Draft income tax rules 2026: ಬೆಂಗಳೂರಿನ ತೆರಿಗೆದಾರರಿಗೆ ಗುಡ್‌ನ್ಯೂಸ್; ಶೇ.50 ಮನೆ ಬಾಡಿಗೆ ಭತ್ಯೆ ವಿನಾಯಿತಿ
HRA exemption: ಆದಾಯ ತೆರಿಗೆ ಕಾಯ್ದೆಯ ಹೊಸ ಕರಡಿನ ಅನ್ವಯ, ಬೆಂಗಳೂರನ್ನು ಈಗ ಅಧಿಕೃತವಾಗಿ 'ಮೆಟ್ರೋ ನಗರ' ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ಇದು ಜಾರಿಗೆ ಬಂದ ನಂತರ, ಸಂಬಳ ಪಡೆಯುವ ವರ್ಗದವರು ಇನ್ನು ಮುಂದೆ 50% ಎಚ್.ಆರ್.ಎ ವಿನಾಯಿತಿ ಪಡೆಯಬಹುದಾಗಿದೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ (ಸಂಗ್ರಹ ಚಿತ್ರ) -
ಬೆಂಗಳೂರು: ರಾಜಧಾನಿಯ ವೇತನದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಆದಾಯ ತೆರಿಗೆ ಕಾಯ್ದೆಯ ಹೊಸ ಕರಡಿನ ಅನ್ವಯ (Draft income tax rules 2026), ಬೆಂಗಳೂರನ್ನು ಈಗ ಅಧಿಕೃತವಾಗಿ 'ಮೆಟ್ರೋ ನಗರ' ಎಂದು ಪರಿಗಣಿಸಲು ತೀರ್ಮಾನಿಸಲಾಗಿದ್ದು, ಇದು ಜಾರಿಗೆ ಬಂದ ನಂತರ, ಸಂಬಳ ಪಡೆಯುವ ವರ್ಗದವರು, ಇನ್ನು ಮುಂದೆ 50% ಮನೆ ಬಾಡಿಗೆ ಭತ್ಯೆ (HRA exemption) ವಿನಾಯಿತಿ ಪಡೆಯಬಹುದಾಗಿದೆ.
ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಕರಡು ಆದಾಯ ತೆರಿಗೆ ನಿಯಮಗಳು 2026ರ ಅಡಿಯಲ್ಲಿ, ಶೇಕಡಾ 50ರಷ್ಟು ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿ ಸೌಲಭ್ಯವನ್ನು ಪಡೆಯಬಹುದಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರನ್ನು ಸೇರಿಸಿರುವುದು ಖುಷಿಯ ಸಂಗತಿ.
ನಾನು 2022 ರಿಂದ ಸಂಸತ್ತು ಸೇರಿ ವಿವಿಧ ವೇದಿಕೆಗಳಲ್ಲಿ ಈ ವಿಷಯವನ್ನು ಸತತವಾಗಿ ಪ್ರಸ್ತಾಪಿಸುತ್ತಲೇ ಬಂದಿದ್ದು, ಈ ಬೇಡಿಕೆಯನ್ನು ಕರಡು ನಿಯಮಾವಳಿಗಳಲ್ಲಿ ಸೇರಿಸಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಮಸ್ತ ಬೆಂಗಳೂರಿನ ಜನತೆಯ ಪರವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಫೇಸ್‌ಬುಕ್ ಪೋಸ್ಟ್
ಇದುವರೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಿಗೆ ಮಾತ್ರ 50% ಎಚ್‌ಆರ್‌ಎ ವಿನಾಯಿತಿ ಇತ್ತು, ಬೆಂಗಳೂರಿಗೆ 40% ಮಾತ್ರ ಇತ್ತು. ಹೊಸ ನಿಯಮಗಳ ಅನ್ವಯ, ಇನ್ಕಮ್ ಟ್ಯಾಕ್ಸ್ ಡ್ರಾಫ್ಟ್ ರೂಲ್ಸ್‌ನಲ್ಲಿ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು , ಇದರಿಂದ ಬೆಂಗಳೂರಿನ ಲಕ್ಷಾಂತರ ಉದ್ಯೋಗಿಗಳಿಗೆ ಇದರಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ. ಇದರ ಜತೆಗೆ, ಸೂಚಿಸಲಾದ ನಗರಗಳ ಪಟ್ಟಿಯಲ್ಲಿ ಕೆಲಸ ಮಾಡುವ ವಿಶೇಷ ಚೇತನರು ಹೆಚ್ಚುವರಿ 15,000 ರೂ, ಸಾರಿಗೆ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಯಾರಿಗೆ ಅನುಕೂಲ?
ಶೇಕಡಾ 50 ರಷ್ಟು ಮನೆ ಬಾಡಿಗೆ ಭತ್ಯೆ ವಿನಾಯಿತಿ ಪಟ್ಟಿಯಲ್ಲಿ ಬೆಂಗಳೂರು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯದ ವೇತನ ಪಡೆಯುವ ಉದ್ಯೋಗಿಗಳಿಗೆ ಇದರ ನೆರವು ಸಿಗಲಿದೆ. ಆದರೆ ಈ ತೆರಿಗೆ ವಿನಾಯಿತಿ ಲಾಭ ಪಡೆಯಲು ಹಳೇ ತೆರಿಗೆ ಪದ್ಧತಿ (Old Tax Regime) ಆಯ್ಕೆ ಮಾಡಿದವರಿಗೆ ಮಾತ್ರ ಈ ಲಾಭ ಸಿಗಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಪಾವತಿ ಮಾಡುವವರಿಗೆ ಇದರ ಲಾಭ ಪಡೆಯಲು ಸಾಧ್ಯವಿಲ್ಲ.
ಹೊಸ ಕಾಯ್ದೆ ಬಂದರೂ ಹಳೆ ಟ್ಯಾಕ್ಸ್ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ; ಹಳೆ ತೆರಿಗೆ ಇಷ್ಟಪಡುವವರಿಗೆ ಜಾಕ್‌ಪಾಕ್
ಸದ್ಯ ಹೊಸ ತೆರಿಗೆ ವಿನಾಯಿತಿ ಕರಡು ಪ್ರಸ್ತಾವನೆ ರೂಪದಲ್ಲಿದೆ. ಕರಡು ಹಂತದಲ್ಲಿರುವ ಈ ನಿಯಮದ ಕುರಿತು ಸಾರ್ವಜನಿಕ ಅಭಿಪ್ರಾಯ ಕೇಳಲಾಗಿದೆ. ಸಾರ್ವಜನಿಕರು ಹಾಗೂ ತಜ್ಞರ ಅಭಿಪ್ರಾಯ ಪಡೆದ ಬಳಿಕ ತಿದ್ದುಪಡಿಗಳಿದ್ದರೆ ಅಥವಾ ಬದಲಾವಣೆಗಳಿದ್ದರೆ ಮಾಡಲಾಗುತ್ತದೆ. ಬಳಿಕ ಏಪ್ರಿಲ್ 1, 2026ರಿಂದ ಹೊಸ ತೆರಿಗೆ ವಿನಾಯಿತಿ ನಿಯಮ ಜಾರಿಗೆ ಬರಲಿದೆ.