ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪುಟ: ಬದಲಾದ ಕಾಂಗ್ರೆಸ್ ಆಟ

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ತಿಂಗಳಿನಿಂದಲೂ ವಿಳಂಬವಾಗುತ್ತಿದ್ದು, ಇದರಿಂದ ಆಕಾಂಕ್ಷಿಗಳಲ್ಲಿ ದಿಗಿಲು ಶುರುವಾಗಿದೆ. ಅದರಲ್ಲೂ ಎರಡು ದಿನಗಳ ಹಿಂದೆಯೇ ಪೂರ್ಣ ಗೊಳ್ಳಬೇಕಿದ್ದ ವಿಸ್ತರಣೆ ಪ್ರಕ್ರಿಯೆ ಅಪೂರ್ಣಗೊಂಡಿದ್ದು, ಜತೆಗೆ ಈ ಬಾರಿ ಹೊಸ ಮುಖಗಳಿಗೆ (ಯುವಶಾಸಕರಿಗೆ) ಅವಕಾಶ ನೀಡಬೇಕು ಎನ್ನಲಾಗುವ ಕಾರಣಕ್ಕೆ ಮುಂದೂಡಿದ್ದು ನಿಜಕ್ಕೂ ಆಕಾಂಕ್ಷಿ ಗಳಲ್ಲಿ ಆತಂಕ ತಂದಿದೆ.

ಸಂಪುಟ: ಬದಲಾದ ಕಾಂಗ್ರೆಸ್ ಆಟ

-

Profile
Ashok Nayak Jul 20, 2026 7:22 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ವಿಸ್ತರಣೆ ಚರ್ಚೆಗೆ ಖರ್ಗೆ ಗೈರಿನ ಹಿಂದೆ ಬೇಸರದ ಸುಳಿವು, ತಮಿಳುನಾಡಿನಿಂದ ಪಾಠ ಕಲಿತ ಕೈ

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ತಿಂಗಳಿನಿಂದಲೂ ವಿಳಂಬ ವಾಗುತ್ತಿದ್ದು, ಇದರಿಂದ ಆಕಾಂಕ್ಷಿಗಳಲ್ಲಿ ದಿಗಿಲು ಶುರುವಾಗಿದೆ. ಅದರಲ್ಲೂ ಎರಡು ದಿನಗಳ ಹಿಂದೆಯೇ ಪೂರ್ಣಗೊಳ್ಳ ಬೇಕಿದ್ದ ವಿಸ್ತರಣೆ ಪ್ರಕ್ರಿಯೆ ಅಪೂರ್ಣಗೊಂಡಿದ್ದು, ಜತೆಗೆ ಈ ಬಾರಿ ಹೊಸ ಮುಖ ಗಳಿಗೆ (ಯುವಶಾಸಕರಿಗೆ) ಅವಕಾಶ ನೀಡಬೇಕು ಎನ್ನಲಾಗುವ ಕಾರಣಕ್ಕೆ ಮುಂದೂಡಿದ್ದು ನಿಜಕ್ಕೂ ಆಕಾಂಕ್ಷಿಗಳಲ್ಲಿ ಆತಂಕ ತಂದಿದೆ.

ಇಷ್ಟೂ ದಿನಗಳಿಂದ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಪ್ರವಾಸದಲ್ಲಿದ್ದ ಕಾರಣಕ್ಕೆ ವಿಳಂಬ ಗುತ್ತಿದ್ದ ವಿಸ್ತರಣಾ ಪ್ರಕ್ರಿಯೆ ಈಗ ರಾಹುಲ್ ಗಾಂಧಿ ಅವರು ವಾಪಸ್ಸಾದ ನಂತರವೂ ವಿಳಂಬ ವಾಗುತ್ತಿರುವ ಬಗ್ಗೆ ಆಕಾಂಕ್ಷಿಗಳಲ್ಲಿ ಮಾತ್ರವಲ್ಲ. ಪಕ್ಷದ ಅನೇಕ ನಾಯಕರಲ್ಲೂ ಅಚ್ಚರಿ ಮೂಡಿಸಿದೆ. ಈ ಮಧ್ಯೆ ವಿಸ್ತರಣೆ ಪ್ರಕ್ರಿಯೆ ರಾಜ್ಯ ನಾಯಕರು ರಾಹುಲ್ ಗಾಂಧಿ ಅವರ ಆಹ್ವಾನದ ಮೇರೆಗೆ ಪಕ್ಷದ ಕೇಂದ್ರ ಸ್ಥಾನ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರೇ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹತ್ತುಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ವಿಸ್ತರಣೆ ವಿಚಾರದಲ್ಲಿ ಪಕ್ಷದೊಳಗೆ ಎಲ್ಲಾವೂ ಸರಿಯಾಗಿಲ್ಲ ಎನ್ನುವಂತಾಗಿದೆ ಎಂದು ಪಕ್ಷದ ಹಿರಿಯರು ಹೇಳಿದ್ದಾರೆ.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

ಸಂಪುಟ ವಿಸ್ತರಣೆ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ನಡೆಯಬೇಕಿದ್ದ ಸಂದರ್ಭದಲ್ಲಿ ಅವರೇ ಗೈರು ಹಾಜರಾಗಿದ್ದರಿಂದ ಇದರಲ್ಲೂ ಪಕ್ಷದ ವರಿಷ್ಠರಲ್ಲೇ ಒಂದಷ್ಟು ಭಿನ್ನಾಭಿಪ್ರಾಯಗಳಿರುವ ಸೂಚನೆಗಳು ಹೊರ ಬಿದ್ದಿವೆ ಎನ್ನಲಾಗಿದೆ. ಅದರಲ್ಲೂ ತಮಿಳುನಾಡು ರಾಜಕಾರಣದ ಬಿಸಿಯ ಪ್ರಭಾವ ವಿಸ್ತರಣೆ ಮೇಲೆ ಉಂಟಾಗುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೆಲ್ಲದರ ಮಧ್ಯೆಯೂ ಸಂಪುಟ ವಿಸ್ತರಣೆ ಬಹುತೇಕ ಈ ವಾರದಲ್ಲೇ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ಬುಧವಾರ (ಜು.22) ವೇಳೆಗೆ ನೂತನ ಸಚಿವರ ಪಟ್ಟಿ ಸಿದ್ಧವಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ವಿಸ್ತರಣೆ ಮೇಲೆ ತನಾಡು ಪಭಾವ

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಇತ್ತೀಚಿಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಸುಟ್ಟಿಕೊಂಡಿದ್ದರ ಪರಿಣಾಮ ಇದೆ ಎಂದು ಪಕ್ಷದ ನಾಯಕರು ಚರ್ಚಿಸುತ್ತಿದ್ದಾರೆ. ಅಂದರೆ ತಮಿಳುನಾಡು ಚುನಾವಣಾ ಪೂರ್ವದಲ್ಲಿ 60 ಸ್ಥಾನಗಳ ಹೊಂದಾಣಿಕೆಗೆ ಟಿವಿಕೆ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿ ಡಿಎಂಕೆ ಜತೆ ಸೇರಿ ಚುನಾ ವಣೆ ಎದುರಿಸಿ ಸೋತಿದ್ದರಿಂದ ಕಾಂಗ್ರೆಸ್ ಬೇಸರಗೊಂಡಿದೆ. ಇಂಥ ತಪ್ಪು ನಿರ್ಧಾರದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ಇಡೀ ತಮಿಳುನಾಡು ಯುವಜನತೆ ಪರ ಬೆಂಬಲ ಸೂಚಿಸಿ ವಿಜಯ್ ನೇತೃತ್ವದ ಟಿವಿಕೆ ಅಧಿಕಾರಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಸಾಕಷ್ಟು ಪಾಠ ಕಲಿತಿರುವ ರಾಹುಲ್ ಗಾಂಧಿ, ರಾಜ್ಯ ಸಂಪುಟ ವಿಸ್ತರಣೆಯಲ್ಲೂ ಯುವ ರಾಜಕಾರಣಿಗಳಿಗೆ ಅವಕಾಶ ನೀಡಬೇಕೆನ್ನುವ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರ ವಲಯದಲ್ಲಿ ಬೇಸರ ತಂದಿದ್ದು, ಅಧ್ಯಕ್ಷರ ಬೆಂಬಲಿತ ಸಚಿವಾಕಾಂಕ್ಷಿಗಳಲ್ಲಿ ಕೊಂಚ ದಿಗಿಲು ಶುರುವಾಗಿದೆ ಎಂದು ಹೇಳಲಾಗಿದೆ.

ವಿಳಂಬವಾದಷ್ಟು ಪಟ್ಟಿ ಬದಲಾಗುವುದೇ ?

ಸಂಪುಟ ವಿಸ್ತರಣೆ ನಿರೀಕ್ಷೆಯಂತೆ ಜಾತಿ, ಧರ್ಮ ಹಾಗೂ ಪ್ರಾದೇಶಿಕತೆ ಆಧಾರದ ಮೇಲೆ ನಡೆಯತ್ತದೆ ಯಾದರೂ ಈ ಬಾರಿ ಎಐಸಿಸಿ ಅಧ್ಯಕ್ಷರ ನಿರ್ಧಾ ರಕ್ಕಿಂತ ರಾಹುಲ್ ಗಾಂಧಿ ಅವರ ಲೆಕ್ಕಾಚಾರದಂತೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಸುಮಾರು 13 ಮಂದಿ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಅವರಿಂದಲೂ 14 ಮಂದಿಗಿಂತಲೂ ಹೆಚ್ಚಿನ ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಇದರ ಮಧ್ಯೆ, ಪಕ್ಷದ ನಾಯಕರಾದ ರಣದೀಪ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕ ನಾಯ ಕರ ಶಿಫಾರಸಿನ ಮೇಲೂ ಅನೇಕರಿಗೆ ಅವಕಾಶ ಸಿಗು ವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಸಂಪುಟ ವಿಸ್ತರಣೆ ವಿಳಂಬವಾದಷ್ಟೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ನಾಯಕರು ಹೇಳಿದ್ದಾರೆ.