ವೀಳ್ಯದೆಲೆ ಮಾರುಕಟ್ಟೆಗೆ ಪೂರೈಕೆ ಶೇ.50 ಕುಸಿತ, ಇಳುವರಿಯೂ ಕಡಿಮೆ
ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ವಿಜಯಪುರ ಹಾಗೂ ಇತರೆ ಕಡೆಗಳಲ್ಲಿ ಬೆಳೆಯುತ್ತಿರುವ ವೀಳ್ಯೆದೆಲೆಯ ಇಳುವರಿ ಈ ವರ್ಷ ತೀರಾ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ವೀಳ್ಯೆದೆಲೆ ಪೂರೈಕೆಯಾಗದಿದ್ದರಿಂದ ದರ ತೀವ್ರವಾಗಿ ಏರಿಕೆ ಯಾಗಲು ಕಾರಣವಾಗಿದೆ.


ಹೂವಪ್ಪ ಐ ಹೆಚ್. ಬೆಂಗಳೂರು
ವೀಳ್ಯದೆಲೆ ಮಾರುಕಟ್ಟೆಗೆ ಪೂರೈಕೆ ಶೇ.50 ಕುಸಿತ
ಇಳುವರಿಯೂ ಕಡಿಮೆ ಒಂದು ವೀಳ ದೆಲೆ ಬೆಲೆ-5ರುಪಾಯಿ
ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು, ಶುಭ ಸಮಾರಂಭಗಳು, ಮದುವೆ, ನಡೆಯ ಬೇಕಾದರೂ ವೀಳ್ಯದೆಲೆ ಮತ್ತು ಅಡಿಕೆ ಮುಖ್ಯ. ಆದರೆ ಈಗ ಎಲೆ ಅಡಕೆ ಜಿಗಿಯುವವರ ಪಾಲಿಗಂತೂ ಬಾಯಿ ಸುಡುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ವೀಳ್ಯದೆಲೆಯ ಬೆಲೆ ಬರೋ ಬ್ಬರಿ ಮೂರು ಪಟ್ಟು ಹೆಚ್ಚಳ ಆಗಿದ್ದು, ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ಹೇಳ ತೀರದಾಗಿದೆ. ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ವಿಜಯಪುರ ಹಾಗೂ ಇತರೆ ಕಡೆಗಳಲ್ಲಿ ಬೆಳೆಯುತ್ತಿರುವ ವೀಳ್ಯೆದೆಲೆಯ ಇಳುವರಿ ಈ ವರ್ಷ ತೀರಾ ಕಡಿಮೆ ಯಾಗಿದ್ದು, ಮಾರು ಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ವೀಳ್ಯೆದೆಲೆ ಪೂರೈಕೆಯಾಗದಿದ್ದರಿಂದ ದರ ತೀವ್ರವಾಗಿ ಏರಿಕೆ ಯಾಗಲು ಕಾರಣವಾಗಿದೆ.
ಇದನ್ನೂ ಓದಿ: Agriculture Budget 2025: ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಘೋಷಿಸಿದ ಕೇಂದ್ರ
ಇತ್ತೀಚಿನ ದಿನಗಳಲ್ಲಿ ವೀಳ್ಯೆದೆಲೆ ದರ ದುಬಾರಿ ಯಾಗಿದ್ದು, 12 ಸಾವಿರ ವೀಳ್ಯೆದೆಲೆ ದರ ಕನಿಷ್ಠ 5 ಸಾವಿರ ಹಾಗೂ ಗರಿಷ್ಠ 22 ಸಾವಿರಕ್ಕೆ ತಲುಪಿದೆ. ಬಿಡಿ ಮಾರುಕಟ್ಟೆಯಲ್ಲಿ ಗುಣಮಟ್ಟದ 100 ವೀಳ್ಯೆದೆಲೆಗಳನ್ನು 200ರಿಂದ 500 ರು. ಗೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ದರ ಒಂದು ಎಲೆಗೆ ಸಾಧಾರಣ ಗುಣಮಟ್ಟದ ಎಲೆಯು 10 ರು. ಗೆ 3 ಸಿಗುತ್ತದೆ.
ಇದನ್ನೂ ಓದಿ: Roopa Gururaj Column: ಆಂಜನೇಯನ ಭಕ್ತರಿಗೆ ಶನಿಕಾಟವಿಲ್ಲ
ಉತ್ತಮ ದೊಡ್ಡ ಗಾತ್ರದ ವೀಳ್ಯದೆಲೆಯ ಬೆಲೆ ರು.5 ಆಗಿದೆ. ಕಳೆದ ವಾರದವಷ್ಟೇ 100 ಎಲೆಗಳಿಗೆ 100ರಿಂದ 200 ದರವಿತ್ತು. ಈ ವಾರ ದರ ದುಪ್ಪಟ್ಟು ಆಗಿರುವುದರಿಂದ, ಎಲೆಗಳ ಖರೀದಿ ಪ್ರಮಾಣವೂ ಕಡಿಮೆಯಾಗಿದೆ. 100 ಎಲೆ ಖರೀದಿಸುವವರು 50 ಎಲೆಗಳನ್ನು ಮಾತ್ರ ಖರೀದಿಸುತ್ತಿದ್ದಾರೆ.
ಬಹುತೇಕ ಜಮೀನಿನಲ್ಲಿ ವೀಳ್ಯೆದೆಲೆ ಇಳುವರಿ ತೀರಾ ಕಡಿಮೆ ಆಗಿದೆ. 60 ಸಾವಿರ ವೀಳ್ಯೆ ದೆಲೆ ಬೆಳೆಯುತ್ತಿದ್ದ ತೋಟದಲ್ಲಿ, ೧೨ ಸಾವಿರ ಎಲೆಗಳು ಬೆಳೆಯುವುದೂ ಕಷ್ಟವಾಗಿದೆ. ಬೆಳೆದಷ್ಟು ವೀಳ್ಯೆದೆಲೆಗಳನ್ನು ಹರಿದು ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ. ಕಡಿಮೆ ವೀಳ್ಯೆ ದೆಲೆ ಇರುವುದರಿಂದ, ದರ ದುಬಾರಿ ಆಗುವುದು ಸಹಜ ಎನ್ನುತ್ತಾರೆ ವೀಳ್ಯದೆಲೆ ವ್ಯಾಪಾರಿ ಗಳು. 2024ರ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 12 ಸಾವಿರ ವೀಳ್ಯೆದೆಲೆ ಒಳಗೊಂಡ ಪೆಂಡಿಯೊಂದಕ್ಕೆ ಕನಿಷ್ಠ 1000 ಗರಿಷ್ಠ 6000 ದರವಿತ್ತು.
ಈಗ ಅದೇ ದರವು ಗರಿಷ್ಠ 22 ಸಾವಿರಕ್ಕೆ ಏರಿದೆ. ಮುಂದಿನ ದಿನಗಳಲ್ಲಿ ವೀಳ್ಯೆದೆಲೆ ಇಳುವರಿ ಹೆಚ್ಚಾದರೆ ಮಾತ್ರ ದರವೂ ಕಡಿಮೆಯಾಗಲಿದೆ ಎಂದು ಹೇಳುತ್ತಾರ ವೀಳ್ಯದೆಲೆ ವ್ಯಾಪಾರಿ ರಜಾಕ್. ಮಾರುಕಟ್ಟೆಯಲ್ಲಿ ವೀಳ್ಯೆದೆಲೆಯ ಬೆಲೆ ಗಗನಕ್ಕೆ ಜಿಗುತ್ತಲೇ ಇದ್ದು, ಒಂದು ಕಟ್ಟು 100 ವೀಳ್ಯದೆಲೆಯ ಬೆಲೆ ಈಗ ಬರೋಬರಿ 150 ರಿಂದ 200 ರು.ಗಡಿ ದಾಟಿದೆ. ಈ ವರ್ಷ ಸಹ ದಾಖಲೆಯ ಬೆಲೆ ಏರಿಕೆಯಾಗಿದೆ.
ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆ ಆಗುತ್ತಿದ್ದು, ಗ್ರಾಹ ಕರು ಕಂಗಾಲಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ವೀಳ್ಯದೆಲೆಯ ಬೆಲೆ ದುಬಾರಿ ಆಗು ತ್ತಿದ್ದು, ಒಂದು ದಿನ ಇದ್ದ ದರ ಇನ್ನೊಂದು ದಿನ ಇಲ್ಲದಾಗಿದೆ. ದುಬಾರಿಯಾದರೂ ಮಾರುಕಟ್ಟೆ ಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ ಎಂಬುದು ಗ್ರಾಹಕರ ಕೊರಗು.
ತುಮಕೂರಿನ ಪಾವಗಡ, ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಗಳಿಂದಲೂ ನಗರಕ್ಕೆ ವೀಳ್ಯದೆಲೆ ಸರಬರಾಜು ಆಗುತ್ತಿದೆ. ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿಯ ವರೆಗೆ ದಟ್ಟ ಮಂಜು ಬೀಳುವ ಕಾರಣ ವೀಳ್ಯ ದೆಲೆ ಸರಿಯಾಗಿ ಬರುವುದಿಲ್ಲ ಜವಾರಿ ಎಲೆ ದುಬಾರಿ ಆಗುವುದ ರೊಂದಿಗೆ ಪಾನ್ಬೀಡಾಕ್ಕೆ ಬಳಸುವ ಕೋಲ್ಕತ್ತ ವೀಳ್ಯದೆಲೆಯ ದರವೂ ಹೆಚ್ಚಳವಾಗಿದೆ.
ಎರಡು ತಿಂಗಳ ಹಿಂದೆ 150 ಎಲೆಗಳ ಒಂದು ಕಟ್ಟು ರು.400ಕ್ಕೆ ದೊರೆಯುತ್ತಿತ್ತು, ಈಗ ಅದು ರು.800ಕ್ಕೆ ಏರಿಕೆಯಾಗಿದೆ. ಆದರೆ ಪಾನ್ ಬೀಡಾ ಬೆಲೆಯನ್ನು ಮಾತ್ರ ತು.15ಕ್ಕಿಂತ ಹೆಚ್ಚು ಏರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಪಾನ್ ಬೀಡಾ ವ್ಯಾಪಾರಿ ಪಿ.ಮುಜೀಬುಲ್ಲಾ.
ಹೊರ ರಾಜ್ಯಕ್ಕೆ ರಫ್ತು
ಹಾವೇರಿ ಜಿಲ್ಲೆಯ ಸವಣೂರು ಹಾನಗಲ್ ಹಿರೇಕೆರೂರು ಶಿಗ್ಗಾವಿ ರಟ್ಟೀಹಳ್ಳಿ ತಾಲ್ಲೂ ಕಿನಲ್ಲಿ ಹೆಚ್ಚಾಗಿ ವೀಳ್ಯೆದೆಲೆ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ವೀಳ್ಯೆದೆಲೆ ರಾಜ್ಯ ದೊಳಗೆ ಮಾತ್ರವಲ್ಲದೇ ಹೊರ ರಾಜ್ಯಕ್ಕೂ ರಫ್ತಾಗುತ್ತಿದೆ. ಸವಣೂರು, ಶಿಗ್ಗಾವಿ, ಕಾರಡಗಿ, ಧಾರವಾಡ, ಕಲಬುರ್ಗಿ ಬೆಳಗಾವಿ ಮಾರುಕಟ್ಟೆಗೆ ವೀಳ್ಯೆದೆಲೆ ಕಳುಹಿಸುತ್ತೇವೆ. ಹೆಚ್ಚು ಗುಣಮಟ್ಟದ ವೀಳ್ಯೆದೆಲೆಯನ್ನು ಮುಂಬೈ ಆಂಧ್ರಪ್ರದೇಶ ಭೂಪಾಲ್ ಸೇರಿದಂತೆ ಹಲವು ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ.
*
ಜಮೀನಿನಲ್ಲಿ ವೀಳ್ಯೆದೆಲೆ ಬೆಳೆಯುತ್ತಿದ್ದೇವೆ, ಅದುವೇ ನಮಗೆ ಆದಾಯದ ಮೂಲ. ಆದರೆ ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಾದ ಬದಲಾವಣೆಯಿಂದ ಗಾಳಿ ಬೀಸುತ್ತಿದೆ. ಈ ಗಾಳಿಯಿಂದಾಗಿ ಎಳೆಗಳು ಉದುರಿ ಬೀಳುತ್ತಿವೆ. ಸಣ್ಣದಾಗಿ ಚಿಗುರುವ ವೀಳ್ಯೆದೆಲೆ ಸಹ ಮುದುಡುತ್ತಿವೆ.
ಅಬ್ದುಲ್ ಮಲ್ಲೂತ ರೈತ, ಸವಣೂರು