಳೇ ತಳ್ಳಿ ಹಾಕಿದೆ.

ನೂರಾರು ಅಪರಿಚಿತ ಮಹಿಳೆಯರ ಶವಗಳು ಸಿಕ್ಕಿವೆ ಎಂದು ಹೇಳಲಾಗಿತ್ತು. ಆದರೆ, 35 ವರ್ಷಗಳ ಅಧಿಕೃತ ದಾಖಲೆಯಲ್ಲಿ ಅಪರಿಚಿತ ಮಹಿಳೆಯರ ಮೃತದೇಹಗಳು ಪತ್ತೆಯಾಗಿರುವುದು ಕೇವಲ 20 ಪ್ರಕರಣ ಗಳಲ್ಲಿ ಮಾತ್ರ. ಅಪರಿಚಿತ ಪುರುಷರ ಮೃತದೇಹಗಳು 65ಕ್ಕೂ ಹೆಚ್ಚು ಪ್ರಕರಣ ಗಳಲ್ಲಿ ದಾಖಲಾಗಿವೆ. ದಾಖಲೆಯಲ್ಲಿರುವಂತೆ ಮಹಿಳೆಯರ ಅಸಹಜ ಸಾವುಗಳಲ್ಲಿ 52 ಪ್ರಕರಣಗಳು ನೇತ್ರಾವತಿ ನದಿಯಲ್ಲಿ ಮುಳುಗಿ ಸಂಭವಿಸಿದ ದುರಂತಗಳು. ಉಳಿದ 24 ಸಾವುಗಳು ಅನಾರೋಗ್ಯ ದಿಂದ, 10 ಅಪಘಾತಗಳಿಂದ ಹಾಗೂ 66 ಸಾವುಗಳು ನೇಣು, ವಿಷ ಸೇವನೆ ಕಾರಣಗಳಿಂದ ಸಂಭವಿಸಿವೆ.

ಎಲ್ಲ ಸಾವುಗಳ ಲೆಕ್ಕ ಧರ್ಮಸ್ಥಳಕ್ಕೆ ಜಮೆ!

ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭವಿಸಿದ ಹೆದ್ದಾರಿ ಅಪಘಾತಗಳು ಮತ್ತು ನದಿ ದುರಂತಗಳ ಇಡೀ ತಾಲೂಕಿನ ಅಸಹಜ ಸಾವುಗಳ ಲೆಕ್ಕವನ್ನು ಧರ್ಮಸ್ಥಳದ ಮೇಲೆ ಹೊರಿಸಲಾಗಿತ್ತು. ದಿನನಿತ್ಯ ಸಾವಿರಾರು ಭಕ್ತರು ಬರುವ ಕ್ಷೇತ್ರದಲ್ಲಿ 35 ವರ್ಷಗಳಲ್ಲಿ ನಡೆದ 131 ಸಾವುಗಳಿಗೂ, ಇಡೀ ತಾಲೂಕಿನ ಸಾಮಾನ್ಯ ಮರಣಗಳಿಗೂ ನಂಟು ಕಲ್ಪಿಸಿ ಹೆಣೆಯಲಾದ ಆರೋಪಗಳು ಅಧಿಕೃತ ದಾಖಲೆಗಳಿಂದ ಸುಳ್ಳೆಂದು ಸಾಬೀತಾಗಿವೆ.