ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shanti Kranti: ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಶಾಂತಿ ಕ್ರಾಂತಿ' ಬಾಕ್ಸ್ ಆಫೀಸ್ ಅಲ್ಲಿ ಸೋತಿದ್ದೇಕೆ..?

Shanti Kranti: ಸ್ಯಾಂಡಲ್‌ವುಡ್‌ನಲ್ಲಿ ಹಲವು ನೂತನ ವಿನೂತನ ಪ್ರಯೋಗಗಳನ್ನು ಮಾಡಿದವರಲ್ಲಿ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ಮೊದಲಿಗರು. 'ಪ್ರೇಮಲೋಕ' ಸಿನಿಮಾ ಮಾಡಿ, 38 ವರ್ಷಗಳ ಹಿಂದೆಯೇ ಇತಿಹಾಸ ನಿರ್ಮಿಸಿದವರು ರವಿಚಂದ್ರನ್‌. ಬಳಿಕ ಅವರು ಮಾಡಿದ 'ಶಾಂತಿ ಕ್ರಾಂತಿ' ಚಿತ್ರದ್ದು ಮತ್ತೊಂದು ದಾಖಲೆ. ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿ ಹಣವನ್ನು ನೀರಿನಂತ ಖರ್ಚು ಮಾಡಿದ್ದರು 'ಕ್ರೇಜಿ ಸ್ಟಾರ್‌'. ಆ ಸಿನಿಮಾ ಕುರಿತ ಒಂದು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

'ಶಾಂತಿ ಕ್ರಾಂತಿ' ಕ್ರೇಜಿಸ್ಟಾರ್ ಜೀವನ ಬದಲಾಯಿಸಿದ್ದೇಗೆ..?

ಶಾಂತಿ ಕ್ರಾಂತಿ ಸಿನಿಮಾ

Profile Sushmitha Jain Apr 11, 2025 4:45 PM

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್(Ravichandran)​ ಗೆ ಅವರಿಗಿರುವ ಸಿನಿಮಾ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಚಂದನವನ(Sandalwood)ದಲ್ಲಿ ದುಬಾರಿ ಸಿನಿಮಾಗಳನ್ನು ಮಾಡುವ ಹುಚ್ಚು ಸಾಹಸಕ್ಕೆ ನಾಂದಿ ಹಾಡಿದವರು ರವಿ ಮಾಮ ಎಂದರೆ ತಪ್ಪಾಗಲಿಕ್ಕೆ ಇಲ್ಲ. ಬಾಲಿವುಡ್ ಬ್ಯೂಟಿಗಳಿಂದ ಪರಿಚಯಿಸುವುದರಿಂದ ಹಿಡಿದು ವಿನೂತನ ಪ್ರಯೋಗಗಳನ್ನು ಮಾಡುತ್ತಲೇ ಬಂದವರು ನಮ್ಮ ಅಣ್ಣಯ್ಯ. ಆದ್ರೆ ಸಿನೆಮಾ ನಿರ್ದೇಶನ, ನಟನೆ, ನಿರ್ಮಾಪಕ ಹೀಗೆ ಸಿನೆಮಾಗೆ ಸಂಬಂಧಪಟ್ಟ ಎಲ್ಲಾ ವೇಷಗಳನ್ನು ಆಗಿರುವ ರವಿಚಂದ್ರನ್ ಸಿನಿಮಾ ರಂಗದಲ್ಲಿ ಸಾಕಷ್ಟು ಏರಿಳಿತ ಕಂಡಿರುವುದು ಸುಳ್ಳಲ್ಲ. ಅದಕ್ಕೆ ಜೀವಂತ ಸಾಕ್ಷಿ ರವಿಚಂದ್ರನ್ ಬಹಳ ಇಷ್ಟಪಟ್ಟು, ಕೋಟಿ ಕೋಟಿಗಟ್ಟಲೇ ಸುರಿದು ಮಾಡಿರುವ ಶಾಂತಿ - ಕ್ರಾಂತಿ ಸಿನೆಮಾ. ಈ ಒಂದು ಸಿನಿಮಾದಿಂದ ತಮ್ಮ ಬಳಿ ಇದ್ದ ಎಲ್ಲಾ ಆಸ್ತಿ - ಹಣ, ಸಂಪತ್ತು ಎಲ್ಲಾವನ್ನು ಕಳೆದುಕೊಂಡಿರುವುದು ಎಲ್ಲಾರಿಗೂ ಗೊತ್ತು.

‘ಶಾಂತಿ ಕ್ರಾಂತಿ’ ಸಿನಿಮಾನ ಅರ್ಧಕ್ಕೆ ನಿಲ್ಲಿಸೋ ಆಲೋಚನೆ ಅವರಿಗೆ ಬಂದಿತ್ತು. ಈ ಸಿನೆಮಾ ಕುರಿತು ನಾನಾ ಬಾರಿ ರವಿಚಂದ್ರನ್ ಹಲವು ವೇದಿಕೆಗಳಲ್ಲಿ ಮಾತಾಡಿದ್ದಾರೆ ಕೂಡ. ಹಾಗಾದ್ರೆ 1990ರ ದಶಕದಲ್ಲೇ ಹೊಸ 'ಕ್ರಾಂತಿ' ಮಾಡಲು ಹೋಗಿ ಕೈಸುಟ್ಟುಕೊಂಡರು. ಹಾಗಾದರೆ ಇದೀಗ ರವಿಚಂದ್ರನ್ ಅವರೇ ಹೇಳಿದಂತೆ 'ಶಾಂತಿ ಕ್ರಾಂತಿ' ಸಿನಿಮಾ(Shanti Kranti Movie)ದಲ್ಲಿ ಕ್ರೇಜಿಸ್ಟಾರ್ ಕಳೆದುಕೊಂಡ ಹಣ ಎಷ್ಟು ಕೋಟಿ ರೂಪಾಯಿ ಗೊತ್ತೆ? ಇದರಿಂದ ರವಿಮಾಮನ ಜೀವನದ ಮೇಲೆ ಹೇಗೆಲ್ಲ ಪರಿಣಾಮ ಬೀರಿತ್ತು ಗೊತ್ತಾ...?

1991ರ ದಶಕದಲ್ಲಿ ರಿಲೀಸ್ ಆಗಿದ್ದ ಸಿನಿಮಾ

‘ಶಾಂತಿ ಕ್ರಾಂತಿ’ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾವನ್ನು ಒಂದು ಭಾಷೆಯಲ್ಲಿ ಮಾಡಿ ಉಳಿದ ಭಾಷೆಗೆ ಡಬ್ ಮಾಡಿಲ್ಲ. ಇದರ ಹೊರತಾಗಿ ಆಯಾ ಭಾಷೆಗೆ ಆಯಾ ಭಾಷೆಯ ಸ್ಟಾರ್ ಹೀರೋಗಳನ್ನೇ ಹಾಕಿಕೊಂಡು ಸಿನೆಮಾ ಮಾಡಲಾಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಆದ್ರೆ ದುರಾದೃಷ್ಟವಶಾತ್ ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಸೋಲು ಕಂಡಿದ್ದು ಮಾತ್ರವಲ್ಲದೇ ನಷ್ಟವನ್ನು ಅನುಭವಿಸಿತು.

ಮಲ್ಟಿ ಸ್ಟಾರ್ ಗಳ ಮಿಲನ

ಮಲ್ಟಿ ಸ್ಟಾರ್‌ಗಳು ಈ ಚಿತ್ರದಲ್ಲಿ ನಟಿಸಿದ್ದರು. ಅಂದಿನ ಕಾಲದ ದಿಗ್ಗಜ ನಟರು ಎನಿಸಿದ್ದ ನಟನಟಿಯರು ರವಿಚಂದ್ರನ್ ನಿರ್ಮಾಣದ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಟರಾದ ರಜನಿಕಾಂತ್, ನಾಗಾರ್ಜುನ, ರಮೇಶ್ ಅರವಿಂದ್, ಟೈಗರ್ ಪ್ರಭಾಕರ್, ಅಂಬರೀಷ್, ನಟಿಯರಾದ ಜೂಹಿ ಚಾವ್ಲಾ, ಖುಷ್ಬೂ ಮೊದಲಾದವರು ಈ ಚಿತ್ರದ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಸಕ್ಸಸ್ ಕಾಣಲಿಲ್ಲ.

'ಶಾಂತಿ ಕ್ರಾಂತಿ'ಯಿಂದ ಲಾಸ್ ಆಗಿದೆಷ್ಟು..?

ಮೂರು ವಿಭಿನ್ನ ಭಾಷೆಗಳ ತಾರೆಯರ ಶೆಡ್ಯೂಲ್ ಮತ್ತು ನಾಲ್ಕು ಭಾಷೆಗಳಲ್ಲಿ ಬ್ಯಾಕ್-ಟು-ಬ್ಯಾಕ್ ಚಿತ್ರೀಕರಣ ಮಾಡಿದ್ದರೂ, ಈ ಚಿತ್ರ ನಿರ್ಮಾಣದ ಕೆಲಸಗಳು ಮುಗಿಯಲು ಎರಡು ವರ್ಷಗಳು ತೆಗೆದುಕೊಂಡಿತು. ಪರಿಣಾಮ ಬಿಡುಗಡೆ ಆಗುವ ವೇಳೆ ಈ ಚಿತ್ರದ ವೆಚ್ಚ ಅಂದುಕೊಂಡ ಬಜೆಟ್‌ ಗಿಂತ ದುಪ್ಪಟ್ಟು ಹೆಚ್ಚಾಗಿತ್ತು. ಸುಮಾರು 10 ಕೋಟಿ ಬಜೆಟ್‌ನಲ್ಲಿ ತಯಾರಾದ ಇದು ಆ ಕಾಲಕ್ಕೆ ಅಲ್ಲಿಯವರೆಗಿನ ಅತ್ಯಂತ ದುಬಾರಿ ಭಾರತೀಯ ಚಿತ್ರವಾಗಿತ್ತು. ಆದ್ರೆ ದುರಾದೃಷ್ಟವಶಾತ್ ಇದು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ, ಕೇವಲ 8 ಕೋಟಿ ಮಾತ್ರ ಗಳಿಸಿ ಭಾರೀ ನಷ್ಟ ಕಂಡಿತ್ತು.

ಈ ಸುದ್ದಿಯನ್ನು ಓದಿ:Varnavedam Movie: ʼವರ್ಣವೇದಂʼ ಚಿತ್ರದ ʼಓ ವೇದ ಓ ವೇದʼ ರೊಮ್ಯಾಂಟಿಕ್‌ ಹಾಡಿಗೆ ಧ್ವನಿಯಾದ ಸೋನು ನಿಗಂ

ಆರಂಭದಲ್ಲೇ ಸಿಕ್ಕಿತು ಸುಳಿವು

ಹೌದು ಈ ಸಿನಿಮಾದ ಶೂಟಿಂಗ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಯಶಸ್ಸು ಸಿಗುವುದಿಲ್ಲ ಎನ್ನುವ ಸುಳಿವು ಸಿಕ್ಕಿತ್ತು. ಆ ವೇಳೆಗಾಗಲೇ ಕೆಲವು ದಿನಗಳ ಶೂಟಿಂಗ್ ಮುಗಿದು, ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಆದರೂ ಈ ಚಿತ್ರವನ್ನು ನಿಲ್ಲಿಸೋ ಆಲೋಚನೆಯನ್ನು ರವಿಚಂದ್ರನ್ ಮಾಡಿದ್ದರಂತೆ. ಅಂದುಕೊಂಡಂಗೆ ಸಿನಿಮಾ ಆಗ್ತಿಲ್ಲ. ಎಲ್ಲರ ಇಮೇಜ್​ ಬೇರೆ ಬೇರೆ ಇದೆ. ಕಥೆ ಅಂದುಕೊಂಡಂತೆ ಬರ್ತಿಲ್ಲ. ಸಿನಿಮಾನ ನಿಲ್ಲಿಸಿ ಬಿಡ್ತೀನಿ ಎಂದು ತಂದೆಗೆ ಹೇಳಿದರಂತೆ. ಇದನ್ನು ಕೇಳಿ ರವಿಚಂದ್ರನ್ ತಂದೆಗೆ ಸಿಟ್ಟು ಬಂದು, ‘ಇದು ಈಶ್ವರಿ ಪ್ರೊಡಕ್ಷನ್ಸ್ ಸಿನಿಮಾ. ನಿನ್ನ ನಂಬಿ ನಾಗಾರ್ಜುನ, ರಜನಿಕಾಂತ್ ಡೇಟ್ಸ್ ಕೊಟ್ಟಿದ್ದಾರೆ. ಈ ರೀತಿಯ ಶಬ್ದಗಳನ್ನು ಮತ್ತೆ ಆಡಬೇಡ’ ಎಂದು ವೀರಸ್ವಾಮಿ ರವಿಚಂದ್ರನ್​ಗೆ ಖಡಕ್ ಆಗಿ ಹೇಳಿದ್ದರಂತೆ. ತಂದೆಯ ಮಾತಿಗೆ ಕಟ್ಟು ಬಿದ್ದು ರವಿಚಂದ್ರನ್ ಹೇಗಾಡಿ, ಹೋರಾಡಿ ಕೊನೆಗೂ ಆ ಸಿನಿಮಾನ ಮಾಡಿ ಮುಗಿಸಿದರು. ಆದ್ರೆ ರಾಮಾಚಾರಿಗೆ ಈ ಸಿನೆಮಾ ಶಾಂತಿ ತಂದು ಕೊಡಲಿಲ್ಲ, ಬದಲಾಗಿ ಕ್ರಾಂತಿಯಾಗಿ ದೊಡ್ಡ ಹೊರೆ ಆಯಿತು.

ಕಷ್ಟ ಅನುಭವಿಸಿದ್ದರಂತೆ ರವಿಚಂದ್ರನ್

ಈ ಸಿನಿಮಾ ಆರಂಭ ಮಾಡಿದ ಸ್ವಲ್ಪ ದಿನಗಳಲ್ಲಿ ರವಿಚಂದ್ರನ್ ಅವರಿಗೆ ಇದು ನನ್ನಿಂದ ಸಾಧ್ಯವಿಲ್ಲ ಅನ್ನಿಸಿತ್ತು. ಅಲ್ಲದೇ ಈ ಸಿನಿಮಾ ಮಾಡಲು ಸುಮಾರು 3 ರಿಂದ ನಾಲ್ಕು ವರ್ಷಗಳ ಸಮಯ ಹಿಡಿದಿತ್ತು. ಅಲ್ಲದೇ ಇಂಡಸ್ಟ್ರಿಯಿಂದ ರವಿಚಂದ್ರನ್ ಬಹಳ ಕಷ್ಟ ಅನುಭವಿಸಿದ್ದರು. ಈ ರೀತಿಯ ಸಿನಿಮಾಗಳಿಗೆ ಒಂದು ದಿನ ಸಮಸ್ಯೆಯಾದರೂ ಸಹ ಅದು ವರ್ಷಾನುಗಟ್ಟಲೆ ಮುಂದೆ ಹೋಗುವ ಸಾಧ್ಯತೆ ಇರುತ್ತದೆ. ಈ ಸಿನಿಮಾದಲ್ಲಿ ಸಹ ರಜನಿಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಅವರ ಕಾಲ್​ ಶೀಟ್ ಪಡೆಯಲು ಕಷ್ಟವಾಗಿತ್ತಂತೆ. ಒಂದೇ ಸಮಯದಲ್ಲಿ ಸರಿಯಾಗಿ ಎಲ್ಲರೂ ಸಿಗುವುದು ಸುಲಭವಾಗಿರಲಿಲ್ಲ. ಈ ಸಿನಿಮಾಗೆ ಹಾಕಿದ ಬಜೆಟ್​ನ ತೀರೀಸೋಕೆ ರವಿಚಂದ್ರನ್​ಗೆ ಬರೋಬ್ಬರಿ 15 ವರ್ಷಗಳು ಬೇಕಾಯಿತು. ಸುಮಾರು ವರ್ಷಗಳ ಕಾಲ ಈ ಸಿನಿಮಾಗಾಗಿ ಮಾಡಿದ ಸಾಲ ತೀರಿಸುವುದರಲ್ಲೇ ಅವರು ಕಳೆದರು. ‘ ಆ ಬಗ್ಗೆ ನೋವಿಲ್ಲ. ಎಲ್ಲಾ ಸಾಲವನ್ನು ತೀರಿಸಿದೆ. ಬಡ್ಡಿ ಕಡಿಮೆ ಮಾಡಿ ಎಂದು ಕೇಳಿಲ್ಲ’ ಎಂದು ರವಿಚಂದ್ರನ್ ಅವರು ಹೇಳಿಕೊಂಡಿದ್ದರು.