ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬುರುಡೆ ಪ್ರಕರಣ: ಎಸ್‌ಐಟಿ ಪಾಳೆಯದ ಸ್ಮಶಾನ ಮೌನಕ್ಕೆ ಕಾರಣವೇನು ?

ಧರ್ಮಸ್ಥಳ ಪ್ರಕರಣದಲ್ಲಿ ಉತ್ಖನನ ನಡೆಸಿದಾಗ ೧೭ ಕಡೆಯೂ ಒಂದೇ ಒಂದು ಹೆಣ್ಣಿನ ಬುರುಡೆ ಸಿಗದೇ ಇದ್ದಾಗ ಇಲ್ಲೇನೋ ಷಡ್ಯಂತ್ರ ಇದೆ ಎನ್ನುವ ಬಲವಾದ ಸಂಶಯ ಮೂಡಿತ್ತು. ತನಿಖಾಧಿ ಕಾರಿಗಳು ಚಿನ್ನಯ್ಯನ ಬೆಂಡೆತ್ತಿದಾಗ ಆತನೇ ಇಡೀ ಪ್ರಕರಣವನ್ನು ಹೆಣೆದಿರುವುದು, ಇದರ ಹಿಂದಿರುವ ‘ಗ್ಯಾಂಗ್’ನ ಮಂದಿಯ ಹೆಸರನ್ನೂ ಬಾಯಿ ಬಿಟ್ಟ

ಬುರುಡೆ ಪ್ರಕರಣ: ಎಸ್‌ಐಟಿ ಪಾಳೆಯದ ಸ್ಮಶಾನ ಮೌನಕ್ಕೆ ಕಾರಣವೇನು ?

-

Ashok Nayak
Ashok Nayak Dec 4, 2025 8:54 AM

ಜಿತೇಂದ್ರ ಕುಂದೇಶ್ವರ, ಮಂಗಳೂರು

ನಿರ್ಣಾಯಕ ಹಂತದಲ್ಲಿ ದಿಢೀರ್ ಮೌನಕ್ಕೆ ಜಾರಿದ ವಿಶೇಷ ತನಿಖಾ ತಂಡ

ಎಸ್‌ಐಟಿ ನಿಷ್ಕ್ರಿಯತೆ ಕುರಿತು ನಾನಾ ವ್ಯಾಖ್ಯಾನ

ಬುರುಡೆಯನ್ನೇ ಕದ್ದು ತಂದು ಕೋರ್ಟ್ ಮುಂದೆ ಪ್ರದರ್ಶಿಸಿ ಧರ್ಮಸ್ಥಳದಲ್ಲಿ ಯುವತಿಯರ ಸಾಮೂಹಿಕ ಸಮಾಧಿ ಎಂದು ಷಡ್ಯಂತ್ರ ಮಾಡಿದ್ದ ಆರೋಪಿಗಳು ಎಸ್‌ಐಟಿ ವಿಚಾರಣೆ ಎದುರಿ ಸುವ ಬದಲು ತನಿಖಾಧಿಕಾರಿಗಳನ್ನೇ ತಪ್ಪಿತಸ್ಥರು ಎಂಬುದಾಗಿ ಸಾರ್ವಜನಿಕವಾಗಿ ಪ್ರಶ್ನಿಸಿ ಕಟಕಟೆಯಲ್ಲಿ ನಿಲ್ಲಿಸುವ ಪ್ರಮೇಯ ಒದಗಿ ಬಂದಿದೆ.

ಆರೋಪಿಗಳನ್ನು ವಿಚಾರಣೆ ನಡೆಸಿ, ಬಂಧಿಸಬೇಕಾದ ಎಸ್‌ಐಟಿ ನಿಸ್ತೇಜವಾಗಿ ತನಿಖಾಧಿಕಾರಿಗಳ ಕಚೇರಿ ಸ್ಮಶಾನ ಮೌನಕ್ಕೆ ಜಾರಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಹೊರತುಪಡಿಸಿ ಇತರ ಅಧಿಕಾರಿಗಳ ನೈತಿಕತೆ ಯನ್ನೇ ಪ್ರಶ್ನೆ ಮಾಡಿರುವ ಆರೋಪಿಗಳು ಗುರುತರ ಅರೋಪ ಹೊರಿಸುತ್ತಿದ್ದಾರೆ. ಈ ಆರೋಪಗಳಿಗೆ ಎಸ್‌ಐಟಿ ಬೆದರಿ ಕೈಕಟ್ಟಿ ಕುಳಿತುಕೊಂಡಿದೆಯೇ ಎನ್ನುವ ಸಂಶಯ ಕಾಡತೊಡಗಿದೆ. ಹೈಕೋರ್ಟ್ ವಿಚಾರಣೆ ಮುಂದುವರಿಸಿ ಎಂದು ಆದೇಶ ನೀಡಿ ೨೧ ದಿನಗಳೇ ಕಳೆದರೂ ಆರೋಪಿಗಳು ಎಸ್ ಐಟಿ ಕಚೇರಿಯತ್ತ ಸುಳಿದಿಲ್ಲ.

ಅಂದರೆ ಎಸ್ ಐಟಿ ಹೊಸ ನೋಟಿಸ್ ಕಳುಹಿಸಿಲ್ಲ ಎಂಬುದು ಖಚಿತ. ಈ ಮೌನದ ಹಿಂದಿರುವ ಕಾರಣ ಏನು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.

ಇದನ್ನೂ ಓದಿ: Dharmasthala case: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಪ್ರಕರಣದಲ್ಲಿ ಉತ್ಖನನ ನಡೆಸಿದಾಗ ೧೭ ಕಡೆಯೂ ಒಂದೇ ಒಂದು ಹೆಣ್ಣಿನ ಬುರುಡೆ ಸಿಗದೇ ಇದ್ದಾಗ ಇಲ್ಲೇನೋ ಷಡ್ಯಂತ್ರ ಇದೆ ಎನ್ನುವ ಬಲವಾದ ಸಂಶಯ ಮೂಡಿತ್ತು. ತನಿಖಾಧಿ ಕಾರಿಗಳು ಚಿನ್ನಯ್ಯನ ಬೆಂಡೆತ್ತಿದಾಗ ಆತನೇ ಇಡೀ ಪ್ರಕರಣವನ್ನು ಹೆಣೆದಿರುವುದು, ಇದರ ಹಿಂದಿರುವ ‘ಗ್ಯಾಂಗ್’ನ ಮಂದಿಯ ಹೆಸರನ್ನೂ ಬಾಯಿ ಬಿಟ್ಟ. ಆಗ ದೂರುದಾರ ಚಿನ್ನಯ್ಯನ ಬಂಧನವಾಗಿ ಇಡೀ ಪ್ರಕರಣವೇ ಒಂದು ಷಡ್ಯಂತ್ರ ಎನ್ನುವುದು ಬಯಲಾಗಿತ್ತು.

ಬುರುಡೆಯನ್ನು ಹುಡುಕಿ ಹೆಕ್ಕಿ ತಂದು, ಕ್ಷೇತ್ರ ವಿರುದ್ಧ ಕಥೆ ಕಟ್ಟಿದ ಆರೋಪಿಗಳು ಷಡ್ಯಂತ್ರ ಹೂಡಿರುವುದು ತನಿಖೆ ವೇಳೆ ಸ್ಪಷ್ಟವಾಗಿತ್ತು. ಸಾಕ್ಷಿದಾರರಾಗಿ ಹಲವು ಬಾರಿ ಎಸ್‌ಐಟಿ ಕಚೇರಿಗೆ ಬಂದಿದ್ದ ಬುರುಡೆ ಗ್ಯಾಂಗ್ ಆರೋಪಿಗಳಾಗಿ ಪರಿವರ್ತಿತರಾದಾಗ ಮತ್ತೆ ವಿಚಾರಣೆಗೆ ಎಸ್‌ಐಟಿ ನೋಟಿಸ್ ಕಳುಹಿಸಿತು. ಆದರೆ ವಿಚಾರಣೆಗೆ ಹಾಜರಾಗಿಲ್ಲ. ಈ ಮೂಲಕ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಕೊಡುವುದು, ಆರೋಪಿಗಳು ಹಾಜರಾಗದೆ ತಪ್ಪಿಸಿಕೊಳ್ಳುವ ಮೂಲಕ ‘ಟಾಮ್ ಆಂಡ್ ಜೆರ್ರಿ’ ಕಾರ್ಟೂನಿನ ರೀತಿಯಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಅನುಮಾನ ಶುರುವಾಗಿದೆ.

ಕೇಳಿಕೊಂಡ ಅಧಿಕಾರಿಯಿಂದಲೇ ತನಿಖೆ: ಆರಂಭದಲ್ಲಿ ಕಂಡು ಕೇಳರಿಯದ ಸಾಮೂಹಿಕ ಸಮಾಧಿ ಆರೋಪ ಕೇಳಿ ಬಂದಾಗ ಕರ್ನಾಟಕದ ಪೊಲೀಸರಿಂದ ತನಿಖೆ ನಡೆಸುವುದು ಬೇಡ, ಪಕ್ಕದ ಕೇರಳ ಪೊಲೀಸರಿಂದ ನಡೆಸಿ ಎಂದು ಬುರುಡೆ ಗ್ಯಾಂಗ್ ಪರವಾಗಿ ದೊಡ್ಡ ವ್ಯಕ್ತಿಗಳು, ವಕೀಲರು ಹೇಳಿಕೆ ನೀಡಿ, ಲಾಭಿ ಮಾಡಿದ್ದರು.

ಇದು ಕರ್ನಾಟಕ ಪೊಲೀಸರಿಗೆ ಮಾಡಿದ ಅವಮಾನ ಎಂಬ ಆಕ್ರೋಶವೂ ಸಣ್ಣಗೆ ಕೇಳಿ ಬಂದಿತ್ತು. ಬಳಿಕ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿಯೇ ಎಸ್‌ಐಟಿ ತನಿಖೆ ನಡೆಸಬೇಕು ಎಂದು ವಿಚಾರವಾದಿಗಳು, ಬುದ್ಧಿ ಜೀವಿಗಳು ಒತ್ತಡ ತಂದಾಗ ರಾಜ್ಯ ಸರಕಾರ ಅವರು ಹೇಳಿ ದಂತೆಯೇ ಮೊಹಾಂತಿ ನೇತೃತ್ವದಲ್ಲಿ ತನಿಖೆ ನಡೆಸಲು ಎಸ್‌ಐಟಿ ರಚಿಸಿತು.

ಅರ್ಥಾತ್ ಈಗಿನ ಆರೋಪಿಗಳ ಪರವಾಗಿದ್ದ ವಕೀಲರ ಆಶಯದಂತೆಯೇ ತನಿಖಾಧಿಕಾರಿಗಳನ್ನು ಸರಕಾರ ನೇಮಿಸಿತ್ತು ಎನ್ನುವುದು ಗಮನಾರ್ಹ. ಇದಕ್ಕಿಂತಲೂ ವಿಶೇಷ ಎಂದರೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರೇ ಪ್ರಣಬ್ ಮೊಹಾಂತಿ ನೇತೃತ್ವದ ಎಸ್‌ಐಟಿ ತನಿಖಾ ತಂಡ ರಚಿಸಿರುವುದನ್ನು ಬಹಿರಂಗವಾಗಿ ಸ್ವಾಗತಿಸುವುದು.

ತಮಗೆ ಕಳಂಕ ತರಲು ವಿರೋಧಿಗಳು ಶತಪ್ರಯತ್ನ ಮಾಡುತ್ತಿದ್ದರೂ ಕಿಂಚಿತ್ತೂ ತಪ್ಪು ಮಾಡದ ಆತ್ಮಸೈ ರ್ಯವೇ ಧರ್ಮಾಧಿಕಾರಿಗಳು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಆರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಕುಟುಂಬದ ವಿರುದ್ಧ ಸಾಕ್ಷಿಗಳು ಸಿಗಬಹುದು ಎಂದು ಬಯಸಿದ್ದವರಿಗೆ ದೂರು ನೀಡಿದವರೇ ಆರೋಪಿಗಳು ಷಡ್ಯಂತ್ರ ಮಾಡಿದವರು ಎಂಬುದು ಗೊತ್ತಾಯಿತು.

ಅದೃಷ್ಟವಶಾತ್ ತನಿಖೆಯಲ್ಲಿಯೂ ಅಧಿಕಾರಿಗಳು ಇದನ್ನು ಪತ್ತೆಹಚ್ಚಿದರು. ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ಸಮರ್ಥವಾಗಿ ಸಿದ್ಧಗೊಳಿಸಿ ಕೋರ್ಟಿಗೂ ಸಲ್ಲಿಸಿದರು. ಎಸ್‌ಐಟಿ ತಂಡ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ನಿರ್ಣಾಯಕ ಹಂತದಲ್ಲಿ ದಿಢೀರ್ ಮೌನಕ್ಕೆ ಜಾರಿರು ವುದು ಅಚ್ಚರಿ ಮೂಡಿಸಿದೆ.

ಬುರುಡೆ ಷಡ್ಯಂತ್ರ ಗ್ಯಾಂಗ್‌ಗೆ ಮತ್ತೆ ತಲೆ ಬಿಸಿ

ಕೋರ್ಟ್‌ಗಳು ತನಿಖೆಗೆ ಆದೇಶಿಸುತ್ತಲೇ ಇವೆ. ತಿಮರೋಡಿ ಗ್ಯಾಂಗ್ ವ್ಯವಹಾರದ, ಚಲನವಲನದ ತನಿಖೆ ನಡೆಸುವಂತೆ ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆ. ಎಸ್‌ಐಟಿ ತನಿಖೆಯಲ್ಲಿ ವಿಚಾರಣೆಯನ್ನು ಶತಾಯಗತಾಯ ಕಾನೂನು ಹೋರಾಟ ಮಾಡಿ ತಪ್ಪಿಸಿಕೊಂಡಿರುವ ಬುರುಡೆ ಗ್ಯಾಂಗ್‌ಗೆ ಈ ಹೈಕೋರ್ಟ್ ಆದೇಶ ಮತ್ತೆ ತಲೆಬಿಸಿ ತಂದಿದೆ.

ತೇಜಸ್ ಎ.ಗೌಡ ಎಂಬವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಧರ್ಮ ಸ್ಥಳ ಧರ್ಮಾಧಿಕಾರಿಗಳ ವಿರುದ್ಧ ನಡೆಸಲಾದ ಷಡ್ಯಂತ್ರದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಹಾಗೂ ಎಂ.ಡಿ. ಸಮೀರ್ ಮತ್ತಿತರರ ಚಲನವಲನ ತನಿಖೆ ಕೋರಿ ದಾಖಲಿಸಿರುವ ದೂರಿನ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಎಸ್ಪಿಗೆ ಸೂಚಿಸಿ, ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿದೆ.

ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೆಸರಲ್ಲಿ ಹೋರಾಟ ಮಾಡುತ್ತಿದ್ದು, ಆ ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರುಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ. ಜತೆಗೆ ಈ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯ ತಾಯಿಯು ಸೇರಿದಂತೆ ಪ್ರತಿಯೊಬ್ಬರು ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ.

ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಎಸ್‌ಐಟಿಗೆ ಮನವಿ ಸಲ್ಲಿಸಿದ್ದರು. ಅರ್ಜಿದಾರರಾದ ಧನಕೀರ್ತಿ ಅವರು ತಮ್ಮ ದೂರಿನಲ್ಲಿ ಯೂಟ್ಯೂಬರ್ ಕುಡ್ಲ ರ‍್ಯಾಂಪೇಜ್ ಸಂಪಾದಕ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರದ ವರದಿಗಳನ್ನು ಪ್ರಸಾರ ಮಾಡುತ್ತಿದ್ದು, ಅದಕ್ಕೆ ಯಾವುದು ಮೂಲ ಎಂದು ತನಿಖೆ ಮಾಡಬೇಕು ಹಾಗೂ ಎಸ್‌ಐಟಿ ತನಿಖೆ ಸಮಯದಲ್ಲಿ ದಿನನಿತ್ಯ ತನ್ನದೇ ತನಿಖಾ ವರದಿಯನ್ನು ಎಸ್ ಐಟಿಯ ತನಿಖಾ ವರದಿ ಎಂಬ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುತ್ತಿದ್ದರು. ಈ ಸುದ್ದಿಯ ಮೂಲ ಯಾವುದೆಂದು ಪತ್ತೆ ಮಾಡಬೇಕು ಎಂದು ಎಸ್ ಐಟಿಗೆ ಕೋರಿದ್ದರು.

ದೂರುದಾರರು ಎಸ್‌ಐಟಿಗೆ ರಾಜ್ಯ ಸರಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶರಿಗೆ, ದಕ್ಷಿಣ ಕನ್ನಡ ಎಸ್‌ಪಿ, ಆದಾಯ ತೆರಿಗೆ ಮಂಗಳೂರು ಕೇಂದ್ರ ವಲಯ ಅಧಿಕಾರಿ, ಜಾರಿ ನಿರ್ದೇಶ ನಾಲಯಕ್ಕೆ ಆಗಸ್ಟ್ ೨೦, ಸೆಪ್ಟೆಂಬರ್ ೫, ೮ ಮತ್ತು ೯ರಂದು ಮನವಿ ಮತ್ತು ದೂರು ಸಲ್ಲಿಸಿದ್ದರು.