ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

ಕಾರ್ಮಿಕರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ ಈಗ ಕಾರ್ಖಾನೆ ನೀಡುವ ಕಟಾವು ದರದ ಜೊತೆಗೆ ರೈತರಿಗೆ ಎಕರೆಗೆ 3 ರಿಂದ 4 ಸಾವಿರ ಹೆಚ್ಚುವರಿ ಹಣವನ್ನು ಏಜೆಂಟರ್‌ ಮೂಲಕ ಕೇಳುತ್ತಾರೆ. ಬೇಗ ಬರಲು ಚಿಕನ್ ಮಟನ್ ಗೆ ಹಣ ನೀಡಬೇಕು ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈಗ ಎಷ್ಟು ಅಲೆದರೂ ಕಬ್ಬು ಕಡಿಯುವವರು ಸಿಗುತ್ತಿಲ್ಲ.

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

-

Ashok Nayak
Ashok Nayak Jan 20, 2026 11:08 AM

ಹುಸೇನ್ ಆರ್‌ಕೊಕಟನೂರ ದೇವರಹಿಪ್ಪರಗಿ

ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬು

ಕಾರ್ಖಾನೆಗೆ ಕಬ್ಬು ಸಾಗಿಸಲು ಹರಸಾಹಸ

ಅನ್ನದಾತರ ಆರ್ಥಿಕತೆಗೆ ಆಸರೆಯಾಗುವ ಕಬ್ಬು ಬೆಳೆಗೆ ಕಾರ್ಮಿಕರ ಕೊರತೆಯಿಂದ ಕಬ್ಬು ಬೆಳೆಗಾರರು ಮಮ್ಮಲ ಮರಗುತ್ತಿದ್ದು, ದೇವರಹಿಪ್ಪರಗಿ ಸೇರಿದಂತೆ ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬನ್ನು ರೈತರು ಕಾರ್ಖಾನೆಗೆ ಸಾಗಿಸಲು ಹರಸಾಹಸ ಪಡುವಂತಾಗಿದೆ.

ಕಾರ್ಮಿಕರ ವಿವಿಧ ಬೇಡಿಕೆಗಳು, ಕಾರ್ಮಿಕರನ್ನು ತರಲು ಏಜೆಂಟರ ಹಾವಳಿಯೂ ಹೆಚ್ಚಾಗಿದ್ದು, ಕಬ್ಬು ಬೆಳೆದು ಕೈ-ಕೈ ಹಿಚುಕಿಕೊಳ್ಳುವಂತಾಗಿದೆ.

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ, ಅನ್ನದಾತರಲ್ಲಿ ಆತಂಕ: ಇತ್ತೀಚಿನ ದಿನಗಳಲ್ಲಿ ಆರ್ಥಿಕ ಆದರೆಗಾಗಿ ಕಬ್ಬು ಬೆಳೆಯುತ್ತಿದ್ದು, ಬೆಳೆದ ಕಬ್ಬನ್ನು ಕಟಾವು ಮಾಡಿ ಇನ್ನೇನು ಕಾರ್ಖಾನೆಗಳಿಗೆ ಕಳಿಸಬೇಕೆಂದರೆ ನುರಿತ ಕಾರ್ಮಿಕರು ದೊರೆಯದಂತಾಗಿದ್ದು ಒಂದೆಡೇ ಸಮಸ್ಯೆಗೆ ಕಾರಣವಾದರೆ, ಇನ್ನೊಂದೆಡೆ ಬೆಳೆದ ಕಬ್ಬು ಗಾಳಿಗೆ ಈಡಾಗಿ ನೆಲಕ್ಕೆ ಒರಗಿ ಬೀಳುತ್ತಿದ್ದು, ಹಾಳಾಗುವ ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Sugarcane Farmers Protest: ತಣ್ಣಗಾದ ಕಬ್ಬು ರೈತರ ಕಿಚ್ಚು, ಸಂಧಾನದೊಂದಿಗೆ ಪ್ರತಿಭಟನೆ ಅಂತ್ಯ

ಕಾರ್ಮಿಕರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ ಈಗ ಕಾರ್ಖಾನೆ ನೀಡುವ ಕಟಾವು ದರದ ಜೊತೆಗೆ ರೈತರಿಗೆ ಎಕರೆಗೆ 3 ರಿಂದ 4 ಸಾವಿರ ಹೆಚ್ಚುವರಿ ಹಣವನ್ನು ಏಜೆಂಟರ್‌ ಮೂಲಕ ಕೇಳುತ್ತಾರೆ. ಬೇಗ ಬರಲು ಚಿಕನ್ ಮಟನ್ ಗೆ ಹಣ ನೀಡಬೇಕು ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈಗ ಎಷ್ಟು ಅಲೆದರೂ ಕಬ್ಬು ಕಡಿಯುವವರು ಸಿಗುತ್ತಿಲ್ಲ. ಜೊತೆಗೆ ಕಬ್ಬು ಗಾಳಿಗೆ ನೆಲಕ್ಕೆ ಬೀಳುತ್ತಿದ್ದು ಹಾಳಾಗುವ ಹಂತ ತಲುಪುವ ಆತಂಕ ಎದುರಾಗಿದೆ ಎಂಬುದು ಕಬ್ಬು ಬೆಳೆಗಾರರ ನೋವಾಗಿದೆ.

ಏಜೆಂಟ್‌ರ ಮೂಲಕ ಹೆಚ್ಚುವರಿ ಹಣದ ಆಮಿಷ : ಈಗ ಎಲ್ಲೆಡೆ ಕಬ್ಬು ಕಟಾವಿಗೆ ಬಂದಿದೆ. ಕಾರ್ಖಾನೆಗೆ ಸಂಪರ್ಕಿಸಿದರೆ ಕಟಾವು ತಂಡ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಹಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿರುವ ರೈತರು ತಂಡಕ್ಕೆ ಏಜೆಂಟರ್ ಮೂಲಕ ಹೆಚ್ಚುವರಿ ಹಣದ ಆಮೀಷ ನೀಡಿ ತಮ್ಮ ಜಮೀನುಗಳಿಗೆ ಕರೆದುಕೊಂಡು ಹೋಗುತ್ತಾರೆ.

ಇದರಿಂದ ಹೊಸದಾಗಿ ಕಬ್ಬು ಬೆಳೆದ ರೈತರಿಗೆ ಕಟಾವು ಮಾಡುವವರು ಸಿಗದೇ ಪರದಾಡು ವಂತಾಗಿದೆ. ಒಂದು ಕಟಾವು ತಂಡ ಒಂದು ಎಕರೆ ಕಬ್ಬನ್ನು ಮೂರು ದಿನಗಳವರೆಗೆ ಕೊಯ್ಯ ಬಲ್ಲದು. ನಾಲ್ಕು ಎಕರೆ ಕಬ್ಬು ಮುಗಿಸಲು 7 ರಿಂದ 8 ದಿನಗಳು ಬೇಕಾಗಬಹುದು. ಹೀಗೆ ಕಟಾವಿಗಾಗಿ ಹಲವು ದಿನಗಳು ಉರುಳುತ್ತಾ ಹೋದರೆ ಬೆಳೆದ ಕಬ್ಬು ಒಣಗಿ ತೂಕ ಕಳೆದುಕೊಳ್ಳ ಬಹುದು ಇಲ್ಲವೇ ಬೀಸುವ ಗಾಳಿಗೆ ಮಲಗಬಹುದು.

ಜಿಲ್ಲಾಡಳಿತ ಕಬ್ಬು ಬೆಳೆಗಾರರ ನೆರವಿಗೆ ಬರಲಿ

ಬರಗಾಲ ಬವಣೆಯಿಂದ ತತ್ತರಿಸಿದ ರೈತರ ಆರ್ಥಿಕ ಸಂಕಷ್ಟಕ್ಕೆ ಆಸರೆಯಾಗಬಹುದೆಂದು ಕಬ್ಬು ಬೆಳೆದರೆ ಕಟಾವು ಮಾಡುವವರ ಕಾಟದಿಂದ ಬೇಸತ್ತಂತಾಗಿದ್ದು, ಕಬ್ಬು ಬೆಳೆಗಾರ ಮಮ್ಮಲ ಮರಗುವಂತಾಗಿದೆ. ಕಬ್ಬಿನ ಕಟಾವು ಹಾಗೂ ಸಾಗಾಣೆ ವೆಚ್ಚವನ್ನು ಕಾರ್ಖಾನೆಯವರೇ ಸಂಪೂರ್ಣವಾಗಿ ಭರಿಸುವಂತಾಗಬೇಕು. ಏಜೆಂಟರು, ಕಮೀಷನ್, ಹೆಚ್ಚುವರಿ ಹಣವನ್ನು ರೈತರ ಕಡೆಯಿಂದ ಯಾವುದೇ ರೀತಿಯಲ್ಲಿ ಕೇಳದೆ ಸಂಪೂರ್ಣ ಕಾರ್ಖಾನೆಯವರೇ ನಿಡುವಂತಾಗ ಬೇಕೆಅದು ಕಬ್ಬು ಬೆಳೆಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಆಗ್ರಹಿಸಿದ್ದಾರೆ.

*

ಮಾಡುವವರಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ದುಡ್ಡು ನೀಡಿ ಕರೆ ತರುವ ಪ್ರಸಂಗ ಬಂದೊದಗಿದೆ. ಇನ್ನು ಕಬ್ಬು ಎತ್ತರಕ್ಕೆ ಬೆಳೆದಿಲ್ಲವೆಂದರೆ ಅದನ್ನು ಕಟಾವು ಮಾಡಲು ನಿರಾಕರಿಸುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ತಕ್ಷಣವೇ ಜಿಲ್ಲಾಡಳಿತ ರೈತರ ಸಮಸ್ಯೆ ಸ್ಪಂದಿಸಿ, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆಯವರ ಕಡೆಯಿಂದಲೇ ಭರಿಸುವಂತೆ ಕ್ರಮ ಕೈಕೊಳ್ಳಬೇಕು.ಕಾರ್ಮಿಕರ ಏಜೆಂಟರ ಹಾವಳಿ ತಪ್ಪಿಸಬೇಕು.

- ಸಂಗಮೇಶ ಸಗರ, ಜಿಲ್ಲಾಧ್ಯಕ್ಷರು ರೈತ ಸಂಘ

ಹಾಗೂ ಹಸಿರು ಸೇನೆ