ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಪಾದಚಾರಿಗಳಿಂದಲೇ ಟ್ರಾಫಿಕ್ ಜಾಮ್? ಸ್ಟಾರ್ಟ್‌ಅಪ್ ಸಂಸ್ಥಾಪಕನಿಂದ ವಿವಾದಾತ್ಮಕ ಹೇಳಿಕೆ

Viral News: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ನೀಡಿರುವ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಪಾದಚಾರಿಗಳೇ ದೈನಂದಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಎಂದು ಅವರು ದೂಷಿಸಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬೆಂಗಳೂರಿನ ಟ್ರಾಫಿಕ್ ಗೆ ಪಾದಚಾರಿಗಳೇ ಕಾರಣ ಎಂದ ಸ್ಟಾರ್ಟ್‌ಅಪ್ ಸಂಸ್ಥಾಪಕ!

ಸಂಗ್ರಹ ಚಿತ್ರ -

Profile
Pushpa Kumari Apr 15, 2026 4:08 PM

ಬೆಂಗಳೂರು,ಎ. 15: ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣಿಯೂ ಇಂದು ಪ್ರಮುಖ ಸಮಸ್ಯೆಯಾಗಿದೆ. ಜನ ಸಂಖ್ಯೆಗಿಂತ ಇಲ್ಲಿ ವಾಹನಗಳ ಸಂಖ್ಯೆಯೇ ಮೀತಿ ಮೀರಿದ್ದು ಟ್ರಾಫಿಕ್ ದೆಸೆಯಿಂದ ಅತೀಯಾದ ಸಮಯ ವ್ಯರ್ಥವಾಗುತ್ತಿದೆ. ಈ ನಡುವೆ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ನೀಡಿರುವ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಪಾದಚಾರಿಗಳೇ ದೈನಂದಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಎಂದು ಅವರು ದೂಷಿಸಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ಟ್ರಾಫಿಕ್ ಸಮಸ್ಯೆಗೆ ಪಾದಚಾರಿಗಳೇ ಪ್ರಮುಖ ಕಾರಣವಾಗಿದ್ದಾರೆ ಎಂದು ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆ ಪ್ರಯಾಣ ಮಾಡುವಾಗ ಸಂಚಾರದೊಂದಿಗೆ ತಮ್ಮ ದೈನಂದಿನ ಹೋರಾಟವನ್ನು ಹಹಂಚಿಕೊಂಡ ಅವರು ಪಾದಚಾರಿಗಳು ಪಾದಚಾರಿ ಸೇತುವೆ ಬಳಕೆ ಮಾಡುವ ಬದಲು ಜನನಿಬಿಡ ರಸ್ತೆಯಯಲ್ಲೇ ದಾಟುವುದು ಈ ಸಮಯದಲ್ಲಿ ದಟ್ಟಣೆಯನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.

ಮಲ್ಟಿಬ್ಯಾಗ್ ಎಐ (Multibagg AI) ಸಂಸ್ಥೆಯ ಸಂಸ್ಥಾಪಕ ಆದಿತ್ಯ ಆನಂದ್ ಅವರು ಈ ವಿಚಾರವನ್ನು ಶೇರ್ ಮಾಡಿ ಕೊಂಡಿದ್ದಾರೆ. ಅವರು ಬೆಳಿಗ್ಗೆ 6:40 ಕ್ಕೆ ಮನೆಯಿಂದ ಹೊರ ಡುತ್ತಾರೆ, ಕೇವಲ 5 ಕಿಮೀ ದೂರದಲ್ಲಿರುವ ಕೋರ್ಟ್‌ನಲ್ಲಿ ಬ್ಯಾಡ್ಮಿಂಟನ್ ಆಡಲು ಹೋಗುತ್ತಾರೆ. ಇದಕ್ಕೆ ಡ್ರೈವ್ ಗಾಗಿ ಸುಮಾರು 10 ನಿಮಿಷಗಳನ್ನು ತೆಗೆದುಕೊಳ್ಳಬೇಕು, ಆದರೆ ಅವರು ಆಗಾಗ್ಗೆ ವಿಳಂಬವಾಗುತ್ತಾರೆ.

Viral News: ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌? ಏನಿದು ಸ್ಟೋರಿ

ಅವರು ಪ್ರತಿದಿನ ಬೆಳಗ್ಗೆ ಹೆಚ್.ಎ.ಎಲ್ ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿ ಹೋಗುವಾಗ ಹೆಚ್ಚಿನ ಟ್ರಾಫಿಕ್ ಎದುರಿಸುತ್ತಿದ್ದಾರೆ. ಇದಕ್ಕೆ ಅಲ್ಲಿನ ನೂರಾರು ಉದ್ಯೋಗಿಗಳು ರಸ್ತೆ ದಾಟುವುದೇ ಈ ವಿಳಂಬಕ್ಕೆ ಕಾರಣ ಎಂದಿದ್ದಾರೆ. ಹತ್ತಿರದಲ್ಲಿ ಒಂದು ಪಾದಚಾರಿ ಸೇತುವೆ ಇದೆ ವಿದ್ಯಾವಂತ ಜನರು ಅದನ್ನು ಬಳಸದೆ ನೇರವಾಗಿ ರಸ್ತೆಯಲ್ಲೇ ನಡೆದು ಹೋಗುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆತಾಗುತ್ತಿದೆ. ಮತ್ತು ಅನಗತ್ಯ ವಿಳಂಬವಾಗುತ್ತಿದೆ ಎಂದು ಅವರು ದೂರಿದ್ದಾರೆ.

ಈ ಪೋಸ್ಟ್ ಗೆಮಿಶ್ರ ಪ್ರತಿಕ್ರಿಯೆಗಳು ಬಂದಿವೆ‌ ಅನೇಕ ಬಳಕೆದಾ ರರು ಸಂಸ್ಥಾಪಕರ ಅಭಿಪ್ರಾಯ ವನ್ನು ಒಪ್ಪಲಿಲ್ಲ.‌ ಜನರ ಪ್ರಕಾರ ಸಮಸ್ಯೆ ಇರುವುದು ಪಾದಚಾರಿಗಳಲ್ಲ, ಬದಲಿಗೆ ಮೂಲ ಸೌಕರ್ಯದ ವಿನ್ಯಾಸದಲ್ಲಿ ಆಗಿದೆ ಎಂದು ದೂರಿದ್ದಾರೆ. ಬಳಕೆದಾರರೊಬ್ಬರು ನಮ್ಮ ನಗರಗಳು ಕಾರುಗಳಿಗಾಗಿ ನಿರ್ಮಿಸಲ್ಪಟ್ಟಿವೆ, ಜನರಿಗಾಗಿ ಅಲ್ಲ ಎಂದು ಹಾಸ್ಯತ್ಮಾಕವಾಗಿ ಕಾಮೆಂಟ್ ಮಾಡಿದ್ದಾರೆ