ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್‌ ಜೊತೆ ಒಪ್ಪಂದ

ಹಳದಿ ಮಾರ್ಗದಲ್ಲಿ(ಆರ್‌.ವಿ.ರಸ್ತೆ- ಬೊಮ್ಮಸಂದ್ರ) ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಪರಿಗಣಿಸಿ, ಬಿಎಂಆರ್‌ಸಿಎಲ್‌ ಹೆಚ್ಚುವರಿ ಆರು ರೈಲುಗಳಿಗಾಗಿ ಬಿಇಎಂಎಲ್‌ ಜತೆ 414 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್‌ 2027ರ ವೇಳೆಗೆ ಹೆಚ್ಚುವರಿ ಆರು ರೈಲು (36 ಬೋಗಿ) ಪೂರೈಸುವ ಸಾಧ್ಯತೆ ಇದೆ. ಹಳದಿ ಮಾರ್ಗವನ್ನು (Namma Metro Yello Line) ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಿದ ನಂತರ ಹೆಚ್ಚುವರಿಯಾಗಿ 10-12 ರೈಲುಗಳು ಬೇಕಾಗುತ್ತವೆ.

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್‌ ಜೊತೆ ಒಪ್ಪಂದ

ನಮ್ಮ ಮೆಟ್ರೋ ಹಳದಿ ಮಾರ್ಗ -

ಹರೀಶ್‌ ಕೇರ
ಹರೀಶ್‌ ಕೇರ Dec 8, 2025 9:20 AM

ಬೆಂಗಳೂರು, ಡಿ.08: ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ (Namma Metro Yellow Line) ಹೆಚ್ಚುವರಿ ಆರು ಚಾಲಕರಹಿತ ರೈಲು (train) ಸೆಟ್‌ಗಳನ್ನು ಪೂರೈಸಲು ಬಿಇಎಂಎಲ್‌ (BEML) ಜತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಒಪ್ಪಂದ ಮಾಡಿಕೊಂಡಿದೆ. ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರಸ್ತುತ 5 ರೈಲುಗಳು ಸಂಚರಿಸುತ್ತಿದ್ದು, ಇನ್ನೊಂದು ತಿಂಗಳ ಅವಧಿಯಲ್ಲಿ ಆರನೇ ರೈಲು ಸಂಚಾರ ನಡೆಸಲಿದೆ.

ಹಳದಿ ಮಾರ್ಗದಲ್ಲಿ(ಆರ್‌.ವಿ.ರಸ್ತೆ- ಬೊಮ್ಮಸಂದ್ರ) ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಪರಿಗಣಿಸಿ, ಬಿಎಂಆರ್‌ಸಿಎಲ್‌ ಹೆಚ್ಚುವರಿ ಆರು ರೈಲುಗಳಿಗಾಗಿ ಬಿಇಎಂಎಲ್‌ ಜತೆ 414 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್‌ 2027ರ ವೇಳೆಗೆ ಹೆಚ್ಚುವರಿ ಆರು ರೈಲು (36 ಬೋಗಿ) ಪೂರೈಸುವ ಸಾಧ್ಯತೆ ಇದೆ. ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಿದ ನಂತರ ಹೆಚ್ಚುವರಿಯಾಗಿ 10-12 ರೈಲುಗಳು ಬೇಕಾಗುತ್ತವೆ. ಈ ರೈಲುಗಳನ್ನು ಸಕಾಲದಲ್ಲಿ ಪಡೆಯುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿಕೊಂಡಿದೆ.

ಪ್ರಸ್ತುತ ಹಳದಿ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿದ್ದು, ಆರನೇ ರೈಲು ಸಂಚಾರ ಆರಂಭಿಸಿದರೆ ಪ್ರತಿ 12 ನಿಮಿಷಕ್ಕೊಂದು ರೈಲು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸದ್ಯ ಈ ಮಾರ್ಗಕ್ಕೆ ಅಗತ್ಯವಿರುವ ರೈಲುಗಳನ್ನು ಕೋಲ್ಕೊತ್ತಾದ ಟಿಟಾಗರ್‌ ಸಂಸ್ಥೆ ಪೂರೈಕೆ ಮಾಡುತ್ತಿದೆ. ಈ ಸಂಸ್ಥೆಯು ಇನ್ನೂ 9 ರೈಲುಗಳನ್ನು ಪೂರೈಸಬೇಕಿದೆ.

ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು

ಇದೇ ವೇಳೆ, ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ಮಾರ್ಗದಲ್ಲಿ (ಹಸಿರು, ನೇರಳೆ, ಹಳದಿ ಮತ್ತು ಗುಲಾಬಿ ಮಾರ್ಗ) ಎಲ್ಲಾ ಸಮಯದಲ್ಲೂ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.

ನಾಲ್ಕು ಸಾವಿರ ಕೋಟಿ ರೂ. ಒಪ್ಪಂದ

ಈವರೆಗೆ ಬಿಎಂಆರ್‌ಸಿಎಲ್‌ ಜತೆ ಬಿಇಎಂಎಲ್‌ ಒಟ್ಟು ನಾಲ್ಕು ಸಾವಿರ ಕೋಟಿಗೆ ರೂ.ಗೆ ಒಪ್ಪಂದ ಮಾಡಿಕೊಂಡಿದೆ. 2023ರಲ್ಲಿ ಬಿಇಎಂಎಲ್‌ ನಮ್ಮ ಮೆಟ್ರೊಗೆ ಒಟ್ಟು 53 ರೈಲು ಸೆಟ್‌ಗಳನ್ನು ಪೂರೈಸಲು 3,177 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 53 ರೈಲು ಸೆಟ್‌ಗಳ (318 ಕೋಚ್‌ಗಳು) ಪೈಕಿ 37 ರೈಲುಗಳು ನೀಲಿ ಮಾರ್ಗದಲ್ಲಿ ಮತ್ತು 16 ಗುಲಾಬಿ ಮಾರ್ಗದಲ್ಲಿ ಬಳಕೆಯಾಗಲಿವೆ.

ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ

ಇದೇ ವರ್ಷ ಮಾರ್ಚ್‌ನಲ್ಲಿ ಬಿಎಂಆರ್‌ಸಿಎಲ್‌ ಗುಲಾಬಿ ಮಾರ್ಗಕ್ಕೆ ಹೆಚ್ಚುವರಿ ಏಳು ರೈಲುಗಳನ್ನು ಪೂರೈಸಲು 405 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತು. ಈ ಮೂಲಕ ಬಿಇಎಂಎಲ್‌ ಈಗ ನಮ್ಮ ಮೆಟ್ರೊಗೆ 66 ರೈಲುಗಳನ್ನು (396 ಕೋಚ್‌ಗಳು) ಪೂರೈಸಲಿದೆ.

ಬಿಇಎಂಎಲ್‌ ಈಗಾಗಲೇ ನೇರಳೆ ಮತ್ತು ಹಸಿರು ಮಾರ್ಗಕ್ಕೆ 57 ರೈಲುಗಳನ್ನು ಪೂರೈಸಿದೆ. 15 ವರ್ಷಗಳವರೆಗೆ ಬಿಇಎಂಎಲ್‌ ಎಲ್ಲಾ ಬೋಗಿಗಳ ನಿರ್ವಹಣೆ ಮಾಡಲಿದೆ. ಬಿಎಂಆರ್‌ಸಿಎಲ್‌ ಸದ್ಯ ಪ್ರತಿ ಕೋಚ್‌ಗೆ 11.5 ಕೋಟಿ ರೂ.ಗಳನ್ನು ಪಾವತಿಸಲಿದೆ. ಇದಕ್ಕೂ ಮೊದಲು ಪ್ರತಿ ಬೋಗಿಗೆ 9.99 ಕೋಟಿ ರೂ.ಗೆ ಬಿಇಎಂಎಲ್‌ ಬೋಗಿಗಳನ್ನು ಪೂರೈಸುತ್ತಿತ್ತು.

2019ರ ಡಿಸೆಂಬರ್‌ನಲ್ಲಿ ಬಿಎಂಆರ್‌ಸಿಎಲ್‌ 173 ವಾರಗಳಲ್ಲಿ 36 ರೈಲು ಸೆಟ್‌ಗಳನ್ನು ಪೂರೈಸಲು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್‌ ಪುಜೆನ್‌ ಕೋ ಲಿಮಿಟೆಡ್‌ ಜತೆ 1,578 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಹಳದಿ ಮಾರ್ಗಕ್ಕೆ 15, ನೇರಳೆ ಮತ್ತು ಹಸಿರು ಮಾರ್ಗಕ್ಕೆ 21 ರೈಲುಗಳನ್ನು ಪೂರೈಸಬೇಕಿತ್ತು. ಆದರೆ, ಸಂಸ್ಥೆಯು ಭಾರತದಲ್ಲಿ ರೈಲುಗಳನ್ನು ತಯಾರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಟಿಟಾಘರ್‌ ರೈಲ್‌ ಸಿಸ್ಟಮ್ಸ್ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ರೈಲುಗಳನ್ನು ಪೂರೈಸುತ್ತಿದೆ. ಮುಂದಿನ ವರ್ಷದಿಂದ ನೇರಳೆ (ಚಲ್ಲಘಟ್ಟ-ವೈಟ್‌ಫೀಲ್ಡ್‌) ಮತ್ತು ಹಸಿರು ಮಾರ್ಗ (ಮಾದಾವರ-ಸಿಲ್‌್ಕ ಇನ್‌ಸ್ಟಿಟ್ಯೂಟ್‌) ಮಾರ್ಗಗಳಲ್ಲಿ ಸಿಆರ್‌ಆರ್‌ಸಿ ತಯಾರಿಸಿದ ಮೂಲಮಾದರಿ ರೈಲುಗಳು ಸಂಚಾರ ನಡೆಸುವ ಸಾಧ್ಯತೆ ಇದೆ.