ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Alia Bhatt: ಇನ್ಮುಂದೆ ಆಲಿಯಾ ಭಟ್ ಅಂತಾ ಕರೆಯುವಂತಿಲ್ಲ... ಹೆಸ್ರು ಬದಲಿಕೊಂಡ ಸ್ಟಾರ್‌ ನಟಿ

ಆಲಿಯಾ ಭಟ್ ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ನಲ್ಲಿಯೂ ಸಖತ್‌ ಫೇಮ್‌ ಗಿಟ್ಟಿಸಿಕೊಂಡಿರುವ ನಟಿ‌. ಸದ್ಯ ನಟಿ ಆಲಿಯಾ ತನ್ನ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಹಳಷ್ಟು ವೈರಲ್ ಆಗುತ್ತಿದೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದ ಬಳಿಕ ಅವರು ಹೆಸರನ್ನು ಬದಲಿಸಿಕೊಂಡಿದ್ದಾರೆ ಅನ್ನೋದು ವಿಶೇಷವಾಗಿದ್ದು ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಹೆಸರು ಬದಲಿಸಿಕೊಂಡ ಆಲಿಯಾ ಭಟ್

Alia Bhatt

Profile Pushpa Kumari Jun 13, 2025 8:24 AM

ಮುಂಬೈ: ಆಲಿಯಾ ಭಟ್‌ (Alia Bhat) ಸದ್ಯ ಟ್ರೆಂಡಿಂಗ್‌ ನಲ್ಲಿರುವ ನಟಿ. ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ನಲ್ಲಿಯೂ ಸಖತ್‌ ಫೇಮ್‌ ಗಿಟ್ಟಿಸಿಕೊಂಡಿರುವ ನಟಿ‌. ಸದ್ಯ ನಟಿ ಆಲಿಯಾ ತನ್ನ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಹಳಷ್ಟು ವೈರಲ್ ಆಗುತ್ತಿದೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದ ಬಳಿಕ ಅವರು ಹೆಸರನ್ನು ಬದಲಿಸಿಕೊಂಡಿದ್ದಾರೆ ಅನ್ನೋದು ವಿಶೇಷವಾಗಿದ್ದು, ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ನಟಿ ಆಲಿಯಾ ಭಟ್ ಕಳೆದ ತಿಂಗಳು ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ ಭಾಗಿಯಾಗಿದ್ದರು. ಈ ಚಿತ್ರೋತ್ಸವದಲ್ಲಿ ಲೋರಿಯಲ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಹೋಗುವ ಮುನ್ನ ವ್ಲಾಗ್ ಒಂದನ್ನು ಹಂಚಿಕೊಂಡಿದ್ದರು. ಆದರೆ ಈ ವ್ಲಾಗ್ ನಲ್ಲಿ ಹೆಚ್ಚು ಗಮನ ಸೆಳೆದದ್ದು ಫ್ರೆಂಚ್ ರಿವೇರಿಯಾದಲ್ಲಿ ಅವರು ತಂಗಿದ್ದ ಹೋಟೆಲ್ ಹಾಗೆಯೇ ಬದಲಾವಣೆ ಗೊಂಡ ಅವರ ಹೆಸರು..ಹಾಗಿದ್ದರೆ ನಟಿ ಆಲಿಯಾ ಭಟ್ ಹೆಸರು ಬದಲಾವಣೆ ಮಾಡಲು ಕಾರಣವೇನು?

ಕಾನ್ಸ್ 2025 ಚಲನಚಿತ್ರೋತ್ಸವದಲ್ಲಿ ಆಲಿಯಾ ಭಟ್ ಕೂಡ ಭಾಗಿಯಾಗಿದ್ದರು. ಲೋರಿಯಲ್ ಬ್ರಾಂಡ್ ರಾಯಭಾರಿಯಾಗಿ ಈ ಕಾರ್ಯಕ್ರಮಕ್ಕೆ ಹಾಜರಾದ ಆಲಿಯಾ ಕ್ಯಾನೆಸ್‌ನಲ್ಲಿ ತನ್ನ ಅನುಭವ ಹೇಗಿತ್ತು ಎಂಬುದರ ಬಗ್ಗೆ ವ್ಲಾಗ್ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೊದಲ್ಲಿ ಅವರು ತಂಗಿದ್ದ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಅದರಲ್ಲಿ ಆಲಿಯಾ ಅವರ ಹೆಸರನ್ನು ಆಲಿಯಾ ಭಟ್ ಬರೆಯುವ ಬದಲಾಗಿ ಆಲಿಯಾ ಕಪೂರ್ ಎಂದು ಬರೆಯಲಾಗಿತ್ತು. ಇದನ್ನು ಇಂಟರ್ನೆಟ್ ಬಳಕೆ ದಾರರು ಗಮನಿಸಿದ್ದಾರೆ‌. ಇದರಿಂದ ನಟಿ ಮದುವೆಯಾದ ಬಳಿಕ ಅಧಿಕೃತವಾಗಿ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: SSMB29 Movie: ರಾಜಮೌಳಿ-ಮಹೇಶ್‌ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ?

ಇದರ ಸ್ಕ್ರೀನ್‌ಶಾಟ್ ಅನ್ನು ರೆಡ್ಡೆಟ್ಟ್ ನಲ್ಲಿ ಅಭಿಮಾನಿಗಳು ಹಂಚಿಕೊಂಡಿದ್ದು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತ ಪಡಿಸಿ ದ್ದಾರೆ. ಕೆಲವರು ಆಲಿಯಾ ಭಟ್ ಅದೇ ಫೇಮ್.. ಅವರ ಹೆಸರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ದ್ದಾರೆ. ಮತ್ತೊಬ್ಬರು ಆಲಿಯಾ ಕಪೂರ್ ಎಂದು ಕರೆಯಲು ಮನಸ್ಸೇ ಬರುತ್ತಿಲ್ಲ ದಯವಿಟ್ಟು ಆಲಿಯಾ ಭಟ್ ಎಂದೇ ಇರಲಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಆಲಿಯಾ ಭಟ್ ಅಥವಾ ರಣಬೀರ್ ಕಪೂರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ. ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಅವರು ತೊಡಗಿಕೊಂಡಿದ್ದಾರೆ ಹಾಗೆಯೇ ಮುಂದಿನ ಚಿತ್ರ ಆಲ್ಫಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರ್ವರಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.