Bigg Boss Kannada 12: ಅಶ್ವಿನಿ ಗೌಡಗೆ ಮತ್ತೆ ಕಾಲೆಳೆದ ಗಿಲ್ಲಿ ನಟ; ಈ ಬಾರಿ ಸಾಥ್ ನೀಡಿದ ರಾಶಿಕಾ ಶೆಟ್ಟಿ!
Gilli Nata vs Ashwini: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಶ್ವಿನಿ ಗೌಡ ಅವರನ್ನು ಅಣಕಿಸುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಅಶ್ವಿನಿ ಅವರು ಧ್ರುವಂತ್ ಬಳಿ ರಕ್ಷಣೆ ಕೇಳುವುದನ್ನು ಇಮಿಟೇಟ್ ಮಾಡಿದ ಗಿಲ್ಲಿಗೆ ರಾಶಿಕಾ ಮತ್ತು ಕಾವ್ಯ ಧ್ವನಿಗೂಡಿಸಿದ್ದಾರೆ. ಇದರಿಂದ ಕೆರಳಿದ ಅಶ್ವಿನಿ, "ನೀವು ಕ್ಯಾಪ್ಟನ್ ಆಗಿ ಏನು ದಬಾಕ್ಕಿದ್ದೀರಿ ಅಂತ ಗೊತ್ತು" ಎಂದು ತಿರುಗೇಟು ನೀಡಿದ್ದಾರೆ.
-
ಆರಂಭದಿಂದಲೂ ನಟಿ ಅಶ್ವಿನಿ ಗೌಡ ಅವರಿಗೂ ಮತ್ತು ಗಿಲ್ಲಿ ನಟನಿಗೂ ಅಷ್ಟಕ್ಕಷ್ಟೇ. ಸಿಕ್ಕ ಚಾನ್ಸ್ ಮಿಸ್ ಮಾಡಿಕೊಳ್ಳದ ಗಿಲ್ಲಿ ನಟ ಆಗಾಗ ಅಶ್ವಿನಿ ಗೌಡಗೆ ಕಾಲೆಳಯುತ್ತಿರುತ್ತಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿರುವುದನ್ನೂ ಕೂಡ ನೋಡಿದ್ದೇವೆ. ಇನ್ನೇನು ಬಿಗ್ ಬಾಸ್ ಮುಗಿಯಲು ಎರಡು ವಾರ ಬಾಕಿ ಇವೆ. ಆದರೂ ಇಬ್ಬರ ನಡುವಿನ ಈ ಕಿತ್ತಾಟ ಮಾತ್ರ ನಿಂತಿಲ್ಲ. ಮುಂದುವರಿಯುತ್ತಲೇ ಇದೆ.
ಅಶ್ವಿನಿಗೆ ಕಾಲೆಳೆದ ಗಿಲ್ಲಿ ನಟ
ಮನೆಯ ಕಿಚನ್‌ನಲ್ಲಿ ಕ್ಲೀನಿಂಗ್ ಮಾಡುವುದರಲ್ಲಿ ಬ್ಯುಸಿ ಆಗಿರುವ ಗಿಲ್ಲಿ ನಟ ಅವರು ನೀರು ಕುಡಿಯಲು ಬಂದಿದ್ದ ಅಶ್ವಿನಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. "ನಾನೊಬ್ಬಳ್ಳೆ ಇದ್ದಾಗ ಇವರಿಂದ ನನಗೆ ಮೆಂಟಲಿ ಟಾರ್ಚರ್ ಆಗತ್ತೆ. ನನಗೆ ಹೆಲ್ಪ್ ಮಾಡಿ ಧ್ರುವ್, ನನಗೆ ಪ್ರೊಟೆಕ್ಷನ್ ಕೊಡಿ ಧ್ರುವ್.. ನನ್ ಕೈಲಿ ಆಗ್ತಿಲ್ಲ ಧ್ರುವ್.." ಎಂದು ಅಶ್ವಿನಿ ಥರ ಇಮಿಟೇಟ್ ಮಾಡಿದ್ದಾರೆ ಗಿಲ್ಲಿ ನಟ. ಬಳಿಕ ನೇರಾನೇರ ಮಾತಿಗಿಳಿದ ಅವರು, "ವಯಸ್ಸಾಯ್ತು ಪಾಪ.. ಕ್ಯಾಪ್ಟನ್ ಆಗೋಕು ಆಗಲಿಲ್ಲ. ಒಂದು ಉಸ್ತುವಾರಿ ಕೂಡ ಸರಿಯಾಗಿ ಮಾಡೋಕೆ ಬರೋದಿಲ್ಲ" ಎಂದು ಗಿಲ್ಲಿ ಕಾಲೆಳೆದರೆ, ತಕ್ಷಣವೇ ರಾಶಿಕಾ ಶೆಟ್ಟಿ ಸಾಥ್ ನೀಡಿದ್ದಾರೆ.
Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
"ಅವರಿಗೆ ಕ್ಯಾಪ್ಟನ್ ಆಗೋಕೆ ಆಗಿಲ್ಲ ಸುಮ್ನಿರು.. ಕ್ಯಾಪ್ಟನ್ ಕೂಡ ಆಗದೇ ಇರೋರು ಇನ್ನು ಉಸ್ತುವಾರಿ ಎಲ್ಲಿಂದ ಆಗ್ತಾರೆ" ಎಂದು ರಾಶಿಕಾ ಹೇಳಿದ್ದಾರೆ. ಇನ್ನು, ರಾಶಿಕಾಗೆ ಸಾಥ್ ಕೊಟ್ಟ ಕಾವ್ಯ, "ನಿನಗೆ ಕ್ಯಾಪ್ಟನ್ ಆಗೋ ಯೋಗ್ಯತೆಯೇ ಇಲ್ಲ. ನಾನು ಅಖಾಡದಲ್ಲಿ ಸಾಬೀತು ಮಾಡಿದೆ ಅಂತಾರೆ. ಆದರೆ ಏನೂ ಆಗಲೇ ಇಲ್ಲ" ಎಂದು ಅಶ್ವಿನಿಗೆ ಟಕ್ಕರ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ
BBK 12: ಬಿಗ್ ಬಾಸ್ ಕಾಲೇಜ್ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ
ಸಿಟ್ಟು ಮಾಡಿಕೊಂಡ ಅಶ್ವಿನಿ ಗೌಡ!
ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಕಾವ್ಯ ತಮ್ಮ ಬಗ್ಗೆ ಮಾತನಾಡುವಾಗ, ಅದಕ್ಕೆಲ್ಲಾ ಕೌಂಟರ್ ಕೊಡುವಂತೆ ಅಶ್ವಿನಿ ಮಾತನಾಡಿದ್ದಾರೆ. "ರೂಮ್‌ಗೆ ಹೋಗಿ ಗುಬ್ರಾಕ್ಕೊಂಡು ಮಲ್ಕೊಂಡು ಮಾತಾಡು ಹೋಗು. ಮೊದಲು ಮದುವೆ ಆಗು. ಮೂಳೆ ಬಿದ್ದೋಗ್ತಿವೆ. ಇವರೆಲ್ಲಾ ಕ್ಯಾಪ್ಟನ್ ಆಗಿ, ಉಸ್ತುವಾಗಿಯಾಗಿ ಏನೇನ್ ದಬಾಕ್ಕೀದ್ದೀರಿ ಅಂತ ಗೊತ್ತು. ಅದಕ್ಕೆ ಉಗಿದಿದ್ದು ನಿಮಗೆ" ಎಂದು ಸಿಟ್ಟಿನಿಂದ ಹೇಳಿದ್ದಾರೆ ಅಶ್ವಿನಿ ಗೌಡ. ಇದರ ಪೂರ್ಣ ಸಂಚಿಕೆ ಇಂದು (ಜ.5) ಪ್ರಸಾರವಾಗಲಿದೆ.