Veda International School new building: ವೇದ ಅಂತಾರಾಷ್ಟ್ರೀಯ ಶಾಲೆ ನೂತನ ಕಟ್ಟಡ ಲೋಕಾರ್ಪಣೆ
ಕೇಂದ್ರಿಯ ಪಠ್ಯಕ್ರಮದ ಅವಶ್ಯಕತೆಯನ್ನು ಅರಿತು ಬರುವ ಶೈಕ್ಷಣಿಕ ವರ್ಷದಿಂದಲೇ ವೇದ ಇಂಟರ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ್ನು ಸಿಬಿಎಸ್ಸಿಯೊಂದಿಗೆ ಸಂಯೋಜಿಸಲು ಉದ್ದೇಶಿಸಲಾಗಿದ್ದು, ಸಮಾಜದ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುನ್ನುಡಿ ಇರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಪ್ರಾರಂಭದಿಂದಲೇ ಎನ್‌ಇಇಟಿ ಮತ್ತು ಜೆಇಇ ಪರೀಕ್ಷೆಗಳ ತಯಾರಿಗೆ ಆದ್ಯತೆ ನೀಡಲಾಗುತ್ತಿದೆ.
-
ಮಂಜು ಕಲಾಲ ವಿಜಯಪುರ
1800 ವಿದ್ಯಾರ್ಥಿಗಳು ಸುಮಾರು 100 ಜನ ಬೋಧಕ ಸಿಬ್ಬಂದಿ ಹೊಂದಿರುವ ಶಾಲೆ
ಬಂಥನಾಳ ಶಿವಯೋಗಿಗಳು ಜನಿಸಿ 125 ವರ್ಷಗಳು ಸಂದ ಈ ಸಂದರ್ಭವನ್ನು ಅರ್ಥ ಪೂರ್ಣ ವಾಗಿ ಆಚರಿಸಲು ಡಾ.ಶಿವಾನಂದ ಕೆಲೂರ ಅವರು ಶ್ರೀ ವೇದ ಅಂತಾರಾಷ್ಟ್ರೀಯ ಶಾಲೆಯು ನೂತನ ಕಟ್ಟಡವನ್ನು ಸೋಮವಾರ ಲೋಕಾರ್ಪಣೆಗೊಳಿಸಲು ಸಜ್ಜಾಗಿದ್ದಾರೆ.
ಸಮೀಪದ ಇಟ್ಟಂಗಿಹಾಳ ಜಾಲಗೇರಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಶಾಲೆ ಇಟ್ಟಂಗಿಹಾಳ ದಿಂದ ಕೇವಲ 2 ಕಿ.ಮೀ. ಅಂತರದಲ್ಲಿದೆ.ವಿಶಾಲವಾದ ಕಟ್ಟಡ, ನಗರದ ಜನಸಂದಣಿಯಿಂದ ಮುಕ್ತವಾದ ನೈಸರ್ಗಿಕ ವಾತಾವರಣ, ಕಾಂಪೊಜಿಟ್ ಲ್ಯಾಬ್, ಡಿಜಿಟಲ್ ವರ್ಗ ಕೋಣೆಗಳು, ಸುಸಜ್ಜಿತ ಕಂಪ್ಯೂಟರ್- ಭಾಷಾ ಲ್ಯಾಬ್, ಗ್ರಂಥಾಲಯ, ವಿಶಾಲವಾದ ವಿಶೇಷ ಆಟದ ಮೈದಾನ, ಸುಸಜ್ಜಿತ ಸಾರಿಗೆ ವ್ಯವಸ್ಥೆ, ಡೇ ಬೋರ್ಡಿಂಗ್ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಾನದಂಡ ದ ಅನುಗುಣವಾಗಿ ಎಲ್ಲಾ ಸೌಕರ್ಯಗಳನ್ನು ಸನ್ನದ್ಧಗೊಳಿಸಲಾಗಿದೆ.
ಕೇಂದ್ರಿಯ ಪಠ್ಯಕ್ರಮದ ಅವಶ್ಯಕತೆಯನ್ನು ಅರಿತು ಬರುವ ಶೈಕ್ಷಣಿಕ ವರ್ಷದಿಂದಲೇ ವೇದ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ನ್ನು ಸಿಬಿಎಸ್ಸಿಯೊಂದಿಗೆ ಸಂಯೋಜಿಸಲು ಉದ್ದೇಶಿಸ ಲಾಗಿದ್ದು, ಸಮಾಜದ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುನ್ನುಡಿ ಇರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಪ್ರಾರಂಭದಿಂದಲೇ ಎನ್‌ಇಇಟಿ ಮತ್ತು ಜೆಇಇ ಪರೀಕ್ಷೆಗಳ ತಯಾರಿಗೆ ಆದ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ: Vijayapura Airport: ವಿಜಯಪುರ ಏರ್‌ಪೋರ್ಟ್‌ಗಿದ್ದ ಅಡ್ಡಿ ನಿವಾರಣೆ: ಸುಪ್ರೀಂಕೋರ್ಟ್ ನಿಲುವಿಗೆ ಎಂ.ಬಿ. ಪಾಟೀಲ್ ಸ್ವಾಗತ
ವೇದ ಆರಂಭದ ಹೆಜ್ಜೆ: 2022ರಲ್ಲಿ ಪ್ರಾರಂಭವಾದ ಶ್ರೀ ವೇದ ಅಕಾಡೆಮಿ ಕೇವಲ 3 ವರ್ಷಗಳಲ್ಲಿ 1800 ವಿದ್ಯಾರ್ಥಿಗಳು ಸುಮಾರು 100 ಜನ ಬೋಧಕ ಸಿಬ್ಬಂದಿ ಹೊಂದಿದೆ. ಡಾ.ಶಿವಾನಂದ ಕೆಲೂರ ಹಾಗೂ ದಯಾನಂದ ಕೆಲೂರ ಅವರ ಶೈಕ್ಷಣಿಕ ಸೇವೆಗೆ ಸಂದ ವಿಜಯವಿದು. ಅಲ್ಲದೇ ಇವರಿಬ್ಬರ ಅನುಭವದ ಗರಡಿಯಲ್ಲಿ ನಡೆಯುತ್ತಿರುವ ವೇದ ಕೋಚಿಂಗ್ ಅಕಾಡೆಮಿ ಕೇವಲ 3 ವರ್ಷಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೈನಿಕ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಆರ್‌ಎಂ ಎಸ್ ಶಾಲೆಗೆ ಕಳುಹಿಸಿದ ಹೆಗ್ಗಳಿಕೆ ಹೊಂದಿದೆ.
ಮಕ್ಕಳಿಗೆ ಆಸರೆ
ಇದರಲ್ಲಿ ಈ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಣಾ ಸಿಬ್ಬಂದಿ ಮಕ್ಕಳು, ಸಿಂಗಲ್ ಪೆರೆಂಟ್ಸ್ ಮಕ್ಕಳು ಕರೊನಾ ಪೀಡಿತ ಕುಟುಂಬದ ಮಕ್ಕಳಿಗಾಗಿ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗಾಗಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಮತ್ತು ಅನಾಥ ಮಕ್ಕಳಿಗಾಗಿ ಪರಮಪೂಜ್ಯ ಸಂಗನಬಸವ ಶಿವಯೋಗಿಗಳ ಹೆಸರಿನಲ್ಲಿ ‘ಆಸರೆ‘ ಎಂಬ ಯೋಜನೆ ರೂಪಿಸಲಾಗಿದೆ.
ವೆರಿ ವೆರಿ ಇಂಪಾರ್ಟೆಂಟ್ ಪರ್ಸನ್ ಇದು ಅತೀ ಗಣ್ಯರಿಗೆ ಬಳಸುವ ಪದ, ವಿವಿಐಪಿ ಎಂಬ ಪದ ಕೇಳಿದಾಗ ಒಂದು ಕ್ಷಣ ರೋಮಾಂಚನಕಾರಿ. ವಿಪ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿ ವಿವಿಐಪಿ ಯಾಗಿ ಸಮಾಜವನ್ನು ಬೆಳಗಬೇಕು ಎಂಬ ದಿವ್ಯ ಧ್ಯೇಯ ಹೊಂದಿದೆ. ಪ್ರತಿಯೊಬ್ಬರು ಉನ್ನತ ಹುದ್ದೆ ಅಷ್ಟೇ ಅಲ್ಲ ಉನ್ನತ ವಿಚಾರಧಾರೆ, ಉದಾತ್ತ ಗುಣಗಳನ್ನು, ಅಪ್ರತಿಮ ದೇಶಭಕ್ತಿಯನ್ನು ಬೆಳೆಸಿಕೊಂಡು ಮುನ್ನಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಯಶಸ್ಸಿನ ದರ್ಶನ ಮಾಡಿಸುವುದೇ ನಮ್ಮ ಸಂಸ್ಥೆಯ ಗುರಿ. ಬಂಥನಾಳ ಶಿವಯೋಗಿಗಳು ತೋರಿದ ಜ್ಞಾನದ ದೀಪದ ಬೆಳಕೇ ನಮಗೆ ಶಕ್ತಿ.
- ಡಾ.ಶಿವಾನಂದ ಕೆಲೂರ, ವೇದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ
ಶ್ರೀ ಬಂಥನಾಳ ಶಿವಯೋಗಿಗಳು ಶಿಕ್ಷಣಕ್ಕೆ ಮಹೋನ್ನತ ಪ್ರಾಮುಖ್ಯತೆ ನೀಡಿದ್ದರು. ಶಿಕ್ಷಣದಿಂದಲೇ ಜೀವನ ಉದ್ದಾರ, ಉದಾತ್ತ ಎಂದು ಬಲವಾಗಿ ನಂಬಿ ಶಿಕ್ಷಣ ಬೆಳಕು ಪಸರಿಸುವ ಪವಿತ್ರ ಕಾರ್ಯ ಮಾಡಿದರು. ಗುರುಗಳ ಈ ಶೈಕ್ಷಣಿಕ ಸೇವಾ ಕಾರ್ಯದ ಪ್ರೇರಣೆಯ ರೂಪವಾಗಿ XIPS ಉದಯಿಸಿರು ವುದು ಸಂತೋಷ ತಂದಿದೆ. ಲಕ್ಷಾಂತರ ಮಕ್ಕಳಿಗೆ ಜ್ಞಾನ ಎಂಬ ಪ್ರಸಾದವನ್ನು ಉಣಬಡಿಸಲಿ...
-ಶ್ರೀ ಸಂಗನಬಸವ ಸ್ವಾಮೀಜಿ, ವಿರಕ್ತಮಠ ಯರನಾಳ