Honey Trap: ಹನಿ ಟ್ರ್ಯಾಪ್ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್ ಒತ್ತಡವೇ ಜಾಸ್ತಿ
ಹನಿಟ್ರ್ಯಾಪ್‌ನಲ್ಲಿ ಕಾಂಗ್ರೆಸ್ ಕೈವಾಡವಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ಹೇಳಿಕೆಯಲ್ಲಿರುವ ಅಂಶ ಪಕ್ಷದ ವರಿಷ್ಠರನ್ನುಕಂಗೆಡಿಸಿದೆ. ಇದರಿಂದ ಪಕ್ಷದ ವರಿಷ್ಠರು ಕೆಂಡಾಮಂಡಲವಾಗಿದ್ದು, ಸತತ ಸೋಲು ಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಇದು ಅಪಾ ಯದ ಗಂಟೆಯಂತಾಗಿದೆ. ಈ ಮಧ್ಯೆ, ಈ ಪ್ರಕರಣವನ್ನು ಇಲ್ಲಿಗೇ ಬಿಡಬಾರದು.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಹೈಕಮಾಂಡ್ ಕಂಗೆಡಿಸಿದ ಸಚಿವ ರಾಜಣ್ಣ ಹೇಳಿಕೆ
ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಹಾನಿಯಾಗುವ ಆತಂಕ
ತನಿಖೆಗೆ ಸೂಚನೆ ನೀಡುವ ಸಾಧ್ಯತೆ
ಸಚಿವರ ಹನಿಟ್ರ್ಯಾಪ್ ಪ್ರಕರಣದ ತನಿಖೆ ಈಗ ಕಾಂಗ್ರೆಸ್‌ಗೆ ಅನಿವಾರ್ಯ ಮಾತ್ರವಲ್ಲ, ಇದರ ನೆಪದಲ್ಲಿ ತನ್ನೊಳಗೆ ಒಂದಷ್ಟು ಮಹತ್ವದ ಬದಲಾವಣೆಗಳಿಗೆ ದಾರಿ ಮಾಡುವ ಸಾಧ್ಯತೆ ಇದೆ. ಸರಕಾರದ ವಿರುದ್ಧ ಹೋರಾಟಕ್ಕೆ ಅಸ್ತ್ರಗಳನ್ನು ಹುಡುಕುತ್ತಿದ್ದ ಪ್ರತಿಪಕ್ಷ ಬಿಜೆಪಿಗೆ ಹನಿಟ್ರ್ಯಾಪ್ ಪ್ರಕರಣ ಹೊಸ ಆಯುಧದಂತಾಗಿದ್ದು, ಇದರಿಂದ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿ ಸುವಂತಾಗಿದೆ.
ಅದರಲ್ಲೂ ಹನಿಟ್ರ್ಯಾಪ್‌ನಲ್ಲಿ ಕಾಂಗ್ರೆಸ್ ಕೈವಾಡವಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ಹೇಳಿಕೆಯಲ್ಲಿರುವ ಅಂಶ ಪಕ್ಷದ ವರಿಷ್ಠರನ್ನುಕಂಗೆಡಿಸಿದೆ. ಇದರಿಂದ ಪಕ್ಷದ ವರಿಷ್ಠರು ಕೆಂಡಾಮಂಡಲವಾಗಿದ್ದು, ಸತತ ಸೋಲು ಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಇದು ಅಪಾಯದ ಗಂಟೆಯಂತಾಗಿದೆ. ಈ ಮಧ್ಯೆ, ಈ ಪ್ರಕರಣವನ್ನು ಇಲ್ಲಿಗೇ ಬಿಡಬಾರದು. ಸಿಬಿಐ ಅಥವಾ ಉನ್ನತ ಮಟ್ಟದ ಸಂಸ್ಥೆಗಳಿಂದ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ಕಾಂಗ್ರೆಸ್‌ನ ಶಾಸಕರೇ ಪಕ್ಷದ ಹಿರಿಯ ರನ್ನು ಒತ್ತಾಯಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಾರಣ ಹನಿಟ್ರ್ಯಾಪ್ ಬರೀ ರಾಜಣ್ಣ ಮಾತ್ರವಲ್ಲದೆ, ಇನ್ನೂ ಅನೇಕ ಸಚಿವರು ಮತ್ತು ಶಾಸಕರೂ ಸೇರಿ 40ಕ್ಕೂ ಹೆಚ್ಚು ಮಂದಿ ಯ ಮೇಲೆ ನಡೆದಿದೆ ಎನ್ನುವ ಸಚಿವ ರಾಜಣ್ಣ ಅವರ ಬಹಿರಂಗ ಹೇಳಿಕೆ ಅನೇಕ ಸಚಿವರು, ಶಾಸಕರ ನಿದ್ದೆಗೆಡಿಸಿದೆ.
ಇದನ್ನೂ ಓದಿ: Vishweshwar Bhat Column: ಸುಮೋ ಅಳುವ ಮಗು ಉತ್ಸವ
ಹೀಗಾಗಿ ಕಾಂಗ್ರೆಸ್‌ನ ಅನೇಕ ಶಾಸಕರು ಈ ಪ್ರಕರಣದ ಬಗ್ಗೆ ತನಿಖೆ ಆಗಲೇಬೇಕು. ಇದನ್ನು ಇಲ್ಲಿಗೇ ಬಿಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಅನೇಕ ಹಿರಿಯರ ನಾಯಕರನ್ನು ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಹನಿಟ್ರ್ಯಾಪ್ ತನಿಖೆಗೆ ಈಗ ಬಿಜೆಪಿಗಿಂತ ಕಾಂಗ್ರೆಸ್ ಶಾಸಕರ ಒತ್ತಡವೇ ತೀವ್ರವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಸದ್ಯದ ರಾಷ್ಟ್ರಮಟ್ಟದಲ್ಲಿ ಪ್ರತಿಕ್ರಿಯಿಸಲಿದೆ ಎನ್ನಲಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಹನಿಟ್ರ್ಯಾಪ್ ವಿಚಾರ ವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರು ಸಂಸತ್‌ನಲ್ಲಿ ಚರ್ಚಿಸುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ರಾಜ್ಯದ ಇತರ ಬಿಜೆಪಿ ಸಂಸದರೂ ಧ್ವನಿಗೂಡಿಸುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕಾಂಗ್ರೆಸ್ ವರಿಷ್ಠರು ಪಕ್ಷದ ಗೌರವ ರಾಷ್ಟ್ರಮಟ್ಟದಲ್ಲಿ ಮಣ್ಣಾಗಬಾರದು ಎಂದು ಪ್ರಕರಣದ ತನಿಖೆ ಬಗ್ಗೆ ರಾಜ್ಯ ಸರಕಾರಕ್ಕೆ ಸ್ಪಷ್ಟಸೂಚನೆ ನೀಡಲಿದ್ದಾರೆ. ಅಲ್ಲದೆ, ತನಿಖೆ ಒಂದು ಹಂತಕ್ಕೆ ಬರುತ್ತಿದ್ದಂತೆ ಪಕ್ಷದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ
ಅಪನಂಬಿಕೆ, ಆತಂಕ
ಹನಿಟ್ರ್ಯಾಪ್ ಪ್ರಕರಣ ಒಂದು ಕಡೆ ವಿಧಾನ ಪರಿಷತ್ ಸಭಾಪತಿ ಅವರೇ ಬೇಸತ್ತು ರಾಜೀ ನಾಮೆ ನಿರ್ಧಾರ ಮಾಡುವಂತಿದ್ದರೆ, ಮತ್ತೊಂದು ಕಡೆ ಸರಕಾರದೊಳಗೆ ಸಚಿವರು, ಶಾಸಕರಲ್ಲಿ ಅಪನಂಬಿಕೆ ವಾತಾವರಣ ಸೃಷ್ಟಿಸಿದೆ. ಅಂದರೆ, ಸಚಿವರು, ಶಾಸಕರು ತಮ್ಮ ರಾಜಕೀಯ ಭವಿಷ್ಯ ಗಮನದಲ್ಲಿಟ್ಟುಕೊಂಡು ಯಾರ ಜತೆಗೆ ಹೇಗೆ ವ್ಯವವಹರಿಸಬೇಕು. ಯಾರ ಜತೆ ಸಂಪರ್ಕ ಇಟ್ಟುಕೊಳ್ಳಬೇಕು ಎನ್ನುವುದೇ ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ನಂತರದ ಹೇಳಿಕೆಗಳು, ಬೆಳವಣಿಯಿಂದ ಯಾರೂ ಯಾರ ನ್ನೂ ನಂಬದಂತಾಗಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಸಚಿವರಿಗೇಕೆ ಅನಿವಾರ್ಯ?
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಚಿವ ರಾಜಣ್ಣ ಈಗಾಗಲೇ ಪಕ್ಷದ ಹೈಕಮಾಂಡ್ ಮತ್ತು ಪೊಲೀಸ್ ಇಲಾಖೆಗೆ ಅನಧಿಕೃತವಾಗಿ ಮಾಹಿತಿ ನೀಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿವರಗಳನ್ನು ಬಿಚ್ಚಿಟ್ಟಿದ್ದು, ಇನ್ನೂ 40 ಮಂದಿ ಮೇಲೆ ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದರಿಂದ ಅವರೀಗ ಅಧಿಕೃತವಾಗಿ ದೂರು ನೀಡಲೇಬೇಕಾದ ಅನಿವಾರ್ಯವಿದೆ. ಇದರಲ್ಲಿ ಮಧ್ಯೆ, ಪ್ರತಿಪಕ್ಷದವರಿಗೆ ಚೀಟಿ ಬರೆದು ಮಾತನಾಡುವಂತೆ ಸೂಚಿಸಿದ್ದು, ಹನಿ ಟ್ರಾಪ್‌ನಲ್ಲಿ ಕಾಂಗ್ರೆಸ್ ನವರ ಷಡ್ಯಂತ ರಿದ್ದರೆ, ಅದೆಲ್ಲವೂ ತನಿಖೆಗೆ ಒಳಪಡಬೇಕಾದ ಅಗತ್ಯ ಕಾಣುತ್ತಿದೆ. ಹೀಗಾಗಿ ಸಚಿವ ರಾಜಣ್ಣ ಅವರೇ ಇಕ್ಕಟ್ಟಿನಲ್ಲಿದ್ದಾರೆ ಎನ್ನಲಾಗಿದೆ.
*
ಹನಿಟ್ರ್ಯಾಪ್ ವಿಚಾರವಾಗಿ ಎಚ್‌ಡಿಕೆ ಸಂಸತ್‌ನಲ್ಲಿ ಚರ್ಚಿಸುವ ಸಾಧ್ಯತೆ, ಬಿಜೆಪಿ ಸಂಸ ದರೂ ಧ್ವನಿಗೂಡಿಸುವ ಸಂಭವ
ಪಕ್ಷದ ಗೌರವ ಮಣ್ಣಾಗಬಾರದು ಎಂಬ ಕಾರಣಕ್ಕೆ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಹೈಕಮಾಂಡ್ ಸೂಚಿಸುವ ಸಾಧ್ಯತೆ
ತನಿಖೆ ಒಂದು ಹಂತಕ್ಕೆ ಬರುತ್ತಿದ್ದಂತೆ ಪಕ್ಷದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ನಿಚ್ಚಳ