ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಷ್ಟದಲ್ಲಿ ಕಸಾಪ: ಸಮ್ಮೇಳನವಿಲ್ಲ, ಸಂಬಳವೂ ಇಲ್ಲ..!

ಪರಿಷತ್ತಿನಲ್ಲಿ ಕನ್ನಡ ಕಟ್ಟಿ ಬೆಳೆಸಲು ಕೋಟಿ ಕೋಟಿ ರು. ಕಾಸಿದ್ದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ, ಅಷ್ಟೇ ಏಕೆ ಕನ್ನಡಕ್ಕಾಗಿ ನಿತ್ಯ ದುಡಿಯುತ್ತಿರುವ ಪರಿಷತ್ತಿನ ನೂರಾರು ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ನಯಾಪೈಸೆ ಸಂಬಳವನ್ನೂ ನೀಡದೆ ಸರಕಾರದ ಆಡಳಿತಾಧಿಕಾರಿಗಳು ಸತಾಯಿಸಲಾಗುತ್ತಿದ್ದಾರೆ.

ಕಷ್ಟದಲ್ಲಿ ಕಸಾಪ: ಸಮ್ಮೇಳನವಿಲ್ಲ, ಸಂಬಳವೂ ಇಲ್ಲ..!

-

Ashok Nayak
Ashok Nayak Jan 5, 2026 5:22 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ದುಡಿದ ಕಾಸು ಕೊಡದ ಕಸಾಪ ತನಿಖಾಧಿಕಾರಿಗೇ ಶೋಕಾಸ್ ನೊಟೀಸ್

ಕಾರ್ಮಿಕರ ಕಣ್ಣೀರ ಗೋಳು

ಇಷ್ಟೂ ದಿನ ದುರಾಡಳಿತ ಆರೋಪದಿಂದ ಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತು, ಈಗ ಸರಕಾರ ನಿಯೋಜಿಸಿರುವ ಆಡಳಿತದಿಂದಲೇ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ನಾಲ್ಕು ವರ್ಷ ಗಳಿಂದ ಆರೋಪ, ಪ್ರತ್ಯಾರೋಪಗಳ ಕ್ಷಿಪಣಿ ದಾಳಿ ವಿನಿಮಯವಾಗುತ್ತಿದ್ದರೂ ಒಂದಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ಕೆಲಸಗಳನ್ನು ನಡೆಯುತ್ತಿದ್ದವು, ಆದರೆ ಸರಕಾರದ ಮಧ್ಯಪ್ರವೇಶ, ಅದರಲ್ಲೂ ಆಡಳಿತಾಧಿಕಾರಿ ನಿಯೋಜನೆ ನಂತರ ಕಸಾಪ ನಿಜಕ್ಕೂ ಕಷ್ಟಗಳ ಕಸದ ಗುಂಡಿಯಂತಾಗಿದೆ.

ಪರಿಷತ್ತಿನಲ್ಲಿ ಕನ್ನಡ ಕಟ್ಟಿ ಬೆಳೆಸಲು ಕೋಟಿ ಕೋಟಿ ರು. ಕಾಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಅಷ್ಟೇ ಏಕೆ ಕನ್ನಡಕ್ಕಾಗಿ ನಿತ್ಯ ದುಡಿಯುತ್ತಿರುವ ಪರಿಷತ್ತಿನ ನೂರಾರು ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ನಯಾಪೈಸೆ ಸಂಬಳವನ್ನೂ ನೀಡದೆ ಸರಕಾರದ ಆಡಳಿತಾಧಿಕಾರಿಗಳು ಸತಾಯಿಸಲಾಗುತ್ತಿದ್ದಾರೆ.

ಇದರಿಂದ ಕನ್ನಡದ ಕೆಲಸದ ಜತೆಗೆ ಬದುಕು ಬೆಸೆದುಕೊಂಡಿರುವ ನೂರಾರು ನೌಕರರ ನೋವು ಹೇಳತೀರದಂತಾಗಿದೆ. ಮೂರು ದಶಕಗಳಿಂದ ದುಡಿಯುತ್ತಿರುವ ನೂರಾರು ನೌಕರರನ್ನು ಇನ್ನೇನೋ ಖಾಯಂ ಮಾಡಲಾಗುತ್ತದೆ ಎನ್ನುವ ಸೂಚನೆ ಸಿಗುತ್ತಿದ್ದಂತೆ ಅವರ ದುಡಿಮೆಯ ಕೂಲಿಯೂ ಸಿಗದಂತೆ ಮಾಡಿ ಕಣ್ಣೀರಿಡುವಂತಾಗಿದೆ.

ಇದನ್ನೂ ಓದಿ: M V Negalur Column: ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ

ಅಷ್ಟಕ್ಕೂ ಪರಿಷತ್ತಿನಲ್ಲಿ ದುಡಿಯುತ್ತಿರುವ ಈ ಕನ್ನಡದ ಕಾರ್ಮಿಕರಲ್ಲಿ ಬಹುತೇಕ ಹೆಣ್ಣುಮಕ್ಕಳೇ ಆಗಿದ್ದಾರೆ. ಆದರೂ ಸರಕಾರದ ಆಡಳಿತಾಧಿಕಾರಿಗಳು ಕೋರ್ಟ್ ಕಡೆ ಕೈ ತೋರಿಸಿ ಸಂಬಳಕ್ಕೆ ಕೊಕ್ಕೆ ಹಾಕಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ. ಈ ವಿಚಾರ ಸದ್ಯ ರಾಜ್ಯ ಲೋಕಾಯುಕ್ತರ ನ್ಯಾಯಾಲಯ ಮೆಟ್ಟಿಲೇರಿದ್ದು, ಲೋಕಾಯುಕ್ತರಿಂದ ಕಸಾಪ ಆಡಳಿತಾಧಿಕಾರಿಗೆ ನೊಟೀಸ್ ಜಾರಿಯಾಗಿದೆ. ಈ ವಿಚಾರ ರಾಜ್ಯ ಪಾಲರಿಗೂ ತಲು ಪಿದ್ದು ಅವರಿಂದಲೂ ವರದಿ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಸಾಪದಲ್ಲಿ ಕಾರ್ಮಿಕರ ಪರಿಸ್ಥಿತಿಯೇ ಹೀಗಿರು ವಾಗ ಇನ್ನು ಪರಿಷತ್ತಿನಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯಕ್ಕ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಬ್ಧವಾಗಿವೆ, ಹೀಗಾಗಿ 67 ವರ್ಷಗಳ ನಂತರ ಬಳ್ಳಾರಿಯಲ್ಲಿ ನಡೆಯಬೇಕಿದ್ದ 88ನೇ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಕಾಸಿದ್ದರೂ ಖರ್ಚು ಮಾಡಲಾಗದೆ ಆಡಳಿತಾಧಿಕಾರ ತಂದಿಟ್ಟ ಕತ್ತಲೆಯಲ್ಲಿ ಮುಳುಗುವಂತಾಗಿದೆ ಎನ್ನುತ್ತಾರೆ ಕನ್ನಡ ಹಿರಿಯ ಸಾಹಿತಿಗಳು. ಈ ಬಗ್ಗೆ ಕನ್ನಡ ಸಂಸ್ಕೃತಿ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಕಾರ್ಮಿಕರ ಕಣ್ಣೊರೆಸ ಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಕಸಾಪ ಕಣ್ಣೀರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ಪ್ರೇಮದ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ 1915ರಿಂದಲೂ ರಾಜಾಶ್ರಯದಿಂದಲೂ ನಿಗದಿತ ಆರ್ಥಿಕ ನೆರವು ಕನ್ನಡ ಕಟ್ಟುವ ಕೈಂಕರ್ಯಕ್ಕಾಗಿ ದೊರೆಯುತ್ತಿತ್ತು. ಅದರಂತೆ ಪ್ರಜಾಪ್ರಭುತ್ವ ಬಂದ ನಂತರ ಕೂಡ ಸರಕಾರಗಳು ಕಸಾಪಗೆ ಅನುದಾನವನ್ನು ಮುಂದುವರಿಸಿದವು. ಈ ವರ್ಷ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು 10 ಕೋಟಿ ರು. ನೀಡಲಾಗಿದೆ, ಹಾಗೆಯೇ ಸಂಬಳ ಹಾಗೂ ಕನ್ನಡ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ವೆಚ್ಚಗಳಿಗಾಗಿ 5 ಕೋಟಿ ರು.ಗಳನ್ನು ನೀಡಲಾಗಿದೆ.

ಆದರೆ ಸರಕಾರ ಈ ತನಕ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಆಡಳಿತಾತ್ಮಕ ವೆಚ್ಚಕ್ಕಾಗಲಿ, ಕನ್ನಡ ಕಾರ್ಮಿಕರ ವೇತನಕ್ಕಾಗಲಿ ನೀಡಬೇಕಿದ್ದ ಚೂರುಪಾರು ಹಣ ಬಿಡುಗಡೆಗೂ ಅಧಿಕಾರಿಗಳು ಅಡ್ಡಗಾಲಾಗಿದ್ದಾರೆ.

ಇದಕ್ಕೆ ಕಸಾಪ ಚಟುವಟಿಕೆಗಳ ತನಿಖೆ ಎಂಬ ಕಾರಣ ನೀಡುತ್ತಿದ್ದಾರೆ. ಪರಿಷತ್ತಿನಲ್ಲಿ ಐದು ತಿಂಗಳ ಹಿಂದೆ ಅಕ್ರಮ, ಸ್ವಜನಪಕ್ಷಪಾತದ ಆರೋಪ, ಪ್ರತ್ಯಾರೋಪ ವಿಪರೀತಕ್ಕೆ ಹೋಗಿ ಸರಕಾರವು ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಿತ್ತು. ಈ ವಿಚಾರ ಹೈಕೋರ್ಟ್ ಮೆಟ್ಟಿಲೇ ರಿದ್ದು ಜ.13ರಂದು ವಿಚಾರಣೆ ನಡೆಯಲಿದೆ, ಆದರೆ ನೌಕರರ ವೇತನ ಸ್ಥಗಿತಕ್ಕೆ ಸರಕಾರ ವಾಗಲಿ, ಹೈಕೋರ್ಟ್ ಆಗಲಿ ಅಥವಾ ಯಾವುದೇ ತನಿಖೆ ಸಂಸ್ಥೆಯಾಗಲಿ ಸೂಚನೆ ನೀಡಿಲ್ಲ, ಆದೇಶವನ್ನೂ ಮಾಡಿಲ್ಲ. ಆದರೆ ಅಧಿಕಾರಿಗಳು ಯಾವ ಉದ್ದೇಶಕ್ಕೆ ನೌಕರರಿಗೆ ವೇತನ ನೀಡದೆ ಕಾಡುತ್ತಿದ್ದಾರೋ ತಿಳಿಯದು ಎನ್ನುತ್ತಾರೆ ಓರ್ವ ಕನ್ನಡ ಹಿರಿಯ ಹೋರಾಟಗಾರರು.

ಅಧಿಕಾರಿ ನಿರ್ಲಕ್ಷ್ಯ ತಂದ ಅಕ್ರಮ

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಈ ಹಿಂದೆ ಐಎಎಸ್ ಅಧಿಕಾರಿ ರಂಗಪ್ಪ ಅವರಿದ್ದಾಗ ಪರಿಷತ್ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಪರಿಷತ್ತಿನ ಕಾರ್ಯ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದರಿಂದ ಅವರಿಗೆ ಪರಿಷತ್ ಹಾಗೂ ಅಲ್ಲಿನ ನೌಕರರ ಸಮಸ್ಯೆ ತಿಳಿಯುತ್ತಿತ್ತು. ಆದರೆ ಕಳೆದ ಒಂದೂವರೆ ವರ್ಷಗಳಿಂದ ಇಲಾಖೆಯ ಯಾವುದೇ ಅಧಿಕಾರಿಗಳು ಪರಿಷತ್ ಕಡೆ ತಲೆ ಹಾಕುತ್ತಿಲ್ಲ, ಹೀಗಾಗಿ ಅಕ್ರಮಗಳೂ ಹೆಚ್ಚಾಗಿವೆ, ಕಾರ್ಮಿಕರ ಕಷ್ಟಗಳೂ ಹೆಚ್ಚಾಗಿವೆ. ಹೀಗಾಗಿ ಸದ್ಯ ನಮಗೆ ಆಡಳಿತ ಸರಿಪಡಿಸಲು ಮತ್ತು ತನಿಖೆ ಮಾಡಲು ಬಂದಿರುವ ಅಧಿಕಾರಿಗಳೇ ಪರಿಷತ್ ಗೆ ಕಂಟಕದಂತಾಗಿದ್ದಾರೆ ಎಂದು ಸಂಬಳ ಸಿಗದ ಸಿಬ್ಬಂದಿ ಹೇಳುತ್ತಾರೆ.