App for cauvery Water: ಕಾವೇರಿ ನೀರಿಗೂ App ಬುಕ್ಕಿಂಗ್ ಸೌಲಭ್ಯ
ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಟ್ಯಾಂಕರ್ ಮಾಫಿ ಯಾದವರು ಭಾರಿ ಶುಲ್ಕವನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಈ ಬಾರಿ ಜಲ ಮಂಡಳಿಯ ವತಿಯಿಂದ ಟ್ಯಾಂಕರ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಪಡೆಯಲು ಆಪ್ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.


ಅಪರ್ಣಾ ಎ.ಎಸ್.
24 ಗಂಟೆ ಮೊದಲು ಬುಕ್ ಮಾಡಿದ್ರೆ ನೀರಿನ ಟ್ಯಾಂಕರ್
ಮಾರ್ಚ್ ಅಂತ್ಯಕ್ಕೆ ಬೆಂಗಳೂರಲ್ಲಿ ಪ್ರಾಯೋಗಿಕ ಜಾರಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಎದುರಾಗಬಹುದಾದ ಬರಗಾಲ ಹಾಗೂ ಕಳೆದ ವರ್ಷದ ನೀರಿನ ಟ್ಯಾಂಕರ್ ಮಾಫಿಯಾದಿಂದ ಸಾರ್ವಜನಿಕರಿಗಾದ ಸಮಸ್ಯೆಗೆ ಪರಿಹಾರ ವಾಗಿ ಜಲಮಂಡಳಿ ಇದೀಗ ಆಪ್ ಮೂಲಕ ಮನೆ ಬಾಗಿಲಿಗೆ ಕಾವೇರಿ ನೀರನ್ನು ವಿತರಿಸುವ ಯೋಜ ನೆಗೆ ಕೈಹಾಕಿದೆ. ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಟ್ಯಾಂಕರ್ ಮಾಫಿ ಯಾದವರು ಭಾರಿ ಶುಲ್ಕವನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಈ ಬಾರಿ ಜಲಮಂಡಳಿಯ ವತಿಯಿಂದ ಟ್ಯಾಂಕರ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಪಡೆಯಲು ಆಪ್ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Prakash Shesharaghavachar Column: ಕೇಜ್ರಿವಾಲ್: ಅಧಿಕಾರ-ಅಹಂಕಾರ-ಅಧಃಪತನ
ಜಲಮಂಡಳಿ ಈಗಾಗಲೇ ಮೊಬೈಲ್ ಆಧಾರಿತ ಆಪ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಜಲ ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ತಂತ್ರಾಂಶವನ್ನು ಪಡೆಯಬಹುದಾಗಿದೆ. ಮಾರ್ಚ್ ಅಂತ್ಯಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಜಾರಿಗೊಳಿಸಲಿದ್ದು, ಬಳಿಕ ಸಾಧಕ-ಬಾಧಕ ಗಮನಿಸಿ ಏಪ್ರಿಲ್ ಮಧ್ಯಭಾಗದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಆಪ್ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಆಪ್‌ನಲ್ಲಿ ಏನಿರಲಿದೆ?: ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಲು ಮತ್ತು ಟ್ಯಾಂಕರ್ ಹಾಕಿಸಿಕೊಳ್ಳಲು ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವ ಪೂರ್ವ ನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುವುದು. ಜಲಮಂಡಳಿಯ ನೀರಿನ ಟ್ಯಾಂಕರ್‌ಗಳಿಂದ ಖಾಸಗಿಯವರಂತೆ ಬೋರ್‌ವೆಲ್ ನೀರಿನ ಬದಲಾಗಿ ಕೇವಲ ಕಾವೇರಿ ನೀರಿನ ಪೂರೈಕೆ ಮಾತ್ರ ಇರಲಿದೆ. ಪ್ರಮುಖವಾಗಿ ಕಾವೇರಿ ನೀರಿನ ಕೊಳವೆ ಮಾರ್ಗವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ಈ ಕಾವೇರಿ ನೀರನ್ನು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಮಂಡಳಿಯಿಂದ ಜಾರಿಗೆ ತರುತ್ತಿರುವ ಅಪ್ಲಿಕೇಶನ್ ಮೂಲಕ ‘ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಬೀಳಲಿದ್ದು, ಟ್ಯಾಂಕರ್ ಮಾಲೀಕರು ಮನಬಂದಂತೆ ಹಣ ವಸೂಲಿ ಮಾಡುವುದನ್ನೂ ನಿಯಂತ್ರಿಸಬಹುದಾಗಿದೆ. ಪ್ರತಿ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಲಾಗಿದ್ದು, ಇದರಲ್ಲಿ ಗ್ರಾಹಕರು ಟ್ಯಾಂಕರ್‌ನ್ನು ಟ್ರ್ಯಾಕ್ ಮಾಡಬಹುದು.
ಟ್ಯಾಂಕರ್ ಬುಕಿಂಗ್ ಸಮಯದಲ್ಲಿ ಗ್ರಾಹಕರ ವಿತರಣಾ ವಿಳಾಸದ ಜಿಪಿಎಸ್ ನಿರ್ದೇಶಾಂಕಗಳನ್ನು ಪಡೆಯಲಾಗುತ್ತದೆ. ಗ್ರಾಹಕರಿಗೆ ಒಟಿಪಿ ಕಳುಹಿಸಲಾಗುತ್ತಿದ್ದು, ಟ್ಯಾಂಕರ್‌ನ ಸಿಬ್ಬಂದಿಯೊಂದಿಗೆ ಒಟಿಪಿ ಹಂಚಿಕೊಂಡ ನಂತರವೇ ನೀರು ಸರಬರಾಜು ಮಾಡಲಾಗುತ್ತದೆ. ಕಾವೇರಿ ನೀರಿಗಾಗಿ 24 ಗಂಟೆ ಮುಂಚಿತವಾಗಿ ಬುಕ್ ಮಾಡಬೇಕು. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನೀರು ಪೂರೈಸಲಾಗುತ್ತದೆ.
200 ಟ್ಯಾಂಕರ್ ನೇಮಕ
ಇನ್ನು ಆನ್‌ಲೈನ್ ಮೂಲಕ ಬೇಸಿಗೆಯಲ್ಲಿ ನೀರು ಪೂರೈಕೆ ಮಾಡಲು ಜಲಮಂಡಳಿ ಸುಮಾರು 200 ಟ್ಯಾಂಕರ್‌ಗಳನ್ನು ನೇಮಿಸಲಾಗಿದೆ. 6000 ಲೀ. ಮತ್ತು 12 ಸಾವಿರ ಲೀ ಸಾಮರ್ಥ್ಯದ ಟ್ಯಾಂ ಕರ್ ಗಳನ್ನು ನೀರಿನ ಸರಬರಾಜಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ದಿನಕ್ಕೆ ಎಂಟು ಬಾರಿ ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಈ ಟ್ಯಾಂಕರ್ ಶುಲ್ಕ ಇನ್ನಷ್ಟೇ ನಿಗದಿಯಾಗ ಬೇಕಿದ್ದು, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆಯ ಬಳಿಕ ನಿಗದಿ ಯಾಗಲಿದೆ. ಪ್ರತಿ ಟ್ಯಾಂಕರ್‌ನಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹಾಗೂ ಸರಬರಾಜಿನ ಅಂತರದ ಆಧಾರದಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*
ಟ್ಯಾಂಕರ್ ನಲ್ಲಿ ಏನಿರಲಿದೆ ?
ಆಪ್ ಮೂಲಕ ಗ್ರಾಹಕರು ಟ್ಯಾಂಕರ್ ಬುಕ್ ಮಾಡಬಹುದು ಎಷ್ಟು ಪ್ರಮಾಣದ ನೀರು ಬೇಕು ಎನ್ನುವುದನ್ನು ತೀರ್ಮಾನಿಸಬಹುದು ಆನ್‌ಲೈನ್ ಮೂಲಕವೇ ಹಣ ಪಾವತಿ, ಟ್ರ್ಯಾಕ್ ಮಾಡಲು ಅವಕಾಶ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಿರುವುದರಿಂದ ಲೈವ್ ಲೊಕೇಶನ್ ಮಾಹಿತಿ ಪಡೆಯ ಬಹುದು.
*
ಎಲ್ಲ ನೀರಿನ ಟ್ಯಾಂಕರ್‌ನಲ್ಲಿ ಸ್ವಯಂಚಾಲಿತ ಸಕ್ರಿಯಗೊಳಿಸಿದ ರೇಡಿಯೋ ಆವರ್ತನ ಗುರುತು (ಆರ್‌ಎಫ್ ಐಡಿ) ಅಳವಡಿಕೆ ಮಾಡಿದ್ದು, ಟ್ಯಾಂಕರ್‌ನಲ್ಲಿ ಎಷ್ಟು ಲೀಟರ್ ನೀರಿದೆ ಎಂಬುದನ್ನು ಲೆಕ್ಕಾಚಾರ ಮಾಡುವ ರೀತಿಯಲ್ಲಿ ತಂತ್ರಾಂಶವನ್ನೂ ರಚಿಸಲಾಗಿದೆ. ಈ ಮೂಲಕ ನೀರಿನ ಟ್ಯಾಂಕ ರ್‌ಗಳನ್ನು ಹುಡುಕುತ್ತಿರುವ ನಿರ್ದಿಷ್ಟ ಪ್ರದೇಶದಲ್ಲಿ ಅಪಾಟ್ ಮೆಂಟ್ ಅಥವಾ ವೈಯಕ್ತಿಕ ಮನೆ ಗಳಲ್ಲಿ ವಾಸಿಸುವ ಜನರ ಸಂಖ್ಯೆಯನ್ನು ಜಲಮಂಡಳಿ ಟ್ರ್ಯಾಕ್ ಮಾಡಲಿದ್ದು, ಈ ಮೂಲಕ ಕಾವೇರಿ ನೀರಿನ ದುರುಪಯೋಗವನ್ನು ತಡೆಯಲು ಸಹಾಯವಾಗಲಿದೆ.
- ರಾಮ್ ಪ್ರಸಾತ್ ಮನೋಹರ್,
ಬೆಂಗಳೂರು ಜಲಮಂಡಳಿ ಅಧ್ಯಕ್ಷ