ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

National Bird Day: ಆಕಾಶದ ಅತಿಥಿಗಳ ರಕ್ಷಿಸೋಣ

ಪ್ರತಿ ವರ್ಷ ಜನವರಿ 5ರಂದು "ರಾಷ್ಟ್ರೀಯ ಪಕ್ಷಿಗಳ ದಿನ"ವನ್ನು ಆಚರಿಸಲಾಗುತ್ತದೆ. ಆಕಾಶ ದಲ್ಲಿ ಮುಕ್ತ ವಾಗಿ ಹಾರಾಡುವ ಹಕ್ಕಿಗಳು ಕೇವಲ ಸೌಂದರ್ಯದ ಸಂಕೇತವಲ್ಲ, ಅವು ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗ. ಪ್ರಕೃತಿಯಲ್ಲಿನ ಆಹಾರ ಸರಪಳಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಮನುಷ್ಯನ ಬದುಕಿಗೆ ಪೂರಕವಾದ ವಾತಾವರಣ ನಿರ್ಮಿಸು ವಲ್ಲಿ ಪಕ್ಷಿಗಳ ಪಾತ್ರ ಅನನ್ಯ

ಪ್ರತಿ ವರ್ಷ ಜ.5ರಂದು ‘ರಾಷ್ಟ್ರೀಯ ಪಕ್ಷಿಗಳ ದಿನ’ ಆಚರಣೆ

-

Ashok Nayak
Ashok Nayak Jan 4, 2026 11:30 PM

ವಿನುತಾ ಹೆಗಡೆ ಶಿರಸಿ

ಪ್ರತಿ ವರ್ಷ ಜನವರಿ 5ರಂದು "ರಾಷ್ಟ್ರೀಯ ಪಕ್ಷಿಗಳ ದಿನ"(National Bird Day) ವನ್ನು ಆಚರಿಸಲಾಗುತ್ತದೆ. ಆಕಾಶದಲ್ಲಿ ಮುಕ್ತ ವಾಗಿ ಹಾರಾಡುವ ಹಕ್ಕಿಗಳು ಕೇವಲ ಸೌಂದರ್ಯದ ಸಂಕೇತವಲ್ಲ, ಅವು ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗ. ಪ್ರಕೃತಿ ಯಲ್ಲಿನ ಆಹಾರ ಸರಪಳಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಮನುಷ್ಯನ ಬದುಕಿಗೆ ಪೂರಕವಾದ ವಾತಾವರಣ ನಿರ್ಮಿಸು ವಲ್ಲಿ ಪಕ್ಷಿಗಳ ಪಾತ್ರ ಅನನ್ಯ.

ಈ ದಿನಾಚರಣೆಯು ಮುಖ್ಯವಾಗಿ ಅಮೆರಿಕದಲ್ಲಿ ಆರಂಭವಾದರೂ, ಇಂದು ಜಾಗತಿಕ ವಾಗಿ ಪಕ್ಷಿ ಪ್ರೇಮಿಗಳು ಮತ್ತು ಪರಿಸರವಾದಿಗಳು ಇದನ್ನು ಆಚರಿಸುತ್ತಾರೆ. ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮೂಲ ಉದ್ದೇಶ. ಅಕ್ರಮ ಪಕ್ಷಿ ವ್ಯಾಪಾರವನ್ನು ತಡೆಯುವುದು ಮತ್ತು ಪಂಜರದಲ್ಲಿ ಬಂಧಿಯಾಗಿರುವ ಪಕ್ಷಿಗಳಿಗೆ ಮುಕ್ತಿ ನೀಡುವ ಬಗ್ಗೆ ಧ್ವನಿ ಎತ್ತುವುದು. ನಗರೀಕರಣ ದಿಂದಾಗಿ ನಾಶವಾಗುತ್ತಿರುವುದನ್ನು ಉಳಿಸಿಕೊಳ್ಳುವುದಾಗಬೇಕು.

ಉಚಿತ ಸೇವೆ"ಗಳನ್ನು ಸಲ್ಲಿಸುತ್ತವೆ: ಜೇನುನೊಣಗಳಂತೆ ಹಕ್ಕಿಗಳು ಕೂಡ ಹೂವಿನಿಂದ ಹೂವಿಗೆ ಹಾರಿ ಪರಾಗಸ್ಪರ್ಶ ಕ್ರಿಯೆಗೆ ಮತ್ತು ಸಸ್ಯಗಳ ಸಂತಾನೋತ್ಪತ್ತಿಗೆ ನೆರವಾಗುತ್ತವೆ. ಹಣ್ಣುಗಳನ್ನು ತಿಂದ ಪಕ್ಷಿಗಳು ಬೀಜಗಳನ್ನು ದೂರದ ಪ್ರದೇಶಗಳಿಗೆ ಹರಡುವುದರಿಂದ ಕಾಡುಗಳ ವಿಸ್ತರಣೆ ನೈಸರ್ಗಿಕವಾಗಿ ನಡೆಯುತ್ತದೆ.

ಇದನ್ನೂ ಓದಿ: Bee Humming Bird: ಜಗತ್ತಿನ ಅತಿ ಚಿಕ್ಕದಾದ ಪಕ್ಷಿ ನೋಡಿದ್ರಾ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ

ಕೃಷಿ ಭೂಮಿಯಲ್ಲಿ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಿನ್ನುವ ಮೂಲಕ ಪಕ್ಷಿಗಳು ರೈತನ ಮಿತ್ರನಂತೆ ಕೆಲಸ ಮಾಡುತ್ತವೆ. ರಣಹದ್ದುಗಳಂತಹ ಪಕ್ಷಿಗಳು ಸತ್ತ ಪ್ರಾಣಿಗಳ ಮಾಂಸವನ್ನು ತಿಂದು ಪರಿಸರವನ್ನು ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿಸುತ್ತವೆ.

ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು: ಇಂದಿನ ದಿನಗಳಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಆತಂಕಕಾರಿ ವಿಷಯ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಮೊಬೈಲ್ ಟವರ್ಗಳ ವಿಕಿರಣ: ಇದು ಗುಬ್ಬಚ್ಚಿಗಳಂತಹ ಮುಂದಿನ ಪೀಳಿಗೆಗೆ ಈ ಸುಂದರ ಹಕ್ಕಿಗಳನ್ನು ಉತ್ತರ ಕನ್ನಡದ ಹೆಮ್ಮೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೊಯಿಡಾ ಭಾಗವು ನಾಲ್ಕು ವಿಧದ ಧನೇಶ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಇವುಗಳ ಸಂರಕ್ಷಣೆಗಾಗಿ ಸ್ಥಳೀಯವಾಗಿ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅತ್ತಿವೇರಿ ಕೆರೆಯು ಕೃಷಿ ಭೂಮಿಯಿಂದ ಆವೃತವಾಗಿದ್ದು, ಇಲ್ಲಿನ ಪಕ್ಷಿಗಳು ರೈತರಿಗೆ ಕೀಟ ನಿಯಂತ್ರಣದಲ್ಲಿ ಸಹಕಾರಿಯಾಗಿವೆ. ಸಣ್ಣ ಹಕ್ಕಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಅತಿಯಾದ ಕೀಟನಾಶಕ ಬಳಕೆ: ವಿಷಪೂರಿತ ಆಹಾರ ಸೇವನೆಯಿಂದ ಪಕ್ಷಿಗಳ ಸಂತಾನ ಶಕ್ತಿ ಕುಂದುತ್ತಿದೆ. ಹವಾಮಾನ ವೈಪರೀತ್ಯ ಬದಲಾಗುತ್ತಿರುವ ಹವಾಮಾನದಿಂದ ವಲಸೆ ಹಕ್ಕಿಗಳ ದಾರಿ ತಪ್ಪುತ್ತಿದೆ.

ನಮ್ಮ ಜವಾಬ್ದಾರಿ ಏನು?:

ಕುಡಿಯುವ ನೀರಿನ ವ್ಯವಸ್ಥೆ: ಬೇಸಿಗೆಯಲ್ಲಿ ನಿಮ್ಮ ಮನೆ ಅಂಗಳ ಅಥವಾ ಬಾಲ್ಕನಿ ಗಳಲ್ಲಿ ಪಕ್ಷಿಗಳಿಗಾಗಿ ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಧಾನ್ಯಗಳನ್ನು ಇಡಿ.

ಗಿಡಗಳನ್ನು ನೆಡುವುದು: ಹಣ್ಣು ಬಿಡುವ ಸ್ಥಳೀಯ ತಳಿಯ ಗಿಡಗಳನ್ನು ಬೆಳೆಸುವ ಮೂಲಕ ಅವುಗಳಿಗೆ ಆಶ್ರಯ ನೀಡಿ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ: ಪ್ಲಾಸ್ಟಿಕ್ ತ್ಯಾಜ್ಯಗಳು ಪಕ್ಷಿಗಳ ಸಾವಿಗೆ ದೊಡ್ಡ ಕಾರಣವಾಗುತ್ತಿವೆ. ಉಳಿಸಿಕೊಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ರಾಷ್ಟ್ರೀಯ ಪಕ್ಷಿಗಳ ದಿನದಂದು ನಾವು ಪಕ್ಷಿ ಸಂಕುಲವನ್ನು ರಕ್ಷಿಸುವ ಸಂಕಲ್ಪ ಮಾಡೋಣ.

ಅತ್ತಿವೇರಿ ಪಕ್ಷಿಧಾಮ: ಸುಮಾರು 2.23 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಈ ಧಾಮವು ಅತ್ತಿವೇರಿ ಜಲಾಶಯದ ಸುತ್ತಲೂ ಇದೆ. ಇಲ್ಲಿ ನದಿ ತೀರದ ಮತ್ತು ಎಲೆ ಉದು ರಿಸುವ ಕಾಡುಗಳ ಮಿಶ್ರಣ ವಿದೆ. ಇಲ್ಲಿ ಸುಮಾರು 80ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳನ್ನು ಕಾಣಬಹುದು. ಮುಖ್ಯವಾಗಿ ಬಿಳಿ ಐಬಿಸ್ ಚಮಚದ ಕೊಕ್ಕಿನ ಹಕ್ಕಿ ಪೈಡ್ ಕಿಂಗಿಶರ್, ಬಣ್ಣದ ಕೊಕ್ಕಿನ ಕೊಕ್ಕರೆ ಮತ್ತು ಕಪ್ಪು ತಲೆಯ ಐಬಿಸ್ಗಳು ಇಲ್ಲಿಗೆ ವಲಸೆ ಬರುತ್ತವೆ.

ಭೇಟಿಗೆ ಸೂಕ್ತ ಸಮಯ: ನವೆಂಬರ್‌ʼನಿಂದ ಮಾರ್ಚ್ ತಿಂಗಳವರೆಗೆ ವಲಸೆ ಹಕ್ಕಿಗಳ ದಂಡೇ ಇಲ್ಲಿ ಇರುತ್ತದೆ.

ದಾಂಡೇಲಿ ವನ್ಯಜೀವಿ ಧಾಮ: ಇದು ಕೇವಲ ಪ್ರಾಣಿಗಳಿಗೆ ಮಾತ್ರವಲ್ಲ, ಪಕ್ಷಿ ಕಾಶಿ ಎಂದೂ ಕರೆಯಲ್ಪಡುತ್ತದೆ. ಇಲ್ಲಿ 300ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿವೆ. ಅದರಲ್ಲೂ ವಿಶೇಷವಾಗಿ ಧನೇಶ ಪಕ್ಷಿ ವೀಕ್ಷಣೆಗೆ ದಾಂಡೇಲಿ ಹೆಸರುವಾಸಿ.

ವಿಶೇಷ ಪಕ್ಷಿಗಳು: ಮಲಬಾರ್‌ಪೈಡ್ ಹಾರ್ನ್‌ಬಿಲ್, ಗ್ರೇಟ್ ಹಾರ್ನ್‌ಬಿಲ್, ಮಲಬಾರ್‌ ಟ್ರೋಗನ್ ಮತ್ತು ‘ಪಕ್ಷಿಗಳಿಲ್ಲದ ಜಗತ್ತು ಬಣ್ಣವಿಲ್ಲದ ಚಿತ್ರದಂತೆ.‘ ನಮ್ಮ ನಗರದಲ್ಲಿ ಪೈಪ್‌ಲೈನ್ ವಿವಿಧ ಬಗೆಯ ಗೂಬೆಗಳನ್ನು ಇಲ್ಲಿ ಕಾಣಬಹುದು. ಕಾಳಿ ನದಿಯ ತೀರದಲ್ಲಿ ಪಕ್ಷಿಗಳ ಚಿಲಿಪಿಲಿ ಸದಾ ಕೇಳಿಬರುತ್ತದೆ.

ಉತ್ತರ ಕನ್ನಡದ ಹೆಮ್ಮೆ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೊಯಿಡಾ ಭಾಗವು ನಾಲ್ಕು ವಿಧದ ಧನೇಶ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಇವುಗಳ ಸಂರಕ್ಷಣೆಗಾಗಿ ಸ್ಥಳೀಯವಾಗಿ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅತ್ತಿವೇರಿ ಕೆರೆಯು ಕೃಷಿ ಭೂಮಿಯಿಂದ ಆವೃತ ವಾಗಿದ್ದು, ಇಲ್ಲಿನ ಪಕ್ಷಿಗಳು ರೈತರಿಗೆ ಕೀಟ ನಿಯಂತ್ರಣದಲ್ಲಿ ಸಹಕಾರಿಯಾಗಿವೆ.