ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mayuri Kyatari: ಡಿವೋರ್ಸ್‌ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!

Mayuri: ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಿದವ್ರು ಮಯೂರಿ ಕ್ಯಾತಾರಿ . ಹುಬ್ಬಳ್ಳಿ ಮೂಲದ ಮಯೂರಿ ಸದ್ಯ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ತಿಲ್ಲ. ಮದುವೆ, ಮಗು ನಂತರ ಬಿಗ್​ ಬಾಸ್​ಗೆ ಬಂದಿದ್ರು. ಅಲ್ಲಿಂದ ಕಿರುತೆರೆ ಪಯಣ ಮತ್ತೆ ಶುರುವಾಯ್ತು. ನನ್ನ ದೇವರು ಸೀರಿಯಲ್​ ಮೂಲಕ ಕಮ್​ಬ್ಯಾಕ್ ಆಗಿದ್ದರೂ ಅಂದುಕೊಂಡಂತೆ ಧಾರಾವಾಹಿ ಯಶಸ್ವಿಯಾಗ್ಲಿಲ್ಲ. ಬಂದಷ್ಟೇ ವೇಗದಲ್ಲಿ ಸೀರಿಯಲ್​ ಮುಕ್ತಾಯವಾಯ್ತು. 2020ರಲ್ಲಿ ಮದುವೆ ಆಗಿರುವ ಮಯೂರಿ ಈಗ ಮುದ್ದು ಮಗ (Son) ಆರವ್ ಜೊತೆಗಿನ ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ತಿರ್ತಾರೆ.

ಡಿವೋರ್ಸ್‌ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!

ಮಯೂರಿ ಕ್ಯಾತರಿ -

Yashaswi Devadiga
Yashaswi Devadiga Feb 11, 2026 10:43 AM

ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಿದವ್ರು ಮಯೂರಿ ಕ್ಯಾತಾರಿ (mayuri kyatari). ಹುಬ್ಬಳ್ಳಿ ಮೂಲದ ಮಯೂರಿ ಸದ್ಯ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ತಿಲ್ಲ. ಮದುವೆ, ಮಗು ನಂತರ ಬಿಗ್​ ಬಾಸ್​ಗೆ ಬಂದಿದ್ರು. ಅಲ್ಲಿಂದ ಕಿರುತೆರೆ ಪಯಣ ಮತ್ತೆ ಶುರುವಾಯ್ತು. ನನ್ನ ದೇವರು ಸೀರಿಯಲ್​ ಮೂಲಕ ಕಮ್​ಬ್ಯಾಕ್ ಆಗಿದ್ದರೂ ಅಂದುಕೊಂಡಂತೆ ಧಾರಾವಾಹಿ ಯಶಸ್ವಿಯಾಗ್ಲಿಲ್ಲ. ಬಂದಷ್ಟೇ ವೇಗದಲ್ಲಿ ಸೀರಿಯಲ್​ ಮುಕ್ತಾಯವಾಯ್ತು. ಸದ್ಯ ಮಯೂರಿ ಸ್ಕಿನ್​-ಹೇರ್​ಗೆ ಸಂಬಂಧಪಟ್ಟ ಕ್ಲೀನಿಕ್​ ನಡೆಸ್ತಿದ್ದಾರೆ. 2020ರಲ್ಲಿ ಮದುವೆ ಆಗಿರುವ ಮಯೂರಿ ಈಗ ಮುದ್ದು ಮಗ (Son) ಆರವ್ ಜೊತೆಗಿನ ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ತಿರ್ತಾರೆ. ಆಗಾಗ ಮಯೂರಿ ಡಿವೋರ್ಸ್‌ (Divorce) ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತೆ. ಇದೀಗ ನಟ ಸಂದರ್ಶನವೊಂದರಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

ಮಗ ಆರವ್‌ಗೂ ಅಪ್ಪನಿಗೂ ಒಳ್ಳೆಯ ಸಂಬಂಧ ಇದೆ

ಮಯೂರಿ ಸಂದರ್ಶನವೊಂದರಲ್ಲಿ ಮಾತನಾಡಿ, ಡಿವೋರ್ಸ್‌ ಬಗ್ಗೆ ನಾನು ಎಲ್ಲಿಯೂ ನಾನಾಗಿ ಹೇಳಿಕೆ ನೀಡಿಲ್ಲ. ನನಗೆ 5 ವರ್ಷದ ಮಗ ಇದ್ದಾನೆ. ನನಗೆ ಒಳ್ಳೆಯ ಕುಟುಂಬ ಕೂಡ ಇದೆ. ಆರವ್‌ಗೆ ಒಳ್ಳೆ ತಾಯಿ ಇದ್ದಾರೆ. ಅದು ಮಯೂರಿ. ಆರವ್‌ಗೂ ಅಪ್ಪನಿಗೂ ಒಳ್ಳೆಯ ಸಂಬಂಧ ಇದೆ. ಅವರ ಅಪ್ಪ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನ್ನ ರಿಲೇಶನ್‌ಶಿಪ್‌ ಸ್ಟೇಟಸ್‌ ಬಗ್ಗೆ ಮಾತನಾಡಲು ಇಷ್ಟ ಪಡಲ್ಲ ಎಂದರು.

ವೈಯಕ್ತಿಕ ಜೀವನ ಬಗ್ಗೆ ಹೇಳಲು ಇಷ್ಟ ಪಡಲ್ಲ

ನನ್ನ ವೈಯಕ್ತಿಕ ಜೀವನ ಬಗ್ಗೆ ಹೇಳಲು ಇಷ್ಟ ಪಡಲ್ಲ. ಕೆಲವೊಂದು ವಿಷಯ ನಿಮ್ಮಲ್ಲಿ ಇರಬೇಕು. ನನ್ನ ಹಾಗೇ ಎಲ್ಲರೂ ಇರಬೇಕು ಅಂತ ಹೇಳಲ್ಲ. ನನ್ನ ಲೈಫ್‌ ಕೂಡ ಅದು. ನಾನು ಒಬ್ಬಳು ನಟಿ. ನಾವು ಸಾಮಾಜಕ್ಕೆ ಉದಾಹರಣೆ ಆಗಿರಬೇಕು. ನನ್ನ ಮಗನನ್ನು ಚೆನ್ನಾಗಿ ಬೆಳೆಸ್ತಾ ಇದ್ದೀನಿ. ಎಲ್ಲರಿಗೂ ಹೇಳೋದು ಒಂದೇ, ನನ್ನ ಮಗ ತುಂಬಾ ಖುಷಿಯಲ್ಲಿ ಇದ್ದಾನೆ. ಖುಷಿಯಲ್ಲಿ ಬೆಳೆಯುತ್ತಾ ಇದ್ದಾನೆ. ಮಿಡಲ್‌ ಕ್ಲಾಸ್‌ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದವಳು ನಾನು. ನನ್ನ ಮಗನಿಗೆ ಒಳ್ಳೆಯ ವಾತಾವರಣ ಕೊಡಬೇಕು ನಾನು. ನಾನು ನನ್ನ ಅಮ್ಮನಿಗೆ ಮಗಳೇ. ಹಾಗೇ ನಾನು ತಾಯಿಯೂ ಕೂಡ ಎಂದರು.

ಮಯೂರಿ ಆಗಿ ನನ್ನ ಕರಿಯರ್‌ ಬಗ್ಗೆ ಖುಷಿ ಇದೆ. ನನ್ನ ಅಪ್ಪನ ರೂಪದಲ್ಲಿ ಮಗನು ಬಂದಿದ್ದಾನೆ. ನನ್ನ ಮಗ ಲೈಫ್‌ನಲ್ಲಿ ಬಂದಿದ್ದಕ್ಕೆ ಖುಷಿ ಇದೆ ಎಂದರು.

ಇದನ್ನೂ ಓದಿ: Dhanush: ʻಇಳಯರಾಜʼ ಜೊತೆಗೆ ಮತ್ತೊಂದು ಜೀವನ ಚರಿತ್ರೆಯ ಸಿನಿಮಾದಲ್ಲಿ ಧನುಷ್!

ಮಗ ಆರವ್ ಸಖತ್​ ಆ್ಯಕ್ಟಿವ್​ ಆಗಿದ್ದು, ಬಹಳ ಶಿಸ್ತಿನ ಜೊತೆಗೆ ಎಲ್ಲಾ ರೀತಿಯಲ್ಲೆ ಕಲೆಗಳನ್ನ ಧಾರೆಯೆರೆಯುವದ್ರ ಮೂಲಕ ಬೆಳಸ್ತಿದ್ದಾರೆ. ಹಾಡು, ನೃತ್ಯ, ಮಂತ್ರಪಠನೆ ಎಲ್ಲದ್ರಲ್ಲೂ ಸಂಸ್ಕಾರಕೊಟ್ಟು ಬೇಳಸ್ತಿದ್ದಾರೆ ನಟಿ.