Vijay- Rashmika: ಕೊನೆಗೂ ವೈರಲ್ ಆಯ್ತು ವಿಜಯ್- ರಶ್ಮಿಕಾ ಎಂಗೇಜ್‌ಮೆಂಟ್ ರಿಂಗ್; ವಿಡಿಯೋ ನೋಡಿ
ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ (Vijay- Rashmika) ಇದುವರೆಗೂ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ. ನಿಶ್ಚಿತಾರ್ಥದ ನಂತರ, ವಿಜಯ್ ತಮ್ಮ ಕುಟುಂಬದೊಂದಿಗೆ ಶ್ರೀ ಸತ್ಯಸಾಯಿ ಬಾಬಾ ಅವರ ಮಹಾ ಸಮಾಧಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿತು

-

ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮೊನ್ನೆಯಷ್ಟೇ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಇದೀಗ ಇವರಿಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಹಸಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ನಿಶ್ಚಿತಾರ್ಥವಾದ ಬಳಿಕ ಮೊದಲ ಬಾರಿಗೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇದೀಗ ಅವರ ವಿಡಿಯೋ ವೈರಲ್ ಆಗಿದೆ.
ಈ ಜೋಡಿ ಇದುವರೆಗೂ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ. ನಿಶ್ಚಿತಾರ್ಥದ ನಂತರ, ವಿಜಯ್ ತಮ್ಮ ಕುಟುಂಬದೊಂದಿಗೆ ಶ್ರೀ ಸತ್ಯಸಾಯಿ ಬಾಬಾ ಅವರ ಮಹಾ ಸಮಾಧಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿತು. ವಿಜಯ್ ಮತ್ತು ಅವರ ಸಹೋದರ ಆನಂದ ದೇವರಕೊಂಡ ಅವರು ಈ ಹಿಂದೆ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದರು. ವಿಜಯ್ ಅವರನ್ನು ಹೂವಿನ ಗುಚ್ಛದೊಂದಿಗೆ ಸ್ವಾಗತಿಸಲಾಯಿತು. ಪೋಸ್ ನೀಡುವಾಗ, ಅವರು ನಿಶ್ಚಿತಾರ್ಥದ ಉಂಗುರವನ್ನು ಧರಿಸಿದ್ದರು ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ವಿಜಯ್ ದೇವರಕೊಂಡ ವಿಡಿಯೋ ವೈರಲ್
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಈ ನಿಶ್ಚಿತಾರ್ಥದ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ. 2020 ಮತ್ತು 2022ರ ನಡುವಿನ ಅವಧಿಯಲ್ಲಿ, ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಖಾಸಗಿ ರೆಸ್ಟೋರೆಂಟ್, ಏರ್‌ಪೋರ್ಟ್ ಮತ್ತು ರಜಾ ದಿನಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ಈ ವರ್ಷ ವಿಜಯ್ ದೇವರಕೊಂಡ ಜೊತೆಗೆ ಓಮನ್‌ನಲ್ಲಿ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಈ ಸುದ್ದಿಯನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್ ದೇವರಕೊಂಡ ಭರ್ಜರಿ ವೆಕೇಶನ್? ವೈರಲ್ ಆಗಿರೋ ವಿಡಿಯೊದಲ್ಲೇನಿದೆ?
ಗೀತಂ ಗೋವಿಂದಂ ಚಿತ್ರದಲ್ಲಿ ಉತ್ತಮ ಸ್ನೇಹಿತರಾಗಿದ್ದ ಇವರು, ಡಿಯರ್ ಕಾಮ್ರೇಡ್ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಇದೀಗ ಮದುವೆಗೆ ಸಜ್ಜಾಗಿದೆ.